For Quick Alerts
ALLOW NOTIFICATIONS  
For Daily Alerts

Old vs New Tax Regime: ಹಳೆ ತೆರಿಗೆ ಪದ್ಧತಿ Vs ಹೊಸ ತೆರಿಗೆ ಪದ್ಧತಿ, 2023ರಲ್ಲಿ ಯಾವುದು ಬೆಸ್ಟ್?

|

ಪ್ರಸ್ತುತ ಭಾರತದಲ್ಲಿ ಹಳೆಯ ತೆರಿಗೆ ಪದ್ಧತಿ ಹಾಗೂ ಹೊಸ ತೆರಿಗೆ ಪದ್ಧತಿಯಿದೆ. ಎರಡರಲ್ಲೂ ಕೂಡಾ ತನ್ನದೇ ಆದ ಪ್ರಯೋಜನ, ಸಮಸ್ಯೆ ಇದೆ. ಆದರೆ ನಾವು ಆಯ್ಕೆ ಮಾಡುವಾಗ ನಮ್ಮ ಆದಾಯಕ್ಕೆ ಯಾವುದು ಉತ್ತಮ ಎಂದು ನೋಡಿಕೊಂಡು ಆಯ್ಕೆ ಮಾಡಿಕೊಳ್ಳಬೇಕು. 2023ರಲ್ಲಿ ಯಾವ ತೆರಿಗೆ ಪದ್ಧತಿಯನ್ನು ನೀವು ಆಯ್ಕೆ ಮಾಡಿಕೊಳ್ಳುವುದು ಉತ್ತಮವೆಂದನಿಸುತ್ತದೆ?

ಏಪ್ರಿಲ್ 1, 2020ರಲ್ಲಿ ಸರ್ಕಾರವು ಹೊಸ ತೆರಿಗೆ ಪದ್ಧತಿಯನ್ನು ಹಿಂದೂ ಅವಿಭಜಿತ ಕುಟುಂಬಗಳಿಗಾಗಿ (HUF) ಜಾರಿ ಮಾಡಿದೆ. ಆದ್ದರಿಂದಾಗಿ ಆದಾಯ ತೆರಿಗೆ ಕಾಯ್ದೆ 1961ಕ್ಕೆ ಸೆಕ್ಷನ್ 115 BAC ಅನ್ನು ಸೇರ್ಪಡೆ ಮಾಡಲಾಗಿದೆ. ಈ ಹೊಸ ತೆರಿಗೆ ಪದ್ಧತಿ ಬಗ್ಗೆ ಎಲ್ಲ ವಿವರಗಳನ್ನು ಈ ಸೆಕ್ಷನ್‌ನಲ್ಲಿ ನೀಡಲಾಗಿದೆ. 2023-24ರಲ್ಲಿ ವೈಯಕ್ತಿಕ ಆದಾಯ ತೆರಿಗೆದಾರರಿಗಾಗಿ ಹೊಸ ಆದಾಯ ತೆರಿಗೆ ಪದ್ಧತಿಯನ್ನು ಜಾರಿ ಮಾಡಲಾಗಿದೆ. ಇದು ಪೂರ್ವ ನಿಯೋಜಿತ ತೆರಿಗೆ ಪದ್ಧತಿಯಾಗಿದೆ. ತೆರಿಗೆ ಪಾವತಿದಾರರು ತಮಗೆ ಬೇಕಾದ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Income Tax Budget 2023 : ತೆರಿಗೆದಾರರಿಗೆ ಸಿಹಿಸುದ್ದಿ: 7 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿIncome Tax Budget 2023 : ತೆರಿಗೆದಾರರಿಗೆ ಸಿಹಿಸುದ್ದಿ: 7 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ

ಕೇಂದ್ರ ಸರ್ಕಾರವು 2023-24ನೇ ಸಾಲಿನ ಬಜೆಟ್ ಮಂಡನೆ ವೇಳೆ ತೆರಿಗೆ ವಿಚಾರದಲ್ಲಿ ಮಧ್ಯಮ ವರ್ಗಕ್ಕೆ ದೊಡ್ಡ ರಿಲೀಫ್ ಅನ್ನು ನೀಡಿದೆ. ಆದಾಯ ತೆರಿಗೆ ಪಾವತಿ ಆದಾಯ ಮಿತಿಯನ್ನು ಏರಿಕೆ ಮಾಡಿದೆ. ಈ ಹಿಂದೆ ಆದಾಯ ತೆರಿಗೆ ಪಾವತಿ ಮಿತಿ 2.5 ಲಕ್ಷ ರೂಪಾಯಿ ಆಗಿದ್ದು, ಅದನ್ನು 3 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಇನ್ನು 5 ಲಕ್ಷ ರೂಪಾಯಿಯವರೆಗೆ ಆದಾಯ ಇರುವವರು ಸೆಕ್ಷನ್ 87A ಅಡಿಯಲ್ಲಿ ವಿನಾಯಿತಿ ಪಡೆದು ಯಾವುದೇ ತೆರಿಗೆಯನ್ನು ಪಾವತಿ ಮಾಡಬೇಕಾಗಿರಲಿಲ್ಲ. ಆ ಮಿತಿಯನ್ನು 7 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಆದರೆ 2023ರಲ್ಲಿ ನಾವು ಯಾವ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವುದು ಉತ್ತಮ?, ಇಲ್ಲಿದೆ ವಿವರ ಮುಂದೆ ಓದಿ...

 ಹೊಸ ತೆರಿಗೆ ಪದ್ಧತಿ 2023-24

ಹೊಸ ತೆರಿಗೆ ಪದ್ಧತಿ 2023-24

ವಾರ್ಷಿಕ ಆದಾಯ- ತೆರಿಗೆ ದರ

0-3 ಲಕ್ಷ ರೂಪಾಯಿ: NIL
3-6 ಲಕ್ಷ ರೂಪಾಯಿ: ಶೇಕಡ 5
6-9 ಲಕ್ಷ ರೂಪಾಯಿ: ಶೇಕಡ 10
9-12 ಲಕ್ಷ ರೂಪಾಯಿ: ಶೇಕಡ 15
12-15 ಲಕ್ಷ ರೂಪಾಯಿ: ಶೇಕಡ 20
15 ಲಕ್ಷ ರೂಪಾಯಿಗೂ ಅಧಿಕ: ಶೇಕಡ 30

 

 ಹಳೆ ತೆರಿಗೆ ಪದ್ಧತಿ

ಹಳೆ ತೆರಿಗೆ ಪದ್ಧತಿ

ವಾರ್ಷಿಕ ಆದಾಯ- ತೆರಿಗೆ ದರ

0-2.5 ಲಕ್ಷ ರೂಪಾಯಿ: Nil
2.5-5 ಲಕ್ಷ ರೂಪಾಯಿ: ಶೇಕಡ 5 (87A ಅಡಿಯಲ್ಲಿ ತೆರಿಗೆ ರಿಫಂಡ್)
5-7.5 ಲಕ್ಷ ರೂಪಾಯಿ: ಶೇಕಡ 20
7.5-10 ಲಕ್ಷ ರೂಪಾಯಿ: ಶೇಕಡ 20
10-12.5 ಲಕ್ಷ ರೂಪಾಯಿ: ಶೇಕಡ 30
12.5-15 ಲಕ್ಷ ರೂಪಾಯಿ: ಶೇಕಡ 30
15 ಲಕ್ಷ ರೂಪಾಯಿಗಿಂತ ಅಧಿಕ: ಶೇಕಡ 30

 

 ಯಾವ ತೆರಿಗೆ ಪದ್ಧತಿ ಉತ್ತಮ

ಯಾವ ತೆರಿಗೆ ಪದ್ಧತಿ ಉತ್ತಮ

ಈ ಹೊಸ ತೆರಿಗೆ ಪದ್ಧತಿಯಡಿಯಲ್ಲಿ ನಾವು ಕೆಲವು ತೆರಿಗೆ ವಿನಾಯಿತಿ, ತೆರಿಗೆ ಕಡಿತಗಳನ್ನು ಪಡೆಯಲು ಸಾಧ್ಯವಾಗುತ್ತದೆ. ತೆರಿಗೆದಾರರಿಗೆ ತೆರಿಗೆ ಪಾವತಿ ವಿಧಾನವನ್ನು ಸರಳಗೊಳಿಸುವ ನಡುವೆ ತೆರಿಗೆ ವಿನಾಯಿತಿ, ಕಡಿತವನ್ನು ಮರೆಯಲಾಗುತ್ತಿದೆ. ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಯಾವೆಲ್ಲ ತೆರಿಗೆ ವಿನಾಯಿತಿ, ಕಡಿತ ಇಲ್ಲ ಎಂಬುವುದು ಇಲ್ಲಿದೆ ನೋಡಿ.

* ರಜೆಯಲ್ಲಿನ ಪ್ರಯಾಣ ಭತ್ಯೆ (LTA)
* ಗೃಹ ಬಾಡಿಗೆ ಭತ್ಯೆ (HRA)
* ಮಕ್ಕಳ ಶಿಕ್ಷಣ ಭತ್ಯೆ
* ವೇತನದಲ್ಲಿ ಸ್ಟಾಡರ್ಡ್ ಡಿಡಾಕ್ಷನ್
* ವೃತ್ತಿಪರ ತೆರಿಗೆಯಲ್ಲಿ ಕಡಿತ
* ಗೃಹ ಸಾಲದ ಮೇಲಿನ ಬಡ್ಡಿದರದಲ್ಲಿ ಕಡಿತ

ಚಾಪ್ಟರ್ VI-A ಅಡಿಯಲ್ಲಿ ಕೆಲವು ವಿನಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಸೆಕ್ಷನ್ 80C ಅಡಿಯಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಗೃಹ ಸಾಲದ ಮೇಲೆ ರಿಫಂಡ್, ಮಕ್ಕಳ ಶಾಲೆಯ ಶುಲ್ಕ, ವಿಮಾ ಪ್ರೀಮಿಯಂ ಮೊದಲಾದವುಗಳುನ್ನು ಪಡೆಯಲು ಸಾಧ್ಯವಾಗುತ್ತದೆ. ಹೊಸ ತೆರಿಗೆ ಪದ್ಧತಿ ಹಾಗೂ ಹಳೆಯ ತೆರಿಗೆ ಪದ್ಧತಿಯನ್ನು ನಾವು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಹಳೆ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವುದು ಉತ್ತಮ. ಯಾಕೆಂದರೆ ಹಳೆ ತೆರಿಗೆ ಪದ್ಧತಿಯಲ್ಲಿ ಹಲವಾರು ತೆರಿಗೆ ವಿನಾಯಿತಿ, ತೆರಿಗೆ ಕಡಿತವನ್ನು ಪಡೆಯಲು ಸಾಧ್ಯವಾಗುತ್ತದೆ.

 

 ಒಂದೇ ಆದಾಯ ತೆರಿಗೆ ಕಡಿತ, ವಿನಾಯಿತಿ ವ್ಯತ್ಯಾಸ

ಒಂದೇ ಆದಾಯ ತೆರಿಗೆ ಕಡಿತ, ವಿನಾಯಿತಿ ವ್ಯತ್ಯಾಸ

ಇಲ್ಲಿ ನಾವು ತೆರಿಗೆ ಪಾವತಿದಾರರ 1 ಮತ್ತು ತೆರಿಗೆ ಪಾವತಿದಾರ 2 ಬೇರೆ ಮೂಲಗಳಿಂದ ಯಾವುದೇ ಆದಾಯವಿಲ್ಲದೆ, ವೇತನದಿಂದ ಮಾತ್ರ ಆದಾಯ ಹೊಂದಿರುವವರು ಎಂದುಕೊಳ್ಳೋಣ. ಇಬ್ಬರಿಗೂ ಯಾವುದರಿಂದ ಅಧಿಕ ಲಾಭ ದೊರೆಯುತ್ತದೆ ಎಂದು ನೋಡೋಣ.

ಹಣಕಾಸು ವರ್ಷ 2023-24ರ ಮಾಹಿತಿ

ವೇತನದಿಂದ ಬರುವ ಆದಾಯ
ತೆರಿಗೆದಾರ 1: 20,00,000 ರೂಪಾಯಿ
ತೆರಿಗದಾರ 2: 20,00,000 ರೂಪಾಯಿ

ಗೃಹ ಬಾಡಿಗೆ ಭತ್ಯೆ ವಿನಾಯಿತಿ (HRA)
ತೆರಿಗೆದಾರ 1: 1,20,000 ರೂಪಾಯಿ
ತೆರಿಗದಾರ 2: Nil

ರಜೆಯಲ್ಲಿನ ಪ್ರಯಾಣ ಭತ್ಯೆ ವಿನಾಯಿತಿ (LTA)
ತೆರಿಗೆದಾರ 1: 50,000 ರೂಪಾಯಿ
ತೆರಿಗದಾರ 2: Nil

ಸ್ಟಾಡರ್ಡ್ ಡಿಡಾಕ್ಷನ್
ತೆರಿಗೆದಾರ 1: 50,000 ರೂಪಾಯಿ
ತೆರಿಗದಾರ 2: 52,500 ರೂಪಾಯಿ

80C ಅಡಿಯಲ್ಲಿ ಇಪಿಎಫ್, ಪಿಪಿಎಫ್‌ಗೆ ತೆರಿಗೆ ಕಡಿತ
ತೆರಿಗೆದಾರ 1: 150,000 ರೂಪಾಯಿ
ತೆರಿಗದಾರ 2: 150,000 ರೂಪಾಯಿ

 

 ಈ ಉದಾಹರಣೆಯನ್ನು ನೋಡಿಕೊಳ್ಳಿ

ಈ ಉದಾಹರಣೆಯನ್ನು ನೋಡಿಕೊಳ್ಳಿ

ತೆರಿಗೆ ಪಾವತಿದಾರ 1

ಹಳೆ ತೆರಿಗೆ ಪದ್ಧತಿ
ವೇತನದಿಂದ ಬರುವ ಆದಾಯ: 20,00,000 ರೂಪಾಯಿ
ಗೃಹ ಬಾಡಿಗೆ ಭತ್ಯೆ ವಿನಾಯಿತಿ: 1,20,000 ರೂಪಾಯಿ
ರಜೆಯಲ್ಲಿನ ಪ್ರಯಾಣ ಭತ್ಯೆ ವಿನಾಯಿತಿ: 50,000 ರೂಪಾಯಿ
ಸ್ಟಾಡರ್ಡ್ ಡಿಡಾಕ್ಷನ್: 50,000 ರೂಪಾಯಿ
80C ಅಡಿಯಲ್ಲಿ ಪಿಎಫ್‌ಗೆ ತೆರಿಗೆ ಕಡಿತ: 150,000 ರೂಪಾಯಿ
ನಿವ್ವಳ ತೆರಿಗೆಗೆ ಒಳಪಡುವ ಆದಾಯ: 16,30,000 ರೂಪಾಯಿ
ತೆರಿಗೆ: 3,13,560 ರೂಪಾಯಿ

ಹೊಸ ತೆರಿಗೆ ಪದ್ಧತಿ
ವೇತನದಿಂದ ಬರುವ ಆದಾಯ: 20,00,000 ರೂಪಾಯಿ
ಗೃಹ ಬಾಡಿಗೆ ಭತ್ಯೆ ವಿನಾಯಿತಿ: Not applicable
ರಜೆಯಲ್ಲಿನ ಪ್ರಯಾಣ ಭತ್ಯೆ ವಿನಾಯಿತಿ: Not applicable
ಸ್ಟಾಡರ್ಡ್ ಡಿಡಾಕ್ಷನ್: 52,500 ರೂಪಾಯಿ
80C ಅಡಿಯಲ್ಲಿ ಪಿಎಫ್‌ಗೆ ತೆರಿಗೆ ಕಡಿತ: Not applicable
ನಿವ್ವಳ ತೆರಿಗೆಗೆ ಒಳಪಡುವ ಆದಾಯ: 20,00,000 ರೂಪಾಯಿ
ತೆರಿಗೆ: 2,98,500 ರೂಪಾಯಿ

ತೆರಿಗೆ ಪಾವತಿದಾರ 2: HRA, LTA ಅರ್ಹತೆ ಹೊಂದಿಲ್ಲ

ಹಳೆ ತೆರಿಗೆ ಪದ್ಧತಿ
ವೇತನದಿಂದ ಬರುವ ಆದಾಯ: 20,00,000 ರೂಪಾಯಿ
ಸ್ಟಾಡರ್ಡ್ ಡಿಡಾಕ್ಷನ್: 50,000 ರೂಪಾಯಿ
80C ಅಡಿಯಲ್ಲಿ ಪಿಎಫ್‌ಗೆ ತೆರಿಗೆ ಕಡಿತ: 150,000 ರೂಪಾಯಿ
ನಿವ್ವಳ ತೆರಿಗೆಗೆ ಒಳಪಡುವ ಆದಾಯ: 18,00,000 ರೂಪಾಯಿ
ತೆರಿಗೆ: 366,600 ರೂಪಾಯಿ

ಹೊಸ ತೆರಿಗೆ ಪದ್ಧತಿ
ವೇತನದಿಂದ ಬರುವ ಆದಾಯ: 20,00,000 ರೂಪಾಯಿ
ಸ್ಟಾಡರ್ಡ್ ಡಿಡಾಕ್ಷನ್: 52,500 ರೂಪಾಯಿ
80C ಅಡಿಯಲ್ಲಿ ಪಿಎಫ್‌ಗೆ ತೆರಿಗೆ ಕಡಿತ: Not applicable
ನಿವ್ವಳ ತೆರಿಗೆಗೆ ಒಳಪಡುವ ಆದಾಯ: 20,00,000 ರೂಪಾಯಿ
ತೆರಿಗೆ: 2,98,500 ರೂಪಾಯಿ

 

English summary

Difference Between Old Tax Regime Vs. New Tax Regime: Which One is Better in 2023? Explained in Kannada

Old Tax Regime Vs. New Tax Regime: Difference Between Old Tax Regime Vs. New Tax Regime: Which One is Better in 2023? Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X