For Quick Alerts
ALLOW NOTIFICATIONS  
For Daily Alerts

ಮನೆ ಖರೀದಿ ಮಾಡುತ್ತೀರಾ? ಈ 10 ಅಂಶ ನೆನಪಿನಲ್ಲಿಡಿ

|

ಹೊಸ ಮನೆಯನ್ನು ಖರೀದಿ ಮಾಡುವುದು ಹಲವಾರು ಮಂದಿಗೆ ತಮ್ಮ ಜೀವನದ ಹೊಸ ಮೈಲಿಗಲ್ಲು. ನಾವು ಹೊಸ ಮನೆ ಖರೀದಿ ಮಾಡಲೆಂದು ಹಲವಾರು ವರ್ಷಗಳಿಂದ ತಯಾರಿಯನ್ನು ನಡೆಸುತ್ತೇವೆ. ಇದೇನು ಸರಳವಾದ ವಿಚಾರವಲ್ಲ. ನಾವು ಎಷ್ಟೇ ಉಳಿತಾಯ ಮಾಡಿದರೂ ಒಂದು ಮನೆಯನ್ನು ಕಟ್ಟಬೇಕಾದರೆ ಸಾಲವನ್ನು ಪಡೆಯಲೇಬೇಕಾಗುತ್ತದೆ.

 

ನಾವು ಮನೆಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ನಾವು ಯಾವುದೇ ಪೂರ್ವ ಯೋಜನೆಯನ್ನು ಮಾಡದಿದ್ದರೆ ನಂತರ ಸಂಕಷ್ಟಕ್ಕೆ ಸಿಲುಕಬಹುದು. ಆದ್ದರಿಂದ ಹೆಚ್ಚು ಜಾಗರೂಕತೆಯಿಂದ ಪೂರ್ವ ಯೋಜನೆಯನ್ನು ಮಾಡಿಕೊಳ್ಳಿ.

ಉತ್ತಮ ಬೆಲೆಗೆ ಮನೆ ಮಾರಾಟ ಮಾಡಲು ಇಲ್ಲಿದೆ ಟಿಪ್ಸ್ಉತ್ತಮ ಬೆಲೆಗೆ ಮನೆ ಮಾರಾಟ ಮಾಡಲು ಇಲ್ಲಿದೆ ಟಿಪ್ಸ್

ನೀವು ಮನೆಯನ್ನು ಖರೀದಿ ಮಾಡುವ ಮುನ್ನ ಯಾವೆಲ್ಲ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು, ನಿರ್ಧಾರವನ್ನು ಹೇಗೆ ಕೈಗೊಳ್ಳಬೇಕು ಎಂಬ ಬಗ್ಗೆ ನಾವು ಇಲ್ಲಿ ವಿವರಿಸಿದ್ದೇವೆ. ಮುಂದೆ ಓದಿ....

 ಆಸ್ಪತ್ರೆ, ಶಾಲೆ ಸಮೀಪ ಇದೆಯೇ ನೋಡಿಕೊಳ್ಳಿ

ಆಸ್ಪತ್ರೆ, ಶಾಲೆ ಸಮೀಪ ಇದೆಯೇ ನೋಡಿಕೊಳ್ಳಿ

* ನಾವು ಮನೆ ಖರೀದಿ ಮಾಡುವಾಗ ರಿಯಲ್ ಎಸ್ಟೇಟ್ ಏಜೆಂಟ್‌ಗಳನ್ನು ಸಂಪರ್ಕ ಮಾಡುತ್ತೇವೆ. ಏಜೆಂಟ್‌ಗಳು ಕಾರ್ಪೆಟ್ ಏರಿಯಾ, ಬಿಲ್ಟ್-ಅಪ್ ಏರಿಯಾ ಮತ್ತು ಸೂಪರ್-ಬಿಲ್ಟ್ ಅಪ್ ಏರಿಯಾದಂತಹ ಶಬ್ದಗಳನ್ನು ಬಳಸಿ ಹಲವಾರು ಆಸ್ತಿಗಳ ಬಗ್ಗೆ ನಮಗೆ ಮಾಹಿತಿ ನೀಡುತ್ತಾರೆ. ಕಾರ್ಪೆಟ್ ಪ್ರದೇಶವು ಗೋಡೆಗಳು ಇಲ್ಲದ ನಿಜವಾಗಿ ನಾವು ಬಳಕೆ ಮಾಡಬಹುದಾದ ಪ್ರದೇಶವಾಗಿದೆ. ಆದ್ದರಿಂದ ನಾವು ಆಸ್ತಿಯನ್ನು ಖರೀದಿಸುವ ಮೊದಲು ನಾವು ಎಷ್ಟು ಪ್ರದೇಶವನ್ನು ಮನೆ ಕಟ್ಟಲು ಬಳಕೆ ಮಾಡುತ್ತೇವೆ ಎಂದು ನೋಡಿಕೊಳ್ಳಬೇಕು. ಈ ಬಗ್ಗೆ ಖಚಿತತೆ ಇರಬೇಕು. ಬಿಲ್ಟ್-ಅಪ್ ಏರಿಯಾವು ಗೋಡೆಗಳನ್ನು ಒಳಗೊಂಡಿರುವ ಪ್ರದೇಶವಾಗಿದೆ. ಸೂಪರ್-ಬಿಲ್ಟ್ ಅಪ್ ಪ್ರದೇಶವು ಪಾರ್ಕಿಂಗ್, ಲಿಫ್ಟ್, ಲಾಬಿ ಮುಂತಾದ ಸಾಮಾನ್ಯ ಪ್ರದೇಶಗಳನ್ನು ಒಳಗೊಂಡಿರುತ್ತದೆ.

* ನಾವು ಮನೆಯನ್ನು ಒಳಗಡೆಯಿಂದ ನೋಡಿಕೊಳ್ಳುತ್ತೇವೆ. ರೂಮ್ ಹೇಗಿದೆ, ಬಾತ್‌ರೂಮ್ ಹೇಗಿದೆ, ಅಡುಗೆ ಮನೆ ಹೇಗಿದೆ ಎಂದು ನೋಡಿಕೊಳ್ಳುತ್ತೇವೆ. ಆದರೆ ನಾವು ಈ ಸಂದರ್ಭದಲ್ಲೇ ಮನೆಯ ಸುತ್ತಲಿನ ಪ್ರದೇಶವನ್ನು ಕೂಡಾ ನೋಡಿಕೊಳ್ಳಬೇಕು. ಸಮೀಪದಲ್ಲಿಯೇ ಮೆಟ್ರೋ ಇದೆಯೇ?, ರೈಲ್ವೇ ಸ್ಟೇಷನ್, ಆಸ್ಪತ್ರೆ, ಶಾಲೆಗಳು ಇದೆಯೇ? ಎಂದು ನೋಡಿಕೊಂಡು ಮನೆಯನ್ನು ಖರೀದಿ ಮಾಡಿ.

 

 ಕಾನೂನು ಸಲಹೆ ಪಡೆಯಿರಿ, ನೆರೆಹೊರೆಯವರನ್ನೂ ತಿಳಿದುಕೊಳ್ಳಿ
 

ಕಾನೂನು ಸಲಹೆ ಪಡೆಯಿರಿ, ನೆರೆಹೊರೆಯವರನ್ನೂ ತಿಳಿದುಕೊಳ್ಳಿ

* ನೀವು ಫ್ಲಾಟ್‌ನಲ್ಲಿ ಅಥವಾ ನೆರೆ ಹೊರೆ ಮನೆ ಇರುವ ಪ್ರದೇಶದಲ್ಲಿ ಮನೆಯನ್ನು ಖರೀದಿ ಮಾಡುವುದಾದರೆ, ಆ ಮನೆಯ ಸಮೀಪದಲ್ಲಿ ಯಾರು ಇದ್ದಾರೆ ಎಂದು ನೋಡಿಕೊಳ್ಳಿ. ಕೆಲವು ಸಾಮಾನ್ಯ ಸೌಕರ್ಯಗಳನ್ನು ಹಂಚಿಕೊಳ್ಳಲು ಸಾಧ್ಯವಾಗಲಿದೆಯೇ ಎಂದು ನೋಡಿಕೊಳ್ಳಿ. ನಿಮ್ಮಂತಹ ಮನಸ್ಥಿತಿ ಇರುವವರೇ ಸಮೀಪದಲ್ಲಿ ಇದ್ದರೆ ಮನಸ್ತಾಪ ಆಗಲಾರದು. ಆದ್ದರಿಂದ ಒಂದೇ ರೀತಿಯ ಮನಸ್ಥಿತಿ ಇರುವವರು ನಿಮ್ಮ ನೆರೆಹೊರೆಯವರು ಆಗಿದ್ದಾರೆಯೇ ಎಂದು ನೋಡಿಕೊಳ್ಳಿ.

* ನೀವು ಮನೆಯನ್ನು ಖರೀದಿ ಮಾಡಲು ಹಣವನ್ನು ಖರ್ಚು ಮಾಡುವ ಮುನ್ನ ಕಾನೂನು ಸಲಹೆಯನ್ನು ಪಡೆದುಕೊಳ್ಳಿ, ವಕೀಲರ ಮೂಲಕ ಎಲ್ಲಾ ದಾಖಲೆಯನ್ನು ಪರಿಶೀಲನೆ ಮಾಡಿಕೊಳ್ಳಿ. ಕೆಲವು ಸ್ಥಳದಲ್ಲಿ ಯಾವುದಾದರೂ ಆಸ್ತಿ ವಿವಾದ ಇರುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲಾ ಪ್ರದೇಶವನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ. ಆದ್ದರಿಂದ ಈ ಬಗ್ಗೆ ಸರಿಯಾದ ಮಾಹಿತಿ ಇರುವವರೊಂದಿಗೆ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳಿ.

 

 ಡೀಲರ್‌ಗಳ ಜಾಲಕ್ಕೆ ಬೀಳದಿರಿ, ನೀವೇ ಪರಿಶೀಲಿಸಿ

ಡೀಲರ್‌ಗಳ ಜಾಲಕ್ಕೆ ಬೀಳದಿರಿ, ನೀವೇ ಪರಿಶೀಲಿಸಿ

* ಡೀಲರ್‌ಗಳು ಎಂದಿಗೂ ನೀವು ಮನೆಯನ್ನು ಖರೀದಿ ಮಾಡುವಂತೆ ಮನವೊಲಿಸುತ್ತಾರೆ. ಎಲ್ಲಾ ಸೌಕರ್ಯಗಳು ಇದೇ ಅಥವಾ ಎಲ್ಲಾ ಸೌಕರ್ಯ ಕಲ್ಪಿಸಲಾಗುತ್ತದೆ ಎಂದು ಮನವೊಲಿಸುತ್ತಾರೆ. ಆದರೆ ನೀವು ಖರೀದಿ ಮಾಡಲು ಮುಂದಾಗಿರುವ ಮನೆಗೆ ಭೇಟಿ ನೀಡಿ ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಬೇಕು. ಅಲ್ಲಿಯೇ ಸಮೀಪದಲ್ಲಿ ಇರುವ ಅಥವಾ ಫ್ಲಾಟ್‌ನಲ್ಲಿ ವಾಸವಿರುವ ಜನರನ್ನು ಸಂಪರ್ಕ ಮಾಡಿ ಮಾಹಿತಿ ಪಡೆದುಕೊಳ್ಳಿ. ನೀರು, ವಿದ್ಯುತ್ ಸಂಪರ್ಕ ಸರಿಯಾಗಿದೆಯೇ ಎಂದು ಪರಿಶೀಲಿಸಿ. ಸ್ವಿಮಿಂಗ್ ಪೂಲ್‌ಗಳು ಇದ್ದರೆ ಅದನ್ನು ಸರಿಯಾಗಿ ಸ್ವಚ್ಛ ಮಾಡಲಾಗುತ್ತದೆಯೇ ಎಂದು ತಿಳಿದುಕೊಳ್ಳಿ.

* ಭವಿಷ್ಯದಲ್ಲಿ ಮಹಡಿ ಹಾಕಲು ಅಥವಾ ಮನೆಯನ್ನು ಕಟ್ಟಡವನ್ನಾಗಿ ಮಾಡಲು ಸಾಧ್ಯವಾಗಲಿದೆಯೇ ಎಂದು ನೋಡಿಕೊಂಡು ಮನೆಯನ್ನು ಖರೀದಿ ಮಾಡಿ. ಹಾಗೆಯೆ ಮನೆಯ ಸಮೀಪದಲ್ಲಿ ಸಣ್ಣ ಮನೆ ಇರುವುದನ್ನು ನೋಡಿಕೊಳ್ಳಿ. ನಿಮ್ಮದು ಫ್ಲಾಟ್ ಆಗಿದ್ದರೆ ಸಮೀಪವೇ ದೊಡ್ಡ ಕಟ್ಟಡವಿದ್ದರೆ ನಿಮಗೆ ಸುತ್ತಲ ವಾತಾವರಣ ನೋಡಲು ಸಾಧ್ಯವಾಗದು. ಕಟ್ಟಡ ಅಡ್ಡಲಾಗುವ ಸಾಧ್ಯತೆ ಇದೆ.

 

 ಆಸ್ತಿ ಖರೀದಿ ವೆಚ್ಚ, ತೆರಿಗೆ ಎಲ್ಲವನ್ನೂ ಪರಿಶೀಲಿಸಿ

ಆಸ್ತಿ ಖರೀದಿ ವೆಚ್ಚ, ತೆರಿಗೆ ಎಲ್ಲವನ್ನೂ ಪರಿಶೀಲಿಸಿ

* ನಿಮ್ಮ ಬಜೆಟ್‌ಗೆ ತಕ್ಕುದಾದ ಆಸ್ತಿಯೇ ಎಂದು ಮೊದಲು ನೋಡಿಕೊಳ್ಳಿ. ನಿರ್ವಹಣಾ ವೆಚ್ಚ, ಇತರೆ ಶುಲ್ಕ, ಆಸ್ತಿ ತೆರಿಗೆ ಎಲ್ಲವನ್ನು ನೋಡಿಕೊಂಡು ಮನೆಯನ್ನು ಖರೀದಿ ಮಾಡಿ

* ನೀವು ಮನೆ ಖರೀದಿ ಮಾಡುವ ಮುನ್ನ ಗೃಹ ಸಾಲದ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಕಡಿಮೆ ಬಡ್ಡಿದರದಲ್ಲಿ ಎಲ್ಲಿ ಸಾಲ ನೀಡಲಾಗುತ್ತದೆಯೇ ಅಲ್ಲಿ ಸಾಲವನ್ನು ಪಡೆಯಿರಿ. ಹಾಗೆಯೇ ಮನೆಯ ಮಾಲೀಕರು ಯಾರು, ಅವರೊಂದಿಗೆ ವ್ಯವಹಾರ ಸರಿಯಾಗಿ ನಡೆಸಲು ಸಾಧ್ಯವೇ ಎಂದು ನೋಡಿಕೊಳ್ಳಿ.
 ಆಸ್ತಿಯ ವೆಚ್ಚ, ಸುತ್ತಮುತ್ತಲಿನ ಪ್ರದೇಶದ ಆಸ್ತಿ ವೆಚ್ಚ ತಿಳಿಯಿರಿ

ಆಸ್ತಿಯ ವೆಚ್ಚ, ಸುತ್ತಮುತ್ತಲಿನ ಪ್ರದೇಶದ ಆಸ್ತಿ ವೆಚ್ಚ ತಿಳಿಯಿರಿ

* ಯಾವುದೇ ಸಂಘರ್ಷವನ್ನು ತಡೆಯುವ ನಿಟ್ಟಿನಲ್ಲಿ ಮೊದಲು ಡೀಲರ್‌ ಜೊತೆ ಆಸ್ತಿಯ ಮೊತ್ತದ ಬಗ್ಗೆ ಮಾತನಾಡಿಕೊಳ್ಳಿ. ಯಾಕೆಂದರೆ ಕೊನೆಗೆ ಆಸ್ತಿ ಖರೀದಿ ವೆಚ್ಚ ಅಧಿಕವಾದರೆ ನಿಮಗೆ ಹೊರೆಯಾಗಬಹುದು.

* ನೀವು ಖರೀದಿ ಮಾಡುವ ಮನೆ ಅಥವಾ ಆಸ್ತಿಯ ಸುತ್ತಮುತ್ತಲಿನ ಪ್ರದೇಶ ಆಸ್ತಿಯ ಮೌಲ್ಯವನ್ನು ಕೂಡಾ ತಿಳಿದುಕೊಳ್ಳಿ. ಹಾಗೆಯ ನೀವು ಖರೀದಿ ಮಾಡಲಿರುವ ಮನೆ ನಿರ್ಮಾಣದ ಗುಣಮಟ್ಟವನ್ನು ಕೂಡಾ ತಿಳಿದುಕೊಳ್ಳಿ.

English summary

Buying a House? Key Things to Keep in Mind Before Finalising Your New Property in Kannada

Buying a House? Here we have compiled for you key things that will help you make an informed decision before buying a property. Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X