For Quick Alerts
ALLOW NOTIFICATIONS  
For Daily Alerts

ದೀಪಾವಳಿ 2022: ನಿಮ್ಮ ಕುಟುಂಬಕ್ಕೆ ಈ ಗಿಫ್ಟ್ಸ್ ನೀಡಿ

|

ದೀಪಾವಳಿ ಹಬ್ಬ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ಈಗಾಗಲೇ ಎಲ್ಲ ತಯಾರಿಯಲ್ಲಿ ಜನರು ತೊಡಗಿದ್ದಾರೆ. ಮನೆಗೆ ಬೇಕಾದ ಅಲಂಕಾರಿಕ ವಸ್ತುಗಳು, ಪಟಾಕಿಗಳು, ಹೊಸ ಬಟ್ಟೆ ಎಲ್ಲ ಖರೀದಿಗಳು ಬರದಿಂದ ಸಾಗುತ್ತಿದೆ. ಆದರೆ ನಾವು ನಮ್ಮ ಪ್ರೀತಿಪಾತ್ರರಿಗೆ, ಕುಟುಂಬದವರಿಗೆ ಉಡುಗೊರೆ ನೀಡುವ ಸಂದರ್ಭದಲ್ಲಿ ಕೊಂಚ ಎಡುವುತ್ತೇವೆ ಅನಿಸುವುದಿಲ್ಲವೇ?

ನಮ್ಮ ಕುಟುಂಬದವರಿಗೆ ದೀಪಾವಳಿ ಉಡುಗೊರೆಯನ್ನು ನೀಡುವ ಸಂದರ್ಭದಲ್ಲಿ ಆ ಗಿಫ್ಟ್ ಅವರಿಗೆ ಎಷ್ಟು ಸಹಾಯಕ ಎಂಬುವುದುನ್ನು ಕೂಡಾ ನೋಡಬೇಕಾಗುತ್ತದೆ. ಅವರ ಭವಿಷ್ಯದಲ್ಲಿಯೂ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವಂತಹ ಉಡುಗೊರೆಯನ್ನು ನೀಡಿದರೆ, ಉಡುಗೊರೆ ನೀಡಿರುವುದಕ್ಕೂ ಸಾರ್ಥಕ.

ದೀಪಾವಳಿ ಸಂಭ್ರಮ: ತೆರಿಗೆ ಪಾವತಿಸದೆಯೇ ಎಷ್ಟು ಹಣ ಉಡುಗೊರೆ ಪಡೆಯಬಹುದು?ದೀಪಾವಳಿ ಸಂಭ್ರಮ: ತೆರಿಗೆ ಪಾವತಿಸದೆಯೇ ಎಷ್ಟು ಹಣ ಉಡುಗೊರೆ ಪಡೆಯಬಹುದು?

ನೀವು ನಿಮ್ಮ ಕುಟುಂಬ, ಪ್ರೀತಿಪಾತ್ರರ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದೀರಿ ಎಂಬುವುದುನ್ನು ಸಾಬೀತುಪಡಿಸಲು ಉತ್ತಮ ಅವಕಾಶ ಒಂದಿದೆ. ಅಂತಹ ಉಡುಗೊರೆಯನ್ನು ನೀವು ಈ ದೀಪಾವಳಿ ಹಬ್ಬದ ವೇಳೆ ನೀಡಬಹುದು. ಯಾವೆಲ್ಲ ಉಡುಗೊರೆಯನ್ನು ನೀವು ನೀಡಬಹುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಡಿಜಿಟಲ್ ಗೋಲ್ಡ್

ಡಿಜಿಟಲ್ ಗೋಲ್ಡ್

ಚಿನ್ನವನ್ನು ನಾವು ಎಂದಿಗೂ ಸಂಪತ್ತಿನ ಪ್ರತೀಕ ಎಂದು ಪರಿಗಣಿಸುತ್ತೇವೆ. ಯಾವುದೇ ಕಷ್ಟ ಸಂದರ್ಭದಲ್ಲಿಯೂ ಚಿನ್ನವು ಸಹಾಯವಾಗಿದೆ. ಅದರಲ್ಲೂ ಭಾರತೀಯರಿಗೆ ಚಿನ್ನದ ಮೇಲೆ ಭಾವನಾತ್ಮಕ ಸಂಬಂಧವಿದೆ. ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೀವು ನಿಮ್ಮ ಮಕ್ಕಳು, ಸಂಗಾತಿಗೆ ಚಿನ್ನವನ್ನು ಉಡುಗೊರೆಯಾಗಿ ನೀಡಬಹುದು. ನೀವು ಸವರನ್ ಗೋಲ್ಡ್, ಗೋಲ್ಡ್ ಇಟಿಎಫ್, ಗೋಲ್ಡ್ ಸೇವಿಂಗ್ ಫಂಡ್ ಅನ್ನು ಕೂಡಾ ಉಡುಗೊರೆಯಾಗಿ ನೀಡಬಹುದು. ಈ ಡಿಜಿಟಲ್ ಗೋಲ್ಡ್ ನೀಡಿದರೆ ಯಾವುದೇ ಕಳ್ಳತನದ ಆತಂಕ ಇರುವುದಿಲ್ಲ.

 ಆರೋಗ್ಯ ವಿಮೆ: ಕುಟುಂಬ ಸುರಕ್ಷಿತ

ಆರೋಗ್ಯ ವಿಮೆ: ಕುಟುಂಬ ಸುರಕ್ಷಿತ

ಪ್ರಸ್ತುತ ಪರಿಸ್ಥಿತಿಯಲ್ಲಿ ಆರೋಗ್ಯ ವಿಮೆಯೂ ಎಲ್ಲರಿಗೂ ತೀರಾ ಅಗತ್ಯವಾಗಿದೆ. ಯಾವ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ನಮಗೆ ತಿಳಿದಿರುವುದಿಲ್ಲ. ಅಂತಹ ಸಂದರ್ಭದಲ್ಲಿ ನಮಗೆ ಆರೋಗ್ಯ ವಿಮೆ ಸಹಾಯಕವಾಗುತ್ತದೆ. ನಮ್ಮ ಕೈಯಿಂದ ಹಣ ಖರ್ಚಾಗುವುದನ್ನು ಆರೋಗ್ಯ ವಿಮೆ ತಪ್ಪಿಸುತ್ತದೆ. ಹಾಗೆಯೇ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಕುಟುಂಬದ ರಕ್ಷಣೆಯೇ ಆರೋಗ್ಯ ವಿಮೆ. ನೀವು ಇಡೀ ಕುಟುಂಬಕ್ಕಾಗಿ ಇರುವ ಆರೋಗ್ಯ ವಿಮೆಯನ್ನು ಕೂಡಾ ಖರೀದಿ ಮಾಡಬಹುದು. ನೀವು ಮೆಟ್ರೋ ನಗರದಲ್ಲಿ ವಾಸಿಸುತ್ತಿದ್ದರೆ ಸುಮಾರು 10 ಲಕ್ಷ ರೂಪಾಯಿಯ ಆರೋಗ್ಯ ವಿಮೆಯನ್ನು ಖರೀದಿ ಮಾಡಿದರೆ ಉತ್ತಮ, ಏಕೆಂದರೆ ಮೆಟ್ರೋ ನಗರದಲ್ಲಿ ಆಸ್ಪತ್ರೆ ವೆಚ್ಚ ಅಧಿಕವಾಗಿದೆ.

 ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ

ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ

ನೀವು ಅಪಾಯವನ್ನು ಎದುರಿಸಲು ಸಿದ್ಧವಾಗಿರುವುದಾದರೆ ಸ್ಟಾಕ್ಸ್‌ ಅಥವಾ ಷೇರು ಖರೀದಿ ಮಾಡಿ ಅದನ್ನು ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಬಹುದು. ಡಿಮ್ಯಾಟ್ ಖಾತೆಗೆ ನೇರವಾಗಿ ಷೇರು ವರ್ಗಾವಣೆ ಮಾಡಲು ಸಾಧ್ಯವಾಗಲಿದೆ. ನೀವು ಈ ಬಗ್ಗೆ ಮಾಹಿತಿ ನೀಡಿದರೆ ಸಾಕಾಗುತ್ತದೆ. ಆ ಬಳಿಕ ಆ ಷೇರು ಪಡೆದವರು ಪ್ರಕ್ರಿಯೆ ಪೂರ್ಣಗೊಳಿಸಿದರೆ ಆಯಿತು. ಆದರೆ ಯಾವುದೇ ಷೇರು ಖರೀದಿ ಮಾಡುವ ಸಂದರ್ಭದಲ್ಲಿ ತಜ್ಞರಲ್ಲಿ ಮಾಹಿತಿ ಪಡೆದು ಷೇರು ಖರೀದಿ ಮಾಡಿ.

 ಸುಕನ್ಯ ಸಮೃದ್ಧಿ ಯೋಜನೆಯೂ ಉತ್ತಮ ಆಯ್ಕೆ

ಸುಕನ್ಯ ಸಮೃದ್ಧಿ ಯೋಜನೆಯೂ ಉತ್ತಮ ಆಯ್ಕೆ

ನೀವು ನಿಮ್ಮ ಹೆಣ್ಣು ಮಕ್ಕಳಿಗೆ ಈ ದೀಪಾವಳಿ ಸಂದರ್ಭದಲ್ಲಿ ನೀಡಬಹುದಾದ ಉತ್ತಮ ಉಡುಗೊರೆ ಸುಕನ್ಯ ಸಮೃದ್ಧಿ ಯೋಜನೆಯಾಗಿದೆ. ಇದು ತೆರಿಗೆ ಉಳಿತಾಯ ಯೋಜನೆ ಕೂಡಾ ಹೌದು. ಇದು ಸರ್ಕಾರದ ಯೋಜನೆಯಾಗಿದೆ. ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮದಡಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಇರುವ ಯೋಜನೆ ಇದಾಗಿದೆ. ಪೋಷಕರು ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಎರಡು ಖಾತೆಯನ್ನು ತೆರೆಯಲು ಅವಕಾಶವಿದೆ. ಆದರೆ ಒಂದೇ ಮಗುವಿನ ಹೆಸರಿನಲ್ಲಿ ಎರಡು ಖಾತೆ ತೆರೆಯಲು ಸಾಧ್ಯವಿಲ್ಲ. ಈ ಯೋಜನೆಯಲ್ಲಿ ಹೂಡಿಕೆ ಮೇಲೆ ಶೇಕಡ 7.6ರಷ್ಟು ಬಡ್ಡಿದರ ನೀಡಲಾಗುತ್ತದೆ. ಯಾವುದೇ ಅಧಿಕೃತ ಬ್ಯಾಂಕ್, ಅಂಚೆ ಕಚೇರಿಯಲ್ಲಿ ಈ ಖಾತೆಯನ್ನು ತೆರೆಯಬಹುದು.

 ಜೀವ ವಿಮೆ: ಜೀವನ ಸುರಕ್ಷಿತ

ಜೀವ ವಿಮೆ: ಜೀವನ ಸುರಕ್ಷಿತ

ಜೀವ ವಿಮೆಯು ಅತೀ ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ ಇದು ನಿಮ್ಮ ಪ್ರೀತಿಪಾತ್ರರಿಗೆ ಹಣಕಾಸು ಸುರಕ್ಷತೆ ನೀಡುತ್ತದೆ. ಯಾವುದೇ ತುರ್ತು ಉಂಟಾದಾಗ ಈ ವಿಮೆಯನ್ನು ಕ್ಲೈಮ್ ಮಾಡಿಕೊಳ್ಳಲು ಸಾಧ್ಯವಾಗಲಿದೆ. ನೀವು ಈ ಹಬ್ಬದ ವೇಳೆ ನಿಮ್ಮ ಪ್ರೀತಿ ಪಾತ್ರರಿಗೆ ಜೀವ ವಿಮೆಯನ್ನು ಗಿಫ್ಟ್ ಆಗಿ ನೀಡಬಹುದು.

Dhanteras : ಧನತ್ರಯೋದಶಿ ದಿನವೇ ಜನರು ಚಿನ್ನ ಖರೀದಿಸುವುದೇಕೆ?Dhanteras : ಧನತ್ರಯೋದಶಿ ದಿನವೇ ಜನರು ಚಿನ್ನ ಖರೀದಿಸುವುದೇಕೆ?

English summary

Deepavali 2022: Financial Products to Gift to Your Family

Deepavali 2022: Here are the few financial products that you can gift to your family this year. Health insurance, digital gold, mutual fund and others. Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X