For Quick Alerts
ALLOW NOTIFICATIONS  
For Daily Alerts

ಹತ್ತಿರ ಬಂದಿದೆ ಐಟಿಆರ್ ಫೈಲಿಂಗ್ ಕೊನೆಯ ದಿನ: ಯಾವೆಲ್ಲ ದಾಖಲೆ ಬೇಕು?

|

2021-2022 ಹಣಕಾಸು ವರ್ಷದ ಆದಾಯ ತೆರಿಗೆ ಫೈಲಿಂಗ್ ಕೊನೆಯ ದಿನಾಂಕ 2022ರ ಜುಲೈ 31 ಆಗಿದೆ. ಯಾವುದೇ ಸಂಸ್ಥೆಯ ಮಾಲೀಕರು, ಹಿಂದೂ ಅವಿಭಜಿತ ಕುಟುಂಬ ಮತ್ತು ಸಂಬಳ ಪಡೆಯುವ ಉದ್ಯೋಗಿಗಳು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವ ಕೊನೆಯ ದಿನಾಂಕ ಜುಲೈ 31 ಆಗಿದೆ.

ವಾರ್ಷಿಕವಾಗಿ ನೀವು ಎಷ್ಟು ಆದಾಯವನ್ನು ಪಡೆಯುತ್ತೀರಿ ಎಂಬುವುದನ್ನು ಅವಲಂಬಿಸಿ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಸಂಬಳ, ವ್ಯಾಪಾರ ಲಾಭ, ಹೂಡಿಕೆ ಲಾಭ ಇತ್ಯಾದಿಯನ್ನು ಅವಲಂಭಿಸಿ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಲಾಗುತ್ತದೆ.

ITR filing AY 2022-23: ಕೊನೆಯ ದಿನಾಂಕ ಯಾವಾಗ ನೋಡಿITR filing AY 2022-23: ಕೊನೆಯ ದಿನಾಂಕ ಯಾವಾಗ ನೋಡಿ

ನಾವು ಅಡುಗೆ ಮಾಡುವಾಗ ಹೇಗೆ ಬೇಕಾದ ವಸ್ತು ಇದೆಯೇ ಎಂದು ನೋಡಿಕೊಳ್ಳುತ್ತೇವೆಯೋ ಹಾಗೆಯೇ ನಾವು ಐಟಿಆರ್ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಅಗತ್ಯ ದಾಖಲೆಗಳು ಇದೆಯೇ ಎಂದು ನೋಡಿಕೊಳ್ಳುವುದು ಉತ್ತಮ. ಆದಾಯ ತೆರಿಗೆ ಆಕ್ಟ್ 1961 ಮತ್ತು ಆದಾಯ ತೆರಿಗೆ ನಿಯಮ 1962ದ ಪ್ರಕಾರ ನಾವು ಕೆಲವು ಅಗತ್ಯ ದಾಖಲೆಗಳನ್ನು ಐಟಿಆರ್ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಹೊಂದಿರಬೇಕಾಗುತ್ತದೆ. ಆ ದಾಖಲೆಗಳು ಯಾವುದು ಎಂದು ತಿಳಿಯಲು ಮುಂದೆ ಓದಿ....

 ಫಾರ್ಮ್ 16 ಇದೆಯೇ?

ಫಾರ್ಮ್ 16 ಇದೆಯೇ?

ಫಾರ್ಮ್ 16 ಅಂದರೆ ಟಿಡಿಎಸ್ ಸರ್ಟಿಫಿಕೇಟ್ ಆಗಿದೆ. ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಲು ಮೂಲ ಅಡಿಪಾಯವೇ ಫಾರ್ಮ್ 16 ಆಗಿದೆ. ಆದ್ದರಿಂದಾಗಿ ನಾವು ಮೊದಲು ಫಾರ್ಮ್ 16 ಅನ್ನು ಒಟ್ಟು ಮಾಡಿಕೊಳ್ಳಬೇಕು. ನೀವು ತೆರಿಗೆಯನ್ನು ಪಾವತಿ ಮಾಡಿದ ದಾಖಲೆಯನ್ನು ನಿಮ್ಮ ಸಂಸ್ಥೆಗೆ ಸಲ್ಲಿಕೆ ಮಾಡಿದ ಬಳಿಕ ಸಂಸ್ಥೆಯು ಫಾರ್ಮ್ 16 ಅನ್ನು ನೀಡುತ್ತದೆ. ನಿಮ್ಮ ವೇತನ, ವೇತನದಿಂದ ಎಷ್ಟು ಕಡಿತವಾಗುತ್ತದೆ ಎಂಬ ಎಲ್ಲ ದಾಖಲೆಗಳು ಇದರಲ್ಲಿ ಇರಲಿದೆ.

 ಸ್ಯಾಲರಿ ಸ್ಲಿಪ್: ವೇತನ ಪಡೆದ ದಾಖಲೆ

ಸ್ಯಾಲರಿ ಸ್ಲಿಪ್: ವೇತನ ಪಡೆದ ದಾಖಲೆ

ಸಂಬಳವನ್ನು ಪಡೆದ ಸಂದರ್ಭದಲ್ಲಿ ನಮಗೆ ಲಭ್ಯವಾಗುವ ಸ್ಯಾಲರಿ ಸ್ಲಿಪ್ ಅನ್ನು ನಾವು ಹೊಂದಿರುವುದು ಅತೀ ಅಗತ್ಯವಾಗಿದೆ. ಮೂಲ ವೇತನ, ಡಿಎ, ಟಿಡಿಎಸ್ ಮೊತ್ತ, ಎಚ್‌ಆರ್‌ಎ, ಟಿಎ, ಸಾಮಾನ್ಯ ಕಡಿತ ಎಲ್ಲವೂ ಈ ಸ್ಯಾಲರಿ ಸ್ಲಿಪ್‌ನಲ್ಲಿ ಇರಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ ಅನ್ನು ನಾವು ಫೈಲ್ ಮಾಡಲು ಈ ದಾಖಲೆ ಅತ್ಯಗತ್ಯವಾಗಿದೆ.

 ಪ್ಯಾನ್ ಕಾರ್ಡ್ ಇದೆಯೇ?

ಪ್ಯಾನ್ ಕಾರ್ಡ್ ಇದೆಯೇ?

ನೀವು ಯಾವಾಗಲೂ ನಿಮ್ಮ ಕೈಯಲ್ಲಿ ಹೊಂದಿರಬೇಕಾದ ಅತೀ ಅಗತ್ಯವಾದ ದಾಖಲೆ ಪ್ಯಾನ್ ಕಾರ್ಡ್ ಆಗಿದೆ. ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ವೇಳೆಯಲ್ಲಿ ಪ್ಯಾನ್ ಸಂಖ್ಯೆಯು ಅಗತ್ಯವಾಗಿದೆ. ಇದನ್ನು ನಿಮ್ಮ ಗುರುತಿನ ಚೀಟಿಯಂತೆ ಪರಿಗಣಿಸಲಾಗುತ್ತದೆ.

 ಆಧಾರ್ ಕಾರ್ಡ್ ಕಡ್ಡಾಯ

ಆಧಾರ್ ಕಾರ್ಡ್ ಕಡ್ಡಾಯ

ನೀವು ಐಟಿಆರ್ ಅನ್ನು ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಅನ್ನು ಕೂಡಾ ಸಲ್ಲಿಕೆ ಮಾಡಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ 139ಎಎ ಪ್ರಕಾರ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವವರು ತಮ್ಮ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು.

ಏನಿದು ಫಾರ್ಮ್ 16A?

ಏನಿದು ಫಾರ್ಮ್ 16A?

ಫಾರ್ಮ್ 16A ನಿಮಗೆ ಫಿಕ್ಸಿಡ್ ಡೆಪಾಸಿಟ್ ಮೇಲೆ ಬರುವ ಬಡ್ಡಿಯ ಮಾಹಿತಿಯನ್ನು ಒಳಗೊಂಡಿರುತ್ತದೆ. ಫಿಕ್ಸಿಡ್ ಡೆಪಾಸಿಟ್, ಬಾಡಿಗೆ, ವಿಮಾ ಕಮಿಷನ್, ಬೇರೆ ಯಾವುದೇ ಆದಾಯ ಮೂಲಗಳಿಂದ ತೆರಿಗೆಯನ್ನು ಕಡಿತ ಮಾಡಲಾಗಿದ್ದರೆ, ನಿಮ್ಮ ಬ್ಯಾಂಕ್ ನಿಮಗೆ ಫಾರ್ಮ್ 16A ನೀಡಲಿದೆ. ನೀವು ಗಳಿಸಿದ ಆದಾಯ ಹಾಗೂ ಟಿಡಿಎಸ್ ಕಡಿತ ಮೊದಲಾದ ಎಲ್ಲ ದಾಖಲೆಯನ್ನು ಇದು ಹೊಂದಿರುತ್ತದೆ. ಹಣವನ್ನು ಜಮೆ ಮಾಡಿದ ಅಥವಾ ಕಡಿತ ಮಾಡಿದವರ ಹೆಸರು, ವಿಳಾಸ, ಪ್ಯಾನ್ ಟಿಡಿಎಸ್ ಚಲನ್ ಇದರಲ್ಲಿ ಇರಲಿದೆ.

ವಾರ್ಷಿಕ ವಹಿವಾಟಿನ ವಿವರ

ವಾರ್ಷಿಕ ವಹಿವಾಟಿನ ವಿವರ

ಆದಾಯ ತೆರಿಗೆ ಕಚೇರಿಯು ಓರ್ವ ವ್ಯಕ್ತಿಯು ಮಾಡಿದ ಎಲ್ಲಾ ಹಣಕಾಸಿನ ವಹಿವಾಟಿನ ಸ್ಟೇಟ್‌ಮೆಂಟ್ ಅನ್ನು ನೀಡುತ್ತದೆ. ಬಡ್ಡಿ, ಡಿವಿಡೆಂಡ್‌ಗಳು, ಸೆಕ್ಯುರಿಟೀಸ್ ವಹಿವಾಟುಗಳು, ಮ್ಯೂಚುಯಲ್ ಫಂಡ್ ವಹಿವಾಟುಗಳು, ಅಂತರಾಷ್ಟ್ರೀಯ ವಹಿವಾಟು, ಇತರೆ ವಿಚಾರಗಳ ಬಗ್ಗೆ ಇದರಲ್ಲಿ ಮಾಹಿತಿ ಇರುತ್ತದೆ.

ಫಾರ್ಮ್ 26AS ಎಂದರೇನು?

ಫಾರ್ಮ್ 26AS ಎಂದರೇನು?

ಫಾರ್ಮ್ 26AS ಪಡೆಯಲು, ನಾವು ಹೊಸ ಆದಾಯ ತೆರಿಗೆ ಪೋರ್ಟಲ್‌ಗೆ ಭೇಟಿ ನೀಡಬೇಕು. ನಾವು ಪ್ಯಾನ್ ಬಳಕೆ ಮಾಡಿ ಫಾರ್ಮ್ 26AS ಅನ್ನು ಪಡೆಯಬಹುದು. ನಾವು ಪ್ಯಾನ್ ಕಾರ್ಡ್ ಬಳಕೆ ಮಾಡಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ ತೆರಿಗೆಯ ವಿವರವನ್ನು ಈ ಫಾರ್ಮ್ ಹೊಂದಿರುತ್ತದೆ.

ಲಾಭದ ಬಗ್ಗೆ ವಿವರ

ಲಾಭದ ಬಗ್ಗೆ ವಿವರ

ನೀವು ಸ್ಟಾಕ್‌ಗಳು, ಮ್ಯೂಚುಯಲ್ ಫಂಡ್‌ಗಳು ಅಥವಾ ಇತರ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಿದರೆ ನೀವು ಕ್ಯಾಪಿಟಲ್ ಗೇನ್ ಅಥವಾ ಲಾಭದ ಸ್ಟೇಟ್‌ಮೆಂಟ್ ಅನ್ನು ನೀಡಬೇಕಾದ ಅಗತ್ಯವಿದೆ. ಈ ಸ್ಟೇಟ್‌ಮೆಂಟ್ ಅನ್ನು ನಿಮ್ಮ ಬ್ರೋಕರೇಜ್ ಸಂಸ್ಥೆಯು ನೀಡುತ್ತದೆ. ವರ್ಷಕ್ಕಿಂತ ಮುಂಚೆಯೇ ನೀವು ಕೆಲವು ಷೇರುಗಳನ್ನು ಮಾರಾಟ ಮಾಡಿದರೆ ಸಣ್ಣ ಲಾಭವನ್ನು ಇಲ್ಲಿ ಉಲ್ಲೇಖ ಮಾಡಬೇಕಾಗುತ್ತದೆ. ನೀವು ಈ ಲಾಭದ ಮೇಲೆ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲವಾದರೂ ಕೂಡಾ ಇದರ ವಿವರ ಸೇರ್ಪಡೆ ಮಾಡುವುದು ಅತ್ಯಗತ್ಯ.

ತೆರಿಗೆ ಉಳಿತಾಯ ಹೂಡಿಕೆ ಬಗ್ಗೆ ವಿವರ

ತೆರಿಗೆ ಉಳಿತಾಯ ಹೂಡಿಕೆ ಬಗ್ಗೆ ವಿವರ

ನೀವು ಐಟಿಆರ್ ಅನ್ನು ಸಲ್ಲಿಕೆ ಮಾಡುವಾಗ, ತೆರಿಗೆ ಉಳಿತಾಯ ಮಾಡಲು ಸಹಕಾರಿಯಾಗುವ ತಮ್ಮ ಹೂಡಿಕೆಗಳು ಮತ್ತು ವೆಚ್ಚಗಳ ಪುರಾವೆಗಳನ್ನು ಸಹ ಒದಗಿಸಬೇಕು. ನೀವು ಹಳೆಯ ತೆರಿಗೆ ವಿಧಾನವನ್ನು ಅನುಸರಿಸಿದರೆ ನಿಮ್ಮ ಹಣವನ್ನು ಉಳಿತಾಯ ಮಾಡುವ ಹೂಡಿಕೆ ಹಾಗೂ ವೆಚ್ಚವನ್ನು ಕಡಿತ ಮಾಡಬಹುದು.

English summary

Check List of Important Documents Required to File Income Tax Return

ITR Filing: These Documents Required to File Income Tax Return. Check Here's List of Important Documents Required to File Income Tax Return.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X