For Quick Alerts
ALLOW NOTIFICATIONS  
For Daily Alerts

ಪ್ರಾವಿಡೆಂಟ್ ಫಂಡ್ ಗೆ ಬರುವ ಬಡ್ಡಿಗೆ ಬೀಳಲಿದೆ ತೆರಿಗೆ: ಲೆಕ್ಕಾಚಾರ ಹೇಗೆ?

By ಅನಿಲ್ ಆಚಾರ್
|

ಮಧ್ಯಮ ವರ್ಗದ ತೆರಿಗೆದಾರರಿಗೆ ಇದು ಒಳ್ಳೆ ಸುದ್ದಿ ಅಲ್ಲ. ಏಕೆಂದರೆ, ಏಪ್ರಿಲ್ 1ನೇ ತಾರೀಕಿನಿಂದ ಅನ್ವಯ ಆಗುವಂತೆ ಹೊಸ ತೆರಿಗೆ ನಿಯಮ ಬರಲಿದೆ. ಆ ಪ್ರಕಾರ, ಪ್ರಾವಿಡೆಂಟ್ ಫಂಡ್ ಮತ್ತು ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ (ULIP) ಹೂಡಿಕೆ ಮೇಲಿನ 2.5 ಲಕ್ಷ ರುಪಾಯಿಗೂ ಹೆಚ್ಚಿನ ರಿಟರ್ನ್ಸ್ ಬಂದಿದ್ದಲ್ಲಿ ಅದಕ್ಕೆ ತೆರಿಗೆ ಬೀಳುತ್ತದೆ.

ಮೂಲಗಳು ತಿಳಿಸುವ ಪ್ರಕಾರ, 2018ರಲ್ಲಿ ಮ್ಯೂಚುವಲ್ ಫಂಡ್ ಗೆ ಪರಿಚಯಿಸಿದ ದೀರ್ಘಾವಧಿ ಬಂಡವಾಳ ಗಳಿಕೆ (ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್) ರೀತಿಯಲ್ಲೇ ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ ಗೂ ಅನ್ವಯ ಆಗಲಿದೆ. ಈ ತನಕ ವಿಪಿಎಫ್ (ವಾಲಂಟರಿ ಪ್ರಾವಿಡೆಂಟ್ ಫಂಡ್), ಇಪಿಎಫ್ (ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್) ಹಾಗೂ ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ ಹೂಡಿಕೆ ಮೇಲಿನ ರಿಟರ್ನ್ಸ್ ಗೆ ಮೆಚ್ಯೂರಿಟಿ ಆದಾಯ ತೆರಿಗೆ ಇರಲಿಲ್ಲ.

ಎಲ್‌ಐಸಿ ಐಪಿಒ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರ್ಕಾರಎಲ್‌ಐಸಿ ಐಪಿಒ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರ್ಕಾರ

ಈ ತಿದ್ದುಪಡಿಯಿಂದಾಗಿ ಪ್ರಾವಿಡೆಂಟ್ ಮೇಲಿನ ರು. 2.5 ಲಕ್ಷದ ತನಕ ರಿಟರ್ನ್ಸ್ ಗೆ ಯಾವುದೇ ತೆರಿಗೆ ಬೀಳುವುದಿಲ್ಲ. ಆ ಮೊತ್ತವನ್ನು ಮೀರಿದಂತೆ ಹೂಡಿಕೆದಾರರ ಬಳಿ ಉಳಿಯುವ ಹಣವನ್ನು ತೆರಿಗೆ ಹಾಕುವ ಆದಾಯವಾಗಿ ಪರಿಗಣಿಸಲಾಗುತ್ತದೆ. ಹೂಡಿಕೆದಾರರ ಆದಾಯಕ್ಕೆ ಯಾವ ದರದಲ್ಲಿ ತೆರಿಗೆ ಹಾಕಲಾಗುತ್ತದೋ ಅದೇ ಲೆಕ್ಕದಲ್ಲಿ ಬೀಳುತ್ತದೆ.

ವರ್ಷಕ್ಕೆ ರು. 2.5 ಲಕ್ಷ ಮೀರಿದರೆ 10% ತೆರಿಗೆ ಹಾಗೂ ಸರ್ ಚಾರ್ಜ್

ವರ್ಷಕ್ಕೆ ರು. 2.5 ಲಕ್ಷ ಮೀರಿದರೆ 10% ತೆರಿಗೆ ಹಾಗೂ ಸರ್ ಚಾರ್ಜ್

ಇನ್ನು ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ ವಿಚಾರಕ್ಕೆ ಬಂದಲ್ಲಿ, ಒಂದು ವರ್ಷಕ್ಕೆ 2.5 ಲಕ್ಷವನ್ನು ಮೀರಿ ಹೂಡಿಕೆ ಮಾಡಿದಲ್ಲಿ ಹೂಡಿಕೆದಾರರಿಗೆ ಯಾವುದೇ ವಿನಾಯಿತಿ ಸಿಕ್ಕಲ್ಲ. ಪೂರ್ತಿ ಮೊತ್ತಕ್ಕೆ 10% ತೆರಿಗೆ ಹಾಗೂ ಸರ್ ಚಾರ್ಜ್ ಬೀಳುತ್ತದೆ. ULIP ಅನ್ನು ಈಕ್ವಿಟಿ- ಓರಿಯೆಂಟೆಡ್ ಇನ್ವೆಸ್ಟ್ ಮೆಂಟ್ ಪ್ಲಾನ್ ಎಂದು ಪರಿಗಣಿಸಲಾಗುತ್ತದೆ ಎನ್ನುತ್ತಾರೆ ತಜ್ಞರು. ಹಣಕಾಸು ವಿದೇಯಕ 2021ರ ಪ್ರಕಾರ, ಕೆಲವು ಉದ್ಯೋಗಿಗಳು ಪ್ರಾವಿಡೆಂಟ್ ಫಂಡ್ ಗೆ ದೊಡ್ಡ ಮೊತ್ತದ ಹಣ ಹಾಕುತ್ತಾರೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10 ಹಾಗೂ ಕ್ಲಾಸ್ 11 ಹಾಗೂ 12ರ ಅಡಿಯಲ್ಲಿ, ಆ ಮೊತ್ತದ ಮೇಲಿನ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಈ ವಿನಾಯಿತಿಗೆ ಯಾವುದೇ ಮಿತಿ ಹಾಕದೆ ಅನುಕೂಲ ಸಿಗಲಿದೆ. ಅದು ಯಾವ ಉದ್ಯೋಗಿಗಳು ತಮ್ಮ ಕೊಡುಗೆ ಭಾಗವಾಗಿ ದೊಡ್ಡ ಮೊತ್ತ ನೀಡುತ್ತಾರೋ ಅವರಿಗೆ ಮಾತ್ರ ಸಿಗುತ್ತದೆ.

ಸಣ್ಣ ಪ್ರಮಾಣದಲ್ಲಿ ಮಾತ್ರ ತೆರಿಗೆ

ಸಣ್ಣ ಪ್ರಮಾಣದಲ್ಲಿ ಮಾತ್ರ ತೆರಿಗೆ

ಏಪ್ರಿಲ್ 1, 2021ರಿಂದ ಅನ್ವಯ ಆಗುವಂತೆ, ಒಬ್ಬ ವ್ಯಕ್ತಿಯ ಆದಾಯವು ತಾನು ಹೂಡಿಕೆ ಮಾಡಿದ ಮೊತ್ತದ ಮೇಲೆ 2.5 ಲಕ್ಷ ರುಪಾಯಿ ದಾಟಿದಲ್ಲ್ಲಿ ಆಗ ಅದು ತೆರಿಗೆ ಮುಕ್ತವಲ್ಲ. ಆದರೆ ಅದಕ್ಕೆ ಯಾವ ದರ ತೆರಿಗೆ ಹಾಕಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಹೂಡಿಕೆದಾರರಿಗೆ ಸಣ್ಣ ಪ್ರಮಾಣದಲ್ಲಿ ಮಾತ್ರ ತೆರಿಗೆ ಹಾಕಬಹುದು ಎನ್ನುತ್ತಾರೆ ತಜ್ಞರು. ಇನ್ನು ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ ಗೆ ಜನವರಿ 31, 2021ರ ನಂತರ ಹಣ ಬಂದಿದ್ದಲ್ಲಿ, ಪಾಲಿಸಿ ಅವಧಿಯ ಯಾವುದೇ ಹಣಕಾಸು ವರ್ಷದಲ್ಲಿ ಪ್ರೀಮಿಯಂ ಪಾವತಿಯು 2.5 ಲಕ್ಷ ರುಪಾಯಿ ದಾಟಿದಲ್ಲಿ ಅದನ್ನು ಬಂಡವಾಳ ಗಳಿಕೆ (ಕ್ಯಾಪಿಟಲ್ ಗೇಯ್ನ್ಸ್) ಎಂದು ಪರಿಗಣಿಸಿ, ತೆರಿಗೆ ಹಾಕಲಾಗುತ್ತದೆ. ಈಕ್ವಿಟಿ ಓರಿಯೆಂಟೆಡ್ ಮ್ಯೂಚುವಲ್ ಫಂಡ್ ಗಳ ವರ್ಗಾವಣೆಗೆ ಯಾವ ರೀತಿ ತೆರಿಗೆ ಬೀಳುತ್ತದೋ ಅದೇ ರೀತಿ ಆಗಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು. 2.5 ಲಕ್ಷ ರುಪಾಯಿ ಮಿತಿಯು ಒಬ್ಬರೇ ಪಾಲಿಸಿದಾರರು ಹೊಂದಿರುವ ಎಲ್ಲ ULIPಗೂ ಸೇರಿ ಅನ್ವಯ ಆಗುತ್ತದೆ. ಆದರೆ ವ್ಯಕ್ತಿಯ ಸಾವಿನ ನಂತರ ಬರುವ ಹಣಕ್ಕೆ ವಿನಾಯಿತಿ ಇದೆ.

ಈ ಎರಡೂ ನಿಯಮ ಫೆಬ್ರವರಿ 1, 2021ರಿಂದ ಜಾರಿ

ಈ ಎರಡೂ ನಿಯಮ ಫೆಬ್ರವರಿ 1, 2021ರಿಂದ ಜಾರಿ

ಒಂದು ವೇಳೆ ULIP ಮೇಲೆ ತೆರಿಗೆ ಅನುಕೂಲ ಪಡೆಯಬೇಕು ಎಂದು ಹೂಡಿಕೆದಾರರು ಬಯಸಿದಲ್ಲಿ ಸಮ್ ಅಶ್ಯೂರ್ಡ್ ಮೊತ್ತಕ್ಕೆ 10%ಗಿಂತ ವಾರ್ಷಿಕ ಪ್ರೀಮಿಯಂ ಹೆಚ್ಚಾಗಬಾರದು. ULIP ಅವಧಿ ಹತ್ತು ವರ್ಷ. ಆದರೆ ಹೂಡಿಕೆದಾರರು ಐದು ವರ್ಷದ ನಂತರ, ಮೆಚ್ಯೂರಿಟಿಗೆ ಮುಂಚೆಯೇ ತೆರಿಗೆ ಬೀಳದಂತೆ ಹಣ ವಾಪಸ್ ಪಡೆಯಬಹುದು. ಈ ಎರಡೂ ನಿಯಮ ಫೆಬ್ರವರಿ 1, 2021ರಿಂದಲೇ ಲಾಗೂ ಆಗುತ್ತದೆ. ಜನವರಿ 31, 2021ರ ತನಕ ವಿತರಿಸಿದ ULIPಗೆ ಇದು ಅನ್ವಯ ಆಗಲ್ಲ. ಈ ತಿದ್ದುಪಡಿಯನ್ನು ತರುವ ಮೂಲಕ ಇನ್ಷೂರೆನ್ಸ್ ಕಂಪೆನಿಗಳು ಇಷ್ಟು ಸಮಯ ಬಳಸಿಕೊಳ್ಳುತ್ತಿದ್ದ ಹುಳುಕನ್ನು ಕೊನೆಗೊಳಿಸಿದಂತಾಗಿದೆ. ಶ್ರೀಮಂತರು ತೆರಿಗೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಇನ್ಷೂರೆನ್ಸ್ ಪಾಲಿಸಿ ಮೆಚ್ಯೂರ್ ಆಗುತ್ತಿದ್ದುದನ್ನು ತಮ್ಮ ಆದಾಯ ಹೂಡಿಕೆ ಮೂಲಕ ಬಂದಿದ್ದು ಎಂದು ತೋರಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

English summary

Budget 2021: Provident Fund Interest, ULIP Returns Will Be Taxed Know How?

Union Budget 2021: Interest on PF and returns on ULIP will be taxed from April 1, 2021. Know how?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X