For Quick Alerts
ALLOW NOTIFICATIONS  
For Daily Alerts

ಬಜೆಟ್‌ 2022: ವೃತ್ತಿಪರರಿಗೆ ಸಿಹಿಸುದ್ದಿ, ಇಲ್ಲಿದೆ ವಿವರ

|

ಫೆಬ್ರವರಿಯಲ್ಲಿ ಕೇಂದ್ರ ಬಜೆಟ್‌ ಮಂಡನೆ ಆಗಲಿದೆ. ಈ ಕೋವಿಡ್‌ನಿಂದ ಆರ್ಥಿಕ ಬಿಕ್ಕಟ್ಟು ಉಂಟಾದ ಹಿನ್ನೆಲೆಯಿಂದಾಗಿ ಎಲ್ಲಾ ವಲಯಗಳು ಹೆಚ್ಚಿನ ನಿರೀಕ್ಷೆಯನ್ನು ಇರಿಸಿಕೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಬಜೆಟ್‌ ಮಂಡನೆ ಸಂದರ್ಭದಲ್ಲಿ ಸಂಬಳ ಪಡೆಯುವ ವೃತ್ತಿಪರರಿಗೆ ಸಿಹಿಸುದ್ದಿ ನೀಡುವ ಸಾಧ್ಯತೆ ಇದೆ. ತೆರಿಗೆ ವಿನಾಯಿತಿ ಮೊದಲಾದ ವಿಚಾರ ಪ್ರಸ್ತಾಪ ಆಗುವ ನಿರೀಕ್ಷೆ ಇದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022 ರಂದು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಅನ್ನು ಘೋಷಣೆ ಮಾಡಲಿದ್ದಾರೆ. ಈ ಬಜೆಟ್‌ಗೂ ಮುನ್ನ ಈಗಾಗಲೇ ಹಲವಾರು ವಲಯಗಳು ತಮ್ಮ ನಿರೀಕ್ಷೆ, ಬೇಡಿಕೆಗಳನ್ನು ಪ್ರಸ್ತಾಪ ಮಾಡಿದೆ. ಹಾಗೆಯೇ ಸರ್ಕಾರಕ್ಕೆ ಮನವಿಯನ್ನು ಕೂಡಾ ಸಲ್ಲಿಕೆ ಮಾಡಿದೆ. ಈ ನಡುವೆ ಹೆಚ್ಚಾಗಿ ತೆರಿಗೆ ವಿನಾಯಿತಿಯ ಬೇಡಿಕೆಯು ಕೇಳಿ ಬಂದಿದೆ.

ಜ.20: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಸ್ಥಿರಜ.20: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಸ್ಥಿರ

ಈ ಎಲ್ಲಾ ವಲಯದ ಬೇಡಿಕೆಯ ಮಧ್ಯೆ ಸಂಬಳ ಪಡೆಯುವ ವೃತ್ತಿಪರರು ಕೂಡಾ ಹಲವಾರು ಬೇಡಿಕೆ, ನಿರೀಕ್ಷೆಯನ್ನು ಹೊಂದಿದ್ದಾರೆ. ಹಲವಾರು ವರ್ಷಗಳಿಂದ ಸಂಬಳ ಪಡೆಯುವ ವೃತ್ತಿಪರರಿಗೆ ತೆರಿಗೆ ವಿನಾಯಿತಿ ಮಿತಿಯು ಬದಲಾವಣೆ ಆಗಿಲ್ಲ. ಈ ಕೋವಿಡ್‌ ಸಂದರ್ಭದಲ್ಲಿ ಮಂಡನೆ ಆಗುವ ಬಜೆಟ್‌ನಲ್ಲಿ ಸಂಬಳ ಪಡೆಯುವ ವೃತ್ತಿಪರರು ತೆರಿಗೆ ವಿನಾಯಿತಿಯನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಈ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಸಂಬಳ ಪಡೆಯುವ ವೃತ್ತಿಪರರಿಗೆ ಏನೆಲ್ಲ ಸಿಹಿಸುದ್ದಿಯನ್ನು ನೀಡಲಿದೆ ಎಂಬ ಬಗ್ಗೆ ತಿಳಿಯಲು ಮುಂದೆ ಓದಿ...

 ಈ ಟಾಟಾ ಸ್ಟಾಕ್‌ನಿಂದ 1 ವರ್ಷದಲ್ಲಿ ಅತ್ಯುತ್ತಮ ಆದಾಯ!, ರಾಕೇಶ್‌ ಜುಂಜುನ್‌ವಾಲಾರ 3.92 ಕೋಟಿ ಷೇರು ಈ ಟಾಟಾ ಸ್ಟಾಕ್‌ನಿಂದ 1 ವರ್ಷದಲ್ಲಿ ಅತ್ಯುತ್ತಮ ಆದಾಯ!, ರಾಕೇಶ್‌ ಜುಂಜುನ್‌ವಾಲಾರ 3.92 ಕೋಟಿ ಷೇರು

 ತೆರಿಗೆ ಮುಕ್ತ ಫಿಕ್ಸಿಡ್‌ ಡೆಪಾಸಿಟ್‌ ಅವಧಿ

ತೆರಿಗೆ ಮುಕ್ತ ಫಿಕ್ಸಿಡ್‌ ಡೆಪಾಸಿಟ್‌ ಅವಧಿ

ತೆರಿಗೆ ಮುಕ್ತ ಫಿಕ್ಸಿಡ್‌ ಡೆಪಾಸಿಟ್‌ಗಳ (ಎಫ್‌ಡಿ) ಲಾಕ್‌ಇನ್‌ ಅವಧಿಯು ಪ್ರಸ್ತುತ ಐದು ವರ್ಷಗಳು ಆಗಿದೆ. ಈ ಲಾಕ್‌ಇನ್‌ ಅವಧಿಯನ್ನು 5 ವರ್ಷದಿಂದ 3 ವರ್ಷಕ್ಕೆ ಇಳಿಸಬೇಕು ಎಂದು ಈಗಾಗಲೇ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಮನವಿ ಮಾಡಿದೆ. ಈಗಾಗಲೇ ಹಲವಾರು ಬ್ಯಾಂಕುಗಳು ತೆರಿಗೆ ಮುಕ್ತ ಫಿಕ್ಸಿಡ್‌ ಡೆಪಾಸಿಟ್‌ಗಳ (ಎಫ್‌ಡಿ) ಮೇಲಿನ ಬಡ್ಡಿದರವನ್ನು ಕಡಿತ ಮಾಡಿದೆ. ಈ ನಡುವೆ ಸರ್ಕಾರವು ಅಲ್ಪಾವಧಿಯಲ್ಲಿ ಎಫ್‌ಡಿ ಮಾಡುವ ಉತ್ತಮ ಆಯ್ಕೆಯನ್ನು ಸರ್ಕಾರವು ನೀಡುವ ನಿರೀಕ್ಷೆ ಇದೆ. ಫಿಕ್ಸಿಡ್‌ ಡೆಪಾಸಿಟ್‌ಗಳ (ಎಫ್‌ಡಿ) ಲಾಕ್-ಇನ್ ಅವಧಿಯನ್ನು 5 ವರ್ಷದಿಂದ 3 ವರ್ಷಕ್ಕೆ ಸರ್ಕಾರವು ಇಳಿಕೆ ಮಾಡುವ ಸಾಧ್ಯತೆ ಇದೆ. ಚುನಾವಣೆ ಇರುವ ಹಿನ್ನೆಲೆ ಆ ನಿಟ್ಟಿನಿಂದಲಾದರೂ ಸರ್ಕಾರ ಹಲವಾರು ಲಾಭವನ್ನು ನೀಡುವ ನಿರೀಕ್ಷೆ ಇದೆ.

 ಗೃಹಭತ್ಯೆ ಏರಿಕೆ ಸಾಧ್ಯತೆ

ಗೃಹಭತ್ಯೆ ಏರಿಕೆ ಸಾಧ್ಯತೆ

ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಗೃಹಭತ್ಯೆ (HRA) ಯನ್ನು ಏರಿಕೆ ಮಾಡುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಡಿಎ ಹೆಚ್ಚಳವಾದರೆ ಗೃಹಭತ್ಯೆ ಕೂಡಾ ಏರಿಕೆ ಆಗುತ್ತದೆ. ಡಿಎ ಶೇ 25ಕ್ಕೆ ಹೆಚ್ಚಳವಾದರೆ ಗೃಹಭತ್ಯೆ ಕೂಡಾ ಏರಿಕೆಯಾಗುತ್ತದೆ. ಪ್ರಸ್ತುತ ಗೃಹಭತ್ಯೆ ಶೇ 27ರಷ್ಟು ಇದೆ. ಪ್ರಸ್ತುತ ಎಕ್ಸ್ ವರ್ಗಕ್ಕೆ ಮೂಲ ವೇತನದ ಶೇ 27ರಷ್ಟು, ವೈ ವರ್ಗಕ್ಕೆ ಮೂಲ ವೇತನದ ಶೇ 18ರಷ್ಟು, ಮೂಲ ಝಡ್ ವರ್ಗಕ್ಕೆ ಮೂಲ ವೇತನದ ಶೇ 9ರಷ್ಟು ಗೃಹಭತ್ಯೆ ಲಭ್ಯವಾಗುತ್ತಿದೆ. ಎಕ್ಸ್ ವರ್ಗಕ್ಕೆ ಕನಿಷ್ಠ ಗೃಹಭತ್ಯೆ 5,400 ರೂ, ವೈ ವರ್ಗಕ್ಕೆ ಕನಿಷ್ಠ ಗೃಹಭತ್ಯೆ 3,600 ರೂ, ಮೂಲ ಝಡ್ ವರ್ಗಕ್ಕೆ ಕನಿಷ್ಠ ಗೃಹಭತ್ಯೆ 1,800 ರೂ ಇದೆ. ತುಟ್ಟಿ ಭತ್ಯೆ ಶೇ 50ಕ್ಕೂ ಅಧಿಕವಾದರೆ ಗೃಹಭತ್ಯೆಯನ್ನು ಕ್ರಮವಾಗಿ ಶೆ 30, ಶೇ 20 ಹಾಗೂ ಶೇ 10ಕ್ಕೆ ಏರಿಕೆ ಮಾಡಲಾಗುತ್ತದೆ.

 80C ಅಡಿ ವಿನಾಯಿತಿ

80C ಅಡಿ ವಿನಾಯಿತಿ

ಈಗ ಸೆಕ್ಷನ್ 80ಸಿ ಅಡಿಯಲ್ಲಿ ರೂ 1.5 ಲಕ್ಷ ವಿನಾಯಿತಿಯನ್ನು ನೀಡಲಾಗುತ್ತದೆ. ಇದನ್ನು 2014 ರಲ್ಲಿ ರೂ 1 ಲಕ್ಷದಿಂದ 1.5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಸಂಬಳ ಪಡೆಯುವ ವೃತ್ತಿಪರರ ತೆರಿಗೆ ಉಳಿಸಲು ಇದು ಪ್ರಯೋಜನಕಾರಿ ಆಗಿದೆ. ಇನ್ನು ಫೆಬ್ರವರಿ 1, 2022 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿರುವ ಬಜೆಟ್‌ನಲ್ಲಿ ಈ ಮಿತಿಯನ್ನು 2 ಲಕ್ಷ ರೂ.ಗೆ ಹೆಚ್ಚಿಸಬಹುದು ಎಂದು ಬಜೆಟ್ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

 ತೆರಿಗೆ ವಿನಾಯಿತಿ ಮಿತಿ ಏರಿಕೆ?

ತೆರಿಗೆ ವಿನಾಯಿತಿ ಮಿತಿ ಏರಿಕೆ?

ಕಳೆದ ಎಂಟು ವರ್ಷಗಳಿಂದ ತೆರಿಗೆ ವಿನಾಯಿತಿ ಮಿತಿಯನ್ನು ಪರಿಷ್ಕರಣೆ ಮಾಡಿಲ್ಲ. ಸದ್ಯ ತೆರಿಗೆ ವಿನಾಯಿತಿ ಮಿತಿಯು 2.5 ಲಕ್ಷ ರೂಪಾಯಿ ಆಗಿದೆ. ಕಳೆದ ಎಂಟು ವರ್ಷದ ಹಿಂದೆ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷದಿಂದ 2.5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಈಗ ಈ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಈ ತೆರಿಗೆ ವಿನಾಯಿತಿ ಮಿತಿ ಏರಿಕೆ ಮಾಡುವ ನಿರೀಕ್ಷೆಯನ್ನು ತೆರಿಗೆದಾರರು ಹೊಂದಿದ್ದಾರೆ. 2.5 ಲಕ್ಷ ರೂಪಾಯಿಯಿಂದ 3 ಲಕ್ಷಕ್ಕೆ ಏರಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ.

English summary

Budget 2022: Good News for Salaried Professionals, Here’s Details

Budget 2022: Good news for salaried professionals, Here's details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X