For Quick Alerts
ALLOW NOTIFICATIONS  
For Daily Alerts

ಹಣದುಬ್ಬರದ ಏರಿಕೆ ನಡುವೆ ಆನ್‌ಲೈನ್‌ ಫುಡ್‌ ಡೆಲವರಿ ದುಬಾರಿ!

|

ಕೊರೊನಾ ವೈರಸ್‌ ಈ ಸಂಕಷ್ಟದಲ್ಲಿ ಹಣದುಬ್ಬರವು ಇದೆ. ಈ ನಡುವೆ ರೆಸ್ಟೋರೆಂಟ್‌ಗಳು ಮತ್ತು ಕ್ಲೌಡ್ ಕಿಚನ್‌ಗಳು ಆಹಾರದ ಮೇಲಿನ ಬೆಲೆಯನ್ನು ಅಧಿಕ ಮಾಡುವ ಚಿಂತನೆ ನಡೆಸುತ್ತಿದೆ. ಈ ಹಿನ್ನೆಲೆಯಿಂದ ಜೊಮ್ಯಾಟೊ, ಸ್ವಿಗ್ಗಿನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಆಹಾರವನ್ನು ಆರ್ಡರ್‌ ಮಾಡುವುದು ಈ ವರ್ಷ ಹೆಚ್ಚು ದುಬಾರಿ ಆಗಬಹುದು.

ಹಣದುಬ್ಬರವು ದೇಶದಲ್ಲಿ ಹೆಚ್ಚಳವಾಗುತ್ತಿದೆ. ಈ ನಡುವೆ ಸ್ವಿಗ್ಗಿ ಮತ್ತು ಜೊಮಾಟೊ ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಆಹಾರ ವಿತರಣೆಗೆ ಹೆಚ್ಚಿನ ರಿಯಾಯಿತಿ ಮಾಡಲು ಮುಂದಾಗುತ್ತಿದೆ. ಡಿಸೆಂಬರ್‌ನಲ್ಲಿ ಆಹಾರ ಪದಾರ್ಥಗಳ ಮೇಲಿನ ಬೆಲೆಯು ಅಲ್ಪ ಪ್ರಮಾಣದ ಕುಸಿತದ ಹೊರತಾಗಿಯೂ, ಬೇರೆ ಅಂಶಗಳನ್ನು ನೋಡಿದಾಗ ಹಣದುಬ್ಬರವನ್ನು ತಡೆಯುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳುತ್ತಾರೆ.

ಚಿನ್ನದ ಬೆಲೆ ಇಳಿಕೆ: ಜನವರಿ 11ರ ದರ ತಿಳಿದುಕೊಳ್ಳಿಚಿನ್ನದ ಬೆಲೆ ಇಳಿಕೆ: ಜನವರಿ 11ರ ದರ ತಿಳಿದುಕೊಳ್ಳಿ

ಕಳೆದ ವರ್ಷದಲ್ಲಿ, ತರಕಾರಿಗಳು, ಖಾದ್ಯ ತೈಲ ವೆಚ್ಚದಲ್ಲಿ ಹೆಚ್ಚಳ ಕಂಡುಬಂದಿದೆ. ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಹೆಚ್ಚಿನ ಬೆಲೆಗಳು ಸಾರಿಗೆ ವೆಚ್ಚವನ್ನು ಹೆಚ್ಚಿಸಿವೆ. ಇದಲ್ಲದೆ, ಕೊರೊನಾ ವೈರಸ್‌ ಸೋಂಕು ಹಿನ್ನೆಲೆಯಿಂದಾಗಿ ನಗರಗಳಾದ್ಯಂತ ವಿಧಿಸಲಾಗುತ್ತಿರುವ ನಿರ್ಬಂಧಗಳ ಕಾರಣದಿಂದಾಗಿ ಹಣದುಬ್ಬರವು ಇನ್ನಷ್ಟು ಅಧಿಕವಾಗುತ್ತಿದೆ ಎಂದು ತಜ್ಞರು ಉಲ್ಲೇಖಿಸಿದ್ದಾರೆ.

 ಬೆಲೆ ಏರಿಕೆ ಮಾಡುತ್ತಿರುವ ರೆಸ್ಟೊರೆಂಟ್‌ಗಳು

ಬೆಲೆ ಏರಿಕೆ ಮಾಡುತ್ತಿರುವ ರೆಸ್ಟೊರೆಂಟ್‌ಗಳು

ಕೊರೊನಾದ ಎರಡು ಅಲೆಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಈಗ ಕೋವಿಡ್‌ ಮೂರನೇ ಅಲೆಯ ಆತಂಕವು ಜನರನ್ನು ಅಲ್ಲಾಡಿಸಿದೆ. ದೆಹಲಿಯಂತಹ ನಗರಗಳು ಡೈನ್-ಇನ್ ಸೌಲಭ್ಯಗಳನ್ನು ಸ್ಥಗಿತ ಮಾಡಲಾಗಿದ್ದು, ಇದರಿಂದಾಗಿ ಜನರು ಆನ್‌ಲೈನ್‌ ಆರ್ಡರ್‌ಗೆ ಶರಣಾಗಬೇಕಾಗಿದೆ. ಈ ಸಂದರ್ಭದಲ್ಲಿ ರೆಸ್ಟೋರೆಂಟ್‌ಗಳು ತಮಗಾಗುವ ನಷ್ಟವನ್ನು ಸರಿದೂಗಿಸಲು ಬೇರೆ ಆಯ್ಕೆ ಇಲ್ಲದೆ ಆಹಾರದ ಬೆಲೆಯನ್ನು ಹೆಚ್ಚಳ ಮಾಡಲು ಮುಂದಾಗಿದ್ದಾರೆ. ಇದು ಗ್ರಾಹಕರ ಮೇಲೆ ಇನ್ನಷ್ಟು ಚಾಟಿ ಏಟು ಬೀಳುವಂತೆ ಮಾಡಿದೆ. "ಆಹಾರದ ಹಣದುಬ್ಬರ ಶೇಕಡ 12ರಷ್ಟು ಹೆಚ್ಚಳವಾದ ಕಾರಣ ರೆಸ್ಟೊರೆಂಟ್‌ಗಳು ಬೆಲೆಯನ್ನು ಹೆಚ್ಚಿಸುವ ಚಿಂತನೆ ನಡೆಸುತ್ತಿದ್ದಾರೆ," ಎಂದು ಕೋಲ್ಕತ್ತಾ ಮೂಲದ ಆಹಾರ ಮಳಿಗೆ ವಾವ್‌ ಮೊಮೊದ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಾಗರ್ ದರಿಯಾನಿ ತಿಳಿಸಿದ್ದಾರೆ. ನ್ಯಾಶನಲ್ ರೆಸ್ಟೊರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾದ ಉಪಾಧ್ಯಕ್ಷರೂ ಆಗಿರುವ ದರಿಯಾನಿ, ವಾವ್‌ ಮೊಮೊ ಬೆಲೆಯ್ಲಿ ಶೇಕಡ 7ರವರೆಗೆ ಹೆಚ್ಚಳ ಮಾಡುವ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.

 ಬೆಲೆಯಲ್ಲಿ ಒತ್ತಡ ಇದೆಯೇ?

ಬೆಲೆಯಲ್ಲಿ ಒತ್ತಡ ಇದೆಯೇ?

ಇನ್ನು ಸ್ವಿಗ್ಗಿ ಹಾಗೂ ಜೊಮ್ಯಾಟೊ ಇಮೇಲ್‌ ಮಾಡಿದ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಕಳೆದ ವರ್ಷ $1 ಬಿಲಿಯನ್ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಸ್ಟಾರ್ಟ್-ಅಪ್‌ಗಳ ಕ್ಲಬ್‌ಗೆ ಸೇರಿದ ರೆಬೆಲ್ ಫುಡ್ಸ್, ಮಾತ್ರ ನಾವು ಬೆಲೆಯನ್ನು ಹೆಚ್ಚಳ ಮಾಡುವುದಿಲ್ಲ ಎಂದು ತಿಳಿಸಿದೆ. "D2C ಚಾನೆಲ್‌ಗಳ ಅಂತಿಮ ಗ್ರಾಹಕ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ," ಎಂದು ರೆಬೆಲ್ ಫುಡ್ಸ್‌ನ ಸಹ-ಸಂಸ್ಥಾಪಕ ರಾಘವ್ ಜೋಶಿ ಹೇಳಿದ್ದಾರೆ. ರೆಬೆಲ್ ಫುಡ್ಸ್‌ ಬೆಹ್ರೂಜ್ ಬಿರಿಯಾನಿ, ಮ್ಯಾಂಡರಿನ್ ಓಕ್, ಓವೆನ್‌ಸ್ಟೋರಿ ಪಿಜ್ಜಾ ಮತ್ತು ಫಾಸೋಸ್‌ನಂತಹ ಬ್ರ್ಯಾಂಡ್‌ಗಳಿಗಾಗಿ ಆನ್‌ಲೈನ್‌ ಫುಡ್‌ ಆರ್ಡರ್‌ ಜಾಲತಾಣವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ.

 ಇತರೆ ರೆಸ್ಟೊರೆಂಟ್‌, ಆನ್‌ಲೈನ್‌ ಫುಡ್‌ ಪ್ಲಾಟ್‌ಫಾರ್ಮ್‌ಗಳು ಹೇಗಿದೆ?

ಇತರೆ ರೆಸ್ಟೊರೆಂಟ್‌, ಆನ್‌ಲೈನ್‌ ಫುಡ್‌ ಪ್ಲಾಟ್‌ಫಾರ್ಮ್‌ಗಳು ಹೇಗಿದೆ?

ಭಾರತದಲ್ಲಿನ ಡೊಮಿನೊಸ್ ಪಿಜ್ಜಾ ಮತ್ತು ಡಂಕಿನ್ ಡೊನಟ್ಸ್‌ನ ನಿರ್ವಾಹಕರಾದ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಜುಬಿಲಂಟ್‌ ಫುಡ್‌ವಕ್ಸ್‌ ಸರಾಸರಿ 5-6% ರಷ್ಟು ಬೆಲೆಗಳನ್ನು ಹೆಚ್ಚಿಸಿದೆ. "Domino's India ತನ್ನ 2016 ರಿಂದ ಕನಿಷ್ಠ ಬೆಲೆ ಏರಿಕೆಯನ್ನು ಮಾಡಿದೆ. ಬೆಲೆ ಏರಿಕೆಯ ನಂತರವೂ, ಡೊಮಿನೊದ ಬೆಲೆಗಳು ಪಿಜ್ಜಾ ಪ್ರಿಯರಿಗೆ ಕೈಗೆಟಕುವ ದರದಲ್ಲಿ ಇದೆ," ಎಂದು ಕಂಪನಿಯು ಡಿಸೆಂಬರ್‌ನಲ್ಲಿ ಹೇಳಿದೆ. "ನಾವು ಬೆಲೆದಲ್ಲಿ ಪಾಸಿಟಿವ್‌ ಬದಲಾವಣೆ ಮಾಡಲಿದ್ದೇವೆ. ನಾವು ಮಾಡುವ ಈ ಬದಲಾವಣೆಯು ಒತ್ತಡವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ," ಎಂದು ಕೂಡಾ ಸಂಸ್ಥೆ ಹೇಳಿದೆ. ಇನ್ನು ಹಣದುಬ್ಬರದ ಹಿನ್ನೆಲೆ ಬೆಲೆ ಅಧಿಕ ಮಾಡುವ ಚಿಂತನೆ ನಡೆಸಿದ್ದೇವೆ ಎಂದು ದೆಹಲಿ ಮೂಲದ ರೆಸ್ಟೋರೆಂಟ್ ಮಾಲೀಕರು ಹೇಳಿದ್ದಾರೆ.

 ಸ್ಪರ್ಧೆಗಾಗಿ ರಿಯಾಯಿತಿ ಮುಖ್ಯ!

ಸ್ಪರ್ಧೆಗಾಗಿ ರಿಯಾಯಿತಿ ಮುಖ್ಯ!

"ನಾವು (ಗ್ಯಾಸ್) ಸಿಲಿಂಡರ್ ಬೆಲೆಗಳು, ಆಹಾರ ತೈಲ, ಇತರ ವಸ್ತುಗಳನ್ನು ಹೆಚ್ಚಿಸಿರುವುದರಿಂದ ನಮ್ಮ ಆಹಾರದ ಬೆಲೆಗಳನ್ನು ಹೆಚ್ಚಿಸಿದ್ದೇವೆ. ರೆಸ್ಟೋರೆಂಟ್‌ಗಳು ವೆಚ್ಚವನ್ನು ಹೆಚ್ಚಿಸುತ್ತವೆ. ಅದೇ ಸಮಯದಲ್ಲಿ, ಸ್ವಿಗ್ಗಿ ಮತ್ತು ಜೊಮಾಟೊದಂತಹ ಆಹಾರ ವಿತರಣಾ ಅಪ್ಲಿಕೇಶನ್‌ಗಳು ಹೆಚ್ಚಿನ ರಿಯಾಯಿತಿಗಳನ್ನು ನೀಡಲು ನಮಗೆ ಒತ್ತಡ ಹೇರುತ್ತಿದೆ. ಇದರಿಂದಾಗಿ ಈ ಅಪ್ಲಿಕೇಶನ್‌ಗಳಲ್ಲಿ ಆರ್ಡರ್‌ಗಳ ಪ್ರಮಾಣವೂ ಅಧಿಕವಾಗುತ್ತದೆ ಎಂದು ಸಂಸ್ಥೆಗಳು ಹೇಳುತ್ತದೆ," ಎಂದು ಹೊಟೇಲ್‌ ಮಾಲೀಕರು ಹೇಳುತ್ತಾರೆ. ಇನ್ನು ಕ್ಲೌಡ್ ಕಿಚನ್ ವ್ಯವಹಾರವನ್ನು ನಡೆಸುತ್ತಿರುವ ಬೆಂಗಳೂರು ಮೂಲದ ಉದ್ಯಮಿಯೊಬ್ಬರು, 2020 ರ ಆರಂಭದಲ್ಲಿ ಕೊರೊನಾ ವೈರಸ್‌ ಹಿನ್ನೆಲೆ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಆಳವಾದ ರಿಯಾಯಿತಿಯನ್ನು ಪ್ರಾರಂಭಿಸಲಾಗಿದೆ. ಈ ಬಳಿಕ ಆನ್‌ಲೈನ್‌ ವಹಿವಾಟು ಅಧಿಕವಾಗಿದೆ ಎಂದು ಹೇಳಿದರು. ಈಗ ಹೆಚ್ಚಿನ ರಿಯಾಯಿತಿಗಳನ್ನು ನೀಡುವ ಸ್ಪರ್ಧೆಯು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ರೆಡ್‌ಸೀರ್ ಕನ್ಸಲ್ಟಿಂಗ್ ಪ್ರಕಾರ, ದೇಶೀಯ ಕ್ಲೌಡ್ ಕಿಚನ್ ಮಾರುಕಟ್ಟೆಯು 2019 ರಲ್ಲಿ 400 ಮಿಲಿಯನ್‌ ಡಾಲರ್‌ನಿಂದ 2024 ರ ವೇಳೆಗೆ 2 ಶತಕೋಟಿ ಮಿಲಿಯನ್‌ಗೆ ಬೆಳೆಯುವ ನಿರೀಕ್ಷೆ ಇದೆ.

English summary

Amid rising discount demands and inflation Online food delivery to get costlier

Amid rising discount demands and inflation Online food delivery to get costlier.
Story first published: Tuesday, January 11, 2022, 16:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X