For Quick Alerts
ALLOW NOTIFICATIONS  
For Daily Alerts

ಈ ಯೋಜನೆಗೆ ಅರ್ಜಿ ಸಲ್ಲಿಸಿ, ವಾರ್ಷಿಕ ರೂ 60,000 ಪಡೆಯಿರಿ

|

ನೀವು ವಯಸ್ಕರಾದ ನಂತರ, ಭವಿಷ್ಯಕ್ಕಾಗಿ ಯೋಚನೆ ಮಾಡುವುದು ಅತೀ ಮುಖ್ಯವಾಗಿದೆ. ನೀವು ಆರಾಮದಾಯಕವಾಗಿ ನಿಮ್ಮ ನಿವೃತ್ತಿ ಜೀವನವನ್ನು ಕಳೆಯಬೇಕಾದರೆ ನಿಮ್ಮ ಜೀವನ ಸಾಗಿಸಲು ಬೇಕಾದಷ್ಟು ಪಿಂಚಣಿ ನಿಮಗೆ ಲಭ್ಯವಾಗುವುದು ಮುಖ್ಯವಾಗಿದೆ. ಈ ಯೋಜನೆಯು ನಿಮಗೆ ಸಹಕಾರಿಯಾಗಲಿದೆ.

 

ಪಿಂಚಣಿಯಾಗಿ ಸಾಕಷ್ಟು ಮೊತ್ತವನ್ನು ಪಡೆದುಕೊಳ್ಳುವುದು ಆರಾಮದಾಯಕ ನಿವೃತ್ತಿಗೆ ಅಗತ್ಯವಾದ ಒಂದು ಕ್ರಮವಾಗಿದೆ. ಅದಕ್ಕೆ ಸಹಕಾರಿಯಾಗಿರುವುದು ಭಾರತ ಸರ್ಕಾರದ ಅತ್ಯಂತ ಜನಪ್ರಿಯ ಪಿಂಚಣಿ ಯೋಜನೆಗಳಲ್ಲಿ ಒಂದಾದ ಅಟಲ್ ಪಿಂಚಣಿ ಯೋಜನೆ. ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಿದ ಬಳಿಕ ನೀವು ಅರ್ಹರಾಗಿದ್ದರೆ, ವಾರ್ಷಿಕ ರೂ 60,000 ಪಡೆಯಲು ಸಾಧ್ಯವಿದೆ.

ಅಟಲ್‌ ಪಿಂಚಣಿ ಯೋಜನೆ: ದಿನಕ್ಕೆ 7 ರೂ. ಹೂಡಿಕೆ, ತಿಂಗಳಿಗೆ 5000 ರೂಪಾಯಿ ಪಿಂಚಣಿ!

2020-21 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಎನ್‌ಪಿಎಸ್‌ನ 4.2 ಕೋಟಿ ಚಂದಾದಾರರಲ್ಲಿ 28 ಲಕ್ಷಕ್ಕೂ ಹೆಚ್ಚು ಜನರು ಈ ಯೋಜನೆಯನ್ನು ಆಯ್ಕೆ ಮಾಡಿದ್ದಾರೆ ಎಂದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್ (ಎನ್‌ಪಿಎಸ್ ಟ್ರಸ್ಟ್) ವಾರ್ಷಿಕ ವರದಿ ಬಹಿರಂಗಪಡಿಸಿದೆ. ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿಯು ತಿಂಗಳಿಗೆ ರೂ 5,000 ಅಥವಾ ವರ್ಷಕ್ಕೆ ರೂ 60,000 ವರೆಗೆ ಪಿಂಚಣಿ ಪಡೆಯಬಹುದು. ಈ ಯೋಜನೆಯ ಪ್ರಯೋಜನವೇನು, ನೀವು ವಾರ್ಷಿಕ ರೂ 60,000 ಹಣವನ್ನು ಪಡೆಯುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ....

 ಎಪಿವೈ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ

ಎಪಿವೈ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ

ಆರಂಭದಲ್ಲಿ ಅಸಂಘಟಿತ ಪ್ರದೇಶಗಳಲ್ಲಿರುವವರನ್ನು ಗಮನದಲ್ಲಿಟ್ಟುಕೊಂಡು 2015 ರಲ್ಲಿ ಈ ಯೋಜನೆಯನ್ನು ಪ್ರಾರಂಭ ಮಾಡಲಾಯಿತು. ಈ ಯೋಜನೆಯನ್ನು ನಂತರ ವಯಸ್ಸಿನ ಅರ್ಹತೆಯ ಮಾನದಂಡದ ಅಡಿಯಲ್ಲಿ ಬರುವ ಭಾರತದ ಎಲ್ಲಾ ನಾಗರಿಕರಿಗೆ ವಿಸ್ತರಿಸಲಾಯಿತು. ಇನ್ನು ಇದರಲ್ಲಿ ಹೂಡಿಕೆಯ ಮೊತ್ತವು ಆ ವ್ಯಕ್ತಿಯ ವಯಸ್ಸಿನ ಮೇಲೆ ಆಧಾರಿತವಾಗಿರುತ್ತದೆ. ಇಬ್ಬ ವ್ಯಕ್ತಿಯು ಸುಮಾರು ಒಂದು ಸಾವಿರದಿಂದ ಐದು ಸಾವಿರದವರೆಗೆ ಪಿಂಚಣಿಯನ್ನು ಪಡೆಯಲು ಸಾಧ್ಯವಾಗಲಿದೆ.

 ಎಪಿವೈ ಪ್ರಯೋಜನಗಳು ಏನು?

ಎಪಿವೈ ಪ್ರಯೋಜನಗಳು ಏನು?

ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡುವ ವ್ಯಕ್ತಿಗಳು 60 ವರ್ಷ ವಯಸ್ಸಿನ ನಂತರ ಖಾತರಿಯ ಪಿಂಚಣಿಯನ್ನು ಪಡೆಯುತ್ತಾರೆ. ಇದಲ್ಲದೆ, ಅಟಲ್ ಪಿಂಚಣಿ ಯೋಜನೆಯು ಆದಾಯ ತೆರಿಗೆ ಕಾಯಿದೆ 80C ಅಡಿಯಲ್ಲಿ ರೂ 1.5 ಲಕ್ಷದ ವೈಯಕ್ತಿಕ ತೆರಿಗೆ ಪ್ರಯೋಜನವನ್ನು ನೀಡುತ್ತದೆ.

 ಅಟಲ್ ಪಿಂಚಣಿ ಯೋಜನೆ ಅರ್ಹತೆಯೇನು?
 

ಅಟಲ್ ಪಿಂಚಣಿ ಯೋಜನೆ ಅರ್ಹತೆಯೇನು?

18 ಮತ್ತು 40 ವರ್ಷಗಳ ನಡುವಿನ ಎಲ್ಲಾ ಭಾರತೀಯ ನಾಗರಿಕರು ಅಟಲ್ ಪಿಂಚಣಿ ಯೋಜನೆ ಖಾತೆಯನ್ನು ತೆರೆಯಲು ಅರ್ಹರಾಗಿದ್ದಾರೆ. ಹಾಗೆಯೇ ವ್ಯಕ್ತಿಯು ಬ್ಯಾಂಕ್ ಉಳಿತಾಯ ಖಾತೆ, ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಎಪಿವೈ ನೋಂದಣಿ ಮಾಡಲು ಆಧಾರ್ ಸಂಖ್ಯೆ ಪ್ರಾಥಮಿಕ ದಾಖಲೆಯಾಗಲಿದೆ.

 ನೀವು ಎಷ್ಟು ಹೂಡಿಕೆ ಮಾಡಬೇಕು?

ನೀವು ಎಷ್ಟು ಹೂಡಿಕೆ ಮಾಡಬೇಕು?

ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ನೀವು ಪ್ರತಿ ತಿಂಗಳು ಹೂಡಿಕೆ ಮಾಡಬೇಕಾದ ಮೊತ್ತವು ನಿಮ್ಮ ವಯಸ್ಸಿನ ಮೇಲೆ ಆಧಾರಿತವಾಗಿದೆ. ರೂ 5,000 ಮಾಸಿಕ ಪಿಂಚಣಿಗಾಗಿ, 18 ವರ್ಷದಿಂದ ಮೇಲಿನ ವಯಸ್ಸಿನವರು ತಿಂಗಳಿಗೆ ರೂ 210 ಪಾವತಿ ಮಾಡಬೇಕಾಗುತ್ತದೆ. 20 ನೇ ವಯಸ್ಸಿನಲ್ಲಿ, ಈ ಮೊತ್ತವು ರೂ 248 ಆಗಿರುತ್ತದೆ. 25 ಅಥವಾ 30 ರಿಂದ ಪ್ರಾರಂಭವಾಗುವ ಮಾಸಿಕ ಕೊಡುಗೆ ಕ್ರಮವಾಗಿ ರೂ 376 ಅಥವಾ ರೂ 577 ಆಗಿರುತ್ತದೆ. 5,000 ಪಿಂಚಣಿಗಾಗಿ ಎಪಿವೈನಲ್ಲಿ ಹೂಡಿಕೆ ಮಾಡುವ 35 ವರ್ಷ ವಯಸ್ಸಿನ ವ್ಯಕ್ತಿಯು ಮಾಸಿಕ 902 ರೂ.ಗಳನ್ನು ನೀಡಬೇಕಾಗುತ್ತದೆ. 40 ವರ್ಷದ ವ್ಯಕ್ತಿಯು 1454 ರೂ. ಪಾವತಿ ಮಾಡಬೇಕಾಗುತ್ತದೆ.

 ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ನೀವು ಉಳಿತಾಯ ಖಾತೆಯನ್ನು ಹೊಂದಿರುವ ತಮ್ಮ ಬ್ಯಾಂಕ್‌ನ ಶಾಖೆ ಅಥವಾ ಪೋಸ್ಟ್ ಆಫೀಸ್ ಶಾಖೆಯನ್ನು ಸಂಪರ್ಕಿಸುವ ಮೂಲಕ ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು. ನೆಟ್‌ ಬ್ಯಾಂಕಿಂಗ್ ಅಥವಾ ಇತ್ತೀಚೆಗೆ ಸೇರಿಸಲಾದ ಆಧಾರ್ ಇ-ಕೆವೈಸಿ ಆಯ್ಕೆಯ ಮೂಲಕ ಆನ್‌ಲೈನ್‌ನಲ್ಲಿ ಪಿಂಚಣಿ ಯೋಜನೆಗೆ ಸೇರಬಹುದು.

English summary

Atal Pension Yojana: Get Rs 60,000 yearly; Check Benefits, Eligibility and How to Apply in Kannada

Atal Pension Yojana: Get Rs 60,000 yearly; Check Benefits, Eligibility and How to Apply in kannada.
Story first published: Thursday, May 19, 2022, 14:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X