For Quick Alerts
ALLOW NOTIFICATIONS  
For Daily Alerts

ಅಲ್ಪಾವಧಿ ಹೂಡಿಕೆಗೆ 4 ಬೆಸ್ಟ್ ಐಡಿಯಾ

|

ನಿಮ್ಮ ಬಳಿ ಹಣವಿದ್ದು ಅಲ್ಪಾವಧಿಯಲ್ಲಿ ಹೂಡಿಕೆ ಮಾಡಲು ಎದುರು ನೋಡುತ್ತಿದ್ದರೆ ಇಲ್ಲಿವೆ ನಾಲ್ಕು ಅತ್ಯುತ್ತಮ ಐಡಿಯಾ

ನಿಮ್ಮ ಬಳಿ ಹೆಚ್ಚು ಹಣವಿದ್ದರೆ ಅದನ್ನು ಸುರಕ್ಷಿತವಾಗಿ ಹೆಚ್ಚು ಲಾಭ ಬರುವಂತೆ ನೋಡಿಕೊಳ್ಳುವುದು ನಿಮ್ಮ ಗುರಿಯಾಗಿರುತ್ತದೆ. ಉದಾಹರಣೆಗೆ ಯಾವುದಾದರೂ ಆಸ್ತಿ ಮಾರಾಟ ಮಾಡಿ ಹೆಚ್ಚು ಹಣವಿದ್ದರೆ ಮತ್ತು ಬೇರೆ ಆಸ್ತಿ ಖರೀದಿಗೆ ಸಮಯವಿದ್ದರೆ ಅಲ್ಪಾವಧಿ ಸಮಯದಲ್ಲಿ ಎಲ್ಲಿ ಹೂಡಿಕೆ ಮಾಡುವುದು ಎಂಬ ಗೊಂದಲವಿರುತ್ತದೆ.ಹಾಗಾಗಿ ನೀವು ಹೊಸ ಆಸ್ತಿ ಮೇಲೆ ಹೂಡಿಕೆ ಮಾಡುವವರೆಗೂ ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಮಾಡಲು ಬಯಸಬಹುದು. ಹಾಗಾಗಿ ಕಡಿಮೆ ಸಮಯದಲ್ಲಿ ಹೂಡಿಕೆ ಮಾಡುವವರಿಗೆ ಇಲ್ಲಿದೆ ಮಾಹಿತಿ

ಅಲ್ಪಾವಧಿಗೆ ಹೂಡಿಕೆ ಮಾಡಲು ಬಯಸುತ್ತಿರಾ?ಅಲ್ಪಾವಧಿಗೆ ಹೂಡಿಕೆ ಮಾಡಲು ಬಯಸುತ್ತಿರಾ?

ಅಲ್ಪಾವಧಿಯಲ್ಲಿ ಹೂಡಿಕೆ ಮಾಡಬಹುದಾದ 4 ಬೆಸ್ಟ್‌ ಐಡಿಯಾ

1. ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಸೇವಿಂಗ್ಸ್ ಅಕೌಂಟ್

1. ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಸೇವಿಂಗ್ಸ್ ಅಕೌಂಟ್

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಉಳಿತಾಯ ಖಾತೆಯು ಅಲ್ಪಾವಧಿಯಲ್ಲಿ ಹೆಚ್ಚು ಲಾಭ ಗಳಿಸಲು ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಈ ಉಳಿತಾಯ ಖಾತೆಯಲ್ಲಿ ಗರಿಷ್ಟ ಶೇಕಡಾ 7ರವರೆಗೆ ಬಡ್ಡಿ ನೀಡಲಾಗುವುದು. ಎಸ್‌ಬಿಐ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ(ಫಿಕ್ಸೆಡ್ ಡೆಪಾಸಿಟ್ಸ್) ಮೇಲೆ ನೀಡುವ ಬಡ್ಡಿ ದರಕ್ಕಿಂತಲೂ ಹೆಚ್ಚಾಗಿದೆ.

ಈ ಖಾತೆಯಲ್ಲಿ ಇನ್ನೊಂದು ಲಾಭವೆಂದರೆ ಫಿಕ್ಸೆಡ್ ಡೆಪಾಸಿಟ್‌ನಿಂದ ಬರುವ ಆದಾಯ 10 ಸಾವಿರ ರುಪಾಯಿವರೆಗೂ ತೆರಿಗೆರಹಿತವಾಗಿದೆ.

ಇಷ್ಟಲ್ಲದೆ ಈ ಬ್ಯಾಂಕ್‌ ಅಪಘಾತ ವಿಮೆಯನ್ನು ನೀಡುತ್ತದೆ. ಖಾತೆದಾರನು ಅಪಘಾತದಲ್ಲಿ ಮೃತಪಟ್ಟರೆ ಇಲ್ಲವೆ ಶಾಶ್ವತ ಅಂಗವೈಕಲ್ಯವಾದರೆ 25 ಲಕ್ಷ ರುಪಾಯಿ ವಿಮೆ ನೀಡುತ್ತದೆ.

ಜೊತೆಗೆ ಪ್ರತಿ ತ್ರೈಮಾಸಿಕದಲ್ಲಿ ಪ್ರಮುಖ ನಗರದಲ್ಲಿ 2 ಬಾರಿ ಉಚಿತ ವಿಮಾನ ನಿಲ್ದಾಣ ವಿಶ್ರಾಂತಿ ಸೌಲಭ್ಯವೂ(Airport lounge access) ಲಭ್ಯವಿದೆ. ಜೊತೆಗೆ ಉಚಿತವಾಗಿ ಯಾವುದೇ ಬ್ಯಾಂಕ್‌ನ ಎಟಿಎಂಗಳನ್ನು ಹಣವನ್ನು ಹಿಂತೆಗೆದುಕೊಳ್ಳಬಹುದು.

 

2. ಯೆಸ್ ಬ್ಯಾಂಕ್ ಸೇವಿಂಗ್ಸ್ ಅಕೌಂಟ್

2. ಯೆಸ್ ಬ್ಯಾಂಕ್ ಸೇವಿಂಗ್ಸ್ ಅಕೌಂಟ್

ನೀವು ಅಲ್ಪಾವಧಿಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಯೆಸ್ ಬ್ಯಾಂಕ್ ಉಳಿತಾಯ ಖಾತೆಯು ಉತ್ತಮ ಆಯ್ಕೆಯಾಗಿದ್ದು, ಬ್ಯಾಂಕ್ ಉತ್ತಮ ಬಡ್ಡಿದರವನ್ನು ನೀಡುತ್ತದೆ.

ಕುತೂಹಲಕಾರಿ ವಿಷಯ ಅಂದರೆ, ಈ ಉಳಿತಾಯ ಖಾತೆಯಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿದ್ದಲ್ಲಿ ಯಾವುದೇ ಸಂದರ್ಭದಲ್ಲಿ ಹಣವನ್ನು ಹಿಂಪಡೆಯಬಹುದಾಗಿದೆ ಯಾವುದೇ ಶುಲ್ಕವಿಲ್ಲದೆ. ಬೇರೆ ಬ್ಯಾಂಕ್‌ಗಳಲ್ಲಿ ಅಕಾಲಿಕ ಸಂದರ್ಭದಲ್ಲಿ ಹಣ ಹಿಂಪಡೆಯುವಿಕೆಗೆ ಶುಲ್ಕ ವಿಧಿಸಬಹುದು.

ಯೆಸ್‌ ಬ್ಯಾಂಕ್‌ ಸ್ಥಿರ ಠೇವಣಿ(ಫಿಕ್ಸೆಡ್ ಡೆಪಾಸಿಟ್) ಶೇಕಡಾ 6ಕ್ಕೂ ಹೆಚ್ಚು ಬಡ್ಡಿದರವನ್ನು ವಿತರಿಸುತ್ತದೆ.

 

3. ಬಜಾಜ್ ಫೈನಾನ್ಸ್ ಡೆಪಾಸಿಟ್ಸ್

3. ಬಜಾಜ್ ಫೈನಾನ್ಸ್ ಡೆಪಾಸಿಟ್ಸ್

ನೀವು ಒಂದು ವರ್ಷದೊಳಗೆ ಹಣವನ್ನು ಹೂಡಿಕೆ ಮಾಡಲು ಬಯಸಿದರೆ ಬಜಾಜ್ ಫೈನಾನ್ಸ್ ಕೂಡ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಬಜಾಜ್ ಫೈನಾನ್ಸ್‌ನಲ್ಲಿ 12 ತಿಂಗಳು ಕಾಲ ಸ್ಥಿರ ಠೇವಣಿ(ಫಿಕ್ಸೆಡ್ ಡೆಪಾಸಿಟ್)ಗೆ ಶೇಕಡಾ 8ರವರೆಗೆ ಬಡ್ಡಿಯನ್ನು ನೀಡಲಾಗುವುದು.

ಆದರೆ ನೀವು ಒಂದು ವರ್ಷದೊಳಗೆ ಹಣವನ್ನು ಹಿಂಪಡೆಯುವುದಾದರೆ ಇಲ್ಲಿ ಹೂಡಿಕೆ ಮಾಡುವುದು ಸೂಕ್ತವಲ್ಲ. ಏಕೆಂದರೆ ಅಕಾಲಿಕ ಸಂದರ್ಭದಲ್ಲಿ ಹಣ ಹಿಂಪಡೆದಿದ್ದಲ್ಲಿ ಹೆಚ್ಚು ಶುಲ್ಕ ಪಾವತಿಸಬೇಕಾಗುವುದು.

ಹೀಗಾಗಿ 1 ವರ್ಷ ಹಣ ಹೂಡಿಕೆ ಮಾಡಲು ಬಜಾಜ್ ಫೈನಾನ್ಸ್ ಉತ್ತಮ ಆಯ್ಕೆಯಾಗಿದೆ.

 

4. ಮಹಿಂದ್ರಾ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ಸ್

4. ಮಹಿಂದ್ರಾ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ಸ್

ಮಹಿಂದ್ರಾ ಫೈನಾನ್ಸ್ ಕೂಡ ಅಲ್ಪಾವಧಿ ಹೂಡಿಕೆಗೆ ಉತ್ತಮ ಆಯ್ಕೆಯಾಗಿದ್ದು, 1 ವರ್ಷ ಸ್ಥಿರ ಠೇವಣಿ (ಫಿಕ್ಸೆಡ್ ಡೆಪಾಸಿಟ್ಸ್)ಗೆ ಶೇಕಡಾ 7.95ರಷ್ಟು ಬಡ್ಡಿಯನ್ನು ನೀಡುತ್ತದೆ. ಆದರೆ 5 ಸಾವಿರ ರುಪಾಯಿಗಿಂತಲೂ ಹೆಚ್ಚಿನ ಫಿಕ್ಸೆಡ್ ಡೆಪಾಸಿಟ್ಸ್ ತೆರಿಗೆ ಅನ್ವಯವಾಗುತ್ತದೆ.

ಹಿರಿಯ ವಯಸ್ಕರಿಗೆ ಶೇಕಡಾ 0.10 ಹೆಚ್ಚುವರಿ ಬಡ್ಡಿಯನ್ನು ನೀಡಲಾಗುವುದು. ಹೀಗಾಗಿ ಅಲ್ಪಾವಧಿ ಹೂಡಿಕೆಗೆ ಬಜಾಜ್‌ ಫೈನಾನ್ಸ್ ರೀತಿಯಲ್ಲಿ ಉತ್ತಮವಾದ ಆಯ್ಕೆ ಇದಾಗಿದೆ.

ಈ ಮೇಲೆ ತಿಳಿಸಿರುವಂತೆ 2 ಉಳಿತಾಯ ಖಾತೆ ಹೊರತುಪಡಿಸಿ ಉಳಿದೆಲ್ಲವು ತೆರಿಗೆ ಅನ್ವಯವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬಡ್ಡಿದರವು ಕುಸಿದಿರುವುದರಿಂದ ಇವು ಯೋಗ್ಯವಾದ ಬಡ್ಡಿದರವನ್ನು ನೀಡುತ್ತವೆ.

 

English summary

Best Short Time Investment Ideas

These are the Four best short time investment ideas if you have money for the more short term.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X