For Quick Alerts
ALLOW NOTIFICATIONS  
For Daily Alerts

ಕಾಯಿನ್‌ಸ್ವಿಚ್‌ 100ನೇ ಕಾಯಿನ್ ಸೇರ್ಪಡೆ, ರೂಪಾಯಿಯಲ್ಲಿ ಮಾಡಿ ಹೂಡಿಕೆ

|

ಬೆಂಗಳೂರು, ಜೂನ್ 21: ಜನಪ್ರಿಯ ಬಿಟ್‌ಕಾಯಿನ್‌, ಎಥೆರೆಯುಮ್‌ ಮತ್ತು ಶಿಬಾ ಇನು ಅಲ್ಲದೇ ಭಾರತದ ರೂಪಾಯಿಯಲ್ಲಿ ಕ್ರಿಪ್ಟೊ ಸಂಪತ್ತು ಖರೀದಿಸಲು ಬಯಸುವವರಿಗೆ ಕಾಯಿನ್‌ ಸ್ವಿಚ್‌ ಲಭ್ಯವಿದೆ. ಭಾರತದ ಅತಿದೊಡ್ಡ ಕ್ರಿಪ್ಟೊ ಹೂಡಿಕೆ ಅಪ್ಲಿಕೇಶನ್‌ ಆದ ಕಾಯಿನ್‌ ಸ್ವಿಚ್‌ ತನ್ನ 100ನೇ ಕಾಯಿನ್‌ ಅನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಬಳಕೆದಾರರು ಸುರಕ್ಷಿತ ಮಾರ್ಗಸೂಚಿಗಳ ಅನ್ವಯ ಭಾರತದ ರೂಪಾಯಿಯಲ್ಲಿ ಕ್ರಿಪ್ಟೊ ಸಂಪತ್ತನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದಾಗಿದೆ.

 

ತನ್ನ ಅಪ್ಲಿಕೇಶನ್‌ನಲ್ಲಿ ಹೊಸ ಸಂಪತ್ತುಗಳನ್ನು ಬಿಡುಗಡೆ ಮಾಡುತ್ತಿರುವುದರಿಂದ ಕಾಯಿನ್‌ ಸ್ವಿಚ್‌ ಹೂಡಿಕೆದಾರರ ರಕ್ಷಣೆಯನ್ನು ಆದ್ಯತೆಯನ್ನಾಗಿಸಿಕೊಂಡಿದೆ. ಹೊಸದಾದ ಮತ್ತು ಸಂಭಾವ್ಯ ಚಂಚಲವಾದ ಕ್ರಿಪ್ಟೊ ಬಗ್ಗೆ ಎಚ್ಚರಿಸಲು ಈಚೆಗೆ ಕಾಯಿನ್‌ಸ್ವಿಚ್‌ ಕಂಪೆನಿಯು ತನ್ನ ಅಪ್ಲಿಕೇಶನ್‌ನಲ್ಲಿ ರಿಸ್ಕೊಮೀಟರ್‌ (ಹೂಡಿಕೆ ಮಾಡಲಾದ ಮೂಲ ಹಣದ ಜೊತೆಗಿನ ಸಂಭಾವ್ಯ ಹಾನಿ ತೋರಿಸುವ ಚಿತ್ರ) ಎಂಬ ಹೊಸ ಫೀಚರ್‌ ಅನ್ನು ಸೇರ್ಪಡೆಗೊಳಿಸಿದೆ. ಕಾಯಿನ್‌ನ ಮೂಲ, ಬಳಕೆ ಮತ್ತು ಇತರೆ ವಿಚಾರಗಳನ್ನು ಪರಿಶೀಲಿಸಿ ಅದರ ಹಾನಿಯನ್ನು ನಿರ್ಧರಿಸಲಾಗುತ್ತದೆ. ಅರಿವು ಪೂರ್ಣವಾಗಿ ತೀರ್ಮಾನ ಮಾಡುವಾಗ ಹೆಚ್ಚುವರಿ ಪ್ರೇರಣೆಯು ಬಳಕೆದಾರರ ಆಯ್ಕೆಯನ್ನು ಗೌರವಿಸುತ್ತದೆ.

ಕ್ರಿಪ್ಟೋಕರೆನ್ಸಿ ಚೇತರಿಕೆ: ಬಿಟ್‌ಕಾಯಿನ್‌ ಮೌಲ್ಯ ಸ್ವಲ್ಪ ಏರಿಕೆ

''ನಮ್ಮ ಅಪ್ಲಿಕೇಶನ್‌ನಲ್ಲಿ ಯಾವುದೇ ಕಾಯಿನ್‌ ಅನ್ನು ಬಿಡುಗಡೆ ಮಾಡಬೇಕಾದರೆ ಜಾಗರೂಕತೆಯಿಂದ ಆಲೋಚಿಸುತ್ತೇವೆ. ಬಳಕೆದಾರರಿಗೆ ಅಸಾಧಾರಣ ಆಯ್ಕೆಗಳನ್ನು ಕಲ್ಪಿಸಿದರೂ ಎಲ್ಲಾ ಉದ್ಯಮ ನರ‍್ಧಾರಗಳಲ್ಲಿ ನಾವು ಬಳಕೆದಾರರ ರಕ್ಷಣೆ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುತ್ತೇವೆ. ನಮ್ಮ 1.8 ಕೋಟಿ ಬಳಕೆದಾರರಿಗೆ 100 ಕ್ರಿಪ್ಟೊ ಸಂಪತ್ತುಗಳನ್ನು ಭಾರತದ ರೂಪಾಯಿಯಲ್ಲಿ ಖರೀದಿಸಲು ಮತ್ತು ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಅತೀವ ಸಂತೋಷವಾಗುತ್ತಿದೆ. ಬಳಕೆದಾರರು ಕಾಯಿನ್‌ಸ್ವಿಚ್‌ ಬ್ಲಾಗ್‌, ಯೂಟ್ಯೂಬ್‌ ಚಾನೆಲ್‌ನಂಥ ಶೈಕ್ಷಣಿಕ ವೇದಿಕೆಗಳಿಗೆ ಭೇಟಿ ನೀಡುವ ಮೂಲಕ ಈ ಕಾಯಿನ್‌ಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡು ಎಚ್ಚರಿಕೆಯ ಹೂಡಿಕೆ ನರ‍್ಧಾರ ಕೈಗೊಳ್ಳಬಹುದಾಗಿದೆ'' ಎಂದು ಕಾಯಿನ್‌ಸ್ವಿಚ್‌ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶೀಶ್‌ ಸಿಂಘಾಲ್‌ ಹೇಳಿದ್ದಾರೆ.

ಕಾಯಿನ್‌ಸ್ವಿಚ್‌ 100ನೇ ಕಾಯಿನ್ ಸೇರ್ಪಡೆ, ರೂಪಾಯಿಯಲ್ಲಿ ಮಾಡಿ ಹೂಡಿಕೆ

ಭಾರತದಲ್ಲಿ ಕ್ರಿಪ್ಟೊ ಹೂಡಿಕೆಯನ್ನು ಸುರಕ್ಷಿತ ಮತ್ತು ವಿಶ್ವಾಸಾರ್ಹಗೊಳಿಸುವುದಕ್ಕಾಗಿ ಕಾಯಿನ್‌ಸ್ಚಿಚ್‌ ಹಲವು ಕ್ರಮಗಳನ್ನು ಕೈಗೊಂಡಿದೆ. ಕಾಯಿನ್‌ಸ್ವಿಚ್‌ ಅಪ್ಲಿಕೇಶನ್‌ನಲ್ಲಿ ನಿಮ್ಮ ಗ್ರಾಹಕರ ಬಗ್ಗೆ ತಿಳಿದುಕೊಳ್ಳಿ (ಕೆವೈಸಿ) ಮಾಹಿತಿಯನ್ನು ಸಲ್ಲಿಸಿ, ಪರಿಶೀಲಿಸಲ್ಪಟ್ಟ ಬ್ಯಾಂಕ್‌ ಖಾತೆಯಿಂದ ಬಳಕೆದಾರರು ಭಾರತದ ರೂಪಾಯಿಯಲ್ಲಿ ಮಾತ್ರ ಠೇವಣಿ ಇಡುವುದು ಮತ್ತು ಹಣ ಪಡೆಯಬಹುದಾಗಿದೆ. ಭಾರತದಲ್ಲಿ ನೆಲೆಸಿರುವವರೆಗೆ ಮಾತ್ರ ಈ ಅಪ್ಲಿಕೇಶನ್‌ ಮುಕ್ತವಾಗಿದೆ. ನಿಗದಿಪಡಿಸಿರುವ ಮೊತ್ತಕ್ಕಿಂತ ಹೆಚ್ಚು ರ‍್ಗಾವಣೆ ಮಾಡಿದರೆ ಹೆಸರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ (ರಾಜಕಾರಣಿ, ನಿರ್ಬಂಧ ವಿಧಿಸಿರುವ ಪಟ್ಟಿಯಲ್ಲಿರುವವರು, ನಕಾರಾತ್ಮಕ ಸುದ್ದಿಯಾಗಿದ್ದರೆ ಎಂಬುದನ್ನು ಪರಿಶೀಲಿಸಲಾಗುತ್ತದೆ).

 

ಹಣವನ್ನು ಎಲ್ಲರಿಗೂ ಸಮಾನವಾಗಿಸುವ ನಿಟ್ಟಿನಲ್ಲಿ, ಕ್ರಿಪ್ಟೊ ಸಂಪತ್ತಿನಲ್ಲಿ ಹೂಡಿಕೆ ಮಾಡಲು ಸುರಕ್ಷಿತ, ಸರಳ ಮತ್ತು ವಿಶ್ವಾಸರ‍್ಹ ವೇದಿಕೆಯನ್ನು ಕಾಯಿನ್‌ಸ್ವಿಚ್‌ ಎಲ್ಲಾ ಬಳಕೆದಾರರಿಗೆ ನೀಡಿದೆ. ಸೂಕ್ತವಾದ ತೀರ್ಮನ ಮಾಡಲು ಜನರಿಗೆ ಎಲ್ಲಾ ರೀತಿಯ ಮಾಹಿತಿಯನ್ನೂ ನೀಡುತ್ತಿದೆ. ಕಾಯಿನ್‌ಸ್ವಿಚ್‌ ಬ್ಲಾಗ್‌, ಯೂಟ್ಯೂಬ್‌ ಚಾನೆಲ್‌, ಇನ್‌ಸ್ಟಾಗ್ರಾಂ ಮತ್ತು ಇತರೆ ವೇದಿಕೆಗಳಿಗೆ ಭೇಟಿ ನೀಡುವ ಮೂಲಕ ಬಳಕೆದಾರರು ಮಾಹಿತಿ ಪಡೆದುಕೊಳ್ಳಬಹುದಾಗಿದೆ.

English summary

CoinSwitch lists 100th coin for its users to invest in Indian Rupees

CoinSwitch, India’s largest Crypto investing app, has listed 100th coin on its trading platform, providing users a wide range of Crypto assets to purchase in Indian Rupees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X