For Quick Alerts
ALLOW NOTIFICATIONS  
For Daily Alerts

ಯಶೋಗಾಥೆ: 2 ವರ್ಷದಲ್ಲಿ 200 ಮಹಿಳಾ ಉದ್ಯಮಿ ಸೃಷ್ಟಿಸಿದ 'ಧೃತಿ'

|

ಬೆಂಗಳೂರು, ಜೂ. 02: ಆರು ತಿಂಗಳ ಮಕ್ಕಳಿಗೆ ಪೌಷ್ಟಿಕ ಆಹಾರ ತಯಾರಿಸಿ ತಿಂಗಳಿಗೆ ಮೂರು ಕೆ.ಜಿ. ಮಾರಾಟ ಮಾಡುತ್ತಿದ್ದರು. ಈಗ ಮಾರಾಟ ಪ್ರಮಾಣ ಮೂರು ಕ್ವಿಂಟಾಲ್‌ಗೆ ಏರಿದೆ. ಕೆಲಸಕ್ಕಾಗಿ ಅಲೆಯುತ್ತಿದ್ದ ಕೈಗಳೇ ಈಗ ಕೆಲಸ ಕೊಟ್ಟಿವೆ! ಇದು ಕೇವಲ ಒಂದು ಉದಾಹರಣೆ.

 

ಕಳೆದ ಎರಡು ವರ್ಷದಲ್ಲಿ ಇಂತಹ 200 ಮಹಿಳಾ ಪುಟ್ಟ ಉದ್ಯಮಿಗಳನ್ನು ಹುಟ್ಟು ಹಾಕಿದೆ ಧೃತಿ ಮಹಿಳಾ ಮಾರುಕಟ್ಟೆ. ಹೌದು. ನಾನು ಏನಾದರೂ ಸ್ವಂತ ಉದ್ಯಮ ಸ್ಥಾಪಿಸುತ್ತೇನೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತೇನೆ ಎನ್ನುವ ಹೆಣ್ಣು ಮಕ್ಕಳಿಗೆ ಧೃತಿ ಮಹಿಳಾ ಮಾರುಕಟ್ಟೆ ದಾರಿ ದೀಪವಾಗಿದೆ. ಕೊರೊನಾ ಸಾಂಕ್ರಾಮಿಕ ಸಂಕಷ್ಟ ಕಾಲದಲ್ಲಿ ಹೆಣ್ಣು ಮಕ್ಕಳ ಸ್ವಾವಲಂಬಿ ಬದುಕಿಗೆ 'ನ್ಯಾಯ- ನೀತಿ- ನೈತಿಕತೆ' ತತ್ವದ ಆಧಾರದ ಮೇಲೆ ಅಪರ್ಣ ರಾವ್ ಹುಟ್ಟು ಹಾಕಿದ ಧೃತಿ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ.

ಮಹಿಳಾ ದಿನಾಚರಣೆ: ಧೃತಿ ಮಹಿಳಾ ಮಾರುಕಟ್ಟೆ ಯಶೋಗಾಥೆ ಪುಸ್ತಕ ಬಿಡುಗಡೆ

ಹೆಣ್ಣು ಮಕ್ಕಳ ಬದುಕಿಗೆ ಪುಟ್ಟ ದಾರಿ ಧೃತಿ

ಹೆಣ್ಣು ಮಕ್ಕಳ ಬದುಕಿಗೆ ಪುಟ್ಟ ದಾರಿ ಧೃತಿ

ಬರೋಬ್ಬರಿ ಒಂದು ಸಾವಿರ ಹೆಣ್ಣು ಮಕ್ಕಳ ಸ್ವಾವಲಂಬಿ ಕನಸುಗಳು ಇಲ್ಲಿ ನನಸಾಗುತ್ತಿವೆ. ಈಗಾಗಲೇ 200 ಹೆಣ್ಣು ಮಕ್ಕಳು ಪುಟ್ಟ ಉದ್ಯಮಿಗಳು ಆಗಿ ರೂಪಗೊಂಡಿದ್ದಾರೆ. ದಿನದಿಂದ ದಿನಕ್ಕೆ ಧೃತಿ ಮಹಿಳಾ ಮಾರುಕಟ್ಟೆ ಕುಟುಂಬಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕೇವಲ ದಿನಕ್ಕೆ 500 ರೂ. ದುಡಿಯುವ ಆಸೆ ಹೊತ್ತು ಬಂದವರು ಇದೀಗ ಆದಾಯ ತೆರಿಗೆ ಪಾವತಿ ಮಾಡುವ ಹಂತಕ್ಕೆ ಬೆಳೆದು ನಿಂತಿದ್ದಾರೆ. 30 ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಆದಾಯ ಲಕ್ಷಗಳು ದಾಟಿದೆ. ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಇಬ್ಬರು ಮಹಿಳೆಯರು ಹುಟ್ಟು ಹಾಕಿದ ಫೇಸ್ ಬುಕ್ ಗ್ರೂಪ್ ವೇದಿಕೆ ಧೃತಿ ಮಹಿಳಾ ಮಾರುಕಟ್ಟೆ ಇದೀಗ ಹೆಣ್ಣು ಮಕ್ಕಳ ಸ್ವಂತ ದುಡಿಮೆಗೆ ಮುಕ್ತ ಅವಕಾಶ ಕಲ್ಪಿಸಿದೆ.

ಇಬ್ಬರು ಹೆಣ್ಣು ಮಕ್ಕಳ ಕನಸಿನ ಕೂಸು ಧೃತಿ
 

ಇಬ್ಬರು ಹೆಣ್ಣು ಮಕ್ಕಳ ಕನಸಿನ ಕೂಸು ಧೃತಿ

ಧೃತಿಗೆಟ್ಟ ಸಂಕಷ್ಟಸ್ಥಿತಿಯಲ್ಲಿ ಹುಟ್ಟಿದ್ದೇ ಧೃತಿ: 2020 ಕೊರೊನಾ ಸಂಕಷ್ಟ ದಿನಗಳು. ಕೆಲಸ ಕಳೆದುಕೊಂಡಿದ್ದ ಹೆಣ್ಣು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಹೆಣ್ಣು ಮಕ್ಕಳ ಕೌಶಲ್ಯಕ್ಕೆ ಆನ್‌ಲೈನ್‌ನಲ್ಲಿ ಒಂದು ವೇದಿಕೆ ಕಲ್ಪಿಸಿ ಅವರ ಸ್ವಾವಲಂಬಿ ಬದುಕಿಗೆ ನಾಂದಿ ಹಾಡುವ ಉದ್ದೇಶದಿಂದ ಅಪರ್ಣ ರಾವ್ ಎಂಬ ಹೆಣ್ಣು ಮಗಳು ಕಂಡ ಕನಸೇ ಧೃತಿ ಮಹಿಳಾ ಮಾರುಕಟ್ಟೆ. ಸಣ್ಣ ವ್ಯಾಪಾರ ಮಾಡುವರಿಗೆ ಆನ್‌ಲೈನ್‌ನಲ್ಲಿ ವೇದಿಕೆ ಕಲ್ಪಿಸುವ ಒಂದು ಸಮೂಹವೇ ಧೃತಿ. 2020 ರ ಮೇ ನಲ್ಲಿ ಧೃತಿ ಹುಟ್ಟಿಕೊಂಡಿದ್ದೇ, ಅದಕ್ಕೆ ಕೈ ಜೋಡಿಸಿದ್ದು ಶೋಭಾ ರಾವ್. ಈ ಇಬ್ಬರು ಹೆಣ್ಣು ಮಕ್ಕಳು ಸಹಾಯಹಸ್ತ ಉದ್ದೇಶದಿಂದ ಹುಟ್ಟಿ ಹಾಕಿದ ಧೃತಿ ಮಹಿಳಾ ಮಾರುಕಟ್ಟೆಯಲ್ಲಿ ಬರೋಬ್ಬರಿ 1000 ಸಾವಿರ ಹೆಣ್ಣು ಮಕ್ಕಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಎರಡು ವರ್ಷದಲ್ಲಿ ಧೃತಿ ಬಳಗದಲ್ಲಿ 46 ಸಾವಿರ ಸದಸ್ಯರಿದ್ದಾರೆ. 200 ಹೆಣ್ಣು ಮಕ್ಕಳು ನಿರೀಕ್ಷೆ ಮೀರಿ ಯಶಸ್ಸು ಗಳಿಸಿದ್ದಾರೆ. ಅದರಲ್ಲಿ 30 ಹೆಣ್ಣು ಮಕ್ಕಳು ತಮ್ಮ ಉತ್ಪನ್ನಗಳನ್ನು ದಾಖಲೆ ಮಟ್ಟದಲ್ಲಿ ಮಾರಾಟ ಮಾಡಿ ಮಹತ್ವದ ಸಾಧನೆ ಮಾಡಿದ್ದಾರೆ.

ಧೃತಿ ನೀತಿ ನಿಯಮ ಏನು?

ಧೃತಿ ನೀತಿ ನಿಯಮ ಏನು?

ಯಾರಾದರೂ ಹೆಣ್ಣು ಮಕ್ಕಳು ಆಹಾರ, ಬಟ್ಟೆ, ಕೌಶಲ್ಯ, ಕಲೆ ಯಾವುದೇ ವಸ್ತು ಅಥವಾ ಸೇವೆಯ ಮಾರಾಟಕ್ಕೆ ಮುಕ್ತ ವೇದಿಕೆ ಕಲ್ಪಿಸಿದೆ ಧೃತಿ ಮಹಿಳಾ ಮಾರುಕಟ್ಟೆ. ದೃತಿ ಬಳಗ ಸೇರಲು ಯಾರಿಗೂ ಐದು ಪೈಸೆ ಕಟ್ಟುವಂತಿಲ್ಲ. ಧೃತಿಯನ್ನು ಸಂಪರ್ಕಿಸಿದರೆ ಒಂದು ಐಡಿಯನ್ನು ನೀಡಲಾಗುತ್ತದೆ. ಆ ಐಡಿಯ ಮೂಲಕವೇ ತಮ್ಮ ವಸ್ತುಗಳನ್ನು ಧೃತಿ ಮಹಿಳಾ ಮಾರುಕಟ್ಟೆ ಫೇಸ್ ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಅದನ್ನು ನೋಡಿ ಅಲ್ಲಿನ ಸದಸ್ಯರು,ಸದಸ್ಯರೇತರು ಖರೀದಿ ಮಾಡುತ್ತಾರೆ. ಇನ್ನು ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಯಾವುದೇ ಉತ್ಪನ್ನ, ಸೇವೆಯ ಬಗ್ಗೆ ಐದು ದೂರು ಬಂದರೆ ಅಂತಹ ಉತ್ಪನ್ನ ಅಥವಾ ಸೇವೆಯನ್ನು ಪ್ರಚಾರ ಪಡಿಸುವುದಿಲ್ಲ. ಇನ್ನು ಐದು ಪೈಸೆ ಹಣ ಆಪೇಕ್ಷಿಸದೇ ಅಪರ್ಣ ರಾವ್ ಮತ್ತು ಶೋಭಾ ರಾವ್ ನಿರಂತರವಾಗಿ ಧೃತಿಯನ್ನು ನಿರೀಕ್ಷೆಗೂ ಮೀರಿ ಕಟ್ಟಿ ಬೆಳೆಸಿದ್ದಾರೆ.

ಧೃತಿ ಸ್ವಯಂ ಸೇವಕ ಬಳಗದಿಂದ ಸಿಗುವ ಸಹಾಯ:

ಧೃತಿ ಸ್ವಯಂ ಸೇವಕ ಬಳಗದಿಂದ ಸಿಗುವ ಸಹಾಯ:

ಬೆಳೆಯೋಣ ಮತ್ತು ಬೆಳೆಸೋಣ ಎಂಬ ಉದ್ದೇಶ ಹೊಂದಿರುವ ಧೃತಿ ಮಹಿಳಾ ಮಾರುಕಟ್ಟೆ ಆನ್‌ಲೈನ್ ಮಾರಾಟ ವೇದಿಕೆಗೆ ಯಾರು ಬೇಕಾದರೂ ಸೇರಬಹುದು. ಈಗಾಗಲೇ ಒಂದು ಸಾವಿರ ಮಂದಿ ತಮ್ಮ ವ್ಯಾಪಾರ- ವಹಿವಾಟು ಮಾಡುತ್ತಿದ್ದಾರೆ. ಇಲ್ಲಿ ತಮ್ಮ ವಸ್ತುಗಳನ್ನು ಅವರು ನಿಗದಿ ಮಾಡಿದ ಬೆಲೆಗೆ ಮಾರಾಟ ಮಾಡಬಹುದು. ಯಾವುದಕ್ಕೂ ಐದು ಪೈಸೆ ಶುಲ್ಕ ಕಟ್ಟುವಂತಿಲ್ಲ. ಇನ್ನು ಆನ್‌ಲೈನ್, ಮೊಬೈಲ್ ಬಗ್ಗೆ ಅರಿವೇ ಇಲ್ಲದವರಿಗೆ ತರಬೇತಿ ನೀಡಿ ಸಹಾಯ ನೀಡಲು ದೃತಿ ಸ್ವಯಂ ಸೇವಕ ಬಳಗವಿದೆ. ಮಹಿಳೆಯರು ಸ್ವಂತ ಬಲದ ಮೇಲೆ ನಿಲ್ಲಲು ಧೃತಿ ಮಹಿಳಾ ಮಾರುಕೊಟ್ಟೆ ಕಲ್ಪಿಸಿರುವ ವೇದಿಕೆ ಇದೀಗ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿದೆ.

ಅಪರ್ಣರಾವ್ ಮತ್ತು ಶೋಭಾ ರಾವ್ ಅಭಿಪ್ರಾಯ:

ಅಪರ್ಣರಾವ್ ಮತ್ತು ಶೋಭಾ ರಾವ್ ಅಭಿಪ್ರಾಯ:

ಮೇ. 21 ರಂದು ಎರಡು ವರ್ಷದ ಸಂಭ್ರಮ ಆಚರಿಸಿಕೊಂಡ ಸಂತಸದಲ್ಲಿರುವ ಧೃತಿಯ ಸೃಷ್ಟಿಕರ್ತರು ಅಪರ್ಣರಾವ್ ಮತ್ತು ಶೋಭಾರಾವ್. ಕೊರೊನಾ ಕಾಲದಲ್ಲಿ ಕೆಲಸ ಕಳೆದುಕೊಂಡ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಏನಾದರೂ ಮಾಡಬೇಕು ಎಂಬ ಆಸೆ ಹುಟ್ಟಿತು. ಕಷ್ಟ ಕಾಲದಲ್ಲಿ ಧೃತಿಗೆಡಬಾರದು ಎಂಬ ಉದ್ದೇಶದಿಂದ ಧೃತಿ ವೇದಿಕೆ ಕಲ್ಪಿಸಿದೆವು. ಇದರಲ್ಲಿ ಅವವರ ವಹಿವಾಟಿನಲ್ಲಿ ಧೃತಿ ಮಧ್ಯ ಪ್ರವೇಶ ಮಡಲ್ಲ. ಹೆಣ್ಣು ಮಕ್ಕಳ ದುಡಿಮೆಗೆ ಕಲ್ಪಿಸಿದ ಸಣ್ಣ ವೇದಿಕೆ. ಈ ಪರಿ ಬೆಳೆಯುತ್ತೆ ಅಂತ ನಾವು ಅಂದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇವೆ ಎಂದು ಅಪರ್ಣ ರಾವ್ ಮತ್ತು ಶೋಭಾ ರಾವ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಧೃತಿ ಮಹಿಳಾ ಮಾರುಕಟ್ಟೆ ಬಳಗ ಸೇರಲು ಬಯಸುವರು: ಹೆಚ್ಚಿನ ಮಾಹಿತಿಗೆ : 9082015664

English summary

Dhruti Mahila Marukatte : Here is the Success Story of Dhruti woman market

Dhruti Mahila Marukatte Success Story: Dhruti Mahila Marukatte Services LLP is a Karnataka based online platform. Here is the success story of company which made 200 women entrepreneurs on 2 years.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X