For Quick Alerts
ALLOW NOTIFICATIONS  
For Daily Alerts

ಆರ್‌ಬಿಐಗೂ ಮುನ್ನ ಸಾಲದ ಬಡ್ಡಿದರ ಹೆಚ್ಚಿಸಿದ ಕೆನರಾ ಬ್ಯಾಂಕ್: ನೂತನ ದರ ಪರಿಶೀಲಿಸಿ

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಬುಧವಾರ ಸಾಲದ ದರವನ್ನು ಏರಿಕೆ ಮಾಡುವ ನಿರೀಕ್ಷೆ ಇದೆ. ಈ ನಡುವೆ ಕೆನರಾ ಬ್ಯಾಂಕ್ ತನ್ನ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಈ ನೂತನ ಬಡ್ಡಿದರವು ನಾಳೆಯಿಂದಲೇ (ಜೂನ್ 7) ಜಾರಿಗೆ ಬರಲಿದೆ.

 

ಬ್ಯಾಂಕ್ ಸಾಲದ ಬಡ್ಡಿದರವನ್ನು ಹೆಚ್ಚಖ ಮಾಡುವುದರಿಂದಾಗಿ ಇಎಂಐ ಕೂಡಾ ಹೆಚ್ಚಳವಾಗಲಿದೆ. ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಒಂದು ವರ್ಷದ ಅವಧಿಗೆ ಕನಿಷ್ಠ ವೆಚ್ಚದ ನಿಧಿ ಆಧಾರಿತ ಸಾಲ ದರವನ್ನು (ಎಂಸಿಎಲ್‌ಆರ್) ಅನ್ನು ಶೇಕಡ 0.05 ರಷ್ಟು ಅಥವಾ 5 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದರಿಂದಾಗಿ ಬಡ್ಡಿದರವು 7.40 ಕ್ಕೆ ಏರಿದೆ.

 

ರೆಪೋ ದರ ಮತ್ತೆ ಹೆಚ್ಚಳಕ್ಕೆ ಸಜ್ಜು: ಸಾಲದ ಇಎಂಐ ಹೊರೆ ಏರಿಕೆರೆಪೋ ದರ ಮತ್ತೆ ಹೆಚ್ಚಳಕ್ಕೆ ಸಜ್ಜು: ಸಾಲದ ಇಎಂಐ ಹೊರೆ ಏರಿಕೆ

ಬ್ಯಾಂಕ್ 6 ತಿಂಗಳ ಅವಧಿಯ ಎಂಸಿಎಲ್‌ಆರ್ ದರವನ್ನು ಶೇಕಡಾ 7.30 ರಿಂದ ಶೇಕಡಾ 7.35 ಕ್ಕೆ ಏರಿಸಿದೆ. ಹೊಸ ದರಗಳು ಜೂನ್ 7 ರಿಂದ ಜಾರಿಗೆ ಬರಲಿವೆ ಎಂದು ಕೆನರಾ ಬ್ಯಾಂಕ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಇನ್ನು ಆರ್‌ಎಲ್‌ಎಲ್‌ಆರ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 7.30 ಶೇಕಡವೇ ಇದೆ.

ಸಾಲದ ಬಡ್ಡಿದರ ಹೆಚ್ಚಿಸಿದ ಕೆನರಾ ಬ್ಯಾಂಕ್: ನೂತನ ದರ ಪರಿಶೀಲಿಸಿ

ಕೆನರಾ ಬ್ಯಾಂಕ್‌ನಲ್ಲಿ ಬಡ್ಡಿದರ ಎಷ್ಟು ಏರಿಕೆ?

ಒಂದು ತಿಂಗಳ ಎಂಸಿಎಲ್‌ಆರ್: ಈ ಹಿಂದಿನ ದರ 6.65 %, ನೂತನ 6.65 %
ಮೂರು ತಿಂಗಳ ಎಂಸಿಎಲ್‌ಆರ್: ಈ ಹಿಂದಿನ ದರ 6.95 %, ನೂತನ 6.95 %
ಆರು ತಿಂಗಳ ಎಂಸಿಎಲ್‌ಆರ್: ಈ ಹಿಂದಿನ ದರ 7.30 %, ನೂತನ 7.35 %
ಒಂದು ವರ್ಷದ ಎಂಸಿಎಲ್‌ಆರ್: ಈ ಹಿಂದಿನ ದರ 7.35 %, ನೂತನ 7.40 %

ಕರೂರ್ ವೈಶ್ಯ ಬ್ಯಾಂಕ್ ಸಾಲದ ಬಡ್ಡಿದರ ಏರಿಕೆ

ಇನ್ನು ಕರೂರ್ ವೈಶ್ಯ ಬ್ಯಾಂಕ್ ಕೂಡಾ ಸೋಮವಾರ ತಮ್ಮ ಸಾಲದ ದರಗಳನ್ನು ಪರಿಷ್ಕರಿಸಿರುವುದಾಗಿ ಘೋಷಿಸಿವೆ. ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ದರವನ್ನು (ಬಿಪಿಎಲ್‌ಆರ್) 40 ಬೇಸಿಸ್ ಪಾಯಿಂಟ್‌ಗಳಿಂದ 13.75 ಶೇಕಡಾಕ್ಕೆ ಮತ್ತು ಮೂಲ ದರವನ್ನು ಶೇಕಡಾ 8.75 ಕ್ಕೆ ಪರಿಷ್ಕರಿಸಲಾಗಿದೆ ಎಂದು ಬ್ಯಾಂಕ್ ಹೇಳಿದೆ.

English summary

Canara Bank Raise Lending Rates: Check Here

Canara Bank Raise Lending Rates: Here is a detail. Take a look.
Story first published: Monday, June 6, 2022, 19:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X