For Quick Alerts
ALLOW NOTIFICATIONS  
For Daily Alerts

ಎಚ್‌ಡಿಎಫ್‌ಸಿ ಗ್ರಾಹಕರೇ ಎಚ್ಚರ: ಈ ಲಿಂಕ್ ಕ್ಲಿಕ್ ಮಾಡಿದ್ರೆ ತಪ್ಪದು ಗ್ರಾಚಾರ

|

ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಪ್ರಮುಖ ಎಚ್ಚರಿಕೆಯನ್ನು ನೀಡಿದೆ. ಪ್ಯಾನ್ ಕಾರ್ಡ್ ಸಂಬಂಧಿಸಿ ಗ್ರಾಹಕರಿಗೆ ಅಲರ್ಟ್ ಅನ್ನು ನೀಡಿದೆ. ಯಾವುದೇ ಲಿಂಕ್ ಬಂದರೂ ಅದನ್ನು ಕ್ಲಿಕ್ ಮಾಡಿ ಮೋಸ ಹೋಗಬೇಡಿ ಎಂದು ಹೇಳಿದೆ.

 

ಶಾಶ್ವತ ಖಾತೆ ಸಂಖ್ಯೆ (PAN) ಆದಾಯ ತೆರಿಗೆ ಇಲಾಖೆಯು ಪ್ಲಾಸ್ಟಿಕ್ ಕಾರ್ಡ್‌ನ ರೂಪದಲ್ಲಿ ನೀಡುವ ಹತ್ತು ಅಂಕಿಯ ಸಂಖ್ಯೆಯಾಗಿದೆ. ಈ ಪ್ಯಾನ್ ಕಾರ್ಡ್ ಎಲ್ಲರಿಗೂ ಅತೀ ಅವಶ್ಯಕವಾಗಿದೆ. ಪ್ರಸ್ತುತ ಪ್ಯಾನ್ ಕಾರ್ಡ್ ಎಲ್ಲರಿಗೆ ಅವಶ್ಯಕವಾಗಿದೆ. ಇದು ಹಣಕಾಸಿನ ವಹಿವಾಟುಗಳಿಗೆ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ.

 

ಎಚ್ಚರ: ಈ ಟ್ರಿಕ್‌ ಗೊತ್ತಿಲ್ಲದಿದ್ರೆ ನಿಮ್ಮ ಖಾತೆಯ ಹಣ ಮಂಗಮಾಯ!ಎಚ್ಚರ: ಈ ಟ್ರಿಕ್‌ ಗೊತ್ತಿಲ್ಲದಿದ್ರೆ ನಿಮ್ಮ ಖಾತೆಯ ಹಣ ಮಂಗಮಾಯ!

ನೀವು ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅಥವಾ ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್ ಅನ್ನು ನವೀಕರಣ ಮಾಡಲು ಆದಾಯ ತೆರಿಗೆ ಪೋರ್ಟಲ್, ಯುಟಿಐ ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಮತ್ತು ಸರ್ವೀಸಸ್ ಲಿಮಿಟೆಡ್ (ಯುಟಿಐಐಟಿಎಸ್ಎಲ್), ಮತ್ತು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್ಎಸ್‌ಡಿಎಲ್), ಅಥವಾ ಪ್ಯಾನ್ ಸೇವಾ ಕೇಂದ್ರಗಳು ಮತ್ತು ಟಿಐಎನ್ ಫೆಸಿಲಿಟೇಶನ್ ಕೇಂದ್ರಗಳಿಗೆ ಭೇಟಿ ನೀಡಬಹುದು. ಆದರೆ ಈಗ ಪ್ಯಾನ್ ಅಪ್‌ಡೇಟ್ ಹೆಸರಿನಲ್ಲಿಯೇ ವಂಚನೆ ನಡೆಯುತ್ತಿದೆ ಎಚ್ಚರ.

ಗ್ರಾಹಕರೇ ಎಚ್ಚರ: ಈ ಲಿಂಕ್ ಕ್ಲಿಕ್ ಮಾಡಿದ್ರೆ ತಪ್ಪದು ಗ್ರಾಚಾರ

ವಂಚಕರ ಹೊಸ ಮಾರ್ಗ ಏನಿದೆ?

ಪ್ರಸ್ತುತ ವಂಚನೆಯೂ ತೀವ್ರ ಅಧಿಕವಾಗಿದೆ. ವಂಚಕರು ವಂಚನೆ ಮಾಡಲು ಹಲವಾರು ಮಾರ್ಗಗಳನ್ನು ಪಾಲಿಸುತ್ತಿದ್ದಾರೆ. ಈಗ ಪ್ಯಾನ್ ಅಪ್‌ಡೇಟ್ ಹೆಸರಿನಲ್ಲಿ ಗ್ರಾಹಕರ ಮೊಬೈಲ್ ಸಂಖ್ಯೆಗೆ ನಕಲಿ ಎಸ್‌ಎಮ್‌ಎಸ್‌ ಕಳುಹಿಸುತ್ತಿದ್ದಾರೆ. ನಿಮ್ಮ ಪ್ಯಾನ್ ಕಾರ್ಡ್ ಬ್ಲಾಕ್ ಆಗಿದೆ. ಅನ್‌ಬ್ಲಾಕ್ ಮಾಡಲು ನಾವು ಕಳುಹಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದು ಹೇಳಲಾಗುತ್ತದೆ. ಈ ನಕಲಿ ಲಿಂಕ್ ಅನ್ನು ಕ್ಲಿಕ್ ಮಾಡಿದ ಜನರು ಯಾಮಾರಿದ್ದಾರೆ ಎಂದು ತಿಳಿಯುವಷ್ಟರಲ್ಲಿ ಸಮಯ ಕೈ ಮೀರಲಿದೆ. ಆದ್ದರಿಂದಾಗಿ ಗ್ರಾಹಕರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಎಚ್ಚರಿಕೆ ನೀಡಿದೆ.

ತಮ್ಮ ಗ್ರಾಹಕರಿಗೆ ಪ್ಯಾನ್ ಕಾರ್ಡ್ ಅನ್ನು ನವೀಕರಿಸುವ ಲಿಂಕ್ ಬಂದರೆ ಅದನ್ನು ಕ್ಲಿಕ್ ಮಾಡಬೇಡಿ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ತಿಳಿಸಿದೆ. ಈ ಬಗ್ಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಇತ್ತೀಚೆಗೆ ಟ್ವೀಟ್ ಮೂಲಕ ತಿಳಿಸಿದೆ. "#GoDigitalGoSecure ಮತ್ತು ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ನವೀಕರಿಸಲು ಕೇಳುವ ಅಪರಿಚಿತ ಲಿಂಕ್‌ಗಳನ್ನು ಎಂದಿಗೂ ಕೂಡಾ ಕ್ಲಿಕ್ ಮಾಡಬೇಡಿ," ಎಂದು ತಿಳಿಸಿದೆ.

"ಎಚ್‌ಡಿಎಫ್‌ಸಿ ಎಂದಿಗೂ ನಿಮ್ಮ ಗೌಪ್ಯ ಮಾಹಿತಿಯನ್ನು ಎಸ್‌ಎಂಎಸ್ ಅಥವಾ ಕರೆಯ ಮೂಲಕ ಹಂಚಿಕೊಳ್ಳುವಂತೆ ಕೇಳುವುದಿಲ್ಲ ಎಂಬುವುದನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಎಚ್‌ಡಿಎಫ್‌ಸಿ ಮಾತ್ರವಲ್ಲ ಬೇರೆ ಯಾವುದೇ ಬ್ಯಾಂಕ್‌ಗಳು ಕೂಡಾ ತಮ್ಮ ವೈಯಕ್ತಿಕ ಖಾತೆಯ ವಿವರಗಳನ್ನು ಹಂಚಿಕೊಳ್ಳುವಂತೆ ಹೇಳುವುದಿಲ್ಲ. ಆದ್ದರಿಂದ ಯಾವುದೇ ಲಿಂಕ್ ಬಂದರೆ ಅದನ್ನು ಕ್ಲಿಕ್ ಮಾಡಬೇಡಿ. ಅದು ಬ್ಯಾಂಕ್‌ನಿಂದ ಕಳುಹಿಸಲಾಗಿರುವ ಲಿಂಕ್ ಅಲ್ಲ ಎಂಬುವುದು ನಿಮಗೆ ನೆನಪಿನಲ್ಲಿ ಇರಲಿ," ಎಂದು ತಿಳಿಸಿದ್ದಾರೆ.

ಗ್ರಾಹಕರೇ ಎಚ್ಚರ: ಈ ಲಿಂಕ್ ಕ್ಲಿಕ್ ಮಾಡಿದ್ರೆ ತಪ್ಪದು ಗ್ರಾಚಾರ

ಎಚ್‌ಡಿಎಫ್‌ಸಿ ಅಧಿಕೃತ ಮಾಹಿತಿ ಎಲ್ಲಿಂದ?

ಎಚ್‌ಡಿಎಫ್‌ಸಿಯು ಯಾವುದು ಅಧಿಕೃತ ಮಾಹಿತಿ ಎಂಬುವುದನ್ನು ಕೂಡಾ ಗ್ರಾಹಕರಿಗೆ ವಿವರಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರು ಅಧಿಕೃತ ಸಂಖ್ಯೆ 186161 ಅಥವಾ ID HDFCBK/HDFCBN ನಿಂದ ಪಡೆಯುವ ಎಸ್‌ಎಂಎಸ್ ಅಧಿಕೃತವಾಗಿದೆ. ಎಸ್‌ಎಂಎಸ್‌ನಲ್ಲಿರುವ ಲಿಂಕ್ ಯಾವಾಗಲೂ ಅಧಿಕೃತ ಸೈಟ್ hdfcbk.io ಆಗಿರಲಿದೆ ಎಂದು ಕೂಡಾ ಎಚ್‌ಡಿಎಫ್‌ಸಿ ಬ್ಯಾಂಕ್ ತಿಳಿಸಿದೆ. ಈ ಲಿಂಕ್ ಹೊರತಾಗಿ ಅಪರಿಚಿತ ಲಿಂಕ್ ಕ್ಲಿಕ್ ಮಾಡದಿರಿ ಎಂದು ಕೂಡಾ ತಿಳಿಸಿದೆ. ನಕಲಿ ಲಿಂಕ್ ಕ್ಲಿಕ್ ಮಾಡಿದಾಗ ನಿಮ್ಮ ಬ್ಯಾಂಕ್‌ ಹ್ಯಾಕ್ ಆಗುವ ಸಾಧ್ಯತೆ ಹಿನ್ನೆಲೆ ಎಚ್‌ಡಿಎಫ್‌ಸಿ ಈ ಎಚ್ಚರಿಕೆಯನ್ನು ನೀಡಿದೆ.

English summary

Do not fall for this PAN Card fraud; HDFC Bank shares important alert to customers

HDFC Bank shares an important alert regarding PAN card update. HDFC Bank has warned customers to not click on unknown links asking to update PAN details. Know more.
Story first published: Monday, June 13, 2022, 13:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X