For Quick Alerts
ALLOW NOTIFICATIONS  
For Daily Alerts

ಸಿಹಿಸುದ್ದಿ: 10-12 ರೂಪಾಯಿ ಇಳಿಕೆಯಾಗಲಿದೆ ಖಾದ್ಯ ತೈಲ ಬೆಲೆ!

|

ಸಾಮಾನ್ಯ ಜನರಿಗೆ ಸಿಹಿಸುದ್ದಿಯೊಂದು ಇಲ್ಲಿದೆ. ಮುಂಬರುವ ದಿನಗಳಲ್ಲಿ ಖಾದ್ಯ ತೈಲ ಬೆಲೆಯು ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಖಾದ್ಯ ತೈಲ ಸಂಸ್ಕರಣಾ ಸಂಸ್ಥೆ, ತಯಾರಕ ಸಂಸ್ಥೆಯು ಜಾಗತಿಕವಾಗಿ ಖಾದ್ಯ ತೈಲ ಬೆಲೆ ಇಳಿಕೆಯ ಪ್ರಯೋಜವನ್ನು ಜನರಿಗೆ ನೀಡಲು ಮುಂದಾಗಿದೆ. ಸುಮಾರು 10-12 ರೂಪಾಯಿ ದರ ಇಳಿಕೆ ಮಾಡಲು ಮುಂದಾಗಿದೆ ಎಂದು ವರದಿ ಉಲ್ಲೇಖ ಮಾಡಿದೆ.

 

ಈ ಬಗ್ಗೆ ಮಾಧ್ಯಮಕ್ಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. "ಖಾದ್ಯ ತೈಲ ಸಂಸ್ಕರಣಾ ಸಂಸ್ಥೆಗಳು ಖಾದ್ಯ ತೈಲ ಬೆಲೆಯಲ್ಲಿ ಇನ್ನಷ್ಟು ಇಳಿಕೆ ಮಾಡಲು ನಿರ್ಧಾರ ಮಾಡಿದ್ದಾರೆ. ಸುಮಾರು ರೂಪಾಯಿ 10-12ರಷ್ಟು ಖಾದ್ಯ ತೈಲ ಬೆಲೆಯನ್ನು ಇಳಿಕೆ ಮಾಡಲು ನಿರ್ಧಾರ ಮಾಡಿದೆ. ಜಾಗತಿಕವಾಗಿ ತೈಲ ಬೆಲೆ ಇಳಿಕೆಯಾದ ಕಾರಣದಿಂದಾಗಿ ಸಂಸ್ಥೆಗಳು ಈ ನಿರ್ಧಾರಕ್ಕೆ ಬಂದಿದೆ. ನಾವು ಸಂಸ್ಥೆಗಳೊಂದಿಗೆ ಸಭೆಯನ್ನು ನಡೆಸಿದ್ದೇವೆ. ಸಂಸ್ಥೆಯ ಪ್ರತಿನಿಧಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ," ಎಂದು ತಿಳಿಸಿದ್ದಾರೆ.

ಸಿಹಿ ಸುದ್ದಿ: ಎಂಆರ್‌ಪಿ ಕಡಿತಕ್ಕೆ ಕೇಂದ್ರ ಸೂಚನೆ, ಇನ್ನಷ್ಟು ತಗ್ಗಲಿದೆ ಖಾದ್ಯ ತೈಲ ಬೆಲೆ

ಭಾರತವು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುವ ಪ್ರಮುಖ ದೇಶವಾಗಿದೆ. ಒಟ್ಟು ಬಳಕೆ ಮಾಡಲಾಗುವ ಖಾದ್ಯ ತೈಲದ ಪೈಕಿ ಸುಮಾರು ಮೂರನೇ ಎರಡು ಭಾಗದಷ್ಟು ಖಾದ್ಯ ತೈಲವನ್ನು ಭಾರತವು ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದಾಗಿ ಜಾಗತಿಕವಾಗಿ ಖಾದ್ಯ ತೈಲದ ಬೆಲೆಯ ಏರಿಳಿತವು ಭಾರತದಲ್ಲಿ ತೈಲ ದರದ ಮೇಲೆ ಪರಿಣಾಮ ಉಂಟು ಮಾಡುತ್ತದೆ.

 ರಷ್ಯಾ, ಉಕ್ರೇನ್ ಯುದ್ಧದ ಸಂದರ್ಭ ಏರಿಕೆ

ರಷ್ಯಾ, ಉಕ್ರೇನ್ ಯುದ್ಧದ ಸಂದರ್ಭ ಏರಿಕೆ

ರಷ್ಯಾ ಹಾಗೂ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆಯು ಭಾರೀ ಏರಿಕೆಯಾಗಿದೆ. ಈ ಸಂದರ್ಭದಲ್ಲಿ ಖಾದ್ಯ ತೈಲದ ಬೆಲೆಯು ಕೂಡಾ ಏರಿಕೆಯಾಗಿದೆ. ಪಾಮ್ ಆಯಿಲ್ ಅನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದಕ್ಕೆ ಇಂಡೋನೇಷ್ಯಾಕ್ಕೆ ನಿರ್ಬಂಧ ಹೇರಲಾಯಿತು. ಇತ್ತೀಚೆಗೆ ಇಂಡೋನೇಷ್ಯಾ ಪಾಮ್ ಆಯಿಲ್ ರಫ್ತಿನ ಮೇಲಿನ ನಿರ್ಬಂಧವನ್ನು ಸಡಿಲಿಕೆ ಮಾಡಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆಯು ಇಳಿಕೆಯಾಗಿದೆ.

ಸಿಹಿ ಸುದ್ದಿ: ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಖಾದ್ಯ ತೈಲ ಬೆಲೆ ಇಳಿಕೆ

 ಪ್ರಯೋಜನ ಜನರಿಗೂ ಹಸ್ತಾಂತರಿಸಲು ಕೇಂದ್ರ ಸೂಚನೆ

ಪ್ರಯೋಜನ ಜನರಿಗೂ ಹಸ್ತಾಂತರಿಸಲು ಕೇಂದ್ರ ಸೂಚನೆ

ಕಳೆದ ತಿಂಗಳು ಖಾದ್ಯ ತೈಲ ಬೆಲೆಯನ್ನು ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರವು ಎಲ್ಲಾ ತೈಲ ಸಂಸ್ಥೆಗಳಿಗೆ ಆದೇಶ ನೀಡಿತ್ತು. ಬೆಲೆ ಏರಿಕೆಯ ಹೊರೆಯನ್ನು ಹೇಗೆ ಜನರ ಮೇಲೆ ಹಾಕಲಾಗುತ್ತದೆಯೋ ಹಾಗೆಯೇ ಬೆಲೆ ಇಳಿಕೆಯಾದಾಗ ಅದರ ಪ್ರಯೋಜನವನ್ನು ಜನರಿಗೆ ನೀಡಬೇಕು ಎಂದು ಸರ್ಕಾರ ಅಭಿಪ್ರಾಯಿಸಿತ್ತು. ಕೇಂದ್ರ ಸರ್ಕಾರವು ಖಾದ್ಯ ತೈಲ ತಯಾರಕರು ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳ ಬೆಲೆಯನ್ನು ಪ್ರತಿ ಲೀಟರ್‌ಗೆ ಹತ್ತು ರೂಪಾಯಿ ಕಡಿತ ಮಾಡುವಂತೆ ಹೇಳಿತ್ತು. ಅದಲ್ಲದೆ ಇದಕ್ಕೆ ಗಡುವು ಕೂಡಾ ಕೇಂದ್ರ ಸರ್ಕಾರ ನೀಡಿತ್ತು. ಅದೇ ಬ್ರಾಂಡ್‌ನ ದೇಶದಾದ್ಯಂತ ತನ್ನ ಖಾದ್ಯ ತೈಲದ ಬೆಲೆಯಲ್ಲಿ ಏಕರೂಪತೆ ಹೊಂದಿರುವಂತೆಯೂ ಹೇಳಿತ್ತು. ಒಂದು ವಾರದೊಳಗೆ ಬೆಲೆ ಬದಲಾವಣೆಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಕಂಪನಿಗಳಿಗೆ ಸೂಚನೆ ನೀಡಿತ್ತು.

 ಖಾದ್ಯ ತೈಲ ಬೆಲೆ ಎಷ್ಟು ಇಳಿಕೆಯಾಗಿದೆ?
 

ಖಾದ್ಯ ತೈಲ ಬೆಲೆ ಎಷ್ಟು ಇಳಿಕೆಯಾಗಿದೆ?

ಕಳೆದ ಒಂದು ತಿಂಗಳಿನಿಂದ ಜಾಗತಿಕವಾಗಿ ಖಾದ್ಯ ತೈಲ ಬೆಲೆಯು ಪ್ರತಿ ಟನ್‌ಗೆ 300-450 ಡಾಲರ್‌ಗೆ ಇಳಿಕೆಯಾಗಿದೆ. ಆದರೆ ರಿಟೇಲ್ ದರದಲ್ಲಿ ಬದಲಾವಣೆಯಾಗಲು ಇನ್ನೂ ಕೂಡಾ ಸಮಯ ತೆಗೆದುಕೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ದರ ಇಳಿಕೆಯಾಗುವ ನಿರೀಕ್ಷೆ ಇದೆ. ಮೇ 2022ರಲ್ಲಿ ಖಾದ್ಯ ತೈಲ ಸಂಸ್ಥೆಯೊಂದಿಗೆ ಸಭೆ ನಡೆಸಲಾಗಿದೆ. ಮಾಹಿತಿ ಪ್ರಕಾರ ಫಾರ್ಚ್ಯೂನ್ ರಿಫೈನ್ಡ್‌ ಸನ್‌ಫ್ಲವರ್ ಆಯಿಲ್ ಒಂದು ಲೀಟರ್ ಬೆಲೆಯು 220 ರೂಪಾಯಿಯಿಂದ 210 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಸೋಯಾಬಿನ್ ಹಾಗೂ ಸಾಸಿವೆ ಎಣ್ಣೆಯ ಬೆಲೆಯಲ್ಲಿ ರೂಪಾಯಿ 205ರಿಂದ ರೂಪಾಯಿ 195ಕ್ಕೆ ಇಳಿಕೆ ಮಾಡಲಾಗಿದೆ. ಇನ್ನೂ ಕೂಡಾ ಬೆಲೆ ಇಳಿಕೆ ಮಾಡುವ ನಿರೀಕ್ಷೆ ಇದೆ. ಪ್ರಮುಖವಾಗಿ ಭಾರತವು ಪಾಮ್ ಆಯಿಲ್‌ಗಾಗಿ ಇಂಡೋನೇಷ್ಯಾ ಹಾಗೂ ಮಲೇಷಿಯಾದ ಮೇಲೆ ಅವಲಂಭಿತವಾಗಿರುವ ಕಾರಣದಿಂದಾಗಿ ಅಲ್ಲಿನ ಬೆಳವಣಿಗೆ ಭಾರತದಲ್ಲಿ ಖಾದ್ಯ ತೈಲ ಬೆಲೆಯ ಮೇಲೆ ಪ್ರಭಾವ ಬೀರುತ್ತದೆ.

English summary

Edible Oil Price to Reduce by Rupees 10-12 After Makers Decided to Cut Retail Prices

In what may come as a relief for the common man, Edible Oil Price to Reduce by Rupees 10-12 After Makers Decided to Cut Retail Prices.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X