For Quick Alerts
ALLOW NOTIFICATIONS  
For Daily Alerts

Bank Holidays in October 2022: ಅಕ್ಟೋಬರ್‌ನಲ್ಲಿ 21 ದಿನ ಬ್ಯಾಂಕ್‌ ರಜೆ, ಇಲ್ಲಿದೆ ಪಟ್ಟಿ

|

ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಕ್ಟೋಬರ್‌ನ ಬ್ಯಾಂಕ್ ರಜಾ ದಿನಗಳ ಕ್ಯಾಲೆಂಡರ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಬಿಐನ ಈ ಪಟ್ಟಿ ಪ್ರಕಾರ, ಅಕ್ಟೋಬರ್‌ 2022 ರಲ್ಲಿ ಒಟ್ಟು 21 ದಿನಗಳವರೆಗೆ ಬ್ಯಾಂಕುಗಳು ಬಂದ್ ಆಗಲಿದೆ. ಮುಂದಿನ ತಿಂಗಳು ನವರಾತ್ರಿ ಹಿನ್ನೆಲೆ ಹಲವಾರು ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. ನೀವು ಬ್ಯಾಂಕ್‌ನ ಯಾವುದೇ ಕಾರ್ಯ ಮಾಡುವುದಕ್ಕೂ ಮುನ್ನ ಯಾವೆಲ್ಲಾ ದಿನ ರಜೆ ಇರಲಿದೆ ಎಂದು ತಿಳಿಯುವುದು ಉತ್ತಮ.

ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್‌ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ.

Bank Holidays in September 2022: ಸೆಪ್ಟೆಂಬರ್‌ನಲ್ಲಿ 13 ದಿನ ಬ್ಯಾಂಕ್‌ ರಜೆ, ಇಲ್ಲಿದೆ ಪಟ್ಟಿBank Holidays in September 2022: ಸೆಪ್ಟೆಂಬರ್‌ನಲ್ಲಿ 13 ದಿನ ಬ್ಯಾಂಕ್‌ ರಜೆ, ಇಲ್ಲಿದೆ ಪಟ್ಟಿ

ನೀವು ಬ್ಯಾಂಕ್‌ಗೆ ಹೋದ ಬಳಿಕ ಬ್ಯಾಂಕ್ ರಜೆ ಎಂದು ತಿಳಿದು ಹಿಂದೆ ಬರುವುದನ್ನು ತಪ್ಪಿಸಲು ಮುಂದಿನ ತಿಂಗಳಿನಲ್ಲಿ ಬ್ಯಾಂಕ್‌ಗಳು ಎಷ್ಟು ದಿನ ಬಂದ್ ಆಗಿರಲಿದೆ ಎಂದು ಈಗಲೇ ತಿಳಿಯುವುದು ಉತ್ತಮ. ಯಾಕೆಂದರೆ ಅಕ್ಟೋಬರ್‌ನಲ್ಲಿ ಬಹುತೇಕ ದಿನಗಳು ಬ್ಯಾಂಕ್ ರಜೆ ಇರಲಿದೆ. ಆದರೆ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳು ಬಂದ್ ಆಗಲಾರದು. ಈ ಪೈಕಿ ಕೆಲವು ರಜೆಗಳು ಕೆಲವು ರಾಜ್ಯಗಳಲ್ಲಿ ಮಾತ್ರ ಇರಲಿದೆ. ಒಟ್ಟಾಗಿ 21 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. ಯಾವೆಲ್ಲಾ ದಿನಗಳು ಬ್ಯಾಂಕ್ ರಜೆ ಇದೆ ಎಂದು ಈ ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ. ಮುಂದೆ ಓದಿ.....

 ರಜಾದಿನಗಳ ಮೂರು ವರ್ಗೀಕರಣ

ರಜಾದಿನಗಳ ಮೂರು ವರ್ಗೀಕರಣ

ಆರ್‌ಬಿಐ ನಿಯಮದ ಪ್ರಕಾರ ರಜಾ ದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.

Bank Holidays in August 2022: ಆಗಸ್ಟ್‌ನಲ್ಲಿ ಎಷ್ಟು ದಿನ ಬ್ಯಾಂಕ್‌ ರಜೆ, ಇಲ್ಲಿದೆ ಪಟ್ಟಿBank Holidays in August 2022: ಆಗಸ್ಟ್‌ನಲ್ಲಿ ಎಷ್ಟು ದಿನ ಬ್ಯಾಂಕ್‌ ರಜೆ, ಇಲ್ಲಿದೆ ಪಟ್ಟಿ

 5 ಶನಿವಾರ, 5 ಭಾನುವಾರ ಇರುವ ತಿಂಗಳು

5 ಶನಿವಾರ, 5 ಭಾನುವಾರ ಇರುವ ತಿಂಗಳು

ಮುಂದಿನ ತಿಂಗಳು ಬ್ಯಾಂಕ್‌ ಬಂದ್ ಆಗಿರುವ 21 ದಿನಗಳ ಪೈಕಿ ಐದು ಭಾನುವಾರ (ವಾರದ ರಜೆ) ಆಗಿದ್ದರೆ ಇನ್ನುಳಿದ ಎರಡು ರಜೆಗಳು ಶನಿವಾರದ ರಜೆಗಳು ಆಗಿದೆ. ಸಾಮಾನ್ಯವಾಗಿ ಬ್ಯಾಂಕುಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬಂದ್ ಆಗಿರುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು ಐದು ಶನಿವಾರಗಳು ಬರಲಿದ್ದು ಈ ಪೈಕಿ ಎರಡು ಶನಿವಾರಗಳು ಬ್ಯಾಂಕ್ ಬಂದ್ ಆಗಿರುತ್ತದೆ. ತಿಂಗಳ ಎರಡನೇ ದಿನವೇ ಭಾನುವಾರ ಹಾಗೂ ಗಾಂಧಿ ಜಯಂತಿ ಹಿನ್ನೆಲೆ ಬ್ಯಾಂಕ್‌ಗಳು ಬಂದ್ ಆಗಿರುತ್ತದೆ. ಇನ್ನು ದುರ್ಗಾ ಪೂಜೆ, ದಸರಾ ಅಥವಾ ವಿಜಯದಶಮಿ ಹಿನ್ನೆಲೆ ಹಲವಾರು ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರುತ್ತದೆ. ಇನ್ನು ಅಕ್ಟೋಬರ್‌ ತಿಂಗಳಿನಲ್ಲೇ ದೀಪಾವಳಿಯು ಬರಲಿದ್ದು ಈ ದಿನವೂ ಬ್ಯಾಂಕ್ ಬಂದ್ ಆಗಿರುತ್ತದೆ.

 ಅಕ್ಟೋಬರ್‌ನಲ್ಲಿ ಈ ದಿನಗಳು ಬ್ಯಾಂಕ್ ರಜೆ

ಅಕ್ಟೋಬರ್‌ನಲ್ಲಿ ಈ ದಿನಗಳು ಬ್ಯಾಂಕ್ ರಜೆ

ಅಕ್ಟೋಬರ್ 1: ಅರ್ಧ ಹಣಕಾಸು ವರ್ಷ
ಅಕ್ಟೋಬರ್ 2: ಭಾನುವಾರ (ವಾರದ ರಜೆ), ಗಾಂಧಿ ಜಯಂತಿ
ಅಕ್ಟೋಬರ್ 3: ದುರ್ಗಾ ಪೂಜೆ (ಮಹಾ ಅಷ್ಟಮಿ)
ಅಕ್ಟೋಬರ್ 4: ದುರ್ಗಾ ಪೂಜೆ/ದಸರಾ (ಮಹಾನವಮಿ)/ ಆಯುಧ ಪೂಜೆ/ ಶ್ರೀಮಂತ ಶಂಕರದೇವರ ಜನ್ಮದಿನ
ಅಕ್ಟೋಬರ್ 5: ದುರ್ಗಾ ಪೂಜೆ/ದಸರಾ (ವಿಜಯದಶಮಿ)/ ಶ್ರೀಮಂತ ಶಂಕರದೇವರ ಜನ್ಮದಿನ
ಅಕ್ಟೋಬರ್ 6: ದುರ್ಗಾ ಪೂಜೆ/ದಸರಾ
ಅಕ್ಟೋಬರ್ 7: ದುರ್ಗಾ ಪೂಜೆ/ದಸರಾ
ಅಕ್ಟೋಬರ್ 8: ಎರಡನೇ ಶನಿವಾರ, ಮಿಲಾದ್-ಇ-ಶರೀಫ್/ಈದ್‌-ಇ-ಮಿಲಾದ್-ಉಲ್-ನಬಿ (ಪ್ರವಾದಿ ಮೊಹಮ್ಮದ್ ಜನ್ಮದಿನ)
ಅಕ್ಟೋಬರ್ 9: ಭಾನುವಾರ (ವಾರದ ರಜೆ)
ಅಕ್ಟೋಬರ್ 13: ಕರ್ವಾ ಛೌತ್
ಅಕ್ಟೋಬರ್ 14: ಈದ್‌-ಇ-ಮಿಲಾದ್-ಉಲ್-ನಬಿ ಬಳಿಕ ಬರುವ ಪವಿತ್ರ ಶುಕ್ರವಾರ
ಅಕ್ಟೋಬರ್ 16: ಭಾನುವಾರ (ವಾರದ ರಜೆ)
ಅಕ್ಟೋಬರ್ 18: ಕಟಿ ಬಿಹು
ಅಕ್ಟೋಬರ್ 22: ನಾಲ್ಕನೇ ಶನಿವಾರ
ಅಕ್ಟೋಬರ್ 23: ಭಾನುವಾರ (ವಾರದ ರಜೆ)
ಅಕ್ಟೋಬರ್ 24: ಕಾಳಿ ಪೂಜೆ/ ದೀಪಾವಳಿ/ ಲಕ್ಷ್ಮೀ ಪೂಜೆ/ ನರಕ ಚತುರ್ದಶಿ
ಅಕ್ಟೋಬರ್ 25: ಲಕ್ಷ್ಮೀ ಪೂಜೆ/ ದೀಪಾವಳಿ/ ಗೋ ಪೂಜೆ
ಅಕ್ಟೋಬರ್ 26: ಗೋ ಪೂಜೆ/ ವಿಕ್ರಮ ಸಂವಂತ ಹೊಸ ವರ್ಷ ದಿನ/ ಬಾಯ್ ಬಿಜ್/ ಬಾಯ್ ದುಜ್/ ದೀಪಾವಳಿ (ಬಲಿ ಪಾಡ್ಯಮಿ)/ ಲಕ್ಷ್ಮೀ ಪೂಜೆ
ಅಕ್ಟೋಬರ್ 27: ಬಾಯ್‌ದೂಜ್/ ಚಿತ್ರಗುಪ್ತ ಜಯಂತಿ/ ಲಕ್ಮೀ ಪೂಜೆ/ ದೀಪಾವಳಿ
ಅಕ್ಟೋಬರ್ 30: ಭಾನುವಾರ (ವಾರದ ರಜೆ)
ಅಕ್ಟೋಬರ್ 31: ಸರ್ದಾರ್ ವಲ್ಲಭಬಾಯಿ ಪಟೇಲರ ಜನ್ಮದಿನ/ ಛತ್ ಪೂಜೆ/ ಸೂರ್ಯ ಪಶ್ಟಿ ದಾಲ ಛತ್

 ಕರ್ನಾಟಕದಲ್ಲಿ ಯಾವೆಲ್ಲ ದಿನ ಬ್ಯಾಂಕ್ ರಜೆ

ಕರ್ನಾಟಕದಲ್ಲಿ ಯಾವೆಲ್ಲ ದಿನ ಬ್ಯಾಂಕ್ ರಜೆ

ಅಕ್ಟೋಬರ್ 2: ಭಾನುವಾರ (ವಾರದ ರಜೆ), ಗಾಂಧಿ ಜಯಂತಿ
ಅಕ್ಟೋಬರ್ 4: ದಸರಾ/ಮಹಾನವಮಿ/ ಆಯುಧ ಪೂಜೆ/
ಅಕ್ಟೋಬರ್ 5: ದಸರಾ/ ವಿಜಯದಶಮಿ
ಅಕ್ಟೋಬರ್ 8: ಎರಡನೇ ಶನಿವಾರ
ಅಕ್ಟೋಬರ್ 9: ಭಾನುವಾರ (ವಾರದ ರಜೆ)
ಅಕ್ಟೋಬರ್ 16: ಭಾನುವಾರ (ವಾರದ ರಜೆ)
ಅಕ್ಟೋಬರ್ 22: ನಾಲ್ಕನೇ ಶನಿವಾರ
ಅಕ್ಟೋಬರ್ 23: ಭಾನುವಾರ (ವಾರದ ರಜೆ)
ಅಕ್ಟೋಬರ್ 24: ದೀಪಾವಳಿ
ಅಕ್ಟೋಬರ್ 26: ದೀಪಾವಳಿ
ಅಕ್ಟೋಬರ್ 30: ಭಾನುವಾರ (ವಾರದ ರಜೆ)

English summary

Bank Holidays in October 2022: Banks will be Closed for 21 Days in this Month

Bank Holidays In October 2022 : Let's have a look at important bank dates when banks will remain closed in the month of October. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X