For Quick Alerts
ALLOW NOTIFICATIONS  
For Daily Alerts

ಧೃತಿ ಯಶೋಗಾಥೆ- 04: ಬ್ಯಾಗ್ ನಿಂದ ಹೊಸ ಬದುಕು ಕಟ್ಟಿಕೊಂಡ ರಕ್ಷಾ ಪ್ರಭು!

|

ಬೆಂಗಳೂರು, ಜೂ. 07: ಏನಾದ್ರು ನಾಲ್ಕು ಮಂದಿಗೆ ಸಹಾಯವಾಗಬೇಕು ಎಂಬ ಆಲೋಚನೆ ಹುಟ್ಟು ಹಾಕಿದ 'ಬ್ಯಾಗ್ ಬ್ಯಜಿನೆಸ್' ಮಹಿಳೆಯೊಬ್ಬಳನ್ನು ಸ್ವಂತ ಉದ್ಯಮಿಯಾಗಿನ್ನಾಗಿ ರೂಪಿಸಿದೆ. ಕೇವಲ 40 ರೂಪಾಯಿ ಬೆಲೆಯ ಒಂದು ಪರ್ಸ್‌ನಿಂದ ಅಂಬೆಗಾಲಿಟ್ಟ ವ್ಯಾಪಾರ ಇದೀಗ ಅಮೆರಿಕ, ಸಿಂಗಪುರ್, ದುಬೈಗೆ ತಲುಪಿದೆ. ಅಪರೂಪದ, ಗುಣಮಟ್ಟದ ಈ ಬ್ಯಾಗ್‌ಗಳಿಗೆ ಇದೀಗ ಭಾರತದಲ್ಲೆಡೆ ಬಹು ಬೇಡಿಕೆಯಿದೆ. ದುಡಿಯುವ ಇಬ್ಬರ ಕೈಗೆ ಕೆಲಸ ಕೊಟ್ಟಿರುವ ಸ್ವಾವಲಂಬಿ ಮಹಿಳೆಯ ಯಶೋಗಾಥೆ ಅವರ ಮಾತಲ್ಲೇ ಕೇಳಿ.

 

ವಿವರ: ಅವರ ಹೆಸರು ರಕ್ಷಾ ಪ್ರಭು, ಸಿದ್ದಾಪುರದ ಬೀಳಗಿಯವರು. ಸಿದ್ದಾಪುರದ ಎಂಜಿಸಿ ಕಾಲೇಜಿನಲ್ಲಿ ಬಿಕಾಂ ಮಾಡಿದ್ದ ರಕ್ಷಾ ಅವರು ಭಾರತ್ ಅರೋಮೆಟಿಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯಾದ ಬಳಿಕ 2011ರ ವರೆಗೂ ಮನೆಯಲ್ಲಿಯೇ ಸುಮ್ಮನಾಗಿದ್ದರು. ಸದ್ಯ ಹೈದರಾಬಾದ್‌ನಲ್ಲಿ ಕುಟುಂಬ ಸಮೇತ ನೆಲೆಸಿರುವ ಕನ್ನಡತಿ ರಕ್ಷಾ ಪ್ರಭು ಅವರು ಬ್ಯಾಗ್ ವ್ಯಾಪಾರದಲ್ಲಿ ಅದ್ವಿತೀಯ ಸಾಧನೆ ತೋರಿದ್ದಾರೆ. ಇಬ್ಬರಿಗೆ ಕೆಲಸ ಕೊಟ್ಟಿದ್ದಾರೆ. ಇವರ ಉತ್ಪನ್ನಗಳಿಗೆ ಧೃತಿ ಮಹಿಳಾ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಬಂದಿದೆ. ನಾಲ್ಕು ಜನರಿಗೆ ಏನಾದರೂ ಸಹಾಯ ಮಾಡಬೇಕೆಂಬ ಆಸೆಯಿಂದ ಆರಂಭಿಸಿದ ಬ್ಯಾಗ್ ತಯಾರಿಕೆ ಉದ್ಯಮ ಇದೀಗ ಅವರ ಗುಣಮಟ್ಟದ ಉತ್ಪನ್ನಗಳು ಅಮೆರಿಕ, ಸಿಂಗಪೂರ, ದುಬೈನಲ್ಲಿ ಸದ್ದು ಮಾಡುತ್ತಿವೆ. ಅವರ ಈ ಯಶಸ್ಸಿನ ಪಯಣದ ವಿವರ ಇಲ್ಲಿದೆ.

ಯಶೋಗಾಥೆ- 03: ಮಹಾಲಸಾ ಅವರ 'ಮಂಡಲ' ಕಲೆಯ ಪುಟ್ಟ ಪಯಣ!ಯಶೋಗಾಥೆ- 03: ಮಹಾಲಸಾ ಅವರ 'ಮಂಡಲ' ಕಲೆಯ ಪುಟ್ಟ ಪಯಣ!

 ಸ್ವಂತ ಉದ್ಯಮದ ಆರಂಭದ ದಿನಗಳು

ಸ್ವಂತ ಉದ್ಯಮದ ಆರಂಭದ ದಿನಗಳು

ನಾನು ಬಿಕಾಂ ಮುಗಿಸಿ ಮೂರು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದೆ. 2007ರಲ್ಲಿ ಮದುವೆಯಾದ ಬಳಿಕ ಕೆಲಸ ಬಿಟ್ಟಿದ್ದೆ. 2011ರ ವರೆಗೂ ಸುಮ್ಮನಿದ್ದೆ. ಅಮ್ಮ ಟೈಲರಿಂಗ್ ಹಿನ್ನೆಲೆ ಇದ್ದಿದ್ದರಿಂದ ನನಗೆ ಅದರ ಬಗ್ಗೆ ಜ್ಞಾನವಿತ್ತು. ಮನೆಯಲ್ಲಿ ಸುಮ್ಮನೆ ಕೂರುವ ಬದಲು ಏನಾದರೂ ಸಾಧಿಸಬೇಕು ಎಂಬ ಆಸೆ ಹೊತ್ತು ಮೊದಲಿಗೆ ಬಟ್ಟೆಯನ್ನು ಡಿಸೈನ್ ಮಾಡಿ ಮಾರಾಟ ಮಾಡಲು ಅರಂಭಿಸಿದೆ. ನಿರೀಕ್ಷೆಯಷ್ಟು ಫಲ ಕೊಡದಿದ್ದರೂ ಆಪ್ತ ವಲಯದಲ್ಲಿ ಮಾರಾಟ ಮಾಡಿದೆ. ನನ್ನ ಸ್ನೇಹಿತರೊಬ್ಬರು ಪರ್ಸ್ ತಯಾರಿಸುತ್ತಿದ್ದರು. ಅವರ ಬಳಿ ಪರ್ಸ್ ತಯಾರಿಕೆ ಬಗ್ಗೆ ಕಲಿತುಕೊಂಡೆ. ಆನಂತರ ಪರ್ಸ್‌ಗಳನ್ನೇ ತಯಾರು ಮಾಡಲು ಆರಂಭಿಸಿದೆ ಎನ್ನುತ್ತಾರೆ ರಕ್ಷಾ ಪ್ರಭು.

ಯಶೋಗಾಥೆ 2: ಅಮೆರಿಕಕ್ಕೆ ಅರಳು ಸಂಡಿಗೆ ರಫ್ತು ಮಾಡುವ ಕುಮಾರಸ್ವಾಮಿ ಲೇಔಟ್ ಮಲ್ಲಿಕಾ!ಯಶೋಗಾಥೆ 2: ಅಮೆರಿಕಕ್ಕೆ ಅರಳು ಸಂಡಿಗೆ ರಫ್ತು ಮಾಡುವ ಕುಮಾರಸ್ವಾಮಿ ಲೇಔಟ್ ಮಲ್ಲಿಕಾ!

 40 ರೂ. ಬೆಲೆಯ ಪರ್ಸ್ ತಯಾರಿಸಿ ಮಾರಾಟ
 

40 ರೂ. ಬೆಲೆಯ ಪರ್ಸ್ ತಯಾರಿಸಿ ಮಾರಾಟ

ನಾನು ಮೊದಲು ಒಂದು ಪರ್ಸ್ ತಯಾರಿಸಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದೆ. ತುಂಬಾ ಬೇಡಿಕೆ ಬಂತು. ಮೊದಲು ನಾನು 40 ರೂಪಾಯಿ ಪರ್ಸ್ ತಯಾರಿಸಿ ಮಾರಾಟ ಮಾಡಿದ್ದೆ. ಆನಂತರ ಪರ್ಸ್, ಬ್ಯಾಗ್ ತಯಾರಿಕೆಗೆ ಬೇಕಾಗುವ ರಾ ಮೆಟೀರಿಯಲ್ ಸಿಗುವ ಬಗ್ಗೆ ಹುಡುಕಾಡಿದೆ. ಹೈದರಾಬಾದ್‌ನಲ್ಲಿ ಎಲ್ಲೆಲ್ಲಿ ಸಿಗುತ್ತವೆ ಎಂಬ ಇವರ ಪಡೆದು, ಅದರ ಖರ್ಚು ವೆಚ್ಚದ ಬಗ್ಗೆ ಒಂದಷ್ಟು ಅಧ್ಯಯನ ಮಾಡಿದೆ. ಮೊದಲು ನಾನು 50 ಪರ್ಸ್ ತಯಾರಿಸಿದೆ. ಎಲ್ಲವೂ ಮಾರಾಟವಾದವು. ನನ್ನದೇ SARV Creatiions ಎಂಬ ಫೇಸ್ ಬುಕ್ ಪೇಜ್ ಸೃಷ್ಟಿಸಿದೆ. ಒಂದಷ್ಟು ಆರ್ಡರ್ ಬರುತ್ತಿತ್ತು. ಅವರ ಬೇಡಿಕೆಯಂತೆ ಗೃಹ ಪ್ರವೇಶ, ಸೇರಿದಂತೆ ನಾನಾ ಕಾರ್ಯಕ್ರಮಗಳಿಗೆ ಅವರ ಬೇಡಿಕೆಗೆ ಅನುಗುಣವಾಗಿ ನಾನು ಬ್ಯಾಗ್, ಪರ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದೆ. ಹೀಗೆ ದಿನ ದಿನಕ್ಕೂ ನನ್ನ ವಸ್ತುಗಳಿಗೆ ತುಂಬಾ ಬೇಡಿಕೆ ಬಂತು ಎಂದು ಆರಂಭದ ಹಾದಿಯನ್ನು ರಕ್ಷಾ ಪ್ರಭು ವಿವರಿಸಿದರು.

 ಈಗ ಆರ್ಡರ್‌ನಷ್ಟು ತಯಾರಿಕೆ ಆಗ್ತಿಲ್ಲ!

ಈಗ ಆರ್ಡರ್‌ನಷ್ಟು ತಯಾರಿಕೆ ಆಗ್ತಿಲ್ಲ!

ಕೊರೊನಾದಿಂದ ಬಹುತೇಕ ಎಲ್ಲಾ ವಹಿವಾಟು ನಿಂತು ಬಿಟ್ಟಿದ್ದವು. ಈ ಸಮಯದಲ್ಲಿ ನಾನು ಧೃತಿ ಮಹಿಳಾ ಮಾರುಕಟ್ಟೆ ಬಗ್ಗೆ ನನಗೆ ಗೊತ್ತಾಯಿತು. ಅಲ್ಲಿ ಸದಸ್ಯತ್ವ ಪಡೆದು ನಾನು ತಯಾರಿಸಿದ್ದ ನಾಲ್ಕು ಬ್ಯಾಗ್ ಪೋಸ್ಟ್ ಮಾಡಿದೆ. ಅವತ್ತೇ ನನಗೆ ತುಂಬಾ ಪೋನ್ ಕರೆಗಳು ಬಂದವು. ನನಗೆ ಬಂದ ಆರ್ಡರ್ ಗಳನ್ನು ಒಬ್ಬರಿಂದ ತಯಾರು ಮಾಡೋಕೆ ಆಗಲಿಲ್ಲ. ಇಬ್ಬರು ಮಹಿಳೆಯರಿಗೆ ಕೆಲಸ ಕೊಟ್ಟೆ. ಬೇಡಿಕೆಗೆ ಅನುಗುಣವಾಗಿ ಬ್ಯಾಗ್, ಪರ್ಸ್ ತಯಾರಿಸಲು ಬೇಕಾದ ಯಂತ್ರಗಳನ್ನು ಖರೀದಿ ಮಾಡಿದೆ.

ನನಗೆ ತುಂಬಾ ಅರ್ಡರ್ ಬಂತು. ಅಮೆರಿಕ, ಸಿಂಗಪುರ, ದುಬೈನಿಂದ ಕರೆಗಳು ಬಂತು. ನಮ್ಮ ದೇಶದಲ್ಲಿ ದೆಹಲಿ, ಬಾಂಬೆ, ಮಹಾರಾಷ್ಟ್ರ, ಗುಜರಾತ್ ನಿಂದಲೂ ಆರ್ಡರ್ ಬರಲು ಶುರುವಾಯಿತು. ಅವರ ಬೇಡಿಕೆಗೆ ಅನುಗುಣವಾಗಿ ಈಗ ಬ್ಯಾಗ್, ಪರ್ಸ್ ತಯಾರಿಸುತ್ತಿದ್ದೇನೆ. ಕೊರೊನಾದಿಂದ ಕಾರ್ಯಕ್ರಮಗಳು ನಡೆದಿರಲಿಲ್ಲ. ಈಗ ನನ್ನ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ. ತಿಂಗಳಿಗೆ ಒಂದು ಲಕ್ಷ ರೂಪಾಯಿಗೂ ಮೀರಿ ವಹಿವಾಟು ನಡೆಯುತ್ತಿದೆ ಎಂದು ಧೃತಿ ಮಹಿಳಾ ಮಾರುಕಟ್ಟೆಯಿಂದ ಬ್ಯಾಗ್ ವಹಿವಾಟು ಉತ್ತುಂಗಕ್ಕೆ ಹೋಗಿದ್ದನ್ನು ರಕ್ಷಾ ಪ್ರಭು ಸ್ಮರಿಸಿದರು.

  ಯಶೋಗಾಥೆ: 2 ವರ್ಷದಲ್ಲಿ 200 ಮಹಿಳಾ ಉದ್ಯಮಿ ಸೃಷ್ಟಿಸಿದ 'ಧೃತಿ'  ಯಶೋಗಾಥೆ: 2 ವರ್ಷದಲ್ಲಿ 200 ಮಹಿಳಾ ಉದ್ಯಮಿ ಸೃಷ್ಟಿಸಿದ 'ಧೃತಿ'

 ಗುಣಮಟ್ಟವೊಂದೇ ನನ್ನ ಯಶಸ್ಸು

ಗುಣಮಟ್ಟವೊಂದೇ ನನ್ನ ಯಶಸ್ಸು

ಈಗ ನನಗೆ ಧೃತಿ ಮಹಿಳಾ ಮಾರುಕಟ್ಟೆಯಿಂದಲೇ ಅತಿ ಹೆಚ್ಚು ಪೋನ್ ಕರೆಗಳು ಬರುತ್ತಿವೆ. ಬೇಡಿಕೆಗೆ ಆಗುವಷ್ಟು ವಿಧವಿಧ ಬ್ಯಾಗ್, ಪರ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದೇನೆ. ಗುಣಮಟ್ಟದಲ್ಲಿ ಸ್ವಲ್ಪವೂ ರಾಜಿಯಿಲ್ಲ. 40 ರೂ. ಬೆಲೆಯಿಂದ ಹಿಡಿದು 700 ರೂ. ಮೊತ್ತದವರೆಗೂ ಬ್ಯಾಗ್‌ಗಳನ್ನು ಮಾರಾಟ ಮಾಡುತ್ತಿದ್ದೇನೆ. ಗ್ರಾಹಕರ ಬಹು ಬೇಡಿಕೆಯಂತೆ ಕಸ್ಟಮ್ ಬ್ಯಾಗ್, ಪರ್ಸ್ , ಭಿನ್ನ ಭಿನ್ನ ಉತ್ಪನ್ನಗಳನ್ನು ತಯಾರಿಸಿ ಪೂರೈಕೆ ಮಾಡುತ್ತಿದ್ದೇನೆ. ನನ್ನಿಂದ ಇಬ್ಬರಿಗೆ ಕೆಲಸವೂ ಸಿಕ್ಕಿದೆ. ಅವರೂ ಸಂತಸದಿಂದ ಕೆಲಸ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಆರ್ಡರ್ ತುಂಬಾ ಬರ್ತಿವೆ. ಸ್ವಂತ ಕೆಲಸ ಆರಂಭಿಸಿ ಇಬ್ಬರಿಗೆ ಕೆಲಸ ಕೊಟ್ಟ ಆತ್ಮತೃಪ್ತಿ ನನಗಿದೆ. ಹೆಣ್ಣು ಮಕ್ಕಳು ಮನಸು ಮಾಡಿ, ಏನಾದರೂ ಸಾಧಿಸಬೇಕು ಅಂತಿದ್ದರೆ ಧೈರ್ಯವಾಗಿ ಸ್ವಂತ ಉದ್ಯಮ ಅರಂಭಿಸಬೇಕು. ನಾವು ಅರಂಭಿಸುವ ಉದ್ಯಮದ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಮುಂದೆ ಸಾಗಬೇಕು ಎಂದು ಸ್ಫೂರ್ತಿದಾಯಕ ಮಾತುಗಳನ್ನು ಆಡುತ್ತಾರೆ ರಕ್ಷಾ ಪ್ರಭು. ಧೃತಿ ಮಹಿಳಾ ಮಾರುಕಟ್ಟೆ ಸದಸ್ಯೆಯಾಗಿರುವ ರಕ್ಷಾ ಪ್ರಭು ಭವಿಷ್ಯದಲ್ಲಿ ದೊಡ್ಡ ಉದ್ಯಮಿಯಾಗುವ ಭರವಸೆ ಮೂಡಿಸಿದ್ದಾರೆ.

English summary

Dhruti success story 04: Carry Bag Changes Siddapura Women Fate

Dhruti Mahila Marukatte success story: Siddapura based Hyderabad women carry bag business create record in two years know more
Story first published: Tuesday, June 7, 2022, 18:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X