For Quick Alerts
ALLOW NOTIFICATIONS  
For Daily Alerts

ಬೋನಸ್, ಡಿಎ ಹೆಚ್ಚಳ: ಹಬ್ಬದ ಸೀಸನ್ ಫಳಫಳ

|

ನವದೆಹಲಿ, ಅ. 17: ಜಾಗತಿಕವಾಗಿ ಬಹುತೇಕ ದೇಶಗಳಲ್ಲಿ ಆರ್ಥಿಕ ಹಿಂಜರಿತದ ಸ್ಥಿತಿ ಇದೆ. ಅನೇಕ ಆರ್ಥಿಕತೆಗಳು ಬಿಕ್ಕಟ್ಟು ಅನುಭವಿಸುತ್ತಿವೆ. ಇವುಗಳ ಮಧ್ಯೆ ಭಾರತದ ಇದ್ದುದರಲ್ಲಿ ಉತ್ತಮ ಎಂಬಂತಿದೆ. ಅಂತೆಯೇ ಅಂತಾರಾಷ್ಟ್ರೀಯ ಹಣಕಾಸು ನಿಧಿ ಇತ್ತೀಚೆಗೆ ಭಾರತವನ್ನು ಬ್ರೈಟ್ ಸ್ಟಾರ್ ಎಂದು ಬಣ್ಣಿಸಿತ್ತು.

ಭಾರತದಲ್ಲಿ ರೂಪಾಯಿ ಕರೆನ್ಸಿ ಡಾಲರ್ ಎದುರು ಮಂಕಾಗುತ್ತಲೇ ಹೋಗುತ್ತಿದ್ದರೂ, ಹಣದುಬ್ಬರ ಸುರಕ್ಷಿತ ಮಟ್ಟದಿಂದ ಹೊರಗೇ ಇದ್ದರೂ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಸಮಾಧಾನಪಡುವಂತಹ ಸ್ಥಿತಿಯಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಇಂಬು ಕೊಡುವಂತೆ ಈ ಬಾರಿಯ ಹಬ್ಬದ ಋತುವಿನಲ್ಲಿ ಭಾರತದಲ್ಲಿ ನಡೆಯುತ್ತಿರುವ ವ್ಯಾಪಾರ ವಹಿವಾಟು ಗಮನಾರ್ಹ ರೀತಿಯಲ್ಲಿ ಇದೆ. ಇದು ನಮ್ಮ ಆರ್ಥಿಕತೆಯ ಆರೋಗ್ಯದ ಸಂಕೇತವೆಂದು ಭಾವಿಸಲಡ್ಡಿ ಇಲ್ಲ.

ಪಿಎಂ ಕಿಸಾನ್ ಯೋಜನೆ: ಸೋಮವಾರ 12ನೇ ಕಂತು ಬಿಡುಗಡೆ- ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿಪಿಎಂ ಕಿಸಾನ್ ಯೋಜನೆ: ಸೋಮವಾರ 12ನೇ ಕಂತು ಬಿಡುಗಡೆ- ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ

ಟಿವಿ, ಗೃಹ ಯಂತ್ರೋಪಕರಣ, ಎಂಎಂಸಿಜಿ ಆಹಾರ ಮತ್ತು ಆಹಾರೇತರ ವಸ್ತು, ಬಟ್ಟೆ ಇತ್ಯಾದಿ ಉತ್ಪನ್ನಗಳ ಮಾರಾಟದಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷದ ಹಬ್ಬದ ಸೀಸನ್‌ನಲ್ಲಿ ಆಗಿದ್ದಕ್ಕಿಂತ ಈ ಬಾರಿ ಶೇ. 8ರಷ್ಟು ಮಾರಾಟ ಹೆಚ್ಚಳವಾಗಿರುವುದು ತಿಳಿದುಬಂದಿದೆ. ಇನ್ನು ದೀಪಾವಳಿ ಹಬ್ಬದವರೆಗೂ ಹಬ್ಬದ ಸೀಸನ್ ಇದೆ. ವ್ಯಾಪಾರ ಸಂಘಟನೆ ಸಿಎಐಟಿ ಪ್ರಕಾರ ದೀಪಾವಳಿ ಸೀಸನ್‌ನಲ್ಲಿ ಆಗುವ ವ್ಯಾಪಾರದಿಂದಾಗಿ 2.5 ಲಕ್ಷ ಕೋಟಿ ರೂ ಹಣವು ಮಾರುಕಟ್ಟೆಗೆ ಸಿಗಬಹುದು ಎನ್ನಲಾಗಿದೆ.

ಬೋನಸ್, ಡಿಎ ಹೆಚ್ಚಳ: ಹಬ್ಬದ ಸೀಸನ್ ಫಳಫಳ

ಡಿಎ ಹೆಚ್ಚಳ
ಕೇಂದ್ರ ಸರಕಾರ ಇತ್ತೀಚೆಗೆ ಶೇ. 4ರಷ್ಟು ಡಿಎ ಹೆಚ್ಚಿಸಿರುವುದು ಆರ್ಥಿಕತೆಗೆ ಪುಷ್ಟಿಕೊಡುವ ನಿರೀಕ್ಷೆ ಇದೆ. ಡಿಎ ಹೆಚ್ಚಳವು 69.7 ಲಕ್ಷ ಪಿಂಚಣಿದಾರರು ಮತ್ತು 41.8 ಲಕ್ಷ ಕೇಂದ್ರ ಸರಕಾರ ಉದ್ಯೋಗಿಗಳ ಜೇಬಿಗೆ ಹೆಚ್ಚು ಹಣ ಭರ್ತಿ ಮಾಡುತ್ತದೆ. ಇದರಿಂದ ಆರ್ಥಿಕತೆಗೆ ಒಂದು ರೀತಿಯಲ್ಲಿ ಉತ್ತೇಜಕವಾಗಿ ಕೆಲಸ ಮಾಡಬಹುದು ಎಂದು ಸಿಎಐಟಿ ನಿರೀಕ್ಷಿಸಿದೆ.

ಡಿಜಿಟಲ್ ಬ್ಯಾಂಕಿಂಗ್ ಎಂದರೇನು? ಈಗ ಸ್ಥಾಪಿಸಿರುವ ಡಿಬಿಯುಗಳಿಂದ ಏನು ಪ್ರಯೋಜನ?ಡಿಜಿಟಲ್ ಬ್ಯಾಂಕಿಂಗ್ ಎಂದರೇನು? ಈಗ ಸ್ಥಾಪಿಸಿರುವ ಡಿಬಿಯುಗಳಿಂದ ಏನು ಪ್ರಯೋಜನ?

ಇದರ ಜೊತೆಗೆ ರೈಲ್‌ರೋಡ್ ಕಾರ್ಮಿಕರಿಗೆ ಉತ್ಪನ್ನತೆ ಆಧಾರಿತ ಬೋನಸ್ (ಪಿಎಲ್‌ಬಿ) ಅನ್ನು ನೀಡಲಾಗಿದೆ. ಲಕ್ಷಾಂತರ ಸಂಖ್ಯೆಯ ಕಾರ್ಮಿಕರಿಗೆ 78 ದಿನಗಳ ಹೆಚ್ಚುವರಿ ಸಂಬಳ ಸಿಕ್ಕಂತಾಗುತ್ತದೆ. ಡಿಎ ಮತ್ತು ಪಿಎಲ್‌ಬಿ ಕ್ರಮಗಳಿಂದಾಗಿ ಆರ್ಥಿಕತೆಗೆ ಸಾವಿರಾರು ಕೋಟಿ ರೂ ಹರಿದುಬರುತ್ತದೆ ಎಂಬುದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಅನಿಸಿಕೆ.

ಬೋನಸ್, ಡಿಎ ಹೆಚ್ಚಳ: ಹಬ್ಬದ ಸೀಸನ್ ಫಳಫಳ

ಗೃಹೋಪಕರಣಗಳ ಮಾರಾಟ
ಗಣೇಶ ಹಬ್ಬದಿಂದ ಶುರುವಾದ ಹಬ್ಬದ ಸೀಸನ್‌ನಲ್ಲಿ ದಸರಾ, ನವರಾತ್ರಿಯ ಪ್ರಮುಖ ಹಂತ ಹಾದು ಹೋಗಿದೆ. ಈಗ ಅಕ್ಟೋಬರ್ ಕೊನೆಯ ವಾರದಲ್ಲಿರುವ ದೀಪಾವಳಿಯಲ್ಲಿ ಸೀಸನ್ ಉಚ್ಛ ಸ್ಥಿತಿ ಮುಟ್ಟುತ್ತದೆ. ನವರಾತ್ರಿಯಲ್ಲಿ ಮಾರಾಟಕ್ಕೆ ಪುಷ್ಟಿ ಸಿಕ್ಕಿತ್ತು. ಈಗ ದೀಪಾವಳಿಯಲ್ಲಿ ಮಾರಾಟ ಉಚ್ಛ್ರಾಯ ಸ್ಥಿತಿ ತಲುಪಬಹುದು. ಎಲ್‌ಇಡಿ ಟಿವಿ, ವಾಷಿಂಗ್ ಮೆಷಿನ್, ಫ್ರಿಡ್ಜ್ ಇತ್ಯಾದಿ ಉತ್ಪನ್ನಗಳ ಮಾರಾಟ ಗರಿಷ್ಠ ಮಟ್ಟಕ್ಕೆ ಬರಲಿದೆ ಎಂದು ಕನ್ಸೂಮರ್ ಎಲೆಕ್ಟ್ರಾನಿಕ್ಸ್ ತಯಾರಕರ ಸಂಘಟನೆ ಅಂದಾಜು ಮಾಡಿದೆ.

ಡಾಬರ್ ಇಂಡಿಯಾದ ಅಧಿಕಾರಿ ಆದರ್ಶ್ ಶರ್ಮಾ ಕೂಡ ಇದೇ ನಿರೀಕ್ಷೆಲ್ಲಿದ್ದಾರೆ. "ಹಬ್ಬದ ಸೀಸನ್ ಮೇರು ಸ್ಥಿತಿಗೆ ಹೋಗುತ್ತಿರುವಂತೆಯೇ ಗ್ರಾಹಕರ ಖರೀದಿ ಮನೋಭಾವ ಕೂಡ ಹೆಚ್ಚಬಹುದು ಎಂದು ನಿರೀಕ್ಷಿಸಿದ್ದೇವೆ. ಆಹಾರ, ಪಾನೀಯ, ಸೌಂದರ್ಯವರ್ದಕ ಉತ್ಪನ್ನಗಳು ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಾರಾಟ ಕಾಣಬಹುದು" ಎಂದು ಅವರು ಹೇಳಿದ್ದಾರೆ.

ಇನ್ನು, ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘಟನೆ (ಆರ್‌ಎಐ) ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ ಕೋವಿಡ್ ಮುಂಚೆಗಿಂತಲೂ ಈ ಬಾರಿಯ ಹಬ್ಬದ ಸೀಸನ್‌ನಲ್ಲಿ ಉತ್ತಮ ವ್ಯಾಪಾರ ನಡೆದಿದೆಯಂತೆ. 2019ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 2022ರ ಸೆಪ್ಟೆಂಬರ್ ತಿಂಗಳಲ್ಲಿ ರೀಟೇಲ್ ಮಾರಾಟ ಪ್ರಮಾಣದಲ್ಲಿ ಶೇ 21ರಷ್ಟು ಹೆಚ್ಚಳವಾಗಿದೆ.

English summary

Bonus, DA Hike Become Catalyst For Sales Boom During Festive Season

Sale of products such as TV, home appliances, FMCG food and apparel etc from offline and e-commerce channels have recorded almost 8-10% volume growth.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X