For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2020: ಆದಾಯ ತೆರಿಗೆಯಲ್ಲಿನ ಬದಲಾವಣೆಯ ಸಂಪೂರ್ಣ ಮಾಹಿತಿ

|

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ನೇರ ತೆರಿಗೆ ದರಗಳಲ್ಲಿ ಏನೆಲ್ಲಾ ಬದಲಾವಣೆ ತರಲಿದ್ದಾರೆ ಎಂದು ಇಡೀ ಭಾರತವೇ ಎದುರು ನೋಡುತ್ತಿತ್ತು. ಅದರಲ್ಲೂ ತೆರಿಗೆದಾರರು ಅಂದುಕೊಂಡಂತೆ ಈ ಬಾರಿ ಭರ್ಜರಿ ಕೊಡುಗೆಯನ್ನೇ ನೀಡಿದ್ದಾರೆ. ಆದಾಯ ತೆರಿಗೆ ದರಗಳಲ್ಲಿ ಮಹತ್ತರ ಬದಲಾವಣೆ ತರಲಾಗಿದೆ.

ಪ್ರಸ್ತುತ ಇರುವ ಆದಾಯ ತೆರಿಗೆ ದರಗಳನ್ನು ಬದಲಾಯಿಸಿದ್ದು, ಎಷ್ಟು ಆದಾಯಕ್ಕೆ ಎಷ್ಟು ತೆರಿಗೆ ವಿಧಿಸಲಾಗಿದೆ ಹಾಗೂ ಏನೆಲ್ಲಾ ಬದಲಾವಣೆ ತರಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

5 ಲಕ್ಷದವರೆಗೆ ಆದಾಯ : ಯಾವುದೇ ತೆರಿಗೆ ಇಲ್ಲ

5 ಲಕ್ಷದವರೆಗೆ ಆದಾಯ : ಯಾವುದೇ ತೆರಿಗೆ ಇಲ್ಲ

ಕೇಂದ್ರ ಸರ್ಕಾರ ಮಧ್ಯಮ ವರ್ಗದ ಕುಟುಂಬಗಳಿಗೆ ತೆರಿಗೆ ಅನುಕೂಲವಾಗಲೆಂದು ಆರಂಭಿಕ ಆದಾಯ ತೆರಿಗೆ ದರಗಳಲ್ಲಿ ಇಳಿಸಿದೆ. ಪ್ರಸ್ತುತ 2.5 ಲಕ್ಷದಿಂದ 5 ಲಕ್ಷದವರೆಗೆ ಆದಾಯ ಪಡೆಯುವವರಿಗೆ 5 ಪರ್ಸೆಂಟ್ ತೆರಿಗೆಯನ್ನು ಕಟ್ಟಬೇಕಿತ್ತು. ಆದರೆ ಹೊಸ ತೆರಿಗೆ ಅನ್ವಯ ಇನ್ಮುಂದೆ 5 ಲಕ್ಷದವರೆಗೆ ಆದಾಯ ಪಡೆಯುವವರಿಗೆ ಯಾವುದೇ ತೆರಿಗೆ ಅನ್ವಯಿಸುವುದಿಲ್ಲ.

5 ರಿಂದ 7.5  ಲಕ್ಷದವರೆಗೆ ಆದಾಯ :  10 ಪರ್ಸೆಂಟ್ ತೆರಿಗೆ

5 ರಿಂದ 7.5 ಲಕ್ಷದವರೆಗೆ ಆದಾಯ : 10 ಪರ್ಸೆಂಟ್ ತೆರಿಗೆ

5 ರಿಂದ 7.5 ಲಕ್ಷದವರೆಗೆ ಆದಾಯ ಪಡೆಯುವವರು ಪ್ರಸ್ತುತ 20 ಪರ್ಸೆಂಟ್ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿತ್ತು. ಆದರೆ ಈ ತೆರಿಗೆ ದರಗಳಲ್ಲಿ 2020ರ ಕೇಂದ್ರ ಬಜೆಟ್‌ನಲ್ಲಿ 10 ಪರ್ಸೆಂಟ್ ಇಳಿಕೆ ಮಾಡಲಾಗಿದೆ. ಹೀಗಾಗಿ 5 ರಿಂದ 7.5 ಲಕ್ಷದವರೆಗೆ ಆದಾಯ ಪಡೆಯುವವರು 10 ಪರ್ಸೆಂಟ್‌ ನಷ್ಟು ತೆರಿಗೆಯನ್ನು ಪಾವತಿಸಬೇಕಿದೆ.

 7.5 ರಿಂದ 10 ಲಕ್ಷದವರೆಗೆ ಆದಾಯ : 15 ಪರ್ಸೆಂಟ್ ತೆರಿಗೆ

7.5 ರಿಂದ 10 ಲಕ್ಷದವರೆಗೆ ಆದಾಯ : 15 ಪರ್ಸೆಂಟ್ ತೆರಿಗೆ

7.5 ರಿಂದ 10 ಲಕ್ಷದವರೆಗೆ ಆದಾಯ ಪಡೆಯುವ ಜನರು ಪ್ರಸ್ತುತ 20 ಪರ್ಸೆಂಟ್ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿತ್ತು. ಈ ದರಗಳಲ್ಲಿ 5 ಪರ್ಸೆಂಟ್‌ನಷ್ಟು ಇಳಿಕೆಯಾಗಿದ್ದು, ಇನ್ಮುಂದೆ 15 ಪರ್ಸೆಂಟ್‌ನಷ್ಟೇ ತೆರಿಗೆ ಪಾವತಿಸುವ ಅವಕಾಶ ಒದಗಿ ಬಂದಿದೆ.

10 ರಿಂದ 12.5 ಲಕ್ಷದವರೆಗೆ ಆದಾಯ : 20 ಪರ್ಸೆಂಟ್ ತೆರಿಗೆ

10 ರಿಂದ 12.5 ಲಕ್ಷದವರೆಗೆ ಆದಾಯ : 20 ಪರ್ಸೆಂಟ್ ತೆರಿಗೆ

10 ರಿಂದ 12.5 ಲಕ್ಷದವರೆಗೆ ಆದಾಯ ಗಳಿಸುವ ಜನರು ಗರಿಷ್ಟ ಆದಾಯ ತೆರಿಗೆ ದರವಾದ 30 ಪರ್ಸೆಂಟ್‌ನಷ್ಟು ತೆರಿಗೆಯನ್ನು ಪಾವತಿಸುತ್ತಿದ್ದರು. ಆದರೆ ಈ ತೆರಿಗೆ ದರಗಳಲ್ಲೂ ಬದಲಾವಣೆ ತರಲಾಗಿದ್ದು 30 ಪರ್ಸೆಂಟ್‌ನಿಂದ 20 ಪರ್ಸೆಂಟ್‌ಗೆ ತೆರಿಗೆ ಇಳಿಸಲಾಗಿದೆ. ಈ ಮೂಲಕ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರಿಗೆ 10 ಪರ್ಸೆಂಟ್ ನಷ್ಟು ತೆರಿಗೆ ಹಣ ಉಳಿತಾಯವಾಗಲಿದೆ.

12.5 ರಿಂದ 15 ಲಕ್ಷದವರೆಗೆ ಆದಾಯ: 25 ಪರ್ಸೆಂಟ್ ತೆರಿಗೆ

12.5 ರಿಂದ 15 ಲಕ್ಷದವರೆಗೆ ಆದಾಯ: 25 ಪರ್ಸೆಂಟ್ ತೆರಿಗೆ

12.5 ರಿಂದ 15 ಲಕ್ಷದವರೆಗೆ ಆದಾಯಗಳಿಸವವರಿಗೂ ಕೊಂಚ ಆದಾಯ ತೆರಿಗೆ ದರ ತಗ್ಗಿದೆ. ಈ ಸ್ಲ್ಯಾಬ್‌ನಲ್ಲಿ ಆದಾಯ ಗಳಿಸುವವರು 30 ಪರ್ಸೆಂಟ್‌ನಷ್ಟು ತೆರಿಗೆ ಪಾವತಿಸುತ್ತಿದ್ದರು. ಆದರೆ ಇದೀಗ 5 ಪರ್ಸೆಂಟ್ ತೆರಿಗೆ ಇಳಿಕೆಯಾಗಿದ್ದು, ಆದಾಯದ ಮೇಲೆ 25 ಪರ್ಸೆಂಟ್ ತೆರಿಗೆ ಪಾವತಿಸಬೇಕಿದೆ.

15  ಲಕ್ಷ ಮೇಲ್ಪಟ್ಟು ಆದಾಯ: 30 ಪರ್ಸೆಂಟ್ ತೆರಿಗೆ

15 ಲಕ್ಷ ಮೇಲ್ಪಟ್ಟು ಆದಾಯ: 30 ಪರ್ಸೆಂಟ್ ತೆರಿಗೆ

15 ಲಕ್ಷ ಮೇಲ್ಪಟ್ಟು ಎಷ್ಟೇ ಆದಾಯ ಗಳಿಸುವವರು ಪ್ರಸ್ತುತ 30 ಪರ್ಸೆಂಟ್ ಆದಾಯ ತೆರಿಗೆ ಪಾವತಿಸುತ್ತಿದ್ದರು. ಈ ತೆರಿಗೆ ದರದಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ತರಲು ಮನಸ್ಸು ಮಾಡಿಲ್ಲ. ಹೀಗಾಗಿ 15 ಲಕ್ಷ ಮೇಲ್ಪಟ್ಟು ಆದಾಯ ಗಳಿಸುವವರು ಈ ಹಿಂದಿನಂತೆ 30 ಪರ್ಸೆಂಟ್ ತೆರಿಗೆಯನ್ನು ಪಾವತಿಸಬೇಕಿದೆ.

English summary

Central Budget 2020: New Income Tax Slabs Here

Central Government reduced current Income tax , up to 5 Lakhs income tax free for tax payers. new simplified personal income tax here
Story first published: Saturday, February 1, 2020, 15:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X