For Quick Alerts
ALLOW NOTIFICATIONS  
For Daily Alerts

ಪಿಎಫ್ ವಿಥ್ ಡ್ರಾ: ಜನ್ಮ ದಿನಾಂಕ ತಿದ್ದುಪಡಿ ಕುರಿತಂತೆ ಆದೇಶ

|

ನವದೆಹಲಿ, ಏಪ್ರಿಲ್ 06: ಕೊರೊನಾವೈರಸ್ ನಿಂದ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ವಿಥ್ ಡ್ರಾಗೆ ಸಂಬಂಧಿಸಿದಂತೆ ಹೊಸದಾಗಿ ವಿನಾಯಿತಿ ನೀಡಲಾಗಿದೆ. EPFO ಸದಸ್ಯರು ತಮ್ಮ ಅಗತ್ಯಗಳಿಗೆ ಹಣ ವಿಥ್ ಡ್ರಾ ಮಾಡಬಹುದಾಗಿದೆ. ಜೊತೆಗೆ ಜನ್ಮದಿನಾಂಕ ತಿದ್ದುಪಡಿ ಕುರಿತಂತೆ ಹೊಸ ಬದಲಾವಣೆ ಬಗ್ಗೆ ಕೂಡಾ ಪ್ರಕಟಣೆ ಹೊರಡಿಸಲಾಗೆ

 

ಅನಾರೋಗ್ಯ, ಮನೆ ಖರೀದಿ ಸೇರಿದಂತೆ ಇತರ ಕಾರಣಗಳಿಗಾಗಿ ಮರುಪಾವತಿ ಮಾಡುವ ಅಗತ್ಯ ಇಲ್ಲದೆ ಪಿಎಫ್ ಹಣ ವಿಥ್ ಡ್ರಾ ಮಾಡಬಹುದಿತ್ತು. ಆದರೆ ಕೊರೊನಾ ವ್ಯಾಪಕವಾಗಿ ಹರಡಿರುವುದರಿಂದ ತುರ್ತು ಹಣಕಾಸಿನ ಅಗತ್ಯಗಳಿಗೆ ಸಮಸ್ಯೆ ಆಗಬಾರದು ಎಂದು ಸರ್ಕಾರದಿಂದ ಈ ನಿರ್ಧಾರ ಮಾಡಲಾಗಿದೆ.

ಮುಂದಿನ 3 ತಿಂಗಳು ಸರ್ಕಾರವೇ ಪಾವತಿಸಲಿದೆ PF ಹಣ: 75% ಇಪಿಎಫ್ ಮುಂಗಡ ಮೊತ್ತ ಪಡೆಯಲು ಅವಕಾಶ

ಇಪಿಎಫ್ಒ ನಿಯಂತ್ರಣ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಶೇ 75 ರಷ್ಟು ಹಣ ಅಥವಾ ಮೂರು ತಿಂಗಳ ಸಂಬಳ ವಿಥ್ ಡ್ರಾ ಮಾಡಲು ಅನುಮತಿ ಸಿಗಲಿದೆ. ಇದರಿಂದ 4 ಕೋಟಿ 80 ಲಕ್ಷ ಚಂದಾದಾರರಿಗೆ ಅನುಕೂಲವಾಗಲಿದೆ.

ಆಧಾರ್ ಕಾರ್ಡ್ ಬಳಸಿ ತಿದ್ದುಪಡಿ

ಆಧಾರ್ ಕಾರ್ಡ್ ಬಳಸಿ ತಿದ್ದುಪಡಿ

ಭವಿಷ್ಯ ನಿಧಿ ಚಂದಾದಾರರ ಖಾತೆಯಲ್ಲಿ ನಮೂದಿಸಿರುವ ಜನ್ಮ ದಿನಾಂಕದಲ್ಲಿ ಏನಾದರೂ ತಪ್ಪಿದ್ದು ಬದಲಾವಣೆ ಮಾಡಬೇಕಿದ್ದರೆ ತುಂಬಾ ಕಷ್ಟವಾಗುತ್ತಿತ್ತು. ಈಗ ಇದನ್ನು ಸರಿಪಡಿಸಲು ಆಧಾರ್ ಕಾರ್ಡ್ ಬಳಸಲು ಅನುಮತಿ ಸಿಕ್ಕಿದೆ. ಆಧಾರ್ ಕಾರ್ಡನ್ನು ಪುರಾವೆಯಾಗಿ ಸಲ್ಲಿಸಿ ಆನ್ ಲೈನ್ ನಲ್ಲಿ ಜನ್ಮ ದಿನಾಂಕ ಸರಿಪಡಿಸಿಕೊಳ್ಳಲು ಇಪಿಎಫ್ ಒ ಒಪ್ಪಿಗೆ ನೀಡಿದೆ.

ಎಷ್ಟು ಪ್ರಮಾಣದಲ್ಲಿ ವ್ಯತ್ಯಾಸ ಮಿತಿ

ಎಷ್ಟು ಪ್ರಮಾಣದಲ್ಲಿ ವ್ಯತ್ಯಾಸ ಮಿತಿ

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪಿಎಫ್ ಸಂಬಂಧಿಸಿದ ಆನ್ ಲೈನ್ ಸೇವೆಗಳು ಚಂದಾದಾರರಿಗೆ ಸೂಕ್ತವಾಗಿ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಇಪಿಎಫ್ ಒ ಅನೇಕ ವಿಧಾನಗಳನ್ನು ಜಾರಿಗೆ ತಂದಿವೆ. ಇತ್ತೀಚೆಗೆ ಪ್ರಕಟಿಸಿರುವ ಪರಿಷ್ಕೃತ ನಿಯಮದ ಪ್ರಕಾರ, ಜನ್ಮ ದಿನಾಂಕದಲ್ಲಿ 3 ವರ್ಷಕ್ಕಿಂತ ಕಡಿಮೆ ವ್ಯತ್ಯಾಸ ಇದ್ದರೆ ಮಾತ್ರ, ಅಂಥಾ ಪ್ರಕರಣಗಳಲ್ಲಿ ಮಾತ್ರ ಆಧಾರ್ ಕಾರ್ಡ್ ಪುರಾವೆಯಾಗಿ ಬಳಸಲು ಅನುಮತಿ ನೀಡಲಾಗಿದೆ.

ಭವಿಷ್ಯ ನಿಧಿ ಲೆಕ್ಕಾಚಾರ ಹೇಗೆ?
 

ಭವಿಷ್ಯ ನಿಧಿ ಲೆಕ್ಕಾಚಾರ ಹೇಗೆ?

ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ. ನೌಕರನ ಸಂಬಳ 15 ಸಾವಿರಕ್ಕಿಂತ ಕಡಿಮೆಯಿದ್ರೆ ಆತನ ಸಂಬಳದಲ್ಲಿ ಪ್ರತಿ ತಿಂಗಳು ಶೇಕಡಾ 12ರಷ್ಟು ಭಾಗ ಪಿಎಫ್ ಖಾತೆ ಸೇರುತ್ತದೆ. ಕಂಪನಿ ಶೇಕಡಾ 8.33ರಷ್ಟು ಪಿಂಚಣಿ ಯೋಜನೆಗೆ ಹಾಗೂ ಶೇಕಡಾ 3.67ರಷ್ಟು ಇಪಿಎಫ್ ಗೆ ಹಣ ನೀಡುತ್ತದೆ.

ಎಷ್ಟು ಪ್ರಮಾಣದ ವಿಥ್ ಡ್ರಾ ಸಾಧ್ಯ?

ಎಷ್ಟು ಪ್ರಮಾಣದ ವಿಥ್ ಡ್ರಾ ಸಾಧ್ಯ?

ಮೂಲವೇತನ(Basic Pay)+ ತುಟ್ಟಿ ಭತ್ಯೆ (DA) ಸೇರಿ ಮೂರು ತಿಂಗಳ ಮೊತ್ತ (ಪೂರ್ತಿ ವೇತನ ಅಲ್ಲ) ಅಥವಾ ಪಿಎಫ್ ಒಟ್ಟು ಮೊತ್ತದ ಶೇಕಡಾ 75ರಷ್ಟು ಇವೆರಡರಲ್ಲಿ ಯಾವ ಮೊತ್ತವು ಕಡಿಮೆಯೋ ಅಷ್ಟನ್ನು ಮಾತ್ರ ವಿಥ್ ಡ್ರಾ ಮಾಡಬಹುದು. ಆ ಮುಂಗಡವನ್ನು ಹಿಂತಿರುಗಿಸಬೇಕು ಅಂತೇನೂ ಇಲ್ಲ. ಇದಕ್ಕಾಗಿ ಇಪಿಎಫ್ ಯೋಜನೆ 1952ರಲ್ಲಿ ಬದಲಾವಣೆ ಮಾಡಲಾಗಿದೆ.

English summary

Covid19:EPFO to accept Aadhaar as birth proof online

The date of birth recorded in Aadhaar will now be accepted as valid proof of date of birth for the purpose of rectification, provided that the difference in two dates is less than 3 years
Story first published: Monday, April 6, 2020, 14:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X