For Quick Alerts
ALLOW NOTIFICATIONS  
For Daily Alerts

ಹೊಸ ನಿಯಮದ ಪ್ರಕಾರ ದಿನಕ್ಕೆ ಗರಿಷ್ಠ 10,000 ರು. ಮಾತ್ರ ನಗದು ವ್ಯವಹಾರ

|

ಕೇಂದ್ರೀಯ ನೇರ ತೆರಿಗೆ ಮಂಡಳಿಯಿಂದ ಆದಾಯ ತೆರಿಗೆ ನಿಯಮ, 1962ಕ್ಕೆ ತಿದ್ದುಪಡಿ ತರಲಾಗಿದೆ. ಅದರ ಪ್ರಕಾರ, ಯಾವುದೇ ವ್ಯಕ್ತಿಗೆ ಒಂದು ದಿನದಲ್ಲಿ ನೀಡಬಹುದಾದ ಗರಿಷ್ಠ ನಗದು ಪ್ರಮಾಣವನ್ನು ಇಳಿಕೆ ಮಾಡಲಾಗಿದೆ. ಒಬ್ಬ ವ್ಯಕ್ತಿಗೆ ಒಂದು ದಿನದಲ್ಲಿ ಸರಾಸರಿ 20,000ಕ್ಕಿಂತ ಹೆಚ್ಚು ನಗದು ಪಾವತಿ ಯಾವಾಗ ಮಾಡಬಹುದು ಎಂಬುದನ್ನು ಆದಾಯ ತೆರಿಗೆ ನಿಯಮ 6DDಯಲ್ಲಿ ವಿವರಿಸಲಾಗಿದೆ.

ಒಂದೋ ಅಕೌಂಟ್ ಪೇಯಿ ಬ್ಯಾಂಕ್ ಚೆಕ್ ನೀಡಬೇಕು ಅಥವಾ ಅಕೌಂಟ್ ಪೇಯಿ ಬ್ಯಾಂಕ್ ಡ್ರಾಫ್ಟ್ ನೀಡಬೇಕು. ತೆರಿಗೆ ನಿಯಮದ ಪ್ರಕಾರ, ಇದೀಗ ಗರಿಷ್ಠ ನಗದು ಮೊತ್ತ 10,000 ರುಪಾಯಿ ಮಾತ್ರ ನೀಡಬಹುದಾಗಿದೆ.

ಅನಿವಾಸಿ ಭಾರತೀಯರಿಗೆ ಭಾರತದಲ್ಲಿ ತೆರಿಗೆ: ನಿರ್ಮಲಾ ಸ್ಪಷ್ಟನೆಅನಿವಾಸಿ ಭಾರತೀಯರಿಗೆ ಭಾರತದಲ್ಲಿ ತೆರಿಗೆ: ನಿರ್ಮಲಾ ಸ್ಪಷ್ಟನೆ

ತಿದ್ದುಪಡಿಯಾದ 6DD ನಿಯಮ ಹೇಳುವ ಪ್ರಕಾರ, 6ABBA ವಿವರಿಸುವಂತೆ ಎಲೆಕ್ಟ್ರಾನಿಕ್ ವಿಧಾನದ ಮೂಲಕ ಅಥವಾ ಬ್ಯಾಂಕ್ ಖಾತೆಯ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ ಮೂಲಕ, ಅಕೌಂಟ್ ಪೇಯಿ ಬ್ಯಾಂಕ್ ಡ್ರಾಫ್ಟ್ ಅಥವಾ ಅಕೌಂಟ್ ಪೇಯಿ ಚೆಕ್ ಮೂಲಕ ಹಣ ನೀಡಬಹುದು. ಇಲ್ಲದಿದ್ದಲ್ಲಿ ಸರಾಸರಿ ಮೊತ್ತ 10,000 ರುಪಾಯಿ ನಗದು ಮೊತ್ತಕ್ಕಿಂತ ಹೆಚ್ಚಿನದನ್ನು ಒಬ್ಬ ವ್ಯಕ್ತಿಗೆ ಒಂದು ದಿನದಲ್ಲಿ ನೀಡಬಾರದು.

ಹೊಸ ನಿಯಮ ಪ್ರಕಾರ ದಿನಕ್ಕೆ ಗರಿಷ್ಠ 10,000 ರು. ಮಾತ್ರ ನಗದು ವ್ಯವಹಾರ

ಸೆಪ್ಟೆಂಬರ್ 1. 2019ರಿಂದ 6ABBA ವಿವರಿಸಿರುವಂತೆ ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ವಿಧಾನದಲ್ಲಿ ಪಾವತಿ ಅಂದರೆ:
ಕ್ರೆಡಿಟ್ ಕಾರ್ಡ್

ಡೆಬಿಟ್ ಕಾರ್ಡ್

ನೆಟ್ ಬ್ಯಾಂಕಿಂಗ್

ಐಎಂಪಿಎಸ್

ಯುಪಿಐ

ಆರ್ ಟಿಜಿಎಸ್

ಎನ್ ಇಎಫ್ ಟಿ

ಬಿಎಚ್ ಐಎಂ ಮೂಲಕ ಪಾವತಿ ಮಾಡುವಂಥ ವಿಧಾನ.

ಕೇಂದ್ರೀಯ ನೇರ ತೆರಿಗೆ ಮಂಡಳಿಯು ಆದಾಯ ತೆರಿಗೆ ನಿಯಮ 1962ಕ್ಕೆ ತಿದ್ದುಪಡಿ ತಂದಿದೆ. ಹೊಸ ನಿಯಮವನ್ನು ಆದಾಯ ತೆರಿಗೆ (ಮೂರನೇ ತಿದ್ದುಪಡಿ) ನಿಯಮ, 2020 ಎಂದು ಕರೆಯಲಾಗಿದೆ. ಸರಳವಾಗಿ ಹೇಳಬೇಕು ಅಂದರೆ, ಎಲ್ಲೆಲ್ಲಿ ಅನ್ವಯ ಆಗುತ್ತದೋ ಅಲ್ಲೆಲ್ಲ ಎಲೆಕ್ಟ್ರಾನಿಕ್ ವಿಧಾನದಲ್ಲಿ ಬಿಟ್ಟು ಬೇರೆ ಯಾವುದೇ ವಿಧಾನದಲ್ಲಿ ಅಂದರೆ, ನಗದು ಪಾವತಿ ಮಾಡುವುದಾದರೆ ಒಂದು ದಿನಕ್ಕೆ 10,000 ರುಪಾಯಿಗೆ ನಿಗದಿ ಮಾಡಲಾಗಿದೆ.

English summary

Cash Payment Limit Per Day Reduced To 10 Thousand Rupees

CBDT has now reduced cash payment limit per day to Rs 10,000. Here is the complete details of the story.
Story first published: Monday, February 3, 2020, 19:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X