For Quick Alerts
ALLOW NOTIFICATIONS  
For Daily Alerts

ಅಟಲ್ ಪಿಂಚಣಿ ಯೋಜನೆ ಹೂಡಿಕೆ ನಿಯಮ ಬದಲಾವಣೆ, ಹೊಸತೇನು?

|

ನಮ್ಮ ನಿವೃತ್ತಿ ಜೀವನಕ್ಕೆ ಪಿಂಚಣಿಯು ಒಂದು ಸುರಕ್ಷಿತ ಹಣಕಾಸು ಮೂಲವಾಗಿದೆ. ಭವಿಷ್ಯದಲ್ಲಿ ಪಿಂಚಣಿ ಪಡೆಯಬೇಕಾದರೆ ನಾವು ಅದಕ್ಕೆ ಈಗಲೇ ತಯಾರಿ ಮಾಡುವುದು ಅತೀ ಮುಖ್ಯವಾಗಿದೆ. ಸರ್ಕಾರವು ಇದಕ್ಕಾಗಿ ಹಲವಾರು ಯೋಜನೆಗಳನ್ನು ಹೊಂದಿದೆ. ಆ ಯೋಜನೆಗಳ ಪೈಕಿ ಪ್ರಮುಖವಾದುದು ಅಟಲ್ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಯ ಹೂಡಿಕೆ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.

ದೇಶದಲ್ಲಿ ಕೋಟ್ಯಾಂತರ ಅಸಂಘಟಿತ ಕಾರ್ಮಿಕರ ಸಹಾಯಕ್ಕಾಗಿ ಸರ್ಕಾರವು 2015ರಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಅಸಂಘಟಿತ ಕಾರ್ಮಿಕರ ವೃದ್ಧಾಪ್ಯ ಜೀವನವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಿ, ವಾರ್ಷಿಕ ರೂ 60,000 ಪಡೆಯಿರಿಈ ಯೋಜನೆಗೆ ಅರ್ಜಿ ಸಲ್ಲಿಸಿ, ವಾರ್ಷಿಕ ರೂ 60,000 ಪಡೆಯಿರಿ

ಅಟಲ್ ಪಿಂಚಣಿ ಯೋಜನೆ 2015ರಲ್ಲಿ ಜಾರಿಯಾಗಿದ್ದು, 18 ರಿಂದ 40 ವಯೋಮಾನದ ಭಾರತದ ನಾಗರಿಕರು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಯೋಜನೆಯನ್ನು ಪಡೆದ ನಂತರ ಪ್ರತಿ ತಿಂಗಳು ನಿಗದಿತ ಹಣವನ್ನು ಪಾವತಿಸುವ ಮೂಲಕ ನಿವೃತ್ತಿಯ ನಂತರ ಮಾಸಿಕವಾಗಿ ಒಂದು ಸಾವಿರದಿಂದ, ಐದು ಸಾವಿರ ರೂಪಾಯಿಗಳವರೆಗೆ ಪಿಂಚಣಿ ಪಡೆಯಬಹುದು. ಈ ಯೋಜನೆಯ ಹೂಡಿಕೆ ನಿಯಮದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಎಂಬುವುದನ್ನು ನಾವು ಇಲ್ಲಿ ವಿವರಿಸಿದ್ದೇವೆ. ಮುಂದೆ ಓದಿ...

 ಹೂಡಿಕೆ ನಿಯಮದಲ್ಲಿ ಏನು ಬದಲಾವಣೆ?

ಹೂಡಿಕೆ ನಿಯಮದಲ್ಲಿ ಏನು ಬದಲಾವಣೆ?

ಅಟಲ್ ಪಿಂಚಣಿ ಯೋಜನೆಯ ಹೊಸ ನಿಯಮವು 2022ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಈ ಹೊಸ ನಿಯಮದ ಪ್ರಕಾರ ಆದಾಯ ತೆರಿಗೆ ಪಾವತಿದಾರರು ಅಟಲ್ ಪಿಂಚಣಿ ಯೋಜನೆಯ ಖಾತೆಯನ್ನು ತೆರೆಯುವ ಅರ್ಹತೆಯನ್ನು ಹೊಂದಿರುವುದಿಲ್ಲ. ಅಕ್ಟೋಬರ್ 1ರಿಂದ ಅಥವಾ ಅದರ ಬಳಿಕ ಅಟಲ್ ಪಿಂಚಣಿ ಯೋಜನೆಯ ಚಂದಾದಾರಿಕೆ ಮಾಡಿಕೊಂಡವರ ಖಾತೆಯನ್ನು ಮುಚ್ಚಲಾಗುತ್ತದೆ. ಇದರಲ್ಲಿ ಆದಾಯ ತೆರಿಗೆ ಪಾವತಿದಾರರು ಎಂದರೆ ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಆದಾಯ ತೆರಿಗೆ ಪಾವತಿ ಮಾಡಬೇಕಾದವರು ಆಗಿದ್ದಾರೆ.

ಈ ಬಗ್ಗೆ ಹಣಕಾಸು ಸಚಿವಾಲಯವು ಸುತ್ತೋಲೆಯನ್ನು ಹೊರಡಿಸಿದೆ. "ಅಕ್ಟೋಬರ್ 1, 2022ರ ಬಳಿಕ ಯಾರು ಆದಾಯ ತೆರಿಗೆ ಪಾವತಿದಾರರು ಆಗಿರುತ್ತಾರೋ ಅಥವಾ ಆಗಿದ್ದರೋ ಅಟಲ್ ಪಿಂಚಣಿ ಯೋಜನೆಯ ಫಲಾನುಭವಿಗಳಾಗುವ ಅರ್ಹತೆಯನ್ನು ಹೊಂದಿರುವುದಿಲ್ಲ. 2022ರ ಅಕ್ಟೋಬರ್ 1ರಂದು ಅಥವಾ ಅದರ ಬಳಿಕ ಅಟಲ್ ಪಿಂಚಣಿ ಯೋಜನೆಯ ಚಂದಾದಾರಿಕೆ ಮಾಡಿಕೊಂಡವರು, ಅರ್ಜಿ ಸಲ್ಲಿಕೆ ಮಾಡುವ ಮೊದಲು ಅಥವಾ ನಂತರ ಆದಾಯ ತೆರಿಗೆ ಪಾವತಿ ಮಾಡಿದ್ದರೆ, ಅಟಲ್ ಪಿಂಚಣಿ ಯೋಜನೆ ಖಾತೆಯನ್ನು ಮುಚ್ಚಲಾಗುತ್ತದೆ. ಆವರೆಗಿನ ಮೊತ್ತವನ್ನು ಚಂದಾದಾರಿಗೆ ಮರುಪಾವತಿ ಮಾಡಲಾಗುತ್ತದೆ," ಎಂದು ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ.

ಅಟಲ್‌ ಪಿಂಚಣಿ ಯೋಜನೆ: ದಿನಕ್ಕೆ 7 ರೂ. ಹೂಡಿಕೆ, ತಿಂಗಳಿಗೆ 5000 ರೂಪಾಯಿ ಪಿಂಚಣಿ!ಅಟಲ್‌ ಪಿಂಚಣಿ ಯೋಜನೆ: ದಿನಕ್ಕೆ 7 ರೂ. ಹೂಡಿಕೆ, ತಿಂಗಳಿಗೆ 5000 ರೂಪಾಯಿ ಪಿಂಚಣಿ!

 ಏನಿದು ಅಟಲ್ ಪಿಂಚಣಿ ಯೋಜನೆ?

ಏನಿದು ಅಟಲ್ ಪಿಂಚಣಿ ಯೋಜನೆ?

ಅಟಲ್ ಪಿಂಚಣಿ ಯೋಜನೆಯಡಿ, ಚಂದಾದಾರರಿಗೆ ತಿಂಗಳಿಗೆ ಕನಿಷ್ಠ 1,000 ಮತ್ತು ಗರಿಷ್ಠ 5,000 ಪಿಂಚಣಿ ನೀಡಲಾಗುತ್ತದೆ. ಕನಿಷ್ಠ ಪಿಂಚಣಿ ಪ್ರಯೋಜನವನ್ನು ಭಾರತ ಸರ್ಕಾರವು ಖಾತರಿಪಡಿಸುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ನೀವು ಇದರಲ್ಲಿ ಹೂಡಿಕೆ ಮಾಡಲು ಬಹಳ ಕಷ್ಟಪಡಬೇಕಾಗಿಲ್ಲ. ದಿನಕ್ಕೆ ಕೇವಲ 7 ರೂಪಾಯಿ ಠೇವಣಿ ಇಡುವ ಮೂಲಕ ಮಾಸಿಕ 5000 ರೂ. ಪಿಂಚಣಿ ಪಡೆಯಬಹುದು. ಚಂದಾದಾರರ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು. ಆತ ಉಳಿತಾಯ ಬ್ಯಾಂಕ್ ಖಾತೆ / ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ನೀವು ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.

 ಪಿಂಚಣಿ ಯೋಜನೆ ಹೇಗಿದೆ?

ಪಿಂಚಣಿ ಯೋಜನೆ ಹೇಗಿದೆ?

18 ವರ್ಷ ವಯಸ್ಸಿನವರು APY ಖಾತೆಯನ್ನು ತೆರೆದರೆ ಮತ್ತು ಪ್ರತಿ ತಿಂಗಳು 1000 ರೂಪಾಯಿ ಮಾಸಿಕ ಪಿಂಚಣಿ ಬಯಸಿದರೆ, ಅವರು ತಿಂಗಳಿಗೆ ಕೇವಲ 42 ರೂ. ಪಾವತಿಸಬೇಕು. ಇನ್ನು ನೀವು ಮಾಸಿಕ ಪಿಂಚಣಿ ರೂ. 2000 ಬೇಕಾದಲ್ಲಿ ರೂ. 84 ರೂಪಾಯಿ, ಮಾಸಿಕ ಪಿಂಚಣಿ ರೂ. 3000 ಬೇಕಾದಲ್ಲಿ 126 ರೂ., ಮಾಸಿಕ ಪಿಂಚಣಿ ರೂ .4000 ರೂಪಾಯಿಗೆ 168 ರೂಪಾಯಿ ಮತ್ತು ಮಾಸಿಕ ಪಿಂಚಣಿ 5000 ಗಳನ್ನು ಪಡೆಯಲು ಪ್ರತಿ ತಿಂಗಳು 210 ರೂಪಾಯಿ ಹೂಡಿಕೆ ಮಾಡಬೇಕು. ಇದರರ್ಥ ನೀವು ಮಾಸಿಕ 5000 ರೂಪಾಯಿ ಪಿಂಚಣಿ ಪಡೆಯಲು ಬಯಸಿದರೆ ನಿಮ್ಮ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ದಿನಕ್ಕೆ 7 ರೂಪಾಯಿ ಹೂಡಿಕೆ ಮಾಡಿದರೆ ಸಾಕು. 60 ವರ್ಷ ವಯಸ್ಸಿನಲ್ಲಿ ಆರಂಭದಿಂದ 5,000 ರೂಪಾಯಿ ಪಿಂಚಣಿ ಪಡೆಯಬಹುದು

English summary

Atal Pension Yojana new rule: Investment Rule Changes From October 1, 2022, Details Here

Atal Pension Yojana: Investment Rule Changes From October 1, 2022. What are the major changes explained in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X