For Quick Alerts
ALLOW NOTIFICATIONS  
For Daily Alerts

CA Day 2022: ಸಿಎ ದಿನ: ಇತಿಹಾಸ, ಆರಂಭ, ಪ್ರಾಮುಖ್ಯತೆ, ಇಲ್ಲಿದೆ ಮಾಹಿತಿ

|

ದೇಶದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆನ್ಸ್ ಆಫ್ ಇಂಡಿಯಾ (ಐಸಿಎಐ) ಅನ್ನು ಸ್ಥಾಪನೆ ಮಾಡಿದ ದಿನವಾದ ಜುಲೈ 1ರಂದು ಪ್ರತಿ ವರ್ಷ ಸಿಎ ದಿನ ಅಥವಾ ಚಾರ್ಟೆಡ್ ಅಕೌಂಟೆಂಟ್ ದಿನ ಎಂದು ಆಚರಣೆ ಮಾಡಲಾಗುತ್ತದೆ. ಹಾಗೆಯೇ ಸಿಎಂ ಸಂಸ್ಥಾಪನಾ ದಿನ ಎಂದು ಕೂಡಾ ಕರೆಯಲಾಗುತ್ತದೆ.

 

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆನ್ಸ್ ಆಫ್ ಇಂಡಿಯಾ (ಐಸಿಎಐ) ಈ ವಾರ್ಷಿಕ ಸಂಭ್ರಮವನ್ನು ಆಯೋಜನೆ ಮಾಡುತ್ತದೆ. ತಮ್ಮ ಕಾರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ, ಸ್ಪೂರ್ತಿದಾಯಕ ಚಾರ್ಟೆಡ್ ಅಕೌಂಟೆಂಟ್‌ಗಳ ಸ್ಮರಣೆಗಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

ಮನೆ ಕಟ್ಟುವುದಕ್ಕೆ ಎಷ್ಟು ಖರ್ಚು ಮಾಡಬೇಕು? ಇಲ್ಲಿದೆ ಬಜೆಟ್ ಲೆಕ್ಕಾಚಾರಮನೆ ಕಟ್ಟುವುದಕ್ಕೆ ಎಷ್ಟು ಖರ್ಚು ಮಾಡಬೇಕು? ಇಲ್ಲಿದೆ ಬಜೆಟ್ ಲೆಕ್ಕಾಚಾರ

ನಾವು ಸಿಎ ದಿನ ಅಥವಾ ಚಾರ್ಟೆಡ್ ಅಕೌಂಟೆಂಟ್ ದಿನವನ್ನು ಆಚರಣೆ ಮಾಡುವುದಕ್ಕೂ ಮೊದಲು ಈ ದಿನದ ಮಹತ್ವ, ಇತಿಹಾಸ, ಪ್ರಾಮುಖ್ಯತೆ ಮೊದಲಾದ ಮಾಹಿತಿಯನ್ನು ತಿಳಿಯುವುದು ಮುಖ್ಯ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಸಿಎ ಸಂಸ್ಥಾಪನ ದಿನ ಯಾವಾಗ ಆಚರಣೆ?

ಸಿಎ ಸಂಸ್ಥಾಪನ ದಿನ ಯಾವಾಗ ಆಚರಣೆ?

2022ರಲ್ಲಿ ಜುಲೈ 1ರಂದು ಸಿಎ ಸಂಸ್ಥಾಪನ ದಿನವನ್ನು ಆಚರಣೆ ಮಾಡಲಾಗುತ್ತದೆ. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆನ್ಸ್ ಆಫ್ ಇಂಡಿಯಾ (ಐಸಿಎಐ) ಅನ್ನು ಸ್ಥಾಪನೆ ಮಾಡಿ 74 ವರ್ಷಗಳು ಆಗಿದ್ದು, ಅದರ ಪ್ರತೀಕವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಐಸಿಎಐ 1949, ಜುಲೈ 1ರಂದು ಆರಂಭ ಮಾಡಲಾಗಿದೆ. ಸಂಸತ್ತು ಸಿಎ ಅನ್ನು ಒಂದು ವೃತ್ತಿಯಾಗಿ ಪರಿಗಣನೆ ಮಾಡಿದ್ದನ್ನು ಈ ದಿನವು ಸಾರುತ್ತದೆ.

 ಸಿಎ ದಿನದ ಮಹತ್ವ

ಸಿಎ ದಿನದ ಮಹತ್ವ

ದೇಶದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆನ್ಸ್ ಆಫ್ ಇಂಡಿಯಾ (ಐಸಿಎಐ) ಸ್ಥಾಪನೆಯಾಗಿ ಇಷ್ಟು ಸಮಯ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರತೀಕವಾಗಿ ಈ ಸಿಎ ದಿನವನ್ನು ಆಚರಣೆ ಮಾಡಲಾಗುತ್ತದೆ. ಐಸಿಎಐ ವಿಶ್ವದ ಎರಡನೇ ಅತೀ ದೊಡ್ಡ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯಾಗಿದೆ. ಭಾರತದಲ್ಲಿ ಅತೀ ದೊಡ್ಡ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯಾದ ಐಸಿಎಐ ಭಾರತ ಸರ್ಕಾರದ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ವಿಶ್ವದಲ್ಲೇ ಅತೀ ದೊಡ್ಡ ವೃತ್ತಿಪರ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್ (ಎಐಸಿಪಿಎ) ಆಗಿದೆ.

 ಅತೀ ಕಠಿಣ ವೃತ್ತಿ ಸಿಎ
 

ಅತೀ ಕಠಿಣ ವೃತ್ತಿ ಸಿಎ

ಭಾರತದಲ್ಲಿ ಚಾರ್ಟೆಡ್ ಅಕೌಂಟೆಂಟ್‌ ಆಗುವುದು ಅತೀ ಕಠಿಣ ವೃತ್ತಿಯಾಗಿದೆ. ಓರ್ವ ವ್ಯಕ್ತಿಯು ವೃತ್ತಿಪರ ಸಿಎ ಆಗಿ ಹೊರಹೊಮ್ಮಬೇಕಾದರೆ ಹಲವಾರು ಮಗ್ಗಲುಗಳನ್ನು ದಾಟಿ ಬರಬೇಕಾಗುತ್ತದೆ. ಹಲವಾರು ಸಂಸ್ಥೆಗಳು ವೃತ್ತಿಪರ ಸಿಎಗೆ ಆದ್ಯತೆ ನೀಡುತ್ತಾರೆ. ಪ್ರಸ್ತುತ ಸಿಎ ಆಗಬೇಕಾದರೆ ಹಲವಾರು ಪರೀಕ್ಷೆಗಳನ್ನು ಬರೆಯುವುದು ಮುಖ್ಯವಾಗಿದೆ. ಈ ಎಲ್ಲಾ ಕಷ್ಟಗಳನ್ನು ದಾಟಿ ಬಂದವರ ಸಾಧನೆಯನ್ನು ಕೂಡಾ ಈ ದಿನ ಸ್ಮರಣೆ ಮಾಡಲಾಗುತ್ತದೆ.

English summary

CA Day or Chartered Accountant Day 2022 Date, Origin, History, Significance in kannada

CA Day or Chartered Accountant Day 2022 Date, Origin, History, Significance & Wishes in kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X