For Quick Alerts
ALLOW NOTIFICATIONS  
For Daily Alerts

ಬಡ್ಡಿದರ ಏರಿಕೆ ನಂತರ ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋಹಣ ಕುಸಿತ

|

ಜಾಗತಿಕ ಮಟ್ಟದ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿದಿದೆ.ಭಾನುವಾರ (ಮೇ 8)ದಂದು ಬಿಟ್‌ಕಾಯಿನ್ ಮೌಲ್ಯದಲ್ಲಿ ಕುಸಿತ ಕಂಡು ಬಂದಿದೆ. ಈ ಸಮಯಕ್ಕೆ ಪ್ರತಿ ಕಾಯಿನ್ ಬೆಲೆ $35,000ರಂತೆ ವ್ಯವಹರಿಸುತ್ತಿದೆ. ಜಾಗತಿಕವಾಗಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಕಳೆದ 24 ಗಂಟೆಗಳಲ್ಲಿ ಶೇ 4ರಷ್ಟು ಇಳಿಮುಖವಾಗಿ 1.66 ಟ್ರಿಲಿಯನ್ ಡಾಲರ್ ನಂತೆ ವ್ಯವಹರಿಸುತ್ತಿದೆ. ಹಣದುಬ್ಬರ ನಿಯಂತ್ರಣಕ್ಕಾಗಿ ಅನೇಕ ದೇಶಗಳ ಕೇಂದ್ರ ಬ್ಯಾಂಕುಗಳು ಬಡ್ಡಿದರ ಏರಿಕೆ ಮಾಡಿವೆ.

 

ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೋದರದ ಮೂಲಾಂಶ 40 bps ಏರಿಕೆ ಮಾಡಿದ ಬಳಿಕ ಇಎಂಐ ಕೂಡಾ ಏರಿಕೆಯಾಗಿದೆ. ಇದರ ಪರಿಣಾಮ ಡಿಜಿಟಲ್ ಕರೆನ್ಸಿ ಮಾರುಕಟ್ಟೆ ಮೇಲೂ ಪ್ರಭಾವ ಬೀರಿದೆ. US ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (FOMC) ಕಳೆದ ವಾರ ಬಡ್ಡಿದರಗಳನ್ನು ಶೇಕಡಾ 0.5 ರಷ್ಟು ಹೆಚ್ಚಿಸಲು ಮತ ಹಾಕಿದೆ. ಇದು ಎರಡು ದಶಕಗಳಲ್ಲಿ ಅದರ ಅತಿದೊಡ್ಡ ಮೇಲ್ಮುಖ ಹೊಂದಾಣಿಕೆಯನ್ನು ಗುರುತಿಸುತ್ತದೆ. ಫೆಡರಲ್ ರಿಸರ್ವ್ ಚೇರ್ ಜೆರೋಮ್ ಪೊವೆಲ್ ಕೂಡ ಹಣದುಬ್ಬರವನ್ನು ಎದುರಿಸಲು ಬಡ್ಡಿದರಗಳನ್ನು ಹೆಚ್ಚಿಸಿದರು.

ಬಿಟ್ ಕಾಯಿನ್ ಶೇ 20ರಷ್ಟು ಇಳಿಕೆ

ಬಿಟ್ ಕಾಯಿನ್ ಶೇ 20ರಷ್ಟು ಇಳಿಕೆ

ಈ ವರ್ಷದಲ್ಲಿ ಬಿಟ್ ಕಾಯಿನ್ ಶೇ 20ರಷ್ಟು ಇಳಿಕೆಯಾಗಿದೆ. ಭಾನುವಾರದಂದು ಬಿಟ್ ಕಾಯಿನ್ ಅಲ್ಲದೆ, ಎರಡನೇ ಅತಿದೊಡ್ಡ ಡಿಜಿಟಲ್ ಕರೆನ್ಸಿ ಎಥೆರಿಯಂ ಶೇ 4.8ರಷ್ಟು ಕುಸಿತ ಕಂಡು $2,545 ನಂತೆ ವ್ಯವಹರಿಸುತ್ತಿದೆ. ಡಾಜ್ ಕಾಯಿನ್ ಬೆಲೆ ಶೇ 1.2 ರಷ್ಟು ಇಳಿಮುಖವಾಗಿ $0.12 ಹಾಗೂ ಶಿಬಾ ಇನು ಶೇ 4.9 ರಷ್ಟು ಮೌಲ್ಯ ಕಳೆದುಕೊಂಡು $0.00001887ಗೆ ಕುಸಿದಿದೆ.


ಬಿಟ್‌ಕಾಯಿನ್ ಏಪ್ರಿಲ್ ತಿಂಗಳಲ್ಲಿ ಶೇಕಡಾ 17 ರಷ್ಟು ಮೌಲ್ಯ ಕುಸಿತ ಕಂಡು, ಕೆಟ್ಟ ಫಲಿತಾಂಶ ವರದಿ ಮಾಡಿದೆ. ಇದು ಈ ವರ್ಷದ ಕೆಟ್ಟ ಮಾಸಿಕ ಕಾರ್ಯಕ್ಷಮತೆಯಾಗಿದೆ.

ಈ ವರ್ಷ $545 ಮಿಲಿಯನ್ ವರೆಗೆ ಕಳೆದುಕೊಳ್ಳುವ ಸಾಧ್ಯತೆ

ಈ ವರ್ಷ $545 ಮಿಲಿಯನ್ ವರೆಗೆ ಕಳೆದುಕೊಳ್ಳುವ ಸಾಧ್ಯತೆ

ಹೊಸ ವರದಿಯ ಪ್ರಕಾರ, ತಮ್ಮ ವ್ಯಾಲೆಟ್‌ಗಳಿಗೆ ಪಾಸ್‌ವರ್ಡ್‌ಗಳನ್ನು ಮರೆತುಬಿಡುವುದು ಅಥವಾ ಅವರ "seed phrases" ದಾಖಲು ಮಾಡುವಾಗ ತಪ್ಪು ಮಾಡುವಂತಹ ವಿವಿಧ ಕಾರಣಗಳಿಂದಾಗಿ ಬಿಟ್‌ಕಾಯಿನ್ ಹೂಡಿಕೆದಾರರು ಈ ವರ್ಷ $545 ಮಿಲಿಯನ್ ವರೆಗೆ ಕಳೆದುಕೊಳ್ಳುವ ಸಾಧ್ಯತೆಯಿದೆ.

seed phrase ನಿಮ್ಮ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ನಿಂದ ರಚಿಸಲಾದ ಪದಗಳ ಸರಣಿಯಾಗಿದ್ದು ಅದು ಆ ವ್ಯಾಲೆಟ್‌ಗೆ ಸಂಬಂಧಿಸಿದ ಕ್ರಿಪ್ಟೋಗೆ ಪ್ರವೇಶವನ್ನು ನೀಡುತ್ತದೆ. ಎಲ್ಲಾ ಬಿಟ್‌ಕಾಯಿನ್‌ಗಳಲ್ಲಿ ಕನಿಷ್ಠ 20 ಪ್ರತಿಶತದಷ್ಟು ಕಳೆದುಹೋಗಿದೆ ಮತ್ತು ಆ ನಿಧಿಗಳಲ್ಲಿ ಹೆಚ್ಚಿನವು ಮರುಪಡೆಯಲಾಗದಂತೆ ಕಳೆದುಹೋಗಿವೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ
 

ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ

ಕ್ರಿಪ್ಟೋಕರೆನ್ಸಿಗಳ ಮೇಲೆ ಹೂಡಿಕೆಗೆ ಜಗತ್ತಿನ ಬಹುತೇಕ ರಾಷ್ಟ್ರಗಳು ನಿಯಂತ್ರಣ ಹೇರಿವೆ. ಹೀಗಿದ್ದರೂ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಬೆಲೆಯಲ್ಲಿ ಏರಿಕೆ ಮುಂದುವರಿದಿದೆ. ಕ್ರಿಪ್ಟೋಕರೆನ್ಸಿಗಳ ಖರೀದಿ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಸೇರಿದಂತೆ ಡಿಜಿಟಲ್ ಕರೆನ್ಸಿಗಳ ವರ್ಗಾವಣೆ ಮೇಲೆ ಶೇ.30ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಈಗಾಗಲೇ ನಿರ್ಧರಿಸಿದೆ.

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ ಆಗಿದೆ. ಈ ಕ್ರಿಪ್ಟೋ ಕರೆನ್ಸಿಗೆ ಯಾವುದೇ ರೀತಿಯ ಮುದ್ರಣ ರೂಪ ಇರುವುದಿಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿರುತ್ತದೆ. ರೂಪಾಯಿ, ಡಾಲರ್, ಯುರೋಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕ್ ಇದ್ಯಾವುದು ಇರುವುದಿಲ್ಲ

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಪ್ರಸ್ತುತ ಬೆಲೆ

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಪ್ರಸ್ತುತ ಬೆಲೆ

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಪ್ರಸ್ತುತ 34,648.11 ಯುಎಸ್ ಡಾಲರ್‌ ಬೆಲೆಯಲ್ಲಿ ವಹಿವಾಟು ನಡೆಸುತ್ತಿದ್ದು, ಶೇ 3.86ರಷ್ಟು ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ, ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 36,129.93 ಡಾಲರ್ ಮತ್ತು ಕಡಿಮೆ ಬೆಲೆ 37,398.35 ಡಾಲರ್ ಆಗಿತ್ತು. ಕಳೆದ ವಾರದಲ್ಲಿ ಶೇ. 8.94ರಷ್ಟು ಇಳಿಕೆಯಾಗಿದೆ. ಬಿಟ್‌ಕಾಯಿನ್ ಮಾರುಕಟ್ಟೆ ಮೌಲ್ಯ 659,181,672,310 ಡಾಲರ್ ನಷ್ಟಿದೆ. ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 68,990.90 ಡಾಲರ್ ಆಗಿದೆ.

ಎಥೆರಿಯಮ್ ಕ್ರಿಪ್ಟೋ ಕರೆನ್ಸಿ

ಎಥೆರಿಯಮ್ ಕ್ರಿಪ್ಟೋ ಕರೆನ್ಸಿ

ಎಥೆರಿಯಮ್ ಕ್ರಿಪ್ಟೋ ಕರೆನ್ಸಿ ಪ್ರಸ್ತುತ 2,555.43 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 4.48ರಷ್ಟು ಇಳಿಕೆಯಾಗಿದ್ದು, ಈ ಮೂಲಕ ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 309,059,171,445 ಯುಎಸ್ ಡಾಲರ್ ಆಗಿದೆ. ಕಳೆದ 24 ಗಂಟೆಗಳಲ್ಲಿ, ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಬೆಲೆ 2,696.65 ಡಾಲರ್ ಮತ್ತು ಕಡಿಮೆ ಬೆಲೆ 2,531.18 ಡಾಲರ್ ಆಗಿತ್ತು. ಕಳೆದ ವಾರ ಶೇ.7.99ರಷ್ಟು ಇಳಿಕೆ ಕಂಡಿದೆ. ಎಥೆರಿಯಮ್ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ 308,313,634,118 ಡಾಲರ್ ನಷ್ಟಿದೆ. ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 4,865.57 ಡಾಲರ್‌ನಷ್ಟಿದೆ.

English summary

Bitcoin, other cryptocurrencies in free fall after interest rate hike

Bitcoin on Sunday witnessed another round of free fall, slipping below $35,000 per coin, as the global crypto market went through a massive slump of over 4.5 per cent in the past 24 hours to $1.66 trillion.
Story first published: Sunday, May 8, 2022, 14:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X