For Quick Alerts
ALLOW NOTIFICATIONS  
For Daily Alerts

ವೈಯಕ್ತಿಕ ಹಣಕಾಸಿನ ಮೇಲೆ ಕೋವಿಡ್ ಪರಿಣಾಮ: ಖರ್ಚು ಹೆಚ್ಚಾಯಿತಾ?

|

ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕವಾಗಿ ಹಬ್ಬಲು ಆರಂಭಿಸಿದ ಸಂದರ್ಭದಲ್ಲಿ ಹೊಸ ತಂತ್ರಜ್ಞಾನಗಳನ್ನು ಹೆಚ್ಚಾಗಿ ಬಳಸಲು ಆರಂಭ ಮಾಡಲಾಗಿದೆ. ಈ ಹೊಸ ತಂತ್ರಜ್ಞಾನಕ್ಕೆ ಅತೀ ಬೇಗನೇ ಜೋತು ಬಿದ್ದ ವಲಯಗಳಲ್ಲಿ ಮೊದಲ ಸ್ಥಾನವನ್ನು ಹಣಕಾಸು ಉದ್ಯಮ ಪಡೆದುಕೊಳ್ಳುತ್ತದೆ. ಡಿಜಟಲೀಕರಣಕ್ಕೆ ತಲೆ ಬಾಗಿದ ಹಣಕಾಸು ವಲಯವು ಹೊಸ ತಂತ್ರಜ್ಞಾನದ ಮೂಲಕವೇ ಎಲ್ಲಾ ಹಣಕಾಸು ವ್ಯವಹಾರವನ್ನು ನಡೆಸಲು ಆರಂಭ ಮಾಡಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆ ಮಾಡಲಾಗಿದ್ದ ಲಾಕ್‌ಡೌನ್‌ ನಡುವೆಯೂ ತನ್ನ ದಕ್ಷತೆಯನ್ನು ಕಾಪಾಡಿಕೊಳ್ಳುವಲ್ಲಿ ಹಣಕಾಸು ಉದ್ಯಮ ಸಫಲವಾಗಿದೆ.

ಕೊರೊನಾ ವೈರಸ್‌ ಲಾಕ್‌ಡೌನ್‌ ಸಂದರ್ಭದಲ್ಲೂ ಜನರು ಹಾಗೂ ಉದ್ಯಮಿಗಳು ಹಣಕಾಸು ವ್ಯವಹಾರವನ್ನು ನಡೆಸಲು ಈ ಈ ತಂತ್ರಜ್ಞಾನಗಳು ಸಹಕಾರಿಯಾಗಿದೆ. ಈ ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಡಿಜಟಲೀಕರಣವು ಇನ್ನಷ್ಟು ಬೆಳೆದಿದೆ. ಅದು ಲಾಕ್‌ಡೌನ್‌ ಬಳಿಕವೂ ಮುಂದುವರಿದಿದ್ದು, ಈಗ ಹಣಕಾಸು ಸೇವೆಯಲ್ಲಿ ಡಿಜಟಲೀಕರಣ ದೇಶದಲ್ಲಿ ಅಧಿಕವಾಗಿದೆ. ಡಿಜಿಟಲೀಕರಣವು ಎಲ್ಲಾ ವ್ಯವಸ್ಥೆಗಳು ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಿದೆ. ಖರ್ಚನ್ನು ಕೊಂಚ ಅಧಿಕ ಮಾಡಿದೆ ಎಂದು ಕೂಡಾ ಹೇಳಲಾಗಿದೆ. ಜನರು ಈ ಡಿಜಿಟಲೀಕರಣದ ಕಾರಣದಿಂದಾಗಿ ಎಲ್ಲಾ ವ್ಯವಹಾರಗಳು ಸುಲಭವಾಗುವುದರೊಂದಿಗೆ ಸಾಲ ಪಡೆಯುವುದು ಕೂಡಾ ಸುಲಭವಾದ ಹಿನ್ನೆಲೆ ಸಾಲ ಪಡೆಯುವವರ ಸಂಖ್ಯೆ ಅಧಿಕವಾಗಿದೆ ಎಂದು ವರದಿಗಳು ಹೇಳಿದೆ.

 ಅವಧಿ ಪೂರ್ವ ನಿವೃತ್ತಿ ಪಡೆಯಲಿದ್ದೀರಿಯೇ?, ಈ ತಯಾರಿಯನ್ನು ಮಾಡಿಕೊಳ್ಳಿ ಅವಧಿ ಪೂರ್ವ ನಿವೃತ್ತಿ ಪಡೆಯಲಿದ್ದೀರಿಯೇ?, ಈ ತಯಾರಿಯನ್ನು ಮಾಡಿಕೊಳ್ಳಿ

ಈ ಡಿಜಟಲೀಕರಣವನ್ನು ಅಧಿಕ ಬ್ಯಾಂಕ್‌ ಗ್ರಾಹಕರು ಬಹಳ ಉತ್ಸಾಹದಿಂದ ಸ್ವೀಕಾರ ಮಾಡಿದ್ದಾರೆ. ತಮ್ಮ ಕೈ ಬೆರಳಿನಲ್ಲೇ ತಮ್ಮೆಲ್ಲಾ ಹಣಕಾಸು ವ್ಯವಹಾರ ನಡೆಸಲು ಸಾಧ್ಯವಾಗುವ ಹಿನ್ನೆಲೆ ಗ್ರಾಹಕರು ಅತೀ ಉತ್ಸಾಹಿಗಳಾಗಿದ್ದಾರೆ. ಹೊಸ ತಂತ್ರಜ್ಞಾನದ ಮೂಲಕ ಹಣಕಾಸು ವ್ಯವಹಾರ ಆರಂಭವಾದ ಬಳಿಕ ಡಿಜಿಟಲ್ ವಹಿವಾಟುಗಳು ಮತ್ತು ಸೇವೆಗಳಲ್ಲಿ ತೀಕ್ಷ್ಣವಾದ ಏರಿಕೆಯನ್ನು ಕಂಡಿದೆ. ಈ ಬೆಳವಣಿಗೆಯನ್ನು ನೋಡಿದರೆ, ಈ ಎಲ್ಲಾ ಹಣಕಾಸು ವ್ಯವಹಾರದಲ್ಲಿ ಜನರು ಡಿಜಿಟಲೀಕರಣವನ್ನು ಮುಂದುವರಿಸುತ್ತಾರೆ ಎಂಬುವುದನ್ನು ನಾವು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಭಾರತದಲ್ಲಿ ಈ ಡಿಜಿಟಲೀಕರಣವು ಹೊಸ ವೈಯಕ್ತಿಕ ಹಣಕಾಸು ಬದಲಾವಣೆಗೆ ಕಾರಣವಾಗಿದೆ. ಅವು ಯಾವುದು ಎಂದು ತಿಳಿಯಲು ಮುಂದೆ ಓದಿ..

 ಬ್ಯಾಂಕ್‌ ವ್ಯವಹಾರದಲ್ಲಿ ಡಿಜಟಲೀಕರಣ

ಬ್ಯಾಂಕ್‌ ವ್ಯವಹಾರದಲ್ಲಿ ಡಿಜಟಲೀಕರಣ

ಈ ಕೊರೊನಾ ವೈರಸ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರಮುಖವಾಗಿ ಬ್ಯಾಂಕಿಂಗ್‌ ವ್ಯವಸ್ಥೆಯಯಲ್ಲಿ ಹಲವಾರು ಬದಲಾವಣೆಗಳು ಉಂಟಾಗಿದೆ. ಬ್ಯಾಕಿಂಗ್‌ ವಲಯದಲ್ಲಿ ಡಿಜಿಟಲೀಕರಣವು ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಅಧಿಕವಾಗಿ ಉಂಟಾಗಿದೆ. ಎಲ್ಲಾ ಬ್ಯಾಂಕುಗಳು ಡಿಜಿಟಲೀಕರಣಕ್ಕೆ ಜೋತು ಬಿದ್ದಿದ್ದು ತಮ್ಮ ಎಲ್ಲಾ ವ್ಯವಹಾರವನ್ನು ಆನ್‌ಲೈನ್‌ ಮೂಲಕ ನಡೆಸುತ್ತಿದೆ. ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹಲವಾರು ಉಪಯೋಗ ಇರುವ ಹಾಗೂ ತಮ್ಮ ಕೆಲಸವನ್ನು ಈ ಡಿಜಟಲ್‌ ಬ್ಯಾಂಕಿಂಗ್‌ ವ್ಯವಸ್ಥೆಯು ಸುಲಭಗೊಳಿಸಿದ ಹಿನ್ನೆಲೆ ಹೆಚ್ಚಾಗಿ ಡಿಜಟಲ್‌ ವ್ಯವಸ್ಥಯತ್ತ ಗ್ರಾಹಕರು ಮಾತ್ರವಲ್ಲದೇ ಬ್ಯಾಂಕುಗಳು ಕೂಡಾ ವಾಲಿದೆ. ತಮ್ಮ ಹಣಕಾಸನ್ನು ನಿರ್ವಹಿಸಲು, ತಮ್ಮ ಹೂಡಿಕೆಯನ್ನು ನಿರ್ವಹಿಸಲು, ವಿಮೆ ಖರೀದಿಗೆ, ಸಾಲ ಪಡೆಯಲು, ಬಿಲ್‌ ಮೊದಲಾದ ಪಾವತಿಯನ್ನು ಮಾಡಲು ಈ ಡಿಜಟಲ್‌ ವ್ಯವಹಾರ ಸಹಕಾರಿಯಾಗಿದೆ. ಆನ್‌ಲೈನ್‌ ಮೂಲಕ ಸರ್ವರ್‌ ಸಮಸ್ಯೆ ಹೊರತುಪಡಿಸಿ ತಮ್ಮ ಬ್ಯಾಂಕ್‌ ಖಾತೆಯ ಸಂಪೂರ್ಣ ಮಾಹಿತಿ ಬೇಕಾದಾಗ ದೊರೆಯುವ ಕಾರಣ ಈ ಡಿಜಟಲೀಕರಣವು ಅತೀ ಉಪಯುಕ್ತ ಎಂದು ಗ್ರಾಹಕರು ಹೇಳುತ್ತಾರೆ. ನಾವು ಹಣವನ್ನು ಪಾವತಿ ಮಾಡಬಹುದು, "ನಮ್ಮ ಹಣ ಎಷ್ಟಿದೆ ಎಂದು ನಾವೇ ನೋಡಿಕೊಳ್ಳಬಹುದು," ಎಂದು ಗ್ರಾಹಕರು ಹೇಳುತ್ತಾರೆ. ಇನ್ನು ಕೆಲವು ಬ್ಯಾಂಕುಗಳು ಆನ್‌ಲೈನ್‌ ವ್ಯವಹಾರ ನಡೆಸುವವರಿಗೆ ಕೆಲವೊಂದು ವಿನಾಯಿತಿ ಕಲ್ಪಿಸಿರುವುದು ಡಿಜಿಟಲೀಕರಣಕ್ಕೆ ಇನ್ನಷ್ಟು ಉತ್ತೇಜನ ನೀಡಿದ್ದಂತೆ ಆಗಿದೆ. ಇನ್ನು ಈಗ ಮೊದಲು ಖರೀದಿಸಿ ನಂತರ ಪಾವತಿ ಮಾಡುವ ವ್ಯವಸ್ಥೆಯು ಕೂಡಾ ಅತೀ ಹೇರಳವಾಗಿದೆ. ಕೊರೊನಾ ವೈರಸ್‌ ಸೋಂಕು ಲಾಕ್‌ಡೌನ್‌ ಸಂದರ್ಭದಲ್ಲಿ ಇದು ಅತೀ ಹೆಚ್ಚಾಗಿದೆ. ಯಾವುದೇ ಬಡ್ಡಿದರವಿಲ್ಲದ ಆನ್‌ಲೈನ್‌ ಮಾಸಿಕ ಪಾವತಿಯು ಜನರಿಗೆ ಸಹಕಾರಿಯಾಗಿದೆ. ಖರೀದಿ ಮಾಡಿ ಬಳಿಕ ಪಾವತಿ ಮಾಡುವುದನ್ನು ಮೊದಲು ಭಾರತೀಯರೇ ಕಂಡು ಕೊಂಡಿದ್ದಾರೆ. ಹಾಗೆಯೇ ವಿಶ್ವದಲ್ಲೇ ಅಧಿಕವಾಗಿ ಈ ವ್ಯವಸ್ಥೆಯನ್ನು ಭಾರತದಲ್ಲಿ ಪಾಲಿಸಲಾಗುತ್ತಿದೆ.

ಸೆಪ್ಟೆಂಬರ್‌ನಲ್ಲಿ ಆಗಲಿದೆ ವೈಯಕ್ತಿಕ ಹಣಕಾಸಿನಲ್ಲಿ ಈ ಪ್ರಮುಖ ಬದಲಾವಣೆ

 ಡಿಜಿಟಲ್‌ ಪಾವತಿ ಅಧಿಕವಾಗಿದೆ ದೇಶದಲ್ಲಿ

ಡಿಜಿಟಲ್‌ ಪಾವತಿ ಅಧಿಕವಾಗಿದೆ ದೇಶದಲ್ಲಿ

ಕೆಲವು ವರ್ಷದಿಂದ ದೇಶದಲ್ಲಿ ಡಿಜಿಟಲ್‌ ಪಾವತಿಯು ನಿರಂತರ ವೇಗವನ್ನು ಕಂಡು ಕೊಳ್ಳುತ್ತಿದೆ. ಈ ನಡುವೆ ಕೊರೊನಾ ವೈರಸ್‌ ಸಾಂಕ್ರಾಮಿಕ ಸೋಂಕು ಈ ಡಿಜಿಟಲ್‌ ಪಾವತಿಯ ವೇಗವನ್ನು ಇನ್ನಷ್ಟು ಅಧಿಕಗೊಳಿಸಿದೆ. 2020 ರಿಂದ ತಿಂಗಳಿಂದ ತಿಂಗಳಿಗೆ ಡಿಜಿಟಲ್‌ ಪಾವತಿಯ ವೇಗವು ತೀವ್ರ ಪ್ರಮಾಣ ಅಧಿಕವಾಗಿದೆ. ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ ಪ್ರಕಾರ, "ಮೊಬೈಲ್‌ ಪಾವತಿಯು 20,919.08 ಕೋಟಿಗೆ ಅಂದರೆ 7,04,109 ಗೆ ಏರಿಕೆಯಾಗಿದೆ. 2020 ರ ಸೆಪ್ಟೆಂಬರ್‌ ತಿಂಗಳೊಂದರಲ್ಲೇ 34,36,124 ಐಎನ್‌ಆರ್‌ ಅಂದರೆ 28.22 ಕೋಟಿ ಆನ್‌ಲೈನ್‌ ಬ್ಯಾಂಕಿಂಗ್‌ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಮೊಬೈಲ್‌ ವ್ಯಾಲೆಟ್‌, ಯುಪಿಐ ಹಾಗೂ ಕಾರ್ಡ್ ಲೆಸ್‌ ಬಾರ್‌ಕೋಡ್‌ ಸ್ಕಾನರ್‌ ಡಿಜಿಟಲ್‌ ವ್ಯವಹಾರಕ್ಕೆ ಶೀಘ್ರವಾಗಿ ಸೇರ್ಪಡೆಯಾಗಿದೆ.

ಇನ್ನು ಪ್ರಸ್ತುತ ನಮ್ಮ ಮೊಬೈಲ್‌ ನಮ್ಮ ವ್ಯಾಲೆಟ್‌ ಆಗಿದೆ. ನಾವು ಎಲ್ಲಿ ಹೋದರೂ ಮೊಬೈಲ್‌ ಮೂಲಕವೇ ಪಾವತಿ ಮಾಡಲಾಗುವ ಹಲವಾರು ಆಪ್‌ಗಳು ಈಗ ಲಭ್ಯವಿದೆ. ಗೂಗಲ್‌ ಪೇ, ಪೆಟಿಎಂ, ಫೋನ್‌ ಪೇ ಮೊದಲಾದವುಗಳ ಬಳಿಕ ಈಗ ಅತಿಯಾಗಿ ಜನರು ಮಾಡುತ್ತಿದ್ದಾರೆ. ಜನರು ತಮ್ಮ ಬಿಲ್‌ ಪಾವತಿ ಮಾಡಲು, ಆನ್‌ಲೈನ್‌ ಮತ್ತು ಆಫ್‌ಲೈನ್‌ ವ್ಯಾಪಾರಕ್ಕೆ ಪಾವತಿ ಮಾಡಲು, ಸ್ಟಾಕ್‌ ಮಾರುಕಟ್ಟೆಯ ವ್ಯವಹಾರ, ಹೂಡಿಕೆಗೆ, ಸಾಲ ಪಡೆಯಲು, ಲೆಕ್ಕಾಚಾರ ಹಾಕಿಕೊಳ್ಳಲು ಹಾಗೂ ಪಾವತಿ ಬಾಕಿಯನ್ನು ನೆನಪ್ಪಲ್ಲಿಟ್ಟುಕೊಳ್ಳಲು ಈ ಆಪ್‌ಗಳನ್ನು ಬಳಸುತ್ತಿದ್ದಾರೆ ಎಂದು ವರದಿಯು ಹೇಳುತ್ತದೆ.

 

 ಹೂಡಿಕೆಯಲ್ಲೂ ಬದಲಾವಣೆ ತಂದಿದೆ ಕೊರೊನಾ

ಹೂಡಿಕೆಯಲ್ಲೂ ಬದಲಾವಣೆ ತಂದಿದೆ ಕೊರೊನಾ

ಭಾರತದಲ್ಲಿ ಕ್ರಿಪೋಕರೆನ್ಸಿಯನ್ನು ಕಾನೂನು ಬದ್ಧವಾಗಿ ಅನುಮೋದನೆ ಮಾಡಲಾಗುವುದಿಲ್ಲ. 2021 ರ ಗ್ಲೋಬಲ್‌ ಕ್ರಿಪ್ಟೋ ಅಡಾಪ್ಶ ನ್‌ ಇಂಡಕ್ಸ್‌ ಪ್ರಕಾರ ಭಾರತವು ಕ್ರಿಪ್ಟೋಕರೆನ್ಸಿ ಅಳವಡಿಕೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. 2019 ರ ಮೂರನೇ ತ್ರೈಮಾಸಿಕದಿಂದ ಕ್ರಿಪ್ಟೋ ಶೇಕಡ 2,300 ರಷ್ಟು ಬೆಳವಣಿಗೆಯೊಂದಿಗೆ ಜಾಗತಿಕವಾಗಿ ತನ್ನ ಜನಪ್ರಿಯತೆಯನ್ನು ಅಧಿಕಗೊಳಿಸಿದೆ ಎಂಬುವುದುನ್ನು ಸಾಬೀತುಪಡಿಸಿದೆ. ಪ್ರಭಾವಶಾಲಿ ಸಂಖ್ಯೆಗಳ ಹೊರತಾಗಿಯೂ, ವಿಶಾಲ ಕ್ರಿಪ್ಟೋ ಅಳವಡಿಕೆಯಲ್ಲಿ ಇನ್ನೂ ಹಲವು ಸವಾಲುಗಳಿವೆ. ಹೆಚ್ಚಾಗಿ ಊಹಾತ್ಮಕ ಸ್ವತ್ತುಗಳಂತೆ, ಏರಿಳಿತವನ್ನು ನೋಡುತ್ತಾರೆ. ಕ್ರಿಪ್ಟೋದಲ್ಲಿ ಗ್ರಾಹಕರಿಗೆ ಇರುವ ಮಾಹಿತಿ ಕೊರತೆಯು ಸ್ಪಷ್ಟತೆಯ ಕೊರತೆಯನ್ನು ಹೆಚ್ಚಿಸಿದೆ. ಈ ನಡುವೆ ಕ್ರಿಪ್ಟೋಕರೆನ್ಸಿಗಳ ಬೆಲೆಗಳು ಒಮ್ಮೆಲ್ಲೇ ಏರಿಕೆಯಾಗುತ್ತಿದೆ. ಹಾಗೆಯೇ ಒಮ್ಮೆಲ್ಲೇ ಇಳಿಕೆಯಾಗುತ್ತಿದೆ.

 ವಿಮಾ ಕ್ಷೇತ್ರದಲ್ಲಿ ಏನು ಬದಲಾವಣೆಯಾಗಿದೆ?

ವಿಮಾ ಕ್ಷೇತ್ರದಲ್ಲಿ ಏನು ಬದಲಾವಣೆಯಾಗಿದೆ?

ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಉಂಟಾದ ಆರ್ಥಿಕ ಕುಸಿತವು ವಿಮಾ ವಲಯದಲ್ಲಿ ನಿರೀಕ್ಷಿತ ಹಿನ್ನಡೆಗೆ ಕಾರಣವಾಗಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕವು ಮುಖ್ಯವಾಗಿ ಆಸ್ತಿ ವಿಮಾ ವಲಯದ ಮೇಲೆ ಪರಿಣಾಮ ಬೀರಿದೆ. ಜೀವನ ಮತ್ತು ವರ್ಷಾಶನ ಮಾರಾಟವನ್ನು ಕಡಿಮೆಗೊಳಿಸಿದೆ. ಬಡ್ಡಿ ದರಗಳು ಕೂಡ ಕುಸಿತ ಕಂಡಿವೆ. ಈ ಬೆಳವಣಿಯನ್ನು ನೋಡಿದಾಗ ವಿಮಾ ಸೇವಾ ವಲಯದಲ್ಲಿ ಅಧಿಕ ಚೇತರಿಕೆ ಅಗತ್ಯವಿದೆ ಎಂಬುವುದು ಸ್ಪಷ್ಟವಾಗಿದೆ. ಹಣಕಾಸು ವಲಯದಲ್ಲಿ ಖರೀದಿದಾರರ ಆದ್ಯತೆಯು ಬದಲಾದಂತೆ, ಗ್ರಾಹಕರ ಬೇಡಿಕೆಯನ್ನು ಪೂರೈಸುವತ್ತ ವಿಮಾ ಸೇವೆಗಳು ಅಧಿಕ ಗಮನ ಹರಿಸುತ್ತಿದೆ.

 ಸಾಲ ಪಡೆಯುವ ಪ್ರಮಾಣವು ಅಧಿಕ

ಸಾಲ ಪಡೆಯುವ ಪ್ರಮಾಣವು ಅಧಿಕ

ಡಿಜಿಟಲ್‌ ವ್ಯವಸ್ಥೆಯ ಮೂಲಕ ಸಾಲ ಪಡೆಯುವ ಹೊಸ ಆರ್ಥಿಕ ವ್ಯವಸ್ಥೆಯು ಬಹಳ ಶೀಘ್ರವಾಗಿ ಬೆಳಯುತ್ತಿರುವ ಹಾಗೂ ಪ್ರಮುಖವಾದ ಡಿಜಿಟಲ್‌ ವ್ಯವಸ್ಥೆಯಲ್ಲಿ ಒಂದಾಗಿ ಹೊರಹೊಮ್ಮಿವೆ. ಬ್ಯಾಂಕ್‌ನಲ್ಲಿ ಸಾಂಪ್ರಾದಾಯಿಕವಾಗಿ ನೀಡುವ ಸಾಲ ಪದ್ಧತಿಗೆ ಹೋಲಿಕೆ ಮಾಡಿದರೆ ಈ ಡಿಜಿಟಲ್‌ ವ್ಯವಸ್ಥೆಯು ಬಹಳ ಸುಲಭವಾಗಿ ಜನರಿಗೆ ಸಾಲ ಒದಗಿಸುವಂತಹ ವ್ಯವಸ್ಥೆಯಾಗಿದೆ. ಈ ಹೊಸ ಸ್ಟಾರ್ಟ್‌ಅಪ್‌ಗಳು ಗ್ರಾಹಕ ಸ್ನೇಹಿ ಸಾಲ ಪರಿಹಾರಗಳನ್ನು ನೀಡುತ್ತವೆ. ಉದಾಹರಣೆಗೆ ಮೊದಲು ಖರೀದಿ ಮಾಡಿ ಬಳಿಕ ಇನ್ಸ್‌ಸ್ಟಾಲ್‌ಮೆಂಟ್‌ ಮೂಲಕ ಪಾವತಿ ಮಾಡುವ ವ್ಯವಸ್ಥೆ, ಯಾವುದೇ ಬಡ್ಡಿದರವಿಲ್ಲದೆಯೇ ಸಾಲ ಪಡೆಯುವ ವ್ಯವಸ್ಥೆಯು ಗ್ರಾಹಕರಿಗೆ ಸಹಕಾರಿಯಾಗಿದೆ. ಈ ಆನ್‌ಲೈನ್‌ ಸಾಲ ಪದ್ಧತಿಯು ಬ್ಯಾಂಕುಗಳ ಕಟ್ಟುನಿಟ್ಟಾದ ದಾಖಲೀಕರಣಕ್ಕೆ ಕೊಂಚ ರಿಲೀಫ್‌ ನೀಡುತ್ತದೆ.

ಉದ್ಯಮವು ಪ್ರಸ್ತುತ ಬಿ 2 ಬಿ ಸಾಲವನ್ನು ಅಧಿಕವಾಗಿ ನೀಡುತ್ತಿದೆ. ಆದರೆ ಗ್ರಾಹಕರ ಸಾಲ ಕೂಡ ಹೆಚ್ಚುತ್ತಿದೆ. ಒಂದು ಅಂದಾಜಿನ ಪ್ರಕಾರ, ಗ್ರಾಹಕ ಸಾಲ ನೀಡುವ ಸ್ಟಾರ್ಟ್ಅಪ್‌ಗಳಿಗೆ ಧನಸಹಾಯವು ಒಟ್ಟು ಡಿಜಿಟಲ್ ಸಾಲದ ಹೂಡಿಕೆಯ ಶೇಕಡ 16 ಆಗಿತ್ತು. ಆದರೆ ಬಿ2ಬಿ ಸಾಲ ಧನಸಹಾಯವು 2014-2020 ರ ನಡುವೆ ಶೇಕಡ 54 ರಷ್ಟಿತ್ತು. ಇದು ದೀರ್ಘಾವಧಿಯ ಸಾಲ ನೀಡುವ ಮೂಲಸೌಕರ್ಯ ವಿಶ್ವಾಸಾರ್ಹತೆಗೆ ಅನುಕೂಲಕರವಾಗಿದೆ. ಯುಪಿಐ, ಡಿಜಿಲಾಕರ್‌, ಸಿ ಕೆವೈಸಿ, ಡಿಜಿಟಲ್‌ ಕೆವೈಸಿ, ಆಧಾರ್‌ ಎನೆಬಲ್ಡ್‌ ಪೇಮೆಂಟ್‌ ಸಿಸ್ಟಮ್‌, ಜಿಎಸ್‌ಟಿಎನ್‌, ಭಾರತ್‌ ಬಿಲ್‌ ಪೇ, ವ್ಯಾಪಾರ ಸ್ವೀಕಾರಾರ್ಹ ರಿಯಾಯಿತಿ ವ್ಯವಸ್ಥೆ (TreDs) ಈ ಕ್ರಮಗಳು ಇದರಲ್ಲಿ ಸೇರಿದೆ. ಡಿಜಿಟಲ್ ಗ್ರಾಹಕ ಸಾಲಗಳು ಈಗ ವಸತಿ ಮತ್ತು ಶಿಕ್ಷಣಕ್ಕೆ ಅತೀ ಸುಲಭವಾಗಿ ಲಭ್ಯವಿವೆ.

(ಒನ್‌ ಇಂಡಿಯಾ ಸುದ್ದಿ)

 

English summary

Covid Has Changed Personal Finance In India, What’s New Explained in Kannada

Covid Has Changed Personal Finance In India: Here are areas of financial services that have steadily transformed the personal finance ecosystem in India. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X