For Quick Alerts
ALLOW NOTIFICATIONS  
For Daily Alerts

ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಹಣ ಕಳಿಸಲು ಬೆಸ್ಟ್ ಟಿಪ್ಸ್

|

ಯಾರೇ ಪೋಷಕರಿರಲಿ ತಮ್ಮ ಮಕ್ಕಳನ್ನು ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಕಳುಹಿಸುವುದು ಅತಿ ದೊಡ್ಡ ನಿರ್ಧಾರ. ಮಕ್ಕಳ ವಿದೇಶ ವಿದ್ಯಾಭ್ಯಾಸದ ಸಿದ್ಧತೆ ಕೂಡ ದೀರ್ಘವಾದ ಪ್ರಕ್ರಿಯೆ. ಯಾವ ಕೋರ್ಸ್, ಯಾವ ಯೂನಿವರ್ಸಿಟಿ, ಅರ್ಹತೆಯ ಮಾನದಂಡಗಳು, ಪ್ರವೇಶ ಪರೀಕ್ಷೆ, ಉಳಿದುಕೊಳ್ಳುವುದು ಎಲ್ಲಿ... ಇತ್ಯಾದಿ ವಿಚಾರಗಳನ್ನೆಲ್ಲ ತುಂಬ ಆಸ್ಥೆ ವಹಿಸಿ ನೋಡಿಕೊಳ್ಳಬೇಕಾಗುತ್ತದೆ.

ಶೈಕ್ಷಣಿಕ ಸಾಲವೇನೋ ಸಿಗುತ್ತದೆ. ಆದರೆ ಅದೇನಿದ್ದರೂ ಯೂನಿವರ್ಸಿಟಿಯ ಟ್ಯೂಷನ್ ಫೀ ಮಾತ್ರ ಕವರ್ ಮಾಡುತ್ತದೆ. ಪೋಷಕರಾದವರು ಮಕ್ಕಳ ವಾಸ್ತವ್ಯ ಮತ್ತಿತರ ಖರ್ಚುಗಳನ್ನಂತೂ ನಿಭಾಯಿಸಲೇಬೇಕು. ಭಾರತದಿಂದ ವಿದೇಶಗಳಿಗೆ ಹಣ ವರ್ಗಾವಣೆ ಮಾಡುವುದರಲ್ಲಿ ಅತಿ ದೊಡ್ಡ ಭಾಗ ಶಿಕ್ಷಣದ ಸಲುವಾಗಿಯೇ ಇರುತ್ತದೆ.

ನಿಮಗೆ ಗೊತ್ತಿರಲಿ: ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಿಗಾಗಿ 2017-18ರಲ್ಲಿ 2021.4 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹಣವನ್ನು ವರ್ಗಾವಣೆ ಮಾಡಲಾಗುತ್ತಿತ್ತು. 2018-19ನೇ ಸಾಲಿಗೆ ಅದು 76.61 ಪರ್ಸೆಂಟ್ ಏರಿಕೆಯಾಗಿ, 3569.9 ಮಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ.

ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಈ ದೇಶಗಳಲ್ಲಿ ಪುಕ್ಕಟೆ ಶಿಕ್ಷಣ, ಕಡಿಮೆ ಫೀಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಈ ದೇಶಗಳಲ್ಲಿ ಪುಕ್ಕಟೆ ಶಿಕ್ಷಣ, ಕಡಿಮೆ ಫೀ

ಹಣ ವರ್ಗಾವಣೆ ಮಾಡುವುದಕ್ಕೆ ಯಾವುದು ಸೂಕ್ತ ಮಾರ್ಗ ಎಂದು ತಿಳಿದುಕೊಳ್ಳುವುದು ಕೂಡ ಕಠಿಣವಾಗಿದೆ. ವಿನಿಮಯ ಮೌಲ್ಯ ನಿರ್ಧಾರ ಮಾಡಿಕೊಂಡು, ಸರಿಯಾದ ವಿಧಾನದಲ್ಲಿ ಹಣ ವರ್ಗಾವಣೆ ಹೇಗೆ ಮಾಡಬಹುದು ಎಂಬುದನ್ನು ನಿರ್ಧರಿಸುವುದು ಕೂಡ ಅದರದೇ ರೀತಿಯಲ್ಲಿ ಬುದ್ಧಿವಂತಿಯನ್ನು ನಿರೀಕ್ಷೆ ಮಾಡುತ್ತದೆ.

ವಿದೇಶಕ್ಕೆ ಹಣ ವರ್ಗಾವಣೆ ಮಾಡುವುದಕ್ಕೆ ಇಲ್ಲಿ ಕೆಲವು ಅನುಕೂಲಕರ ಟಿಪ್ಸ್ ಗಳನ್ನು ಹಂಚಿಕೊಳ್ಳಲಾಗಿದೆ.

ಬಹಳ ಮುಂಚಿತವಾಗಿ ಯೋಜನೆ ರೂಪಿಸಿ

ಬಹಳ ಮುಂಚಿತವಾಗಿ ಯೋಜನೆ ರೂಪಿಸಿ

ಬಹಳ ಮಂದಿ ಹಣ ವರ್ಗಾವಣೆಯನ್ನು ಯಾವ ಮೂಲಕ ಮಾಡಬೇಕು ಎಂಬುದನ್ನು ಕೊನೆ ಕ್ಷಣದಲ್ಲಿ ನಿರ್ಧಾರ ಮಾಡುತ್ತಾರೆ. ತೀರಾ ತುರ್ತು ಪರಿಸ್ಥಿತಿ ಇಲ್ಲ ಅನ್ನೋದಾದರೆ ಬಹಳ ಮುಂಚಿತವಾಗಿಯೇ ಹಣ ವರ್ಗಾವಣೆಯ ಯೋಜನೆಯನ್ನು ಮಾಡಿಕೊಳ್ಳುವುದು ಅತ್ಯುತ್ತಮ ಆಯ್ಕೆ. ಮಗ ಅಥವಾ ಮಗಳು ವಿದೇಶದಲ್ಲಿ ಯಾವ ಯೂನಿವರ್ಸಿಟಿ ಎಂದು ಆಯ್ಕೆ ಮಾಡಿಕೊಳ್ಳುತ್ತಾರಲ್ಲ ಅಥವಾ ಕಾಲೇಜಿನಿಂದ ಅವರ ಆಯ್ಕೆ ಆಗುತ್ತದಲ್ಲಾ ಆ ಹಂತದಲ್ಲೇ ಯೋಜನೆ ರೂಪಿಸಿಕೊಳ್ಳುವುದು ಅತ್ಯುತ್ತಮ.

ಸೂಕ್ತ ಹಣ ವರ್ಗಾವಣೆ ಪಾರ್ಟನರ್ ಆಯ್ಕೆ

ಸೂಕ್ತ ಹಣ ವರ್ಗಾವಣೆ ಪಾರ್ಟನರ್ ಆಯ್ಕೆ

ಹಣ ವರ್ಗಾವಣೆಗೆ ನಾನಾ ಪ್ಲಾಟ್ ಫಾರ್ಮ್ ಗಳಿವೆ. ಆದರೆ ಸಮಯ ತೆಗೆದುಕೊಂಡು ವಿವಿಧ ಅಂಶಗಳನ್ನು ಅರ್ಥ ಮಾಡಿಕೊಳ್ಳಿ. ಉದಾಹರಣೆಗೆ, ವಿನಿಮಯ ದರ, ವ್ಯವಹಾರದ ಮಿತಿ, ಪ್ರಕ್ರಿಯೆ ಶುಲ್ಕ (ಪ್ರೊಸೆಸಿಂಗ್ ಫಿ), ಗ್ರಾಹಕರ ಸೇವೆ ಹೇಗಿದೆ, ಆ ಸಂಸ್ಥೆಯ ಅನುಭವ ಎಷ್ಟಿದೆ ಮುಂತಾದವನ್ನು ಗಮನಿಸಬೇಕು. ಕೆಲವರು ಹೆಚ್ಚು ಶುಲ್ಕ ವಿಧಿಸುತ್ತಾರೆ. ಇತರ ಹಿಡನ್ ವೆಚ್ಚಗಳು ಒಳಗೊಂಡಿರುತ್ತವೆ. ನೀವು ಆಯ್ಕೆ ಮಾಡಿಕೊಂಡ ಪ್ಲಾಟ್ ಫಾರ್ಮ್ ನಲ್ಲಿ ಪಾರದರ್ಶಕತೆ ಇದೆಯಾ ಮತ್ತು ಪೂರ್ತಿ ಮೊತ್ತವನ್ನು ತಲುಪಿಸುತ್ತಾರಾ ಎಂಬುದನ್ನು ಖಚಿತ ಮಾಡಿಕೊಳ್ಳಿ.

ವ್ಯವಹಾರದ ಮಿತಿ ತಿಳಿದುಕೊಳ್ಳಿ

ವ್ಯವಹಾರದ ಮಿತಿ ತಿಳಿದುಕೊಳ್ಳಿ

ಭಾರತದಿಂದ ಹಣ ಸ್ವೀಕರಿಸುವ ವಿದ್ಯಾರ್ಥಿಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಲಿಬರಲೈಸ್ಡ್ ರೆಮಿಟೆನ್ಸ್ ಸ್ಕೀಮ್ (ಎಲ್ ಆರ್ ಎಸ್) ಅಡಿಯಲ್ಲಿ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಮಾಡಿದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಾಸ್ತವ್ಯದ ಖರ್ಚು ಈ ಎಲ್ ಆರ್ ಎಸ್ ಅಡಿಯಲ್ಲಿ ಬರುತ್ತದೆ. ಒಂದು ವರ್ಷಕ್ಕೆ 2,50,000 ಅಮೆರಿಕನ್ ಡಾಲರ್ ಮಿತಿ ವಿಧಿಸಲಾಗಿದೆ. ಒಂದು ವ್ಯವಹಾರಕ್ಕೆ ಇರುವ ಗರಿಷ್ಠ ಮಿತಿ ಅಂದರೆ ಅದು 25,000 ಅಮೆರಿಕನ್ ಡಾಲರ್. ಇದು ಒಂದು ದಿನದಲ್ಲಿ ಮಾಡಬಹುದಾದ ಗರಿಷ್ಠ ವ್ಯವಹಾರ ಮಿತಿಯೂ ಹೌದು.

ವಿನಿಮಯ ದರ

ವಿನಿಮಯ ದರ

ಈಚಿನ ವಿನಿಮಯ ದರವನ್ನು ತಿಳಿದುಕೊಳ್ಳುವುದು ಸಹ ಬಹಳ ಮುಖ್ಯವಾಗುತ್ತದೆ ಹಾಗೂ ವಿಧಿಸುವ ಸೇವಾ ಶುಲ್ಕದ ಬಗ್ಗೆಯೂ ಮಾಹಿತಿ ಇರಬೇಕು. ಡಿಜಿಬ್ಯಾಂಕ್ ರೆಮಿಟ್ ನಂಥ ಪ್ಲಾಟ್ ಫಾರ್ಮ್ 24X7 ಲಾಕ್ಡ್- ಇನ್ FX ದರವನ್ನು ನೀಡುತ್ತದೆ. ಖಚಿತ ದರದಲ್ಲಿ ವ್ಯವಹಾರ ಮಾಡುವ ಅವಕಾಶ ಇರುತ್ತದೆ. ವ್ಯವಹಾರ ಯಶಸ್ವಿಯಾಗಿ ಪೂರ್ಣವಾದಲ್ಲಿ ಅದೇ ದರದಲ್ಲೇ ಹಣ ಕೂಡ ಡೆಬಿಟ್ ಆಗುತ್ತದೆ.

ಸುಲಭ ವರ್ಗಾವಣೆ

ಸುಲಭ ವರ್ಗಾವಣೆ

ವಿದೇಶಗಳಿಗೆ ಹಣ ವರ್ಗಾವಣೆ ಮಾಡುವುದು ತುಂಬ ದೊಡ್ಡ ಹಾಗೂ ಕಷ್ಟದ ಪ್ರಕ್ರಿಯೆ ಏನಲ್ಲ. ಡಿಜಿಬ್ಯಾಂಕ್ ಅಳವಡಿಸಿರುವ ತಂತ್ರಜ್ಞಾನದ ಮೂಲಕ ಪೂರ್ಣವಾಗಿ ಡಿಜಿಟೈಸ್, ವೇಗವಾದ ಹಾಗೂ ಸಮಸ್ಯೆ ಇಲ್ಲದ ಹಣ ವರ್ಗಾವಣೆ ಸಾಧ್ಯವಾಗಿದೆ. ಬ್ಯಾಂಕ್ ಗೇ ಹೋಗಬೇಕು ಅಥವಾ ಯಾವುದಾದರೂ ದಾಖಲಾತಿಗಳು ಬೇಕು ಅನ್ನುವಂಥ ಪರಿಸ್ಥಿತಿ ಇಲ್ಲ.

ಸುರಕ್ಷತೆ, ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಗಮನದಲ್ಲಿಟ್ಟುಕೊಳ್ಳಿ

ಸುರಕ್ಷತೆ, ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಗಮನದಲ್ಲಿಟ್ಟುಕೊಳ್ಳಿ

ವಿದೇಶದಲ್ಲಿ ಇದ್ದು, ತೀರಾ ತುರ್ತಾಗಿ ಹಣ ಬೇಕು ಎಂಬ ಪರಿಸ್ಥಿತಿ ಎದುರಿಸುವುದು ಬಹಳ ಕಷ್ಟಕರ. ಹೊಸದಾಗಿ ಒಬ್ಬರ ಹೆಸರನ್ನು ಹಣ ಪಾವತಿ ಪಟ್ಟಿಯಲ್ಲಿ ಸೇರಿಸಬೇಕು ಅಂದರೆ ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅಂಥ ಸನ್ನಿವೇಶದಲ್ಲಿ ಒಂದೆರಡು ದಿನವಂತೂ ಆಗುತ್ತದೆ. ಹಣ ವರ್ಗಾವಣೆಯ ಪ್ಲಾಟ್ ಫಾರ್ಮ್ ಅನ್ನು ಆಯ್ಕೆ ಮಾಡಿಕೊಳ್ಳುವಾಗ ಅದೇ ದಿನ ವರ್ಗಾವಣೆ ಆಗುವ ವ್ಯವಸ್ಥೆ ಇರುವಂಥದ್ದನ್ನು ಆಯ್ಕೆ ಮಾಡಿಕೊಳ್ಳಿ. ಒಟ್ಟಾರೆಯಾಗಿ ಹಣದ ವರ್ಗಾವಣೆಯ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದು ಸವಾಲು. ಸರಿಯಾದ ತೀರ್ಮಾನ ಮಾಡುವ ಮೂಲಕ ಕೋರ್ಸ್ ನ ಅವಧಿಯ ಉದ್ದಕ್ಕೂ ಹಣ ಉಳಿತಾಯದ ಅವಕಾಶ ಬಳಸಿಕೊಳ್ಳಬಹುದು. ಜತೆಗೆ ಸುರಕ್ಷತೆ, ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಿ.

English summary

Best Tips To Sending Money Abroad For Education

Here are the best tips to sending money abroad for children education.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X