For Quick Alerts
ALLOW NOTIFICATIONS  
For Daily Alerts

ಸಿಹಿ ಸುದ್ದಿ: ಖಾದ್ಯ ತೈಲ, ಹತ್ತಿ, ಕೋಳಿ ಬೆಲೆ ಇಳಿಕೆ!

|

ಕಳೆದ ಕೆಲವು ವಾರಗಳಿಂದ ಖಾದ್ಯ ತೈಲ, ಹತ್ತಿ ಹಾಗೂ ಕೋಳಿ ಬೆಳೆಯು ಕಡಿಮೆಯಾಗುತ್ತಿದೆ. ಈ ಸಂದರ್ಭದಲ್ಲೇ ಹಲವಾರು ತಿಂಗಳುಗಳಿಂದ ದೇಶದ ಆರ್ಥಿಕ ಸ್ಥಿತಿಗೆ ಸಮಸ್ಯೆಯಾಗಿರುವ ಈರುಳ್ಳಿ, ಕಾಳು, ಸಕ್ಕರೆ ಬೆಲೆಯು ಯಥಾಸ್ಥಿತಿ ಕಾಯ್ದುಕೊಂಡಿದೆ.

ಸಕ್ಕರೆ ರಫ್ತಿನ ಮೇಲೆ ಸರ್ಕಾರ ಈಗಾಗಲೇ ನಿರ್ಬಂಧವನ್ನು ಹೇರಿದೆ. ಈ ಮೂಲಕ ಸಕ್ಕರೆ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಿದೆ. ಈ ಕಾರಣದಿಂದಾಗಿ ಸದ್ಯಕ್ಕೆ ಸಕ್ಕರೆ ಬೆಲೆಯು ಅಧಿಕವಾಗುವ ಯಾವುದೇ ಸಾಧ್ಯತೆ ಇಲ್ಲ. ಕೇಂದ್ರ ಸರ್ಕಾರವು ಜೂನ್ 1 ರಿಂದ ಜಾರಿಗೆ ಬರುವಂತೆ ಸಕ್ಕರೆ ರಫ್ತಿನ ಮೇಲೆ ನಿರ್ಬಂಧವನ್ನು ವಿಧಿಸಿ ಆದೇಶವನ್ನು ಹೊರಡಿಸಿದೆ. ಪ್ರಮುಖವಾಗಿ ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳ ಲಭ್ಯತೆಯನ್ನು ಹೆಚ್ಚಿಸುವ ಮತ್ತು ಬೆಲೆ ಏರಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರವು ರಫ್ತಿನ ಮೇಲೆ ನಿರ್ಬಂಧವನ್ನು ವಿಧಿಸಿದೆ.

ಸಕ್ಕರೆ ರಫ್ತಿನ ಮೇಲೆ ಸರ್ಕಾರ ನಿರ್ಬಂಧ: ಕಾರಣವೇನು?ಸಕ್ಕರೆ ರಫ್ತಿನ ಮೇಲೆ ಸರ್ಕಾರ ನಿರ್ಬಂಧ: ಕಾರಣವೇನು?

ಸಾಮಾನ್ಯವಾಗಿ ಮಾನ್ಸೂನ್ ಆರಂಭವಾಗುವ ಸಂದರ್ಭದಲ್ಲಿ ಈರುಳ್ಳಿ, ಕಾಳು ಬೆಲೆಯು ಹೆಚ್ಚಳವಾಗುತ್ತದೆ. ಅದರಂತೆಯೇ ಈ ವರ್ಷವು ಈರುಳ್ಳಿ, ಕಾಳು ಬೆಲೆಯು ಅಧಿಕವಾಗಿದೆ. ಆದರೆ ತೀವ್ರ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲೂ ಈರುಳ್ಳಿ, ಕಾಳು ಬೆಲೆಯು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

 ಕೋಳಿ, ಖಾದ್ಯ ತೈಲ ಬೆಲೆ ಇಳಿಕೆ

ಕೋಳಿ, ಖಾದ್ಯ ತೈಲ ಬೆಲೆ ಇಳಿಕೆ

ಈ ಸಂದರ್ಭದಲ್ಲಿ ಕೋಳಿಯ ಬೆಲೆಯು ಕಳೆದ ಹದಿನೈದು ದಿನದಲ್ಲಿ ಶೇಕಡ 8-10ರಷ್ಟು ಇಳಿದಿದೆ. ಈ ಸಂದರ್ಭದಲ್ಲಿ ಖಾದ್ಯ ತೈಲ ರಿಟೇಲ್ ಬೆಲೆಯು ಸುಮಾರು ಪ್ರತಿ ಲೀಟರ್‌ಗೆ 10-15 ರೂಪಾಯಿ ಇಳಿದಿದೆ. ಇನ್ನು ಕಚ್ಚಾ ಪಾಮ್ ಆಯಿಲ್ ಆಮದು ಬೆಲೆಯಲ್ಲಿ ಸುಮಾರು ಶೇಕಡ 20 ಕುಸಿದಿದೆ. ಕಳೆದ ತಿಂಗಳು ಪ್ರತಿ ಟನ್‌ಗೆ 1,695 ಡಾಲರ್ ಆಗಿತ್ತು. ಆದರೆ ಶೇಕಡ 20ರಷ್ಟು ಕಡಿತವಾದ ಬಳಿಕ ಪ್ರತಿ ಟನ್‌ಗೆ 1,350 ಡಾಲರ್ ಆಗಿದೆ.

ಜೂ.28ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆಜೂ.28ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

 ಹತ್ತಿ ಬೆಲೆಯು ಇಳಿಕೆ

ಹತ್ತಿ ಬೆಲೆಯು ಇಳಿಕೆ

ಇನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಹತ್ತಿ ಬೆಲೆಯು ಕೂಡಾ ಇಳಿಕೆ ಕಂಡಿದೆ. ಕಳೆದ ಒಂದು ತಿಂಗಳಲ್ಲಿ ಸುಮಾರು ಶೇಕಡ 10-12ರಷ್ಟು ಹತ್ತಿ ಬೆಲೆ ಇಳಿದಿದೆ. ಈ ಸಂದರ್ಭದಲ್ಲೇ ಜಾಗತಿಕವಾಗಿ ಐಸಿಇ ಫ್ಯೂಚರ್ಸ್‌ನಲ್ಲಿ ಹತ್ತಿ ಬೆಲೆಯು ಶೇಕಡ 25ರಷ್ಟು ಇಳಿದಿದೆ ಎಂದು ಮಹಾರಾಷ್ಟ್ರ ಹತ್ತಿ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಬಿಎಸ್ ರಾಜ್‌ಪಾಲ್ ಮಾಹಿತಿ ನೀಡಿದ್ದಾರೆ. ಮುಖ್ಯವಾಗಿ ಗಿರಣಿಗಳಲ್ಲಿ ಹತ್ತಿ ಬಳಕೆಯು ಶೇಕಡ 30-35ರಷ್ಟು ಇಳಿಕೆಯಾಗಿದೆ. ಈ ಕಾರಣದಿಂದಾಗಿ ಹತ್ತಿ ಬೆಲೆಯು ಇಳಿಕೆಯಾಗಿದೆ.

 ಕಾಳುಗಳ ಬೆಲೆ ಸ್ಥಿರ

ಕಾಳುಗಳ ಬೆಲೆ ಸ್ಥಿರ

ಮಾನ್ಸೂನ್ ಆರಂಭವಾದ ಬೆನ್ನಲ್ಲೇ ಕಾಳುಗಳ ಬೆಲೆಯು ಅಧಿಕವಾಗುತ್ತದೆ. ಆದರೆ ಆಮದು ಮಾಡಿರುವ ಕಾರಣದಿಂದಾಗಿ ಬೆಲೆಯು ಸ್ಥಿರವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಈ ನಡುವೆ ಮೊಟ್ಟೆ ಬೆಲೆಯು ಅಧಿಕವಾಗುತ್ತಿದೆ. ಹಾಗೆಯೇ ಬಾಯಿಲರ್ ಕೋಳಿ ಬೆಲೆಯು ಕೂಡಾ ಹೆಚ್ಚಾಗುತ್ತಿದೆ.

English summary

Cotton, cooking oil and poultry costs quiet down

Prices of cooking oils, cotton and poultry have come down in the past few weeks while onion, pulses and sugar have remained steady. Know more.
Story first published: Wednesday, June 29, 2022, 13:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X