For Quick Alerts
ALLOW NOTIFICATIONS  
For Daily Alerts

ಟೋಲ್ ತೆರಿಗೆ ಶೇ.200 ಏರಿಕೆ, ಮನಾಲಿ ಪ್ರವಾಸ ಇನ್ಮುಂದೆ ದುಬಾರಿ!

|

ಮನಾಲಿ ಪ್ರವಾಸ ಮಾಡಬೇಕು ಎಂದುಕೊಂಡಿದ್ದೀರಾ?, ಆದರೆ ಮನಾಲಿ ಪ್ರವಾಸ ಇನ್ಮುಂದೆ ದುಬಾರಿಯಾಗಲಿದೆ. ಅದಕ್ಕೆ ಮುಖ್ಯ ಕಾರಣ ಟೋಲ್ ತೆರಿಗೆ ಏರಿಕೆ. ಆದರೆ ಟೋಲ್ ತೆರಿಗೆ ಹೆಚ್ಚಾದರೆ ಪ್ರವಾಸವೇ ದುಬಾರಿ ಹೇಗೆ ಸಾಧ್ಯ ಅಂದುಕೊಂಡಿದ್ದೀರಾ? ಮನಾಲಿ ಪ್ರವಾಸ ಮಾಡುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ತೆರಿಗೆ ಶೇಕಡ 1-2ರಷ್ಟಲ್ಲ ಶೇಕಡ 200ರಷ್ಟು ಹೆಚ್ಚಾಗಿದೆ.

ಡೊಹ್ಲುನಾಲ ಟೋಲ್ ಪ್ಲಾಜಾದಲ್ಲಿ ಟೋಲ್ ಅನ್ನು ಕಳೆದ ವಾರ ನ್ಯಾಷನಲ್ ಹೈವೇ ಅಥಾರಿಟಿ ಹೆಚ್ಚಳ ಮಾಡಿದೆ. ಇದರಿಂದಾಗಿ ಮನಾಲಿಗೆ ಕುಲ್ಲು ಮನಾಲಿ ನ್ಯಾಷನಲ್ ಹೆದ್ದಾರಿ ಮೂಲಕ ಸಾಗುವವರು ಅಧಿಕ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.

ಫಾಸ್ಟ್‌ಟ್ಯಾಗ್ ಸ್ಕ್ಯಾನರ್ ಕೆಟ್ಟಿದ್ದರೆ ಟೋಲ್‌ನಲ್ಲಿ ಫ್ರೀ ಎಂಟ್ರಿಫಾಸ್ಟ್‌ಟ್ಯಾಗ್ ಸ್ಕ್ಯಾನರ್ ಕೆಟ್ಟಿದ್ದರೆ ಟೋಲ್‌ನಲ್ಲಿ ಫ್ರೀ ಎಂಟ್ರಿ

ಮನಾಲಿಗೆ ಒಂದು ಬಾರಿಯ ಪ್ರವಾಸಕ್ಕೂ ಟೋಲ್ ತೆರಿಗೆ ಭಾರೀ ಅಧಿಕವಾಗಿದೆ. ಹಿಮಾಚಲ ಪ್ರದೇಶದ ಈ ಪ್ರದೇಶ ರಜೆಯನ್ನು ಕಳೆಯುವ ಪ್ರಸಿದ್ಧ ಸ್ಥಳವಾಗಿದೆ. ಸಣ್ಣ ವಾಹನಕ್ಕೆ ಟೋಲ್ ತೆರಿಗೆಯನ್ನು 35 ರೂಪಾಯಿಯಿಂದ 75 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ರಿಟರ್ನ್ ಪ್ರವಾಸದ ವೇಳೆ ಈ ಹಿಂದೆ 55 ರೂಪಾಯಿ ಟೋಲ್ ತೆರಿಗೆ ಪಾವತಿಸಬೇಕಾಗಿತ್ತು. ಆದರೆ ಇನ್ಮುಂದೆ 115 ರೂಪಾಯಿ ಪಾವತಿಸಬೇಕಾಗುತ್ತದೆ.

ಟೋಲ್ ತೆರಿಗೆ ಶೇ.200 ಏರಿಕೆ, ಮನಾಲಿ ಪ್ರವಾಸ ಇನ್ಮುಂದೆ ದುಬಾರಿ!


ಇನ್ನು ತಮ್ಮ ವಾಹನದಲ್ಲಿ ಫಾಸ್ಟ್ಯಾಗ್ ಅನ್ನು ಹಾಕಿಕೊಳ್ಳದವರು ದುಪ್ಪಟ್ಟು ಟೋಲ್ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಇನ್ನು ಟೋಲ್ ಪ್ಲಾಜಾದಲ್ಲಿ ಎಲ್ಲ ವಾಹನಗಳಿಗೆ ಟೋಲ್ ಪ್ಲಾಜಾ ದುಪ್ಪಟ್ಟಿಗಿಂತ ಅಧಿಕವೇ ಹೆಚ್ಚಾಗಿದೆ. ಹಳೆ ದರ ಹಾಗೂ ನೂತನ ದರಪಟ್ಟಿ ಈ ಕೆಳಗಿದೆ. ಮುಂದೆ ಓದಿ...

ನೂತನ ದರಪಟ್ಟಿ ಇಲ್ಲಿದೆ

ಸಣ್ಣ ವಾಹನಕ್ಕೆ ಹಳೆಯ ಟೋಲ್ ದರ: 35 ರೂಪಾಯಿ
ಸಣ್ಣ ವಾಹನಕ್ಕೆ ನೂತನ ಟೋಲ್ ದರ: 75 ರೂಪಾಯಿ

ಸಣ್ಣ ವಾಹನಕ್ಕೆ ಹಳೆಯ ಟೋಲ್ ದರ (ಹಿಂದಿರುಗಲು): 55 ರೂಪಾಯಿ
ಸಣ್ಣ ವಾಹನಕ್ಕೆ ನೂತನ ಟೋಲ್ ದರ (ಹಿಂದಿರುಗಲು): 115 ರೂಪಾಯಿ

ಎಲ್‌ವಿಸಿ, ಎಲ್‌ಜಿವಿ, ಮಿನಿ ವಾಹನ ಟೋಲ್ (one-way trip): 125 ರೂಪಾಯಿ
ಎಲ್‌ವಿಸಿ, ಎಲ್‌ಜಿವಿ, ಮಿನಿ ವಾಹನ ಟೋಲ್ (to-and-fro trip): 190 ರೂಪಾಯಿ

ಟೋಲ್ ಪ್ಲಾಜಾಗಳಲ್ಲಿ 100 ಮೀಟರ್ ಕ್ಯೂ ಇದ್ರೆ ಟೋಲ್ ತೆರಿಗೆ ಕಟ್ಟಬೇಕಾಗಿಲ್ಲ!ಟೋಲ್ ಪ್ಲಾಜಾಗಳಲ್ಲಿ 100 ಮೀಟರ್ ಕ್ಯೂ ಇದ್ರೆ ಟೋಲ್ ತೆರಿಗೆ ಕಟ್ಟಬೇಕಾಗಿಲ್ಲ!

ದೊಡ್ಡ ವಾಹನ (one-way trip): 415 ರೂಪಾಯಿ
ದೊಡ್ಡ ವಾಹನ (to-and-fro trip): 620 ರೂಪಾಯಿ

ಅತೀ ದೊಡ್ಡ ವಾಹನ (one-way trip): 505 ರೂಪಾಯಿ
ಅತೀ ದೊಡ್ಡ ವಾಹನ (to-and-fro trip): 755 ರೂಪಾಯಿ

English summary

Driving to Manali gets costlier after 200 percent toll tax hike, Check new Rates here

People driving to Manali on the Kullu Manali national highway will now have to pay more than double after the toll rates for the Dohlunala toll plaza were hiked by the National Highway Authority of India (NHAI) last week. 
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X