For Quick Alerts
ALLOW NOTIFICATIONS  
For Daily Alerts

ಕಂಪನಿ ಹಾಗೂ ಬ್ಯಾಂಕ್ ಎಫ್‌ಡಿ ನಡುವೆ ಏನಿದೆ ವ್ಯತ್ಯಾಸ?

|

ಕಂಪನಿಯ ಫಿಕ್ಸಿಡ್ ಡೆಪಾಸಿಟ್ ಒಂದು ಅವಧಿ ಠೇವಣಿಯಾಗಿದೆ. ನಿಗದಿತ ಬಡ್ಡಿದರದಲ್ಲಿ ನಿಗದಿತ ಅವಧಿ ಎಫ್‌ಡಿಯನ್ನು ಇರಿಸಲಾಗುತ್ತದೆ. ಈ ಫಿಕ್ಸಿಡ್ ಡೆಪಾಸಿಟ್ ಅನ್ನು ನಾವು ಬ್ಯಾಂಕ್ ಅಥವಾ ಬೇರೆ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್ ಅಲ್ಲದ ಹಣಕಾಸು ಕಂಪನಿಗಳು ನೀಡುತ್ತದೆ.

ವಿವಿಧ ಕಂಪನಿಗಳ ಫಿಕ್ಸಿಡ್ ಡೆಪಾಸಿಟ್ ಮುಕ್ತಾಯ ದಿನವು ಕೆಲವು ತಿಂಗಳುಗಳಿಂದ ಕೆಲವು ವರ್ಷಗಳವರೆಗೆ ಇರುತ್ತದೆ. ಪ್ರಸ್ತುತ ಹಣದುಬ್ಬರದ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಏರಿಕೆ ಮಾಡಿದೆ. ನಾಲ್ಕು ಬಾರಿ ವಿತ್ತೀಯ ದರವನ್ನು ಪರಿಷ್ಕರಣೆ ಮಾಡಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕ್‌ಗಳು ಸಾಲದ ಬಡ್ಡಿದರ ಹಾಗೂ ಎಫ್‌ಡಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ.

ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಎಫ್‌ಡಿ, ಯಾವುದು ಉತ್ತಮ?ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಎಫ್‌ಡಿ, ಯಾವುದು ಉತ್ತಮ?

ಸಾಮಾನ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳು ನೀಡುವ ದರಗಳಿಗೆ ಹೋಲಿಸಿದರೆ ಕಾರ್ಪೊರೇಟ್ ಸಂಸ್ಥೆಗಳ ಎಫ್‌ಡಿ ಬಡ್ಡಿದರ ಅಧಿಕವಾಗಿದೆ. ಆದರೆ ಬ್ಯಾಂಕ್ ಎಫ್‌ಡಿಗಳಂತೆ ಡೆಪಾಸಿಟ್ ವಿಮೆ ಹಾಗೂ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಈ ಕಾರ್ಪೊರೇಟ್ ಎಫ್‌ಡಿಗಳಲ್ಲಿ ಇರುವುದಿಲ್ಲ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....

 ಬ್ಯಾಂಕ್, ಕಂಪನಿ ಎಫ್‌ಡಿ ನಡುವೆ ಏನು ವ್ಯತ್ಯಾಸ

ಬ್ಯಾಂಕ್, ಕಂಪನಿ ಎಫ್‌ಡಿ ನಡುವೆ ಏನು ವ್ಯತ್ಯಾಸ

ಸಾಮಾನ್ಯವಾಗಿ ಹೂಡಿಕೆ ಮಾಡುವವರು ಕಾರ್ಪೊರೇಟ್‌ ಎಫ್‌ಡಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಕ್ರಿಸಿಲ್, ಐಸಿಆರ್‌ಎ ಮತ್ತು ಸಿಎಆರ್‌ಇ ನಂತಹ ಏಜೆನ್ಸಿಗಳು ನಿಗದಿಪಡಿಸಿದ ರೇಟಿಂಗ್‌ಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿಕೊಳ್ಳಬೇಕು. ಎನ್‌ಬಿಎಫ್‌ಸಿ ಅಥವಾ ಎಚ್‌ಎಫ್‌ಸಿ ನೀಡುವ ಕಾರ್ಪೊರೇಟ್ ಎಫ್‌ಡಿಗಳ ಆರ್ಥಿಕ ಸುರಕ್ಷತೆಯನ್ನು ಈ ರೇಟಿಂಗ್ ನಿರ್ಧಾರ ಮಾಡುತ್ತದೆ. ಹೆಚ್ಚಿನ ದರದ ಕಾರ್ಪೊರೇಟ್ ಎಫ್‌ಡಿಗಳಲ್ಲಿ ಬಡ್ಡಿ ಮತ್ತು ಅಸಲು ಮರುಪಾವತಿಗಳಲ್ಲಿ ಯಾವುದೇ ಮೋಸವಾಗುವ ಅವಕಾಶ ಕಡಿಮೆ ಇರುತ್ತದೆ. ಆದರೆ ಬ್ಯಾಂಕ್‌ಗಳಲ್ಲಿ ಆ ರೀತಿಯ ರಿಸ್ಕ್‌ಗಳು ಇರುವುದಿಲ್ಲ.

 ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂ ಲಿಮಿಟೆಡ್

ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂ ಲಿಮಿಟೆಡ್

ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂ ಲಿಮಿಟೆಡ್ ಎಫ್‌ಡಿ ಮೇಲೆ 7.76 ಶೇಕಡಾ ಬಡ್ಡಿ ದರವನ್ನು ನೀಡುತ್ತದೆ. ಮೂರು ವರ್ಷಗಳ ಅವಧಿಗೆ ತೆರೆಯಲಾದ ಎಫ್‌ಡಿ ಮೇಲೆ 7.76 ಶೇಕಡಾ ಬಡ್ಡಿ ದರವನ್ನು ನೀಡುತ್ತದೆ. ಮೂರು ವರ್ಷಗಳ ಅವಧಿಗೆ ಹತ್ತು ಸಾವಿರ ರೂಪಾಯಿಗಳ ಎಫ್‌ಡಿಯನ್ನು ನೀವು ತೆರೆದರೆ ಮುಕ್ತಾಯದ ಅವಧಿಗೆ 12,513 ರೂಪಾಯಿಯನ್ನು ಪಡೆಯಲು ಸಾಧ್ಯವಾಗಲಿದೆ.

 ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಎಫ್‌ಡಿ ಮೇಲೆ 7.55 ಶೇಕಡಾ ಬಡ್ಡಿದರವನ್ನು ನೀಡುತ್ತದೆ. 3 ವರ್ಷಗಳ ಅವಧಿಗೆ ತೆರೆಯಲಾದ ಎಫ್‌ಡಿಗಳ ಮೇಲೆ 7.55 ಶೇಕಡಾ ಬಡ್ಡಿದರವನ್ನು ನೀಡಲಾಗುತ್ತದೆ. 3 ವರ್ಷಗಳ ಅವಧಿಗೆ ಹತ್ತು ಸಾವಿರ ರೂಪಾಯಿಗಳ ಎಫ್‌ಡಿಯನ್ನು ತೆರೆದರೆ 12,440 ರೂಪಾಯಿ ರಿಟರ್ನ್ ವೇಳೆ ಲಭ್ಯವಾಗುತ್ತದೆ. ಕ್ರೆಡಿಟ್ ರೇಟಿಂಗ್ ಏಜೆನ್ಸಿ CRISIL ಈ ಸಂಸ್ಥೆಗೆ FAA+/Negative ನ ಕ್ರೆಡಿಟ್ ರೇಟಿಂಗ್ ಅನ್ನು ನಿಗದಿಪಡಿಸಿದೆ. ಈ ರೇಟಿಂಗ್ ಏಜೆನ್ಸಿಯ ಪ್ರಕಾರ, ಎಫ್‌ಎಎ ಎಂದರೆ ಸರಿಯಾದ ಸಮಯಕ್ಕೆ ಬಡ್ಡಿದರ ಹಾಗೂ ಮರುಪಾವತಿ ಮಾಡಲಾಗುವ ಸಂಸ್ಥೆ ಎಂದು ಸೂಚನೆ.

 ಬಜಾಜ್ ಫೈನಾನ್ಸ್ ಲಿಮಿಟೆಡ್

ಬಜಾಜ್ ಫೈನಾನ್ಸ್ ಲಿಮಿಟೆಡ್

ಬಜಾಜ್ ಫೈನಾನ್ಸ್ ಲಿಮಿಟೆಡ್ ಎಫ್‌ಡಿ ಮೇಲೆ ಶೇಕಡ 7.40ರಷ್ಟು ಬಡ್ಡಿದರವನ್ನು ನೀಡುತ್ತದೆ. ಮೂರು ವರ್ಷಗಳ ಅವಧಿಯ ಎಫ್‌ಡಿ ಮೇಲೆ ಈ ಬಡ್ಡಿದರ ನೀಡಲಾಗುತ್ತದೆ. ಎನ್‌ಬಿಎಫ್‌ಸಿ ಗದಿಪಡಿಸಿದ ಕನಿಷ್ಠ ಠೇವಣಿ ಮೊತ್ತವು 15,000 ರೂಪಾಯಿ ಆಗಿದೆ. ಹಾಗಾಗಿ ಮೂರು ವರ್ಷಗಳ ಅವಧಿಗೆ ತೆರೆಯಲಾದ 15,000 ರೂಪಾಯಿಗಳ ಎಫ್‌ಡಿ ಮುಕ್ತಾಯದ ಅವಧಿಗೆ 18,582 ರೂಪಾಯಿ ನೀಡಲಾಗುತ್ತದೆ. CRISIL ಈ NBFC ಗೆ AAA/Stable ನ ಕ್ರೆಡಿಟ್ ರೇಟಿಂಗ್ ಅನ್ನು ನಿಗದಿಪಡಿಸಿದೆ.

 ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಶೇಕಡ 6.95 ಬಡ್ಡಿದರವನ್ನು ನೀಡುತ್ತದೆ. 3 ವರ್ಷಗಳ ಅವಧಿಯ ಎಫ್‌ಡಿ ಮೇಲೆ ಈ ಬಡ್ಡಿದರ ನೀಡಲಾಗುತ್ತದೆ. 3 ವರ್ಷಗಳ ಅವಧಿಯ ಹತ್ತು ಸಾವಿರ ರೂಪಾಯಿಗಳ ಎಫ್‌ಡಿ ಮುಕ್ತಾಯದ ವೇಳೆಗೆ 12,233 ರೂಪಾಯಿ ನೀಡಲಾಗುತ್ತದೆ.

 ಎಚ್‌ಡಿಎಫ್‌ಸಿ ಲಿಮಿಟೆಡ್

ಎಚ್‌ಡಿಎಫ್‌ಸಿ ಲಿಮಿಟೆಡ್

ಎಚ್‌ಡಿಎಫ್‌ಸಿ ಲಿಮಿಟೆಡ್‌ನಲ್ಲಿ ಮೂರು ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 6.85ರಷ್ಟು ಬಡ್ಡಿದರ ನೀಡಲಾಗುತ್ತದೆ. 3 ವರ್ಷಗಳ ಅವಧಿಗೆ ಹತ್ತು ಸಾವಿರ ರೂಪಾಯಿಗಳ ಎಫ್‌ಡಿಯನ್ನು ತೆರೆದರೆ ಮುಕ್ತಾಯದ ದಿನಾಂಕಕ್ಕೆ 12,199 ರೂಪಾಯಿ ಲಭ್ಯವಾಗಲಿದೆ.

 ಸುಂದರಂ ಹೋಮ್ ಫೈನಾನ್ಸ್ ಲಿಮಿಟೆಡ್

ಸುಂದರಂ ಹೋಮ್ ಫೈನಾನ್ಸ್ ಲಿಮಿಟೆಡ್

ಸುಂದರಂ ಹೋಮ್ ಫೈನಾನ್ಸ್ ಲಿಮಿಟೆಡ್ ಮೂರು ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 6.65ರಷ್ಟು ಬಡ್ಡಿದರವನ್ನು ನೀಡುತ್ತದೆ. ಮೂರು ವರ್ಷಗಳ ಅವಧಿಗೆ ನಾವು ಹತ್ತು ಸಾವಿರ ರೂಪಾಯಿಗಳ ಎಫ್‌ಡಿಯನ್ನು ಇರಿಸಿದರೆ ಮುಕ್ತಾಯದ ವೇಳೆಗೆ 12,131 ರೂಪಾಯಿ ಲಭ್ಯವಾಗುತ್ತದೆ.

ಎನ್‌ಬಿಎಫ್‌ಸಿ ಎಫ್‌ಡಿ ಹೂಡಿಕೆ ಉತ್ತಮ ಯಾಕೆ?ಎನ್‌ಬಿಎಫ್‌ಸಿ ಎಫ್‌ಡಿ ಹೂಡಿಕೆ ಉತ್ತಮ ಯಾಕೆ?

English summary

Company FD and Bank FD: What is Differences, Details in Kannada

Company fixed deposits vs bank FDs: What is Differences, Here's details in kannada.
Story first published: Saturday, October 29, 2022, 15:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X