For Quick Alerts
ALLOW NOTIFICATIONS  
For Daily Alerts

ಸಂಬಂಧಿಕರಿಗೆ, ಸ್ನೇಹಿತರಿಗೆ ಸಾಲ ಕೊಡುವ ಮುನ್ನ ನೀವು ಅನುಸರಿಸಬೇಕಾದ 5 ಕ್ರಮಗಳು

|

ನಿಮ್ಮ ಬಳಿ ಹತ್ತಿರದ ಸಂಬಂಧಿಕರು ಇಲ್ಲವೇ, ತುಂಬಾ ಕ್ಲೋಸ್ ಇರುವ ಸ್ನೇಹಿತರು ಬಂದು ಹಣ ಕೇಳಿದರೆ ಇಲ್ಲ ಎಂದು ಹೇಳಲು ಮನಸ್ಸು ಒಪ್ಪುವುದಿಲ್ಲ. ಅವರು ಸ್ವಲ್ಪ ಕಷ್ಟ ಹೇಳಿಕೊಂಡರೂ ಮನಸ್ಸು ಕರಗಿ ಬಿಡುವುದು ಸಾಮಾನ್ಯ. ಏಕೆಂದರೆ ಅವರು ನಿಮ್ಮೊಂದಿಗೆ ಅಷ್ಟೊಂದು ಅಮೂಲ್ಯ ಬಾಂಧವ್ಯವನ್ನು ಹೊಂದಿರುತ್ತಾರೆ. ಹೀಗಾಗಿ ಅವರು ಹಣ ಕೇಳಿದಾಗ ಇಲ್ಲ ಎಂದು ಹೇಳುವುದು ತುಂಬಾನೆ ಕಷ್ಟಕರ.

ಮುಂಬೈ ಮೂಲದ ಹಣಕಾಸು ಯೋಜನೆಕಾರ ತರುಣ್ ಬಿರಾನಿ, ಸುಖಾ ಸುಮ್ಮನೆ ಹಣಕಾಸಿನ ಸಮಸ್ಯೆಯೊಳಗೆ ಸಿಲುಕಿಕೊಳ್ಳುವವರಿಗೆ ಅಮೂಲ್ಯ ಸಲಹೆಗಳನ್ನು ತಿಳಿಸಿದ್ದಾರೆ. ಸಂಬಂಧಿಗಳು ಇಲ್ಲವೇ , ನಿಮ್ಮ ಸ್ನೇಹಿತರು ನಿಮ್ಮ ಬಳಿ ಸಾಲ ಕೇಳಿದಾಗ ಹಣ ನೀಡುವ ಮೊದಲು ಏನನ್ನು ಗಮನಿಸಬೇಕು ಎಂಬುದನ್ನ 5 ಉತ್ತಮ ಸಲಹೆಗಳ ಮೂಲಕ ತಿಳಿಸಿದ್ದಾರೆ.

ಸಂಬಂಧಿಕರು ಇಲ್ಲವೇ ಸ್ನೇಹಿತರಿಗೆ ಸಾಲ ನೀಡುವುದು ಭಾವನಾತ್ಮಕ ನಿರ್ಧಾರವಾಗಿರುತ್ತದೆ. ಹೀಗಾಗಿ ಇಲ್ಲ ಎಂದು ಹೇಳುವುದು ನಿಜಕ್ಕೂ ಸುಲಭವಲ್ಲ ಎಂದು TNBG ಕ್ಯಾಪಿಟಲ್ ಅಡ್ವೈಸರ್ ಸಂಸ್ಥಾಪಕ ಹಾಗೂ ನಿರ್ದೇಶಕನಾಗಿರುವ ತರುಣ್ ಬಿರಾನಿ ಹೇಳಿದ್ದಾರೆ.

ಸಾಲ ಕೊಡುವ ಮುನ್ನ ಅನುಸರಿಸಬೇಕಾದ 5 ಕ್ರಮಗಳು ಈ ಕೆಳಗಿವೆ ನೋಡಿ.

ನಿಮ್ಮ ಹಾಗೂ ಸಾಲ ಪಡೆಯುವವರ ಹಣಕಾಸಿನ ಸ್ಥಿತಿ ಹೇಗಿದೆ ಎಂದು ನೋಡಿಕೊಳ್ಳಿ

ನಿಮ್ಮ ಹಾಗೂ ಸಾಲ ಪಡೆಯುವವರ ಹಣಕಾಸಿನ ಸ್ಥಿತಿ ಹೇಗಿದೆ ಎಂದು ನೋಡಿಕೊಳ್ಳಿ

ಸದ್ಯ ದೇಶದಲ್ಲಿ ಆರ್ಥಿಕತೆ ಮಂದಗತಿಯು ಎಲ್ಲಾ ಕ್ಷೇತ್ರವನ್ನು ತಟ್ಟಿದೆ. ಬಹುತೇಕ ಕ್ಷೇತ್ರಗಳಲ್ಲಿನ ಲಾಭದ ಪ್ರಮಾಣವೂ ತಗ್ಗಿದೆ. ನಿಮ್ಮ ಕುಟುಂಬದ ಯಾವುದಾದರೂ ಸದಸ್ಯರು ಇಲ್ಲವೇ ಸಂಬಂಧಿಕರು ಯಾವುದಾದರೂ ಕಾರಣದಿಂದ ನಿಮ್ಮ ಬಳಿ ಬಂದು ಸಾಲ ಕೇಳಬಹುದು. ಅವರು ಮಾಡುತ್ತಿರುವ ಕಂಪನಿಯಲ್ಲಿ ಸಂಬಳ ಆಗುವುದು ತಡವಾಗಿರಬಹುದು ಅಥವಾ ಬಿಜಿನೆಸ್‌ನಲ್ಲಿ ಲಾಭದ ಪ್ರಮಾಣ ತಗ್ಗಿರಬಹುದು, ಇಲ್ಲವೇ ಕೆಲಸ ಕಳೆದುಕೊಂಡಿರಬಹುದು.

ಹೀಗೆ ಯಾವೊದೋ ಒಂದು ಕಾರಣದಿಂದ ನಿಮ್ಮ ಬಳಿ ಬಂದು ಸಾಲ ಕೇಳಿದಾಗ ನಿಮ್ಮ ಬಳಿ ಇರುವ ಹಣವನ್ನು ನೀಡುವ ಮುನ್ನ ನೀವು ಭವಿಷ್ಯವನ್ನು ಯೋಚಿಸಬೇಕಾಗುತ್ತದೆ. ನೀವು ಹೂಡಿಕೆಗೆಂದು ತೆಗೆದಿಟ್ಟಿರುವ ಹಣ ವಾಪಸ್ ಬರುತ್ತದೆಯೇ ಇಲ್ಲವೇ ಎಂಬುದನ್ನು ಅರಿತುಕೊಳ್ಳಿ. ಅಂದರೆ ನೀವು ಏನಾದರೂ ಮನೆಗೆ ಖರೀದಿಸಬೇಕು ಅಂದುಕೊಂಡಿದ್ದರೆ ಅಥವಾ ನಿಮ್ಮ ಮನೆಗೆ ಏನಾದರೂ ಖರೀದಿಸಬೇಕೆಂದು ಹಣವನ್ನು ಉಳಿಸಿಕೊಂಡಿದ್ದರೆ ಆ ಹಣವನ್ನು ಸಾಲವಾಗಿ ನೀಡಿದಾಗ, ನೀವು ಅಂದುಕೊಂಡಿದ್ದನ್ನು ಖರೀದಿಸಲು ಮತ್ತೆ ಹಲವು ತಿಂಗಳು ಬೇಕಾಗಬಹುದು.

ನಿಮ್ಮ ಹಣಕಾಸಿನ ಸ್ಥಿತಿ ನೋಡಿಕೊಳ್ಳುವುದರ ಜೊತೆಗೆ ನಿಮ್ಮ ಬಳಿ ಸಾಲ ಕೇಳಿದ ವ್ಯಕ್ತಿಯ ಹಣಕಾಸಿನ ಸ್ಥಿತಿಯನ್ನು ಅರಿಯಬೇಕು. ಅಂದರೆ ಅವರಿಗೆ ಸಾಲ ನೀಡಿದರೆ ಅದನ್ನು ಹಿಂತಿರುಗಿಸಲು ಅವರು ಸಮರ್ಥರಾಗಿದ್ದಾರೆಯೇ? ಇಲ್ಲವೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಸ್ವಲ್ಪ ಪರಿಚಯ ಇದೆ ಎಂದು ಯಾರಿಗಾದರೂ ಹಣ ನೀಡಿದರೆ ಆ ವ್ಯಕ್ತಿ ಮತ್ತೆ ನಿಮಗೆ ಸಿಗದೇ ಬೇರೆಡೆ ಸ್ಥಳಾಂತರವಾಗುವ ಸಾಧ್ಯತೆಯು ಇರುತ್ತದೆ. ಹೀಗಾಗಿ ನೀವು ಹಣ ನೀಡುವ ಮುನ್ನ ಸಾಲ ಪಡೆಯುವವರ ಹಣಕಾಸಿನ ಸ್ಥಿತಿಯನ್ನು ಅಳೆಯಿರಿ.

 

ಪರ್ಸನಲ್ ಲೋನ್ ಪಡೆಯಲು ಬೇಕಾದ ಅರ್ಹತೆ ಮತ್ತು ದಾಖಲೆಗಳೇನು?ಪರ್ಸನಲ್ ಲೋನ್ ಪಡೆಯಲು ಬೇಕಾದ ಅರ್ಹತೆ ಮತ್ತು ದಾಖಲೆಗಳೇನು?

ನಿಮ್ಮ ಹೂಡಿಕೆಯ ಹಣವನ್ನು ಸಾಲವಾಗಿ ನೀಡಬೇಡಿ

ನಿಮ್ಮ ಹೂಡಿಕೆಯ ಹಣವನ್ನು ಸಾಲವಾಗಿ ನೀಡಬೇಡಿ

ಯಾರೇ ಆದರೂ ಹೂಡಿಕೆಗೆಂದು ಎತ್ತಿಟ್ಟ ಹಣವನ್ನು ಸಾಲವಾಗಿ ನೀಡಬಾರದು ಎಂಬುದು ಮುಖ್ಯವಾದ ಸಲಹೆಯಾಗಿದೆ. ನೀವು ಭವಿಷ್ಯಕ್ಕಾಗಿ ಎತ್ತಿಟ್ಟ ಹಣವು ಅಂದರೆ ನಿಮ್ಮ ಕೆಲಸದ ನಿವೃತ್ತಿಯ ನಂತರ ಜೀವನಕ್ಕಾಗಿ ಎತ್ತಿಟ್ಟ ಹಣ, ಇಲ್ಲವೇ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಇಟ್ಟಿರುವ ಹಣವನ್ನು ಯಾವುದೇ ಕಾರಣಕ್ಕೂ ಸಾಲವಾಗಿ ನೀಡಬಾರದು. ಏಕೆಂದರೆ ನೀವು ನೀಡಿದ ಸಾಲ ವಾಪಸ್ ಬರದೇ ಇರಬಹುದು.

ನಿಮ್ಮ ಸ್ನೇಹಿತರು ಇಲ್ಲವೇ ಸಂಬಂಧಿಕರು ಸಾಲ ಕೇಳಿದಾಗ ನಿಮ್ಮ ಹೂಡಿಕೆಗೆಂದು ಎತ್ತಿಟ್ಟಿರುವ ಹಣವನ್ನು ನೀಡುವ ಮುನ್ನ ಯೋಚಿಸಿ. ಏಕೆಂದರೆ ಅದನ್ನು ಕಳೆದುಕೊಳ್ಳುವ ಸಾಧ್ಯತೆಯು ಇರುತ್ತದೆ. ಏಕೆಂದರೆ ಸಾಲ ಪಡೆದ ವ್ಯಕ್ತಿಯ ಕೆಲಸ ಅಥವಾ ಅವರು ಮಾಡುತ್ತಿರು ಬಿಜಿನೆಸ್ ನೋಡಿ ಸಾಲ ನೀಡಬಹುದು. ಆದರೆ ಒಂದು ವೇಳೆ ಆತ ಕೆಲಸ ಕಳೆದುಕೊಂಡರೆ ಇಲ್ಲವೇ ಬಿಜಿನೆಸ್‌ನಲ್ಲಿ ನಷ್ಟವುಂಟಾದರೆ ನಿಮಗೆ ಹಣ ವಾಪಸ್ ನೀಡಲು ಶಕ್ತನಾಗಿರುವುದಿಲ್ಲ. ಹೀಗಾಗಿ ನಿಮ್ಮ ಭವಿಷ್ಯದ ಹೂಡಿಕೆಗೆ ಎತ್ತಿಟ್ಟ ಹಣವನ್ನು ನೀಡದಿರಿ.

 

ಎಲ್ಐಸಿ (LIC) ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ?ಎಲ್ಐಸಿ (LIC) ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ?

ಕೆಲವೊಮ್ಮೆ ಇಲ್ಲ ಎಂದು ಹೇಳುವುದನ್ನು ಕಲಿಯಬೇಕು

ಕೆಲವೊಮ್ಮೆ ಇಲ್ಲ ಎಂದು ಹೇಳುವುದನ್ನು ಕಲಿಯಬೇಕು

ಈ ಮೇಲೆ ಹೇಳಿದಂತೆ ನಿಮ್ಮ ಆತ್ಮೀಯರು, ಸ್ನೇಹಿತರು ನಿಮ್ಮ ಬಳಿ ಸಾಲ ಕೇಳಿದಾಗ ಇಲ್ಲ ಎಂದು ಹೇಳುವುದು ತುಂಬಾನೆ ಕಷ್ಟವಾಗಿರುತ್ತದೆ. ಆದರೆ ನಿಮ್ಮ ಬಳಿ ಹೆಚ್ಚು ಹಣವಿಲ್ಲದೆ ಇದ್ದಾಗ ಅಂದರೆ ನಿಮ್ಮ ಹೆಚ್ಚುವರಿ ಆದಾಯ ಇಲ್ಲದಿದ್ದಾಗ ಇರುವ ಹಣವನ್ನು ಕೊಟ್ಟು ಬಿಡುವುದು ಆರ್ಥಿಕ ಹೊರೆಯಾಗಿ ಪರಿಣಮಿಸಬಹುದು.

ನಿಮ್ಮ ಬಳಿ ಸಾಲ ಪಡೆಯುವವರು ಯಾವ ಕಾರಣಕ್ಕೆ ಸಾಲ ಪಡೆಯುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ. ಸಾಲ ಪಡೆಯುವ ವ್ಯಕ್ತಿ ತುರ್ತು ಸಂದರ್ಭಕ್ಕಾಗಿ ಹಣ ಪಡೆಯುತ್ತಿದ್ದಾರೆಯೇ, ಅಥವಾ ಕಾರು ಖರೀದಿ, ಮನೆ ಖರೀದಿಗೆ ಹಣ ಕೇಳುತಿದ್ದಾರೆಯೇ? ಅಥವಾ ಕ್ರೆಡಿಟ್ ಕಾರ್ಡ್, ಇತರೆ ಬಿಲ್ ಪಾವತಿಗಾಗಿ ನಿಮ್ಮ ಬಳಿ ಹಣ ಕೇಳಿದ್ದಾರೆಯೇ ಗಮನಿಸಿ. ತುರ್ತು ಸಂದರ್ಭ ಹೊರತುಪಡಿಸಿ ಬೇರೆ ಕಾರಣಕ್ಕೆ ಹಣ ನೀಡುವುದನ್ನು ತಪ್ಪಿಸಿ.

ಪರ್ಸನಲ್ ಲೋನ್ ಗಿಂತಲೂ ಕಡಿಮೆ ಬಡ್ಡಿಗೆ ಸಿಗುವ 6 ಸಾಲಗಳಿವುಪರ್ಸನಲ್ ಲೋನ್ ಗಿಂತಲೂ ಕಡಿಮೆ ಬಡ್ಡಿಗೆ ಸಿಗುವ 6 ಸಾಲಗಳಿವು

ಮುಂಬೈ ಮೂಲದ ಹಣಕಾಸು ಯೋಜಕ ಅರ್ನವ್ ಪಾಂಡ್ಯ ಪ್ರಕಾರ ವ್ಯಕ್ತಿಯೊಬ್ಬನಿಗೆ 2ನೇ ಬಾರಿಗೆ ಸಾಲ ನೀಡುವುದನ್ನು ಆದಷ್ಟು ತಪ್ಪಿಸಬೇಕು ಎಂದು ಹೇಳುತ್ತಾರೆ. ' ಒಬ್ಬ ವ್ಯಕ್ತಿಯು ಒಂದು ಬಾರಿ ಸಾಲ ಕೇಳಿದರೆ ಏನು ಸಮಸ್ಯೆಯಿಲ್ಲ. ಆದರೆ ಅದೇ ವ್ಯಕ್ತಿ 2ನೇ ಬಾರಿಗೆ ಹಣ ಕೇಳುತ್ತಿದ್ದಾನೆ ಎಂದರೆ ಆತ ನಿರ್ವಹಿಸುವ ಹಣಕಾಸು ವಿಧಾನ ತಪ್ಪಾಗಿದೆ ಎಂದು ಅರ್ಥ.''

ಹೀಗಾಗಿ ಆ ರೀತಿಯ ವ್ಯಕ್ತಿಗೆ ಸಾಲ ನೀಡುವುದನ್ನು ತಪ್ಪಿಸಿದರೆ ನೀವು ಸಾಲ ನೀಡುವುದಿಲ್ಲ ಎಂದು ಬೇರೆಯವರಿಗೂ ಗೊತ್ತಾಗುವುದರ ಮೂಲಕ ನಿಮ್ಮ ಬಳಿ ಹಣ ಕೇಳುವುದು ತಪ್ಪುತ್ತದೆ.

 

ಸಾಲದ ಹಣವನ್ನು ವಾಪಸ್‌ ಕೇಳಲು ಹಿಂಜರಿಕೆ ಬೇಡ

ಸಾಲದ ಹಣವನ್ನು ವಾಪಸ್‌ ಕೇಳಲು ಹಿಂಜರಿಕೆ ಬೇಡ

ನಿಮ್ಮ ಸಂಬಂಧಿಕರು ಅಥವಾ ಹತ್ತಿರದ ಸ್ನೇಹಿತರಿಗೆ ಹಣ ನೀಡಿದರೆ ಮತ್ತೆ ವಾಪಸ್ ಕೇಳಲು ಹಿಂಜರಿಕೆಯಾಗುವುದು ಸಾಮಾನ್ಯ. ಆದರೆ ಈ ರೀತಿಯಾಗಿ ಮಾಡದೇ ನಿಮ್ಮ ಹಣ ವಾಪಸ್ ಕೇಳಲು ಅಂಜದಿರಿ. ಏಕೆಂದರೆ ನೀವು ಕೆಲವೊಮ್ಕೆ ಯಾವುದೇ ನಿರೀಕ್ಷೆ ಇಲ್ಲದೆ, ಬಡ್ಡಿ ಇಲ್ಲದೆ ಹಣ ನೀಡಿರುತ್ತಿರಿ. ಆದರೆ ಅವರು ಸರಿಯಾದ ಸಮಯಕ್ಕೆ ಹಣ ಹಿಂದಿರುಗಿಸದಿದ್ದರೆ ಸಮಸ್ಯೆ ಖಂಡಿತ.

ನೀವು ಸಾಲ ನೀಡಿದ ಮೇಲೆ ನಿರ್ದಿಷ್ಟ ಕಾಲಾವಧಿ ತಲುಪುವ ಮುನ್ನ ಹಣ ಹಿಂದಿರುಗಿಸುವುದನ್ನು ಅವರಿಗೆ ನೆನಪು ಮಾಡಬೇಕು. ನಿಮಗೆ ಅನಿವಾರ್ಯತೆ ಇದ್ದರೆ ಹಣ ಕೇಳಲು ಹಿಂಜರಿಕೆ ಬೇಡ. ಯಾರೂ ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳದಂತೆ ನಿಮ್ಮನ್ನು ರೂಪಿಸಿಕೊಳ್ಳಿ.

 

ಯಾರಿಗೂ ಸಾಲ ಖಾತರಿಗಾರರಾಗಬೇಡಿ (ಲೋನ್ ಗ್ಯಾರೆಂಟರ್ ಆಗದಿರಿ)

ಯಾರಿಗೂ ಸಾಲ ಖಾತರಿಗಾರರಾಗಬೇಡಿ (ಲೋನ್ ಗ್ಯಾರೆಂಟರ್ ಆಗದಿರಿ)

ನೀವು ಯಾರಿಗಾದರೂ ಗ್ಯಾರೆಂಟರ್ ಆದರೆ ಮತ್ತೆ ನೀವು ಹಣ ಪಡೆಯಲು ಸಾಧ್ಯವಿಲ್ಲ. ಬಹುತೇಕ ಜನರು ಮೋಸ ಹೋಗುವುದು ಹೀಗೆ. ಸಾಲ ಪಡೆಯುವವರಿಗೆ ಗ್ಯಾರೆಂಟರ್ ಆಗುವುದನ್ನು ತಿಳಿಯದೇ ಕೇವಲ ಸಾಕ್ಷಿದಾರರೆಂದು ತಿಳಿದು ಸಹಿ ಹಾಕಿರುವ ಉದಾಹರಣೆ ಇದೆ. ಯಾವಾಗ ಸಾಲ ಪಡೆದವನು ಸರಿಯಾಗಿ ಕಂತುಗಳಲ್ಲಿ ಸಾಲ ಹಿಂದಿರುಗುವುದಿಲ್ಲ, ಆ ಸಂದರ್ಭದಲ್ಲಿ ಗ್ಯಾರೆಂಟರ್ ಆಗಿದ್ದವರಿಗೆ ನೋಟಿಸ್ ಕಳುಹಿಸುತ್ತದೆ.

ನೀವು ಗ್ಯಾರೆಂಟರ್ ಆದರೆ ಆ ವ್ಯಕ್ತಿ ಸರಿಯಾಗಿ ಸಾಲ ಹಿಂದಿರುಗಿಸದಿದ್ದರೆ, ನಿಮ್ಮ ಸಿಬಿಲ್ ರಿಪೋರ್ಟ್‌ನಲ್ಲಿ ಅದನ್ನು ದಾಖಲಿಸಲಾಗಿರುತ್ತದೆ. ಇದು ನೀವು ಎಂದಾದರೂ ಸಾಲ ಪಡೆಯಬೇಕೆಂದರೆ ತೊಂದರೆಯಾಗುತ್ತದೆ.

ನಮ್ಮ ಸಲಹೆ ಎಂದರೆ ಯಾರಿಗೂ ಸಾಲದ ಗ್ಯಾರೆಂಟರ್ ಆಗದಿರಿ , ಯಾವುದಾದರೂ ವ್ಯಕ್ತಿ ನಿಮ್ಮನ್ನು ಗ್ಯಾರೆಂಟರ್ ಆಗಿ ಕೇಳುತ್ತಿದ್ದಾರೆ ಎಂದರೆ ಅವರು ಸಾಲ ಪಡೆಯುವಷ್ಟು ಸಮರ್ಥರಾಗಿಲ್ಲ ಎಂದರ್ಥ. ಹೀಗಾಗಿ ಗ್ಯಾರೆಂಟರ್ ಆಗುವುದಕ್ಕಿಂತ ಒಳ್ಳೆಯ ದಾರಿ ಬೇಕಿದ್ದರೆ ದಾನ ಮಾಡಿಬಿಡಿ. ಏಕೆಂದರೆ ನೀವು ನಿವೃತ್ತಿ ನಂತರದ ಜೀವನಕ್ಕಾಗಿ ಎತ್ತಿಟ್ಟ ಹಣವು, ಅಥವಾ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಇಟ್ಟಿರುವ ಹಣವನ್ನು ಸಾಲದ ಬಾಕಿ ತೀರಿಸುವಂತಾಗಬಾರದು.

 

English summary

Before Lending Your Money Follow These Five Rules

These are the five rules to you follow when lending money to family or friends
Story first published: Friday, December 20, 2019, 16:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X