For Quick Alerts
ALLOW NOTIFICATIONS  
For Daily Alerts

ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್: 275 ರೂಪಾಯಿಗೆ 3300 ಜಿಬಿ ಡೇಟಾ!

|

ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ ಹಲವಾರು ರಿಚಾರ್ಜ್ ಪ್ಲ್ಯಾನ್‌ಗಳನ್ನು ಜಾರಿಗೆ ತಂದಿದೆ. ಬೇರೆ ಟೆಲಿಕಾಂ ಸಂಸ್ಥೆಗಳಿಗಿಂತ ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಕೊಂಚ ಹೆಚ್ಚೇ ಪ್ರಯೋಜನಗಳು ಲಭ್ಯವಾಗುತ್ತದೆ. ನೀವು ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಅನ್ನು ಹೊಂದಿದ್ದರೆ, ಸುಮಾರು 75 ದಿನಗಳ ಅವಧಿಗೆ 275 ರೂಪಾಯಿ ಪಾವತಿ ಮಾಡಿ 3300 ಜಿಬಿ ಡೇಟಾವನ್ನು ಪಡೆದುಕೊಳ್ಳುವ ಅವಕಾಶವಿದೆ.

 

ಸಂಸ್ಥೆಯ ಸ್ವಾತಂತ್ರ್ಯೋತ್ಸವದ ನಿಮಿತ ಈ ಆಫರ್ ಅನ್ನು ನೀಡಿದ್ದು, ಇದರಿಂದಾಗಿ ಹಲವಾರು ಗ್ರಾಹಕರು ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಈ ಯೋಜನೆಯು ಬಿಎಸ್‌ಎನ್‌ಎಲ್‌ನ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಮಾತ್ರ ಲಭ್ಯವಾಗುತ್ತದೆ.

ಬಿಎಸ್‌ಎನ್‌ಎಲ್‌: ಕೈಗೆಟಕುವ ದರದಲ್ಲಿ 2 ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಪ್ಲ್ಯಾನ್, ಹಲವು ಲಾಭ

599 ರೂಪಾಯಿಗಳ ಪ್ಲ್ಯಾನ್ ಈಗ ನಿಮಗೆ 275 ರೂಪಾಯಿಗೆ ಲಭ್ಯವಾಗಲಿದೆ. ಈ ಪ್ಲ್ಯಾನ್‌ನ ಬಳಕೆದಾರರು 75 ದಿನಗಳ ಬಳಿಕ ಈ ಹಿಂದಿನ ದರವನ್ನೇ ಪಾವತಿ ಮಾಡಬೇಕಾಗುತ್ತದೆ. ಈ ಆಫರ್ ಈ ಅವಧಿಗೆ ಮಾತ್ರ ಲಭ್ಯವಿದೆ. ಈ ಪ್ಲ್ಯಾನ್ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ ಮುಂದೆ ಓದಿ....

 ಬಿಎಸ್‌ಎನ್‌ಎಲ್: 275 ರೂಪಾಯಿಗೆ 3300 ಜಿಬಿ ಡೇಟಾ!

3300 ಜಿಬಿ ಡೇಟಾ ಲಭ್ಯ

ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ನಲ್ಲಿ 275 ರೂಪಾಯಿಗೆ 3300 ಜಿಬಿ ಡೇಟಾ ಲಭ್ಯವಾಗಲಿದೆ. ಇದು ಹೈ ಸ್ಪೀಡ್ ಡೇಟಾ ಆಗಿದೆ. ಬಿಎಸ್‌ಎನ್‌ಎಲ್‌ನಲ್ಲಿ 60Mbps ಹೈ ಸ್ಪೀಡ್ ಆಗಿದೆ. ಈ ಯೋಜನೆಯಲ್ಲಿ ಡೇಟಾವನ್ನು ಸಂಪೂರ್ಣವಾಗಿ ಬಳಕೆ ಮಾಡಿದರೆ ಬಳಿಕ ನೆಟ್ ಸ್ಪೀಡ್ ಕಡಿಮೆಯಾಗಲಿದೆ. ಅಂದರೆ ಸುಮಾರು 2Mbpsಗೆ ಡ್ರಾಪ್ ಆಗಲಿದೆ.

ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಬಂಪರ್ ಆಫರ್: 2,399 ಪ್ರಿಪೇಯ್ಡ್ ರೀಚಾರ್ಜ್‌ಗೆ ಹೆಚ್ಚುವರಿ ವ್ಯಾಲಿಡಿಟಿ

ಇನ್ನು ಈ ಪ್ಲ್ಯಾನ್ ಅನ್ನು ರಿಚಾರ್ಜ್ ಮಾಡಿಸಿಕೊಳ್ಳುವವರಿಗೆ ಇನ್ನೊಂದು ಲಾಭವು ಕೂಡಾ ಇದೆ. ಈ ಪ್ಲ್ಯಾನ್‌ನ ಲಾಭವನ್ನು ಪಡೆಯುವವರು ನಿಮ್ಮ ಮನೆಯಲ್ಲಿ ಬ್ರಾಡ್‌ಬ್ಯಾಂಡ್ ಇನ್‌ಸ್ಟಾಲೇಷನ್‌ಗೆ ಶುಲ್ಕ ಪಾವತಿ ಮಾಡಬೇಕಾಗಿಲ್ಲ. ನಿಮ್ಮಲ್ಲಿ ಲಿಮಿಡೆಟ್ ಬಜೆಟ್ ಇದ್ದರೆ ಈ ಸಂದರ್ಭವನ್ನು ಉಪಯೋಗಿಸಿಕೊಂಡು ರಿಚಾರ್ಜ್ ಮಾಡಿಸಿಕೊಳ್ಳಬಹುದು.

ಖಾಸಗಿ ಸಂಸ್ಥೆಗಳಿಂದ 5ಜಿ ಆರಂಭದ ಘೋಷಣೆ

 

ಬಿಎಸ್‌ಎನ್‌ಎಲ್‌ ಈ ಆಫರ್‌ ಅನ್ನು ನೀಡುವ ನಡುವೆ ಖಾಸಗಿ ಸಂಸ್ಥೆಯು ಇತ್ತೀಚೆಗೆ 5ಜಿ ಸೇವೆಯನ್ನು ಶೀಘ್ರವೇ ಆರಂಭ ಮಾಡುವ ಘೋಷಣೆಯನ್ನು ಮಾಡಿದೆ. 5ಜಿ ಆರಂಭವಾದರೆ ಇಂಟರ್‌ನೆಟ್ ಸ್ಪೀಡ್ ಭಾರೀ ಪ್ರಮಾಣದಲ್ಲಿ ಅಧಿಕವಾಗಲಿದೆ. ಆರಂಭದಲ್ಲಿ ಈ ಸೇವೆಯನ್ನು ಕೆಲವು ನಗರಗಳಲ್ಲಿ ಮಾತ್ರ ಆರಂಭ ಮಾಡಲಾಗುತ್ತದೆ. ಬಳಿಕ ಬೇರೆ ಪಟ್ಟಣ, ನಗರಗಳಲ್ಲಿ ಆರಂಭ ಮಾಡಲಾಗುತ್ತದೆ. ಸಂಸ್ಥೆಗಳು ಈ 5ಜಿ ಬಂದ ಬಳಿಕ ರಿಚಾರ್ಜ್‌ಗೆ ಎಷ್ಟು ವೆಚ್ಚವಾಗಲಿದೆ ಎಂಬ ಬಗ್ಗೆ ಸ್ಪಷ್ಟಣೆಯನ್ನು ಈವರೆಗೂ ನೀಡಿಲ್ಲ. ಆದರೆ 4ಜಿಗಿಂತ 5ಜಿ ಸೇವೆಯು ದುಬಾರಿಯೇ ಆಗಲಿದೆ ಎಂದು ವರದಿಯಾಗಿದೆ.

English summary

BSNL 75 Days of Broadband Plan, Know Details In Kannada

BSNL 75 days of fibre broadband plans; know plan validity, speed, data limit and other details in Kannada.
Story first published: Monday, September 19, 2022, 17:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X