For Quick Alerts
ALLOW NOTIFICATIONS  
For Daily Alerts

ವಯಸ್ಸು ಮೀರುವ ಮುನ್ನ ಈ ನಾಲ್ಕು ಹೂಡಿಕೆ ತಪ್ಪದೇ ಮಾಡಿ

|

ದುಡಿ, ತಿನ್ನು, ಮಲಗು- ಇಷ್ಟೇ ಆಗಿದ್ದರೆ ಜೀವನ ಅದೆಷ್ಟು ಸೊಬಗಿರುತ್ತಿತ್ತಲ್ವಾ? ಜೀವನದ ವಾಸ್ತವತೆ ಅಷ್ಟು ಸರಳವಲ್ಲ. ಉಳಿತಾಯದ ಮನೋಭಾವ ಇಲ್ಲದೇ ಹೋದರೆ ನೀವೆಷ್ಟೇ ದುಡಿದು ಕೊನೆಗಾಲಕ್ಕೆ ಉಳಿಕೆ ಅಷ್ಟಕಷ್ಟೇ. ನೀವು ಎಷ್ಟು ಹಣ ಉಳಿಸುತ್ತೀರೋ ಅಷ್ಟು ಹಣ ಗಳಿಕೆ ಮಾಡಿದಂತೆ ಎಂಬುದನ್ನು ಸದಾ ನೆನಪಿಟ್ಟುಕೊಂಡಿರಿ.

ವರ್ಷ ಬಹಳ ಬೇಗ ಉರುಳುತ್ತವೆ. ಓದೋದುತ್ತಾ, ಆಡಾಡುತ್ತಾ, ಗೆಗ್ಗೇಯುತಾ ಮಧ್ಯ ವಯಸ್ಸಿಗೆ ಬಂದುಬಿಟ್ಟಿರುತ್ತೀರಿ. ದುಡಿಮೆಯ ಶಕ್ತಿ 10-15 ವರ್ಷ ಇದ್ದಾಗ ಏನಪ್ಪಾ ಎಂದು ಭವಿಷ್ಯದ ಬಗ್ಗೆ ಚಿಂತೆ ಪಡುವ ಕೆಲಸ ಮಾತ್ರವೇ ಉಳಿಯೋದು. ಅಷ್ಟರೊಳಗೆ ನೀವು ಏನಾದರೂ ಭದ್ರತೆ ಮಾಡಿಕೊಂಡಿದ್ದರೆ ಸರಿ.

ಹೊಚ್ಚ ಹೊಸ FD ಯೋಜನೆ ಪ್ರಕಟಿಸಿದ ಕೆನರಾ ಬ್ಯಾಂಕ್? ಬಡ್ಡಿದರ ಎಷ್ಟು?ಹೊಚ್ಚ ಹೊಸ FD ಯೋಜನೆ ಪ್ರಕಟಿಸಿದ ಕೆನರಾ ಬ್ಯಾಂಕ್? ಬಡ್ಡಿದರ ಎಷ್ಟು?

ಮಧ್ಯವಯಸ್ಸಿಗೆ ಬರುವ ಮುನ್ನ ನಿಮ್ಮ ಹಣಕಾಸು ವ್ಯವಸ್ಥೆಯನ್ನು ಎಷ್ಟು ಚಂದಕ್ಕೆ ನಿರ್ವಹಣೆ ಮಾಡಿರುತ್ತೀರಿ ಎಂಬುದರ ಮೇಲೆ ನಿಮ್ಮ ನಿಜವಾದ ಭವಿಷ್ಯ ನಿಂತಿರುತ್ತದೆ. ಈ ಹಂತದಲ್ಲಿ ನೀವು ತಪ್ಪದೇ ಮಾಡಬೇಕಾದ ಕೆಲಸಗಳು ಇಲ್ಲಿವೆ.

 ಮ್ಯೂಚುವಲ್ ಫಂಡ್

ಮ್ಯೂಚುವಲ್ ಫಂಡ್

ಎಸ್‌ಐಪಿ ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್. ಮ್ಯುಚುವಲ್ ಫಂಡ್ ಒಂದು ಉದಾಹರಣೆ. ಬಹಳ ಕಡಿಮೆ ಅವಧಿಯಲ್ಲಿ ಹಣವನ್ನು ಬೆಳೆಸಲು ಒಳ್ಳೆಯ ಯೋಜನೆ ಇದು. ನೀವು ಕೆಲಸಕ್ಕೆ ಸೇರಿ ಸಂಬಳ ಎಣಿಸಲು ಆರಂಬಿಸುತ್ತಿದ್ದಂತೆಯೇ ಎಸ್‌ಐಪಿಗಳ ಮೇಲೆ ಹೂಡಿಕೆಯತ್ತ ಗಮನ ಹರಿಸಲು ಆರಂಭಿಸುವುದು ಉತ್ತಮ. ಬಹಳ ಬೇಗ ಎಸ್‌ಐಪಿಗಳ ಮೇಲೆ ಹೂಡಿಕೆ ಆರಂಭಿಸಿದರೆ ಬಹಳ ದೊಡ್ಡ ಮೊತ್ತದ ಆದಾಯವನ್ನು ಕಲೆಹಾಕಲು ಸಾಧ್ಯ.

ಷೇರುಪೇಟೆ ಮೇಲೆ ನೇರವಾಗಿ ಹಣ ಹಾಕುವುದು ಯಾವಾಗಿದ್ದರೂ ಗ್ಯಾಂಬ್ಲಿಂಗ್ ಇದ್ದಂಗೆ. ಈ ರಿಸ್ಕ್ ತೆಗೆದುಕೊಳ್ಳಬಯಸದವರು ಮ್ಯುಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದೇ ಸರಿ. ನಿಮ್ಮ ಹೂಡಿಕೆ ಬೆಳೆಯಲು ಹೆಚ್ಚು ಕಾಲಾವಕಾಶ ಸಿಗುತ್ತದೆ. ಎಸ್‌ಐಪಿಯಲ್ಲೂ ನಾನಾ ತರಹ ಇದ್ದು ನಿಮ್ಮ ವಯಸ್ಸು ಮತ್ತು ಹಣದ ಮೊತ್ತಕ್ಕೆ ತಕ್ಕಂತಹ ಎಸ್‌ಐಪಿ ಯೋಜನೆಯನ್ನು ಪಡೆದುಕೊಳ್ಳಬಹುದು.

 

 ಪಬ್ಲಿಕ್ ಪ್ರಾವಿಡೆಂಟ್ ಫಂಡ್

ಪಬ್ಲಿಕ್ ಪ್ರಾವಿಡೆಂಟ್ ಫಂಡ್

ನೀವು ಕೆಲಸಕ್ಕೆ ಸೇರಿದರೆ ಅಲ್ಲಿ ನಿಮಗೆ ಪ್ರಾವಿಡೆಂಟ್ ಫಂಡ್, ಅಥವಾ ಪಿಎಫ್ ಖಾತೆ ತೆರೆಯಲಾಗುತ್ತದೆ. ಅದು ಬಿಟ್ಟು ನೀವು ವೈಯಕ್ತಿಕವಾಗಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ತೆರೆಯಬಹುದು. ಪಿಪಿಎಫ್‌ನಲ್ಲಿ ನಿಮ್ಮ ಹಣಕ್ಕೆ ಒಳ್ಳೆಯ ಬಡ್ಡಿದರವೂ ಕೂಡಿಕೊಳ್ಳುತ್ತದೆ. ತೆರಿಗೆ ವಿನಾಯಿತಿಯೂ ಲಭ್ಯ ಇರುತ್ತದೆ. ನಿಮ್ಮ ಯಾವ ಪಿಪಿಎಫ್ ಹಣಕ್ಕೂ ತೆರಿಗೆ ಮುರಿದುಕೊಳ್ಳಲಾಗುವುದಿಲ್ಲ.

ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಯಾರು ಬೇಕಾದರೂ ಪಿಪಿಎಫ್ ಖಾತೆ ತೆರೆಯಬಹುದು. 15 ವರ್ಷದ ಮೆಚೂರಿಟಿ ಪೀರಿಯಡ್ ಇರುತ್ತದೆ. ಅದಾದ ಬಳಿಕ ಬೇಕೆಂದರೆ ಪ್ರತೀ ಐದು ವರ್ಷಗಳಿಗೊಮ್ಮೆ ವಿಸ್ತರಿಸಬಹುದು. ಅಷ್ಟೂ ಅವಧಿ ನಿಮಗೆ ಬಡ್ಡಿ ಸೇರಿಕೊಳ್ಳುತ್ತಾ ಹೋಗುತ್ತದೆ.

ಹೀಗಾಗಿ, ಬಹಳ ಸುರಕ್ಷಿತವಾಗಿ ಹೂಡಿಕೆ ಮಾಡಬಯಸುವವರಿಗೆ ಪಿಪಿಎಫ್ ಹೇಳಿಮಾಡಿಸಿದೆ. ಹಾಗೆಯೇ, ತಮ್ಮ ಆದಾಯಕ್ಕೆ ಹೆಚ್ಚು ತೆರಿಗೆಯ ಕತ್ತರಿ ಬೀಳಬಾರದೆಂದು ಬಯಸುವವರಿಗೂ ಪಿಪಿಎಫ್ ಉತ್ತಮ ಮಾರ್ಗ.

 

 ಜೀವ ವಿಮೆ ಪಾಲಿಸಿ

ಜೀವ ವಿಮೆ ಪಾಲಿಸಿ

ಇನ್ಷೂರೆನ್ಸ್ ನಮ್ಮ ಪ್ರಸಕ್ತ ಜೀವನದ ಬಹಳ ಮುಖ್ಯ ಕ್ರಿಯೆ ಎನ್ನುವುದರಲ್ಲಿ ಸಂಶಯ ಇಲ್ಲ. ಇನ್ಷೂರೆನ್ಸ್ ಮಾಡಿಸುವುದು ಅತ್ಯಗತ್ಯ ಎನಿಸಿದೆ. ಇದನ್ನೂ ಕೂಡ ನೀವು ಇಪ್ಪತ್ತರ ವಯಸ್ಸಿನಿಂದಲೇ ಆರಂಭಿಸುವುದು ಉತ್ತಮ. ಹೆಚ್ಚು ವಯಸ್ಸಾದಾಗ ವಿಮೆ ಮಾಡಿಸಲು ಹೋದರೆ ಪ್ರೀಮಿಯಂ ಹೆಚ್ಚು ಕಟ್ಟಬೇಕಾಗುತ್ತದೆ. ತಿಂಗಳಿಗೆ ನಿಮ್ಮ ಶಕ್ತ್ಯಾನುಸಾರ ಕಂತುಗಳಂತೆ ದೀರ್ಘಾವಧಿ ಕಾಲದ ಇನ್ಷೂರೆನ್ಸ್ ಪ್ಲಾನ್ ಅನ್ನು ಆರಿಸಿಕೊಳ್ಳುವುದು ಉತ್ತಮ. ನೀವು ದುಡಿಯುವ ಶಕ್ತಿ ಕುಗ್ಗುವ ವಯಸ್ಸಿನವರೆಗೂ ಇನ್ಷೂರೆನ್ಸ್ ಮುಂದುವರಿಸಿಕೊಂಡು ಹೋಗುವುದು ಸರಿ.

ಇನ್ನು, ಅಪಮೃತ್ಯು ಸಂಭವಿಸುವ ಸಾಧ್ಯತೆ ಈಗೀಗ ಹೆಚ್ಚೇ ಇದೆ. ನಮ್ಮ ನಿಮ್ಮ ಸಾವು ಯಾವಾಗ ಹೇಗೆ ಬೇಕಾದರೂ ಸಂಭವಿಸಬಹುದು. ಹೀಗಾಗಿ, ಜೀವ ವಿಮೆ ಮಾಡಿಸಿ ನಿಮ್ಮ ಅವಲಂಬಿತರು ಯಾರಾದರೂ ಇದ್ದರೆ ಅವರನ್ನು ನಾಮಿನಿ ಮಾಡಿ. ನೀವು ಅಕಾಲಿಕವಾಗಿ ಮೃತಪಟ್ಟರೆ ನಾಮಿನಿಗೆ ಅಷ್ಟೂ ಹಣ ಸಂದಾಯವಾಗುತ್ತದೆ. ಬದುಕಿದರೆ ಇನ್ಷೂರೆನ್ಸ್ ಪ್ಲಾನ್ ಅವಧಿ ಬಳಿಕ ನಿಗದಿತ ಹಣ ನಿಮ್ಮದಾಗುತ್ತದೆ.

 

 ಆರೋಗ್ಯ ವಿಮೆ

ಆರೋಗ್ಯ ವಿಮೆ

ಹೆಲ್ತ್ ಈಸ್ ವೆಲ್ತ್, ಆರೋಗ್ಯವೇ ಭಾಗ್ಯ ಎಂದು ಜಾಣ್ನುಡಿಗಳನ್ನು ಅನುಭವಿಗಳು ಹೇಳುತ್ತಾರೆ. ಈ ಮಾತು ನಿಮಗೆ ಮಧ್ಯವಯಸ್ಸು ದಾಟುವಾಗ ಸ್ವಂತವಾಗಿ ಅನುಭವಕ್ಕೆ ಬರುತ್ತದೆ. ಆ ಅರಿವು ಆದಾಗ ನೀವು ಅಸಹಾಯಕ ಸ್ಥಿತಿಯಲ್ಲಿದ್ದರೆ ಕಷ್ಟ. ಆದ್ದರಿಂದ ಆರೋಗ್ಯ ವಿಮೆ ಮಾಡಿಸುವುದು ಬಹಳ ಸುರಕ್ಷಿತ ಮತ್ತು ಲಾಭದಾಯಕ.

ಇದನ್ನೂ ಕೂಡ ನೀವು ೩೦ರ ಹರೆಯಕ್ಕೆ ಕಾಲಿಡುವ ಮುನ್ನವೇ ಮಾಡಿಸಿದರೆ ಪ್ರೀಮಿಯಂ ಕಡಿಮೆ ಇರುತ್ತದೆ. ನೌಕರಿಯ ಸ್ಥಳದಲ್ಲಿ ಕಂಪನಿಯಿಂದ ಇನ್ಷೂರೆನ್ಸ್ ಮಾಡಿಸಲಾಗಿದ್ದರೂ ನೀವು ವೈಯಕ್ತಿಕವಾಗಿ ಒಂದು ಹೆಲ್ತ್ ಇನ್ಷೂರೆನ್ಸ್ ಹೊಂದಿರುವುದು ಉತ್ತಮ

 

 ಉಳಿತಾಯ ಮತ್ತು ಹೂಡಿಕೆ ವ್ಯತ್ಯಾಸ ತಿಳಿದಿರಲಿ

ಉಳಿತಾಯ ಮತ್ತು ಹೂಡಿಕೆ ವ್ಯತ್ಯಾಸ ತಿಳಿದಿರಲಿ

ಹೂಡಿಕೆ ಮತ್ತು ಉಳಿತಾಯ ಒಂದಕ್ಕೊಂದು ಪೂರಕವೇ ಅದರೂ ಅವೆರಡೂ ಬೇರೆಯೇ. ನೀವು ಯಾವುದರಲ್ಲೂ ಹೂಡಿಕೆ ಮಾಡದೇ ಆದಾಯದಲ್ಲಿ ಒಂದಷ್ಟು ಉಳಿತಾಯ ಮಾಡುತ್ತಾ ಹಣ ಕೂಡಿಹಾಕಿದರೆ ನಿಮಗೆ ಬ್ಯಾಂಕ್‌ನಲ್ಲಿ ಸಿಗುವ ಬಡ್ಡಿ ಶೇ.5 ದಾಟುವುದಿಲ್ಲ. ಅದೇ ಉಳಿತಾಯದ ದುಡ್ಡನ್ನು ಮೇಲೆ ಹೇಳಿದ ಕೆಲ ಹೂಡಿಕೆಗಳಿಗೆ ಉಪಯೋಗಿಸಿದರೆ ಹಣವನ್ನು ಹೆಚ್ಚಿಸಬಹುದು.

ಆರ್‌ಬಿಐ ರೆಪೋ ದರ ಏರಿಸಿದರೆ ನಿಮ್ಮ ಮೇಲೇನು ಪರಿಣಾಮ?ಆರ್‌ಬಿಐ ರೆಪೋ ದರ ಏರಿಸಿದರೆ ನಿಮ್ಮ ಮೇಲೇನು ಪರಿಣಾಮ?

English summary

Best Investment Plans For You To Start Before 30s Age, Details in Kannada

Every money saved in every money earned. The money you earn should not remain stagnant. Let it grow beautifully by investing in these very important schems. Know more...
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X