For Quick Alerts
ALLOW NOTIFICATIONS  
For Daily Alerts

ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ

|

ಗುಜರಾತ್ ಕಾಪೋರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ (ಜಿಸಿಎಂಎಂಎಫ್) ತನ್ನ ಅಮುಲ್ ಬ್ರಾಂಡ್‌ನ ಹಾಲಿನ ದರವನ್ನು ಮತ್ತೆ ಎರಡು ರೂಪಾಯಿ ಏರಿಕೆ ಮಾಡಿದೆ. ಈ ಹಿಂದೆ ಹಲವಾರು ಬಾರಿ ಅಮುಲ್ ತನ್ನ ಹಾಲಿನ ದರವನ್ನು ಏರಿಸಿದೆ. ಒಂದು ಲೀಟರ್ ಹಾಲಿನ ದರ 3 ರೂಪಾಯಿ ಏರಿಕೆಯಾಗಿದ್ದು, ಪಸ್ತುತ 66 ರೂಪಾಯಿ ಆಗಿದೆ. ಈ ಹಿಂದೆ ಫುಲ್ ಕ್ರೀಮ್ ಹಾಲಿನ ದರವು ಪ್ರತಿ ಲೀಟರ್‌ಗೆ 63 ರೂಪಾಯಿ ಆಗಿತ್ತು.

 

"ಅಮುಲ್ ಪೌಂಚ್ ಹಾಲಿನ (ಎಲ್ಲ ವೆರಿಯಂಟ್) ದರವನ್ನು ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಲು ನಾವು ಇಚ್ಛಿಸುತ್ತೇವೆ. 2023ರ ಫೆಬ್ರವರಿ 2ರಿಂದ ರಾತ್ರಿಯ ಡಿಸ್ಪಾಚ್‌ ಬಳಿಕ ಜಾರಿಗೆ ಬರುವಂತೆ ಅಂದರೆ ಫೆಬ್ರವರಿ 3ರ ಮುಂಜಾನೆಯಿಂದ ಹಾಲಿನ ದರವನ್ನು ಏರಿಸಲಾಗಿದೆ," ಎಂದು ಗುಜರಾತ್ ಕಾಪೋರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ (ಜಿಸಿಎಂಎಂಎಫ್) ತಿಳಿಸಿದೆ.

 

Amul, KMF Turnover : ಅಮುಲ್, ಕೆಎಂಎಫ್ ವಹಿವಾಟು ಹೇಗಿದೆ?Amul, KMF Turnover : ಅಮುಲ್, ಕೆಎಂಎಫ್ ವಹಿವಾಟು ಹೇಗಿದೆ?

ಇನ್ನು ಪ್ರತಿ ಲೀಟರ್ ಅಮುಲ್ ದನದ ಹಾಲಿನ ದರವು ಪ್ರಸ್ತುತ 56 ರೂಪಾಯಿ ಆಗಿದೆ. ಇನ್ನು ಪ್ರತಿ ಲೀಟರ್ ಅಮುಲ್ ತಾಜಾ ಹಾಲಿನ ದರವು ಪ್ರಸ್ತುತ 54 ರೂಪಾಯಿ ಆಗಿದೆ. ಅಮುಲ್ A2 ಎಮ್ಮೆ ಹಾಲಿನ ದರವು ಪ್ರಸ್ತುತ ಪ್ರತಿ ಲೀಟರ್‌ಗೆ 70 ರೂಪಾಯಿ ಆಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಅನ್ನು ಮಂಡಿಸಿದ ಮರುದಿನವೇ ಅಮುಲ್ ತನ್ನ ಹಾಲಿನ ಬೆಲೆ ಏರಿಕೆಯನ್ನು ಘೋಷಿಸಿದೆ. ನೂತನ ದರದ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ....

 ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ

ಅಮುಲ್ ಹಾಲಿನ ಸಂಪೂರ್ಣ ಬೆಲೆಪಟ್ಟಿ

ಅಮುಲ್ ತಾಜಾ 500 ಮಿಲಿ ಲೀಟರ್: 27 ರೂಪಾಯಿ
ಅಮುಲ್ ತಾಜಾ 1 ಲೀಟರ್: 54 ರೂಪಾಯಿ
ಅಮುಲ್ ತಾಜಾ 2 ಲೀಟರ್ 108 ರೂಪಾಯಿ
ಅಮುಲ್ ತಾಜ್ 6 ಲೀಟರ್: 324 ರೂಪಾಯಿ
ಅಮುಲ್ ತಾಜಾ 180 ಮಿಲಿ ಲೀಟರ್: 10 ರೂಪಾಯಿ
ಅಮುಲ್ ಗೋಲ್ಡ್ 500 ಮಿಲಿ ಲೀಟರ್: 33 ರೂಪಾಯಿ
ಅಮುಲ್ ಗೋಲ್ಡ್ 1 ಲೀಟರ್: 66 ರೂಪಾಯಿ
ಅಮುಲ್ ಗೋಲ್ಡ್ 6 ಲೀಟರ್: 396 ರೂಪಾಯಿ
ಅಮುಲ್ ದನದ ಹಾಲು 500 ಮಿಲಿ ಲೀಟರ್: 28 ರೂಪಾಯಿ
ಅಮುಲ್ ದನದ ಹಾಲು 1 ಲೀಟರ್: 56 ರೂಪಾಯಿ
ಅಮುಲ್ A2 ಎಮ್ಮೆ ಹಾಲು 500 ಮಿಲಿ ಲೀಟರ್: 35 ರೂಪಾಯಿ
ಅಮುಲ್ A2 ಎಮ್ಮೆ ಹಾಲು 1 ಲೀಟರ್: 70 ರೂಪಾಯಿ
ಅಮುಲ್ A2 ಎಮ್ಮೆ ಹಾಲು 6 ಲೀಟರ್: 420 ರೂಪಾಯಿ

ಹಬ್ಬಕ್ಕೂ ಮುನ್ನ ಹಾಲಿನ ದರ 2 ರೂಪಾಯಿ ಹೆಚ್ಚಿಸಿದ ಅಮುಲ್ಹಬ್ಬಕ್ಕೂ ಮುನ್ನ ಹಾಲಿನ ದರ 2 ರೂಪಾಯಿ ಹೆಚ್ಚಿಸಿದ ಅಮುಲ್

ಈ ಹಿಂದೆಯೂ ದರ ಏರಿಕೆ

ಈ ಹಿಂದೆ ಅಕ್ಟೋಬರ್‌ 2022ರಲ್ಲಿ ಅಮುಲ್ ತನ್ನ ಹಾಲಿನ ದರವನ್ನು ಹೆಚ್ಚಳ ಮಾಡಿದೆ. ಹಾಗೆಯೇ ಮದರ್ ಡೈರಿ ಕೂಡಾ ತನ್ನ ಹಾಲಿನ ದರವನ್ನು ಏರಿಸಿದೆ. ಈ ಹಿಂದೆ ಆಗಸ್ಟ್‌ನಲ್ಲಿಯೂ ಅಮುಲ್ ಹಾಲಿನ ದರವನ್ನು ಹೆಚ್ಚಿಸಿದೆ. ನಿನ್ನೆ ಪರಾಗ್ ಮಿಲ್ಕ್ ಫುಡ್ಸ್ ತನ್ನ ಗೋವರ್ಧನ ಬ್ರಾಂಡ್ ತನ್ನ ಹಾಲಿನ ದರವನ್ನು 2 ರೂಪಾಯಿ ಹೆಚ್ಚಿಸಿದೆ.

English summary

Amul Hikes Milk Prices by Rs.3 per Litre, Details Here

The Gujarat Cooperative Milk Marketing Federation (GCMMF), which is famous for its Amul brand, has increased the price of milk by Rs 3 per litre to Rs 66 per litre.
Story first published: Friday, February 3, 2023, 13:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X