For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಗ್ರಾಹಕರೇ ಎಚ್ಚರ: ಡ್ರಿನಿಕ್ ವೈರಸ್‌ ಟಾರ್ಗೆಟ್ ನೀವಾಗಿರಬಹುದು!

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ಸುಮಾರು 27 ಬ್ಯಾಂಕ್‌ಗಳ ಗ್ರಾಹಕರು ಇನ್ನು ಮುಂದೆ ಅತೀ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಡ್ರಿನಿಕ್ ಆಂಡ್ರಾಯ್ಡ್ ಟ್ರೋಜನ್‌ನ ಹೊಸ ವರ್ಜನ್ ಕಂಡು ಬಂದಿದೆ. ಈ ವರ್ಜನ್ 18 ಭಾರತೀಯ ಬ್ಯಾಂಕ್‌ಗಳ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ.

ಆದರೆ ಈ ವೈರಸ್ ಬಂದರೆ ನಮಗೇನು ಎಂದು ಕೇರ್‌ಲೆಸ್ ಮಾಡಬೇಡಿ. ಈ ವೈರಸ್‌ನಿಂದಲೇ ನಿಮಗೆ ತೊಂದರೆ. ಹೌದು ಈ ಡ್ರಿನಿಕ್ ವೈರಸ್ ಬ್ಯಾಂಕ್ ಗ್ರಾಹಕರ ವೈಯಕ್ತಿಕ ಡೇಟಾ ಮತ್ತು ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುತ್ತದೆ. ಆದ್ದರಿಂದಾಗಿ ನೀವು ಎಚ್ಚರಿಕೆಯಿಂದ ಇರುವುದು ಉತ್ತಮ.

ಡೇಟಿಂಗ್ ಆಪ್‌ ಪರಿಚಯ: ಯುವತಿಗೆ ರೂಪಾಯಿ 5.7 ಕೋಟಿ ನೀಡಿದ ಬ್ಯಾಂಕ್ ಮ್ಯಾನೇಜರ್ ಬಂಧನಡೇಟಿಂಗ್ ಆಪ್‌ ಪರಿಚಯ: ಯುವತಿಗೆ ರೂಪಾಯಿ 5.7 ಕೋಟಿ ನೀಡಿದ ಬ್ಯಾಂಕ್ ಮ್ಯಾನೇಜರ್ ಬಂಧನ

ಡ್ರಿನಿಕ್ ಆಂಡ್ರಾಯ್ಡ್ ಟ್ರೋಜನ್ 2016 ರಿಂದ ಭಾರತದಲ್ಲಿ ಕಾಣಿಸಿಕೊಂಡಿದೆ. ಅಷ್ಟಕ್ಕೂ ಇದು ಕೊರೊನಾದಂತಹ ವೈರಸ್ ಏನಲ್ಲ! ಆದರೆ ಇದು ಸಾಫ್ಟ್‌ವೇರ್ ವೈರಸ್ ಆಗಿದೆ. ಎಸ್‌ಎಂಎಸ್‌ಗಳ ಮಾಹಿತಿಯನ್ನು ಕದಿಯಲು ಈ ವೈರಸ್ ಅನ್ನು ಬಳಕೆ ಮಾಡಲಾಗುತ್ತದೆ. ಆದರೆ ಸೆಪ್ಟೆಂಬರ್ 2021 ರಲ್ಲಿ ಇದಕ್ಕೆ ಬ್ಯಾಂಕಿಂಗ್ ಟ್ರೋಜನ್ ಅನ್ನು ಸೇರಿಸಲಾಗಿದೆ. ಈ ವೈರಸ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

 27 ಬ್ಯಾಂಕುಗಳು ಟಾರ್ಗೆಟ್

27 ಬ್ಯಾಂಕುಗಳು ಟಾರ್ಗೆಟ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ 27 ಬ್ಯಾಂಕಿಂಗ್ ಸಂಸ್ಥೆಗಳ ಬಳಕೆದಾರರನ್ನು ಈ ಡ್ರಿನಿಕ್ ವೈರಸ್‌ ಗುರಿಯಾಗಿಸಿಕೊಂಡಿದೆ. ಡ್ರಿಂಕಿನ್ ವೈರಸ್‌ನ ಈ ವರ್ಜನ್‌ನಲ್ಲಿ ಫಿಶಿಂಗ್ ಮಾಡಲಾಗುತ್ತದೆ. ನಿಮ್ಮ ಡೇಟಾವನ್ನು ಕದಿಯಲಾಗುತ್ತದೆ. ವರದಿಗಳ ಪ್ರಕಾರ, ಈ ವೈರಸ್‌ ಅನ್ನು ಮೊದಲು ಸೃಷ್ಟಿ ಮಾಡಿದ ಹ್ಯಾಕರ್ ಇದನ್ನು ಆಂಡ್ರಾಯ್ಡ್ ಬ್ಯಾಂಕಿಂಗ್ ಟ್ರೋಜನ್ ಆಗಿ ಅಭಿವೃದ್ಧಿಪಡಿಸಿದ್ದಾರೆ.

 ಹೇಗೆ ಮಾಹಿತಿ ಕದಿಯಲಾಗುತ್ತದೆ?

ಹೇಗೆ ಮಾಹಿತಿ ಕದಿಯಲಾಗುತ್ತದೆ?

ಈ ವೈರಸ್ ಅನ್ನು ಅಂಡ್ರಾಯ್ಡ್ ಬಳಕೆದಾರರು ಆದಾಯ ತೆರಿಗೆ ಇಲಾಖೆಯ ನಿರ್ವಹಣಾ ಸಾಧನವೆಂದು ತಪ್ಪಾಗಿ ತಿಳಿದುಕೊಂಡು ಡೌನ್‌ಲೋಡ್ ಮಾಡುತ್ತಾರೆ. ನಂತರ ಈ ಮಾಲ್‌ವೇರ್ ಮೊಬೈಲ್ ಬಳಕೆದಾರರ ಎಸ್‌ಎಂಎಸ್‌ಗಳನ್ನು ಓದಲು, ಸ್ವೀಕರಿಸಲು ಮತ್ತು ಕಳುಹಿಸಲು ಅವಕಾಶ ನೀಡುತ್ತದೆ. ಹೆಚ್ಚಾಗಿ ಕರೆಯನ್ನು ಕೂಡಾ ಹ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ಗೂಗಲ್ ಪೇನಲ್ಲಿ ಇರುವ ಸುರಕ್ಷತೆಯೂ ಕೂಡಾ ಇಲ್ಲದಂತೆ ಆಗುತ್ತದೆ. ಇನ್ನು ಈ ಡ್ರಿನಿಕ್ ಮಾಲ್‌ವೇರ್‌ನ ಹೊಸ ವರ್ಜನ್ ಫಿಶಿಂಗ್ ಪುಟದ ಬದಲಿಗೆ ನಿಜವಾದ ಆದಾಯ ತೆರಿಗೆಯ ಸೈಟ್ ಅನ್ನು ತೆರೆಯುತ್ತದೆ. ಅಲ್ಲಿ ಜನರು ನಮೂದಿಸುವ ಎಲ್ಲ ಮಾಹಿತಿಯನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಳ್ಳುತ್ತದೆ. ಈ ಮೂಲಕ ವಿವರವನ್ನು ಕದಿಯುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಬಳಕೆದಾರರ ಪರದೆಯ ಮೇಲೆ ನಕಲಿ ಡೈಲಾಗ್ ಬಾಕ್ಸ್ ತೆರೆಯುತ್ತದೆ, ಅದರಲ್ಲಿ ಬಳಕೆದಾರರಿಗೆ ರೂ 57,100 ಮರುಪಾವತಿಯನ್ನು ಪಡೆಯುವ ಮಾಹಿತಿ ತಿಳಿಸಲಾಗುತ್ತದೆ. ಮರುಪಾವತಿ ಬಟನ್ ಅನ್ನು ಕ್ಲಿಕ್ ಮಾಡುವುದರಿಂದ ಫಿಶಿಂಗ್ ಪುಟ ತೆರೆಯುತ್ತದೆ. ಅದು ಎಲ್ಲಾ ವೈಯಕ್ತಿಕ ವಿವರಗಳನ್ನು ಕದಿಯುತ್ತದೆ.

 ಸ್ಕ್ರೀನ್ ರೆಕಾರ್ಡಿಂಗ್ ಟೂಲ್ ಬಳಕೆ

ಸ್ಕ್ರೀನ್ ರೆಕಾರ್ಡಿಂಗ್ ಟೂಲ್ ಬಳಕೆ

ಈ ವೈರಸ್ ಬಳಕೆದಾರರ ಫೋನ್‌ನಲ್ಲಿ ಸ್ಕ್ರೀನ್ ರೆಕಾರ್ಡಿಂಗ್‌ಗಳು, ಕೀ-ಲಾಗಿಂಗ್, ಪ್ರವೇಶ ಸೇವೆಗಳು ಮತ್ತು ಇತರ ವಿವರಗಳನ್ನು ಕದಿಯಬಹುದು. ಇತ್ತೀಚಿನ ವರ್ಜನ್ iAssist ಹೆಸರಿನ APK ಯೊಂದಿಗೆ ಬರುತ್ತದೆ. ಇದರಿಂದ ಆಂಡ್ರಾಯ್ಡ್ ಬಳಕೆದಾರರ ಕ್ರೆಡಿಟ್ ಕಾರ್ಡ್ ವಿವರಗಳು, ಸಿವಿವಿ ಮತ್ತು ಪಿನ್ ಅನ್ನು ಕದಿಯಬಹುದು.

 ನೀವು ಹೇಗೆ ಎಚ್ಚರವಾಗಿರುವುದು?

ನೀವು ಹೇಗೆ ಎಚ್ಚರವಾಗಿರುವುದು?

* ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) ಯಾವಾಗಲೂ ಯಾವುದೇ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿ.
* ಅಪರಿಚಿತ ಸಂಖ್ಯೆಗಳು ಮತ್ತು ಮೂಲಗಳ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ರಕ್ಷಣೆಯನ್ನು ಆಕ್ಟಿವ್ ಮಾಡಿಕೊಳ್ಳಿ
* ಎಲ್ಲಾ ಅಪ್ಲಿಕೇಶನ್‌ಗಳು ಮತ್ತು ಸ್ಮಾರ್ಟ್‌ಫೋನ್ ಪರದೆಗಳಲ್ಲಿ ಬಯೋಮೆಟ್ರಿಕ್ ದೃಢೀಕರಣವನ್ನು ಸಕ್ರಿಯವಾಗಿರಿಸಿಕೊಳ್ಳಿ.
* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳಿಗೆ ಎಲ್ಲ ಅನುಮತಿಯನ್ನು ನೀಡಬೇಡಿ

ಆನ್‌ಲೈನ್‌ ಯುಪಿಐ ವಂಚನೆಯಿಂದ ತಪ್ಪಿಸಿಕೊಳ್ಳಬೇಕಾ? ಇಲ್ಲಿದೆ 5 ಟಿಪ್ಸ್ಆನ್‌ಲೈನ್‌ ಯುಪಿಐ ವಂಚನೆಯಿಂದ ತಪ್ಪಿಸಿಕೊಳ್ಳಬೇಕಾ? ಇಲ್ಲಿದೆ 5 ಟಿಪ್ಸ್

English summary

Bank Customers Alert: You Could Be Targeted By Drinik Virus, Explained in Kannada

Bank Customers Alert: You Could Be Targeted By Drinik Virus. virus is targeting users of 27 banking institutes including the State Bank of India (SBI).
Story first published: Saturday, October 29, 2022, 13:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X