For Quick Alerts
ALLOW NOTIFICATIONS  
For Daily Alerts

ಆನ್‌ಲೈನ್‌ ವಹಿವಾಟಿನ ವೇಳೆ ಐಎಫ್‌ಎಸ್‌ಸಿ ಕೋಡ್‌ ತಪ್ಪಾಗಿ ಹಾಕಿದರೆ, ಹಣ ಏನಾಗುತ್ತದೆ?

|

ಕೊರೊನಾ ವೈರಸ್‌ ಸೋಂಕಿನ ಕಾರಣದಿಂದಾಗಿ ವಿಶ್ವದಾದ್ಯಂತ ಲಾಕ್‌ಡೌನ್‌ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಆನ್‌ಲೈನ್‌ ವ್ಯವಹಾರವು ಅತೀ ಹೆಚ್ಚು ಪ್ರಚಲಿತವಾಗಲು ಆರಂಭವಾಯಿತು. ಈಗ ಅಧಿಕ ಮಂದಿ ಆನ್‌ಲೈನ್‌ ಮೂಲಕವೇ ವಹಿವಾಟು ಮಾಡುತ್ತಾರೆ. ಜನರು ಇಂಟರ್‌ನೆಟ್‌ ಬಳಕೆಯ ಮೂಲಕ ಒಂದು ಬ್ಯಾಂಕ್‌ ಖಾತೆಯಿಂದ ಮತ್ತೊಂದು ಬ್ಯಾಂಕ್‌ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಾರೆ.

 

ಈ ಸಂದರ್ಭದಲ್ಲಿ ಐಎಫ್‌ಎಸ್‌ಸಿ ಕೋಡ್‌ ಅನ್ನು ಬಳಸಬೇಕಾಗುತ್ತದೆ. ಆದರೆ ಈ ಆನ್‌ಲೈನ್‌ ವಹಿವಾಟಿನ ಸಂದರ್ಭದಲ್ಲಿ ನೀವು ತಪ್ಪಾದ ಐಎಫ್‌ಎಸ್‌ಸಿ ಕೋಡ್‌ ಅನ್ನು ಹಾಕಿದರೆ ಏನಾಗುತ್ತದೆ, ನಿಮ್ಮ ಹಣ ಎಲ್ಲಿಗೆ ಹೋಗಬಹುದು ಎಂಬ ಬಗ್ಗೆ ನೀವು ಆಲೋಚನೆ ಮಾಡಿದ್ದೀರಾ?. ಹಾಗಾದರೆ ಐಎ‌ಫ್‌ಎಸ್‌ಸಿ ಕೋಡ್‌ ತಪ್ಪಾಗಿ ಹಾಕಿದರೆ ಏನು ಆಗುತ್ತದೆ ಎಂಬ ಬಗ್ಗೆ ನಾವು ತಿಳಿಯೋಣ, ಮುಂದೆ ಓದಿ.

 

ಬಿಡುಗಡೆಯಾದ ಆರು ತಿಂಗಳೊಳಗೆ ಯುನಿಕಾರ್ನ್ ಆದ ಮೆನ್ಸಾ ಬ್ರಾಂಡ್ಸ್‌!ಬಿಡುಗಡೆಯಾದ ಆರು ತಿಂಗಳೊಳಗೆ ಯುನಿಕಾರ್ನ್ ಆದ ಮೆನ್ಸಾ ಬ್ರಾಂಡ್ಸ್‌!

ಐಎ‌ಫ್‌ಎಸ್‌ಸಿ ಕೋಡ್‌ ತಪ್ಪಾಗಿ ಹಾಕಿದರೆ ಏನು ಆಗುತ್ತದೆ ಎಂದು ತಿಳಿಯುವುದಕ್ಕೂ ಮುನ್ನ ನೀವು ಈ ಐಎಫ್‌ಎಸ್‌ಸಿ ಕೋಡ್‌ ಎಂದರೆ ಏನು ಎಂಬುವುದನ್ನು ತಿಳಿಯುವುದು ಮುಖ್ಯ. ಐಎಫ್‌ಎಸ್‌ಸಿ ಕೋಡ್‌ ಎಂದರೆ ಇಂಡಿಯನ್‌ ಫಿನಾನ್ಶಿಯಲ್‌ ಸಿಸ್ಟಮ್‌ ಕೋಡ್‌. ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾವು ಈ ಹನ್ನೊಂದು ಅಂಕೆಗಳ ಕೋಡ್‌ ಅನ್ನು ಬ್ಯಾಂಕುಗಳಿಗೆ ನೀಡುತ್ತದೆ. ಎಲ್ಲಾ ಬ್ಯಾಂಕುಗಳು ತಮ್ಮದೇ ಆದ ಐಎಫ್‌ಎಸ್‌ಸಿ ಕೋಡ್‌ ಅನ್ನು ಹೊಂದಿರುತ್ತದೆ. ಎಲ್ಲಾ ಬ್ಯಾಂಕಿನ ಪ್ರತಿ ಬ್ರಾಂಚು (ಶಾಖೆ) ಗಳು ಕೂಡಾ ತನ್ನದೇ ಆದ ಐಎಫ್‌ಎಸ್‌ಸಿ ಕೋಡ್‌ ಅನ್ನು ಹೊಂದಿರುತ್ತದೆ.

 ಆನ್‌ಲೈನ್‌ ವಹಿವಾಟಿನ ವೇಳೆ ಐಎಫ್‌ಎಸ್‌ಸಿ ಕೋಡ್‌ ತಪ್ಪಾಗಿ ಹಾಕಿದರೆ?

ನೆಫ್ಟ್‌, ಐಎಂಪಿಎಸ್‌ ಹಾಗೂ ಆರ್‌ಟಿಜಿಎಸ್‌ ಆನ್‌ಲೈನ್‌ ಬ್ಯಾಂಕಿಂಗ್‌ ವಹಿವಾಟಿಗೆ ಐಎಫ್‌ಎಸ್‌ಸಿ ಕೋಡ್‌ ಅನ್ನು ಬಳಸಲಾಗುತ್ತದೆ. ನಾವು ಐಎಫ್‌ಎಸ್‌ಸಿ ಕೋಡ್‌ ಇಲ್ಲದೆ ಇಂಟರ್‌ನೆಟ್‌ ಬ್ಯಾಂಕಿಂಗ್‌ ಅಥವಾ ಹಣ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಹನ್ನೊಂದು ಅಂಕಿಗಳ ಈ ಕೊಡ್‌ನ ಪೈಕಿ ಬ್ಯಾಂಕಿನ ಹೆಸರು ಮೊದಲ ನಾಲ್ಕು ಅಂಕಿಗಳಲ್ಲಿ ಇರುತ್ತದೆ. ಬ್ಯಾಂಕಿಗೆ ಸಂಬಂಧಿಸಿದ ನಾಲ್ಕು ಅಕ್ಷರಗಳ ಬಳಿಕ ಒಂದು ಸೊನ್ನೆ ಇರುತ್ತದೆ. ಆ ಬಳಿಕ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ ನೀಡಿದ ಅಂಕಿಗಳು ಇರುತ್ತದೆ.

ಕ್ರಿಪ್ಟೋಕರೆನ್ಸಿ ಸ್ಥಗಿತ ಅಸಾಧ್ಯ, ನಿಯಂತ್ರಣ ಮುಖ್ಯ: ಸಂಸದೀಯ ಸಮಿತಿಕ್ರಿಪ್ಟೋಕರೆನ್ಸಿ ಸ್ಥಗಿತ ಅಸಾಧ್ಯ, ನಿಯಂತ್ರಣ ಮುಖ್ಯ: ಸಂಸದೀಯ ಸಮಿತಿ

ಐಎಫ್‌ಎಸ್‌ಸಿ ಕೋಡ್‌ ತಪ್ಪು ಹಾಕಿದರೂ ವಹಿವಾಟು ಪೂರ್ಣ!

ಆನ್‌ಲೈನ್‌ ವಹಿವಾಟಿನ ಸಂದರ್ಭದಲ್ಲಿ ನೀವು ಮಾಡುವ ಒಂದು ತಪ್ಪು ಎಲ್ಲವೂ ಹಳಿ ತಪ್ಪುವಂತೆ ಮಾಡಬಹುದು. ನೀವು ಐಎಫ್‌ಎಸ್‌ಸಿ ಕೋಡ್‌ ತಪ್ಪಾಗಿ ಹಾಕಿದರೂ ನಿಮ್ಮ ವಹಿವಾಟು ಸಫಲವಾಗಿದೆ ಎಂದು ಸಂದೇಶ ಬರಬಹುದು. ಆದರೆ ಹಣ ಎಲ್ಲಿ ವರ್ಗಾವಣೆ ಆಗಬೇಕಿತ್ತೋ ಅಲ್ಲಿಗೆ ವರ್ಗಾವಣೆ ಆಗದೆ ಇರಬಹುದು. ಆದ್ದರಿಂದ ನೀವು ಐಎಫ್‌ಎಸ್‌ಸಿ ಕೋಡ್‌ ಹಾಕುವ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಬ್ಯಾಂಕ್‌ ಖಾತೆಯೂ ಸ್ಟೇಟ್‌ ಬ್ಯಾಂಕ್‌ ಆಪ್‌ ಇಂಡಿಯಾ ದೆಹಲಿ ಶಾಖೆಯದ್ದು ಆಗಿದ್ದರೆ, ಆದರೆ ನೀವು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ನೋಯ್ಡಾ ಶಾಖೆಯ ಐಎಫ್‌ಎಸ್‌ಸಿ ಕೋಡ್‌ ನೀಡಿದರೆ, ನಿಮ್ಮ ಹಣವು ಬ್ಯಾಂಕಿನಿಂದ ವಿತ್‌ಡ್ರಾ ಆಗುತ್ತದೆ. ಆದರೆ ಆ ಹಣವು ಸೇರಬೇಕಾದವರ ಖಾತೆಗೆ ಸೇರದೆ ಬೇರೆಯವರ ಖಾತೆಗೆ ಜಮೆ ಆಗುತ್ತದೆ. ನಿಮ್ಮ ಖಾತೆ ಸಂಖ್ಯೆ ಸರಿಯಾಗಿದ್ದು, ಐಎಫ್‌ಎಸ್‌ಸಿ ಕೋಡ್‌ ತಪ್ಪಾಗಿದ್ದರೆ, ಈ ರೀತಿ ಬೇರೆಯವರಿಗೆ ಹಣ ಹೋಗುತ್ತದೆ.

ನೀವು ಬೇರೆ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್‌ ಹಾಕಿದರೆ?

ನೀವು ಐಎಫ್‌ಎಸ್‌ಸಿ ಕೋಡ್‌ ಅನ್ನು ತಪ್ಪಾಗಿ ನಮೂದಿಸಿದರೆ, ಉದಾಹರಣೆಗೆ ಪಿಎನ್‌ಬಿ ಗಾಜಿಯಾಬಾದ್‌ ಬದಲಿಗೆ ಎಸ್‌ಬಿಐ ಗಾಜಿಯಾಬಾದ್‌ನ ಐಎಫ್‌ಎಸ್‌ಸಿ ಕೋಡ್‌ ಹಾಕಿದರೆ, ನಿಮ್ಮ ಹಣವು ಬೇರೆ ಯಾರದಾದರೂ ಖಾತೆಗೆ ವರ್ಗಾವಣೆ ಆಗುವ ಸಾಧ್ಯತೆಗಳು ಇದೆ. ಆದರೆ ಯಾವುದೇ ಪಿಎನ್‌ಬಿ ಬ್ಯಾಂಕು ಖಾತೆಯ ಸಂಖ್ಯೆ ಹಾಗೂ ಎಸ್‌ಬಿಐ ಖಾತೆ ಸಂಖ್ಯೆಯು ಒಂದೇ ಆಗಿದ್ದರೆ ಮಾತ್ರ ಈ ರೀತಿ ಬೇರೆಯವರ ಖಾತೆಗೆ ಹಣ ಹೋಗುತ್ತದೆ. ಹಾಗೆಯೇ ಈ ರೀತಿ ಯಾವುದೇ ಹೊಂದಾಣಿಕೆಯು ಆಗದಿದ್ದರೆ ನಿಮ್ಮ ವಹಿವಾಟು ರದ್ದು ಆಗುವ ಸಾಧ್ಯತೆಗಳು ಕೂಡಾ ಕಡಿಮೆ ಆಗಿದೆ.

English summary

What will happen to your money if IFSC code is wrong in an online transaction?

Doing online transactions? Know what will happen to money if IFSC code is wrong.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X