For Quick Alerts
ALLOW NOTIFICATIONS  
For Daily Alerts

ಟರ್ಮ್ ಇನ್ಶುರೆನ್ಸ್ ಪ್ರೀಮಿಯಂ ಮೂಲಕ ತೆರಿಗೆ ಉಳಿಸುವುದು ಹೇಗೆ?

By ಶಾರ್ವರಿ
|

ನಿಮಗೆ ತಿಳಿದಿದೆಯೇ, ಟರ್ಮ್ ಇನ್ಶುರೆನ್ಸ್ ಪ್ರೀಮಿಯಂ ಮೂಲಕವೂ ನೀವು ತೆರಿಗೆಯಲ್ಲಿ ಹಣವನ್ನು ಉಳಿಸಬಹುದೆಂದು? ಬನ್ನಿ ಆ ಮಾಹಿತಿ ತಿಳಿಯೋಣ!

ಭವಿಷ್ಯದ ಭದ್ರತೆಗಾಗಿ 'ವಿಮೆ' ಶ್ರೇಷ್ಠ ಎಂದು ನಾವೆಲ್ಲರೂ ಒಪ್ಪುತ್ತೇವೆ ಅಲ್ಲವೇ? ಆದರೆ, ಟರ್ಮ್ ಇನ್ಶೂರೆನ್ಸ್ ನಿಮಗೆ ತೆರಿಗೆಗಳಲ್ಲಿ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ ಎಂಬ ವಿಚಾರ ನಿಮಗೆ ತಿಳಿದಿದೆಯೇ? ನಿಮಗೆ ತೆರಿಗೆ ಪ್ರಕ್ರಿಯೆ ಬಗ್ಗೆ ಮಾಹಿತಿ ಕೊರತೆ ಇದ್ದರೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅನ್ನು ನೀವು ಅಧ್ಯಯನ ಮಾಡಬೇಕು.

ಇದು ಮೂಲಭೂತವಾಗಿ ನೀವು ತೆರಿಗೆ ವಿನಾಯಿತಿ ಪಡೆಯಲು ಎಲ್ಲೆಲ್ಲಿ ಹಣವನ್ನು ಇರಿಸಬಹುದು ಎಂಬುದನ್ನು ವಿವರಿಸುತ್ತದೆ. ಟರ್ಮ್ ಲೈಫ್ ಇನ್ಶೂರೆನ್ಸ್ ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ಜೀವನದಲ್ಲಿ ಎದುರಾಗುವ ತೊಂದರೆ ಹಾಗೂ ಸಂಕಷ್ಟದಿಂದ ಪಾರುವ ಮಾಡುವ ಜೊತೆಗೆ ನಿಮ್ಮ ಹಣವನ್ನು ತೆರಿಗೆಗಳಿಂದ ರಕ್ಷಿಸುತ್ತದೆ. ನಿಮ್ಮ ಭವಿಷ್ಯದ ಭದ್ರತೆಗಾಗಿ ಟರ್ಮ್-ಲೈಫ್ ಇನ್ಶೂರೆನ್ಸ್ ಹೊಂದಿರುವುದು ಮುಖ್ಯವಾಗಿದೆ.

ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತ

ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತ

ಸೆಕ್ಷನ್ 80ಸಿ ಅಡಿಯಲ್ಲಿ ವಾರ್ಷಿಕವಾಗಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಉದಾಹರಣೆಗೆ 5 ಲಕ್ಷ ಆದಾಯ ಇದ್ದರೆ ಇನ್ಯುರೆನ್ಸ್ ಕಟ್ಟುವುದರಿಂದ 1.5 ಲಕ್ಷ ಕಡಿತಗೊಳಿಸಿ ಉಳಿದ 3.5 ಲಕ್ಷಕ್ಕೆ ತೆರಿಗೆ ಕಟ್ಟಬೇಕು. ಅಂದರೆ ಈ ಪ್ರೀಮಿಯಂಗಳನ್ನು ನಿಮ್ಮ ತೆರಿಗೆಯ ಆದಾಯದ ಭಾಗವಾಗಿ ಪರಿಗಣಿಸಲಾಗುವುದಿಲ್ಲ. ಒಂದು ವೇಳೆ ಪಾಲಿಸಿ ತೆಗೆದುಕೊಂಡು ಎರಡು ವರ್ಷದೊಳಗೆ ವಾಪಾಸು ಕೊಟ್ಟು ಬಿಟ್ಟರೆ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಸೆಕ್ಷನ್ 80ಸಿ ಅಡಿಯಲ್ಲಿ ಇನ್ಸುರೆನ್ಸ್‌, ಮ್ಯೂಚುವಲ್ ಫಂಡ್, ಪಿಎಫ್ ಎಲ್ಲವೂ ಬರುತ್ತದೆ. ಇವೆಲ್ಲ ಸೇರಿಯೇ 1.5 ಲಕ್ಷ ತೆರಿಗೆ ವಿನಾಯಿತಿ ಪಡೆಯಬಹುದು.

ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಷರತ್ತು

ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಷರತ್ತು

ಪಾವತಿಸಿದ ವಾರ್ಷಿಕ ಪ್ರೀಮಿಯಂಗಳು ಒಟ್ಟು ಖಾತರಿಯ ಶೇ.10ರಷ್ಟನ್ನು ಮೀರಬಾರದು. ಒಂದು ವೇಳೆ ಪ್ರೀಮಿಯಂ ಶೇ.10 ರಷ್ಟು ನಿಯಮಗಳನ್ನು ಮೀರಿದರೆ, ಕಡಿತಗಳನ್ನು ಪ್ರಮಾಣಾನುಗುಣವಾಗಿ ವಿಧಿಸಲಾಗುತ್ತದೆ. ಆದರೆ, ಮಾರ್ಚ್ 31, 2012 ರ ಮೊದಲು ನೀಡಲಾದ ಪಾಲಿಸಿಗಳಿಗೆ, ವಾರ್ಷಿಕ ಪ್ರೀಮಿಯಂ ಒಟ್ಟು ಖಾತರಿಯ ಶೇ.20% ಅನ್ನು ಮೀರದಿದ್ದರೆ ಮಾತ್ರ ತೆರಿಗೆ ವಿನಾಯಿತಿ ಲಭ್ಯವಿರುತ್ತದೆ. ಸೆಕ್ಷನ್ 80ಸಿ ಪ್ರಕಾರ, ಎರಡು ವರ್ಷಗಳ ಮೊದಲು ಪಾಲಿಸಿಯನ್ನು ಸ್ವಯಂಪ್ರೇರಣೆಯಿಂದ ರದ್ದುಗೊಳಿಸಿದರೆ ಅಥವಾ ತ್ಯಜಿಸಿದರೆ, ಪಾಲಿಸಿದಾರನು ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಲು ಅರ್ಹನಾಗಿರುವುದಿಲ್ಲ. ಹಾಗಂತ ತೆರಿಗೆ ಹಣ ಉಳಿಸಲು ಸೆಕ್ಷನ್ 80 ಸಿ ಒಂದೇ ಇರುವ ಮಾರ್ಗವಲ್ಲ.

ತೆರಿಗೆ ಕಡಿತ ಸೆಕ್ಷನ್ 10 (10 ಡಿ)

ತೆರಿಗೆ ಕಡಿತ ಸೆಕ್ಷನ್ 10 (10 ಡಿ)

ಸೆಕ್ಷನ್ 80ಸಿ ಒಂದೇ ನಿಮ್ಮ ತೆರಿಗೆ ಹಣವನ್ನು ಉಳಿಸುವ ಮಾರ್ಗವಲ್ಲ. ಆದರೆ, ಟರ್ಮ್ ಲೈಫ್ ಇನ್ಶೂರೆನ್ಸ್ ಯೋಜನೆಯಿಂದ ನೀವು ಕಟ್ಟುವ ವಿಮೆ ಮೊತ್ತವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಮೆಚ್ಯೂರಿಟಿ ಹಣಕ್ಕೆ ಯಾವುದೇ ತೆರಿಗೆ ಕಟ್ಟುವಂತಿಲ್ಲ. ಒಂದು ವೇಳೆ ಪಾಲಿಸಿದಾರ ಅಕಾಲಿಕ ಮರಣಕ್ಕೆ ತುತ್ತಾದರೆ ಯಾರು ನಾಮಿನಿ ಆಗಿರುತ್ತಾರೋ ಅವರಿಗೆ ತೆರಿಗೆ ಕಡಿತವಿಲ್ಲದೆ ಸಂಪೂರ್ಣ ಹಣ ಸಂದಾಯವಾಗುತ್ತದೆ. ಮೆಚ್ಯೂರಿಟಿ ಹಣಕ್ಕೆ ಯಾವುದಾದರೂ ಬೋನಸ್ ಬಂದಿದ್ದರೆ ಅದು ಕೂಡ ತೆರಿಗೆ-ಮುಕ್ತವಾಗಿರುತ್ತದೆ.

ಸೆಕ್ಷನ್ 10(ಡಿ) ಅಡಿಯಲ್ಲಿ ವಿನಾಯಿತಿಗಾಗಿ ಷರತ್ತು

ಸೆಕ್ಷನ್ 10(ಡಿ) ಅಡಿಯಲ್ಲಿ ವಿನಾಯಿತಿಗಾಗಿ ಷರತ್ತು

ವಿಮಾ ಮೊತ್ತವು ಕನಿಷ್ಠ 10 ಪಟ್ಟು ಪ್ರೀಮಿಯಂ ಆಗಿದ್ದರೆ ಅಥವಾ ವಿಮಾ ಮೊತ್ತದ 10% ಕ್ಕಿಂತ ಕಡಿಮೆ ಪ್ರೀಮಿಯಂ ಇದ್ದರೆ ಸೆಕ್ಷನ್ 10 (10ಡಿ) ಅಡಿ ಟರ್ಮ್ ಪ್ಲಾನ್ ತೆರಿಗೆ ಪ್ರಯೋಜನಗಳು ಅನ್ವಯಿಸುತ್ತವೆ. ವಿಮೆಯಿಂದ ಸಿಗುವ ನಾನಾ ಪರಿಹಾರ ಮೊತ್ತವು 1 ಲಕ್ಷ ಮೀರಿದರೆ ಟಿಡಿಸಿ ಎಂದು ಶೇ.1ರಷ್ಟು ಹಣವನ್ನು ಕಡಿಗೊಳಿಸಲಾಗುತ್ತದೆ. ಇದಕ್ಕೆ ಪ್ಯಾನ್ ಕಾರ್ಡ್ ನಂಬರ್ ಕಡ್ಡಾಯವಾಗಿ ಕೊಡಬೇಕು. ಕಟ್ಟಿದ ಟಿಡಿಎಸ್ ಹಣವನ್ನು ತೆರಿಗೆ ಕಟ್ಟುವಾಗ ಮತ್ತೆ ರಿಫಂಡ್ ಮಾಡಿಕೊಳ್ಳಲು ಅವಕಾಶವಿದೆ.

ಸೆಕ್ಷನ್ 80(ಡಿ) ಅಡಿಯಲ್ಲಿ ತೆರಿಗೆ ಪ್ರಯೋಜನಗಳು

ಸೆಕ್ಷನ್ 80(ಡಿ) ಅಡಿಯಲ್ಲಿ ತೆರಿಗೆ ಪ್ರಯೋಜನಗಳು

ವರ್ಷ ವರ್ಷ ನಿಮ್ಮ ಹೆಂಡತಿ, ಮಕ್ಕಳು, ಪೋಷಕರ ಆರೋಗ್ಯ ವಿಮೆ ಕಟ್ಟುತ್ತಿದ್ದರೆ ಅದರ ಪ್ರೀಮಿಯಂ ಹಣವನ್ನು 80 (ಡಿ) ಅಡಿ ಕ್ಲೈಮ್ ಮಾಡಿಕೊಳ್ಳಬಹುದು. ಈ ಸೆಕ್ಷನ್ ಅಡಿ 25 ಸಾವಿರದವರೆಗೆ ವಿನಾಯಿತಿ ಪ್ರಯೋಜನ ಪಡೆಯಬಹುದು. ಅಂದರೆ ವಾರ್ಷಿಕ 5 ಲಕ್ಷ ಆದಾಯ ಇದ್ದರೆ ತೆರಿಗೆ ಕಟ್ಟುವಾಗ 25 ಸಾವಿರ ಕಡಿತಗೊಳಿಸಿ ಉಳಿದ ಮೊತ್ತಕ್ಕೆ ನೀವು ತೆರಿಗೆ ಕಟ್ಟಬೇಕಾಗುತ್ತದೆ.

ಸೆಕ್ಷನ್ 80(ಡಿ) ಅಡಿಯಲ್ಲಿ ಕಡಿತಕ್ಕೆ ಷರತ್ತು:

ನಿಮ್ಮ ಪೋಷಕರಿಗೆ ನೀವು ಆರೋಗ್ಯ ವಿಮೆ ಮಾಡಿಸಿದ್ದರೆ 25 ಸಾವಿರ ತೆರಿಗೆ ಕಡಿತದ ಮಿತಿ ಪಡೆಯಬಹುದು. ಹಿರಿಯ ನಾಗರಿಕರಾದರೆ 50 ಸಾವಿರ ತೆರಿಗೆ ಕಡಿತ ಸಿಗುತ್ತದೆ.

English summary

Do You Know With Term Insurance Premiums, You Can Save Tax: Learn How

If you're a tax nerd, you should study the Income Tax Act's Section 80C, which basically outlines all the locations you may put your money to earn tax deductions.
Story first published: Tuesday, December 28, 2021, 22:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X