For Quick Alerts
ALLOW NOTIFICATIONS  
For Daily Alerts

ಬಿಎಸ್‌ಎನ್‌ಎಲ್‌: ಕೈಗೆಟಕುವ ದರದಲ್ಲಿ 2 ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಪ್ಲ್ಯಾನ್, ಹಲವು ಲಾಭ

|

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ತನ್ನ ಭಾರತ್ ಫೈಬರ್ ಯೋಜನೆಯ ಅಡಿಯಲ್ಲಿ 100-150 Mbps ವೇಗ, ಓವರ್-ದಿ-ಟಾಪ್ (ಒಟಿಟಿ) ಮತ್ತು ಇತರ ಪ್ರಯೋಜನಗಳೊಂದಿಗೆ ಕೈಗೆಟುಕುವ ದರದಲ್ಲಿ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು ನೀಡುತ್ತಿದೆ.

ರೂಪಾಯಿ 749 ಮತ್ತು ರೂಪಾಯಿ 999ರಿಂದ ಈ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳು ಆರಂಭವಾಗುತ್ತದೆ. ರೂಪಾಯಿ 749 ರ ತನ್ನ 'ಸೂಪರ್‌ಸ್ಟಾರ್ ಪ್ರೀಮಿಯಂ-1' ಯೋಜನೆ ಅಡಿಯಲ್ಲಿ, ಬಿಎಸ್‌ಎನ್‌ಎಲ್‌ 100 Mbps ವೇಗದಲ್ಲಿ ಒಟ್ಟು 1,000 GB ಡೇಟಾವನ್ನು ನೀಡುತ್ತಿದೆ. ಡೇಟಾ ಮುಗಿದ ನಂತರವೂ ಕೂಡಾ 5 Mbps ವೇಗವಾಗಿ ಇಂಟರ್‌ನೆಟ್ ಕಾರ್ಯನಿರ್ವಹಣೆ ಮಾಡಲಿದೆ.

ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಬಂಪರ್ ಆಫರ್: 2,399 ಪ್ರಿಪೇಯ್ಡ್ ರೀಚಾರ್ಜ್‌ಗೆ ಹೆಚ್ಚುವರಿ ವ್ಯಾಲಿಡಿಟಿಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಬಂಪರ್ ಆಫರ್: 2,399 ಪ್ರಿಪೇಯ್ಡ್ ರೀಚಾರ್ಜ್‌ಗೆ ಹೆಚ್ಚುವರಿ ವ್ಯಾಲಿಡಿಟಿ

ಅಲ್ಲದೆ ಈ ಪ್ಲ್ಯಾನ್‌ನಲ್ಲಿ ಉಚಿತ ಫಿಕ್ಸಿಡ್ ಲೈನ್ ಸಂಪರ್ಕವು ಲಭ್ಯವಿದೆ. ಈ ನಡುವೆ ಸೋನಿ ಲೈವ್ (Sony Liv), ಝೀ 5 (ZEE5) ಪ್ರೀಮಿಯಂ, YUPPTV ಮತ್ತು VOOT ಗೆ ಉಚಿತ ಚಂದಾದಾರಿಕೆಗಳು ಕೂಡಾ ಈ ಬಿಎಸ್‌ಎನ್‌ಎಲ್‌ ಪ್ಲ್ಯಾನ್‌ನ ಭಾಗವಾಗಿದೆ.

ಬಿಎಸ್‌ಎನ್‌ಎಲ್‌:ಪ್ರೀಮಿಯಂ ಬ್ರಾಡ್‌ಬ್ಯಾಂಡ್, ಹಲವು ಪ್ರಯೋಜನ

ರೂಪಾಯಿ 999 ರೀಚಾರ್ಜ್ ಪ್ಲ್ಯಾನ್ ಬಗ್ಗೆ ತಿಳಿಯಿರಿ

ಇದಲ್ಲದೆ, 'ಸುಪ್ರೀ ಸ್ಟಾರ್ ಪ್ರೀಮಿಯಂ ಪ್ಲಸ್' ಎಂದು ಉಲ್ಲೇಖಿಸಲಾದ ರೂಪಾಯಿ 999 ರೀಚಾರ್ಜ್ ಪ್ಲ್ಯಾನ್‌ನಲ್ಲಿ ಒಟ್ಟು 2,000 GB ಡೇಟಾ ಲಭ್ಯವಾಗಲಿದೆ. ಇದು 150 Mbps ವೇಗವನ್ನು ನೀಡುತ್ತದೆ. ಡೇಟಾ ಖಾಲಿಯಾದ ನಂತರ, ಡೇಟಾ ಮಿತಿಯನ್ನು ಮೀರಿ 10 Mbps ನಲ್ಲಿ ಇಂಟರ್‌ನೆಟ್ ಕಾರ್ಯನಿರ್ವಹಣೆ ಮಾಡಲಿದೆ. Disney + Hotstar, ZEE5, Sony Liv, Voot, Lions Gate, Hungama, YuppTV ಮತ್ತು Shemaro ಚಂದಾದಾರಿಕೆಯು ರೂಪಾಯಿ 999 ರೀಚಾರ್ಜ್ ಪ್ಲ್ಯಾನ್‌ನಲ್ಲಿ ಲಭ್ಯವಿದೆ.

ಪ್ರಯೋಜನವನ್ನು ಹೇಗೆ ಪಡೆಯುವುದು?

ಈ ಮೇಲೆ ತಿಳಿಸಿದ ಯೋಜನೆಯನ್ನು ಪಡೆಯಲು ಬಿಎಸ್‌ಎನ್‌ಎಲ್‌ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ನಂತರ ನೀವು ನಿಮ್ಮ ದೂರವಾಣಿ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಾಗುತ್ತದೆ. ನಂತರ Get OTP ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಬಳಿಕ ಬಳಕೆದಾರರು ತಮ್ಮ ಕೋಡೆಡ್ ಅಂಕಿ ಸಂಖ್ಯೆಯನ್ನು ಸೇರಿಸಬೇಕು ಮತ್ತು ಅದನ್ನು submit ಮಾಡಬೇಕು.

ಬಂಪರ್ ಆಫರ್ ನೀಡಿದ್ದ ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ಕರೆಗಳು ಮತ್ತು ಎಸ್‌ಎಂಎಸ್ ಸೇರಿದಂತೆ ಒಂದು ವರ್ಷ ಅಥವಾ 365 ದಿನಗಳ ಸೇವೆಯನ್ನು ಈಗ ಎರಡು ತಿಂಗಳು ಅಂದರೆ 60 ದಿನಗಳ ಹೆಚ್ಚುವರಿ ಕಾಲ ವಿಸ್ತರಣೆ ಮಾಡಿದೆ. ಬಿಎಸ್‌ಎನ್‌ಎಲ್ ವೆಬ್‌ಸೈಟ್ ಪ್ರಕಾರ, ರೂ. 2,399 ರೀಚಾರ್ಜ್ ಪ್ಲಾನ್, ಈ ಹಿಂದೆ 365 ದಿನಗಳ ವ್ಯಾಲಿಡಿಟಿಯನ್ನು ನೀಡಿತ್ತು. ಆದರೆ ಈಗ ಬಳಕೆದಾರರು ಡೇಟಾ, ಸಂದೇಶ ಮತ್ತು ಕರೆ ಸೇರಿ ರೂ. 2,399 ರೀಚಾರ್ಜ್ ಪ್ಲಾನ್‌ನಲ್ಲಿ 425 ದಿನದ ವ್ಯಾಲಿಡಿಟಿ ಪಡೆಯಬಹುದು. ಏಪ್ರಿಲ್ 1 ಮತ್ತು ಜೂನ್ 29 ರ ನಡುವೆ ವಾರ್ಷಿಕ ಯೋಜನೆಯೊಂದಿಗೆ ರೀಚಾರ್ಜ್ ಮಾಡಿದ ಗ್ರಾಹಕರು ಈ ಆಫರ್ ಪಡೆಯಬಹುದು.

English summary

BSNL Offers Rs 749 and Rs 999 Premium Broadband Plans ; Know Details in Kannada

BSNL offers Rs 749 and Rs 999 premium broadband plans; know plan validity, speed, data limit and other details in Kannada.
Story first published: Monday, June 6, 2022, 16:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X