For Quick Alerts
ALLOW NOTIFICATIONS  
For Daily Alerts

ಇಪಿಎಫ್ ಅಥವಾ ಎನ್‌ಪಿಎಸ್ ಎರಡರಲ್ಲಿ ಯಾವುದು ಅನುಕೂಲ?

By ಶಾರ್ವರಿ
|

ಸಾಮಾನ್ಯವಾಗಿ 58 ವರ್ಷ ಆದಾಗ ನಿವೃತ್ತಿಯ ಜೀವನದ ಹೊಸ್ತಿಲಿನ ಬಳಿ ನಿಂತಿರುತ್ತೇವೆ. ಆ ಹೊತ್ತಿಗೆ ಮುಂಬರುವ ಆರ್ಥಿಕ ಭವಿಷ್ಯದ ಬಗ್ಗೆ ಎಲ್ಲ ಸಿದ್ಧತೆಗಳು ನಡೆದಿರಬೇಕು. ಇಲ್ಲದಿದ್ದರೆ ವೃದ್ಧಾಪ್ಯದ ಇಳಿ ಸಂಜೆಯ ಬಾಳಿನಲ್ಲಿ ಹಣಕಾಸು ಸಮಸ್ಯೆಯಾಗಿ ಬಳಸುವುದರಲ್ಲಿ ಸಂದೇಹವೇ ಇಲ್ಲ. ಇದನ್ನು ತಪ್ಪಿಸುವ ಸಲುವಾಗಿಯೇ ಇಪಿಎಫ್‌ ಮತ್ತು ಎನ್‌ಪಿಎಸ್‌ ಎಂಬ ಭವಿಷ್ಯನಿಧಿ ಯೋಜನೆಗಳು ನಮ್ಮ ಮುಂದಿವೆ.

ಭವಿಷ್ಯನಿಧಿ ಉತ್ಪನ್ನಗಳ ಬಗ್ಗೆ ಯೋಚಿಸುವ ಸಂದರ್ಭದಲ್ಲಿ ಮುಖ್ಯವಾಗಿ ಗಮನಸೆಳೆಯುವ ಎರಡು ಉತ್ಪನ್ನಗಳು ಇವುಗಳೇ ಆಗಿವೆ. ಹೀಗಿದ್ದರೂ, ಇಪಿಎಫ್‌ ಮತ್ತು ಎನ್‌ಪಿಎಸ್‌ ನಡುವಣ ಮೂಲಭೂತ ವ್ಯತ್ಯಾಸಗಳನ್ನು ಅರಿತುಕೊಳ್ಳುವುದು ಅವಶ್ಯಕ. ಮುಖ್ಯವಾಗಿ ಎರಡು ಸಾಧನಗಳೂ ಭಿನ್ನ ಉದ್ದೇಶ ಸಾಧನೆಗೆ ಸೂಕ್ತವಾಗಿವೆ. ಇಪಿಎಫ್‌ ಎಂದರೆ ಒಂದು ರೀತಿಯಲ್ಲಿ ಸುಭದ್ರ ಸಾಲ ಪತ್ರ ಸಾಧನಗಳಲ್ಲಿ (Debt) ಹೂಡಿಕೆ ಮಾಡುವುದಕ್ಕೆ ಸಮ ಎನ್ನಬಹುದು. ಆದರೆ ಎನ್‌ಪಿಎಸ್‌ ಹಾಗಲ್ಲ. ಎನ್‌ಪಿಎಸ್‌ ಎನ್ನುವುದು ಮಾರುಕಟ್ಟೆ ಆಧಾರಿತ, ಹಣದುಬ್ಬರವನ್ನು ಮಣಿಸಲು ಸಹಕರಿಸುವ ನಿವೃತ್ತಿ ಯೋಜನೆಗಳಾಗಿವೆ.

ಮಾರ್ಚ್ 2021 ಮತ್ತು ಫೆಬ್ರವರಿ 2022ರ ನಡುವಿನ ಅವಧಿಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) 1.11 ಕೋಟಿ ಚಂದಾದಾರರನ್ನು ತಲುಪಿದೆ. ಅದರಲ್ಲಿ ಎನ್‌ಪಿಎಸ್ 2021-22ರ ಅವಧಿಯಲ್ಲಿ 93.6 ಲಕ್ಷ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿದೆ. ಅದರಲ್ಲಿ ಹೆಚ್ಚಿನ ಕಂಪೆನಿಗಳು ಇಪಿಎಫ್ ಅನ್ನು ನೀಡುತ್ತಿವೆ. ಆದರೆ ಎನ್‌ಪಿಎಸ್ ಸಹ ಸಾಕಷ್ಟು ಆದಾಯ ಪ್ರಯೋಜನ ನೀಡಲಿವೆ. ಅವುಗಳ ಬಗ್ಗೆ ನಾವಿಲ್ಲಿ‌ ತಿಳಿಯೋಣ.

ಈಕ್ವಿಟಿಗಳಿಂದ ಏನು ಪ್ರಯೋಜನ:

ಈಕ್ವಿಟಿಗಳಿಂದ ಏನು ಪ್ರಯೋಜನ:

ಈಕ್ವಿಟಿಯಲ್ಲಿ ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡಿರುವ ಉದ್ಯೋಗಿಗಳು ಸಾಮಾನ್ಯವಾಗಿ ಎನ್‌ಪಿಎಸ್ ಆಯ್ಕೆಗೆ ಗಮನ ನೀಡುತ್ತಾರೆ. ಆದರೆ ಸಂಭಾವ್ಯ ಅಧಿಕ ಆದಾಯವು ಋಣಾತ್ಮಕ ತೆರಿಗೆ ಪರಿಣಾಮ ಉಂಟು ಮಾಡುವ ಸಾಧ್ಯತೆಗಳಿರುತ್ತವೆ. ಮ್ಯೂಚುವಲ್ ಫಂಡ್ ಮತ್ತಿತರ ಈಕ್ವಿಟಿ ಸಾಧನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈಗಾಗಲೇ ಹಣ ತೊಡಗಿಸಿರುವವರು ಇಪಿಎಫ್ ಯೋಜನೆಯಲ್ಲೇ ಮುಂದುವರಿಯುವುದು ಸೂಕ್ತ ಎನ್ನುತ್ತಾರೆ. ಈ ಎರಡೂ ಹೂಡಿಕೆಗಳು ನಿಮ್ಮ ನಿವೃತ್ತಿಗಾಗಿ ಉಳಿಸುವ ಗುರಿ ಹೊಂದಿವೆ. ಆದ್ದರಿಂದ ಅವರು ಆರಂಭಿಕ ಹಿಂಪಡೆಯುವಿಕೆಯನ್ನು ವಿರೋಧಿಸುತ್ತಾರೆ. ನಿವೃತ್ತಿ ನಂತರ ಬಳಸಿಕೊಳ್ಳಬಹುದಾದ ಈಕ್ವಿಟಿಗಳ ಬಗ್ಗೆ ಎರಡೂ ಯೋಜನೆಗಳು ಪ್ರಯೋಜನ ನೀಡುವುದರಿಂದ ಇದು ಕೆಟ್ಟದ್ದಲ್ಲ.

ವ್ಯತ್ಯಾಸಗಳೇನು?

ವ್ಯತ್ಯಾಸಗಳೇನು?

ಇಪಿಎಫ್ ಪ್ರತಿ ವರ್ಷ ಮಾಡುವ ಆದಾಯದ ಮೇಲೆ ಒತ್ತು ನೀಡಲಾಗುತ್ತದೆ. ಭಾರತ ಸರ್ಕಾರವು ಅದರ ಆದಾಯವನ್ನು ಖಾತ್ರಿಪಡಿಸುತ್ತದೆ. ನಿಮ್ಮ ನಿವೃತ್ತಿಯನ್ನು ನೀವು ತಲುಪಿದಾಗ, ಈ ಯೋಜನೆಯಿಂದ ಒಂದು ದೊಡ್ಡ ಮೊತ್ತ ಪಡೆಯುತ್ತೀರಿ.

ಎನ್‌ಪಿಎಸ್‌ನಲ್ಲಿ ನಿಮ್ಮ ಹಣವನ್ನು ಈಕ್ವಿಟಿ ಮತ್ತು ಸಾಲದ ಮಾರುಕಟ್ಟೆಗಳಲ್ಲಿ ನಿಯೋಜಿಸಲಾಗುತ್ತದೆ. ನಿಮ್ಮ ವ್ಯವಸ್ಥಿತ ಕೊಡುಗೆಗಳು ಮಾರುಕಟ್ಟೆ ದರಗಳಲ್ಲಿ ಪ್ರತಿ ತಿಂಗಳು ಸಂಯೋಜಿತವಾಗಿದ್ದು, ನೀವು ನಿವೃತ್ತರಾದ ನಂತರ ನಿಮಗೆ ನಿಯಮಿತ ಮತ್ತು ಆಶಾದಾಯಕ ಪಿಂಚಣಿ ಪಾವತಿಸಲು ಅನುಕೂಲವಾಗುತ್ತದೆ. ಇಪಿಎಫ್ ಉದ್ಯೋಗಿ ಲಾಭದ ಯೋಜನೆಯಾದರೆ, ಎನ್‌ಪಿಎಸ್ ನಿವೃತ್ತಿ ನಂತರ ಉಳಿಸಲು ಬಳಸಬಹುದು.

ಅಲ್ಲದೆ ನೀವು ಈಕ್ವಿಟಿಗಳಲ್ಲಿ ಎಷ್ಟು ಹಣವನ್ನು ಹೂಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಲು ಅನುಮತಿಸುತ್ತದೆ. ನಿಮ್ಮ ಮಾಸಿಕ ಕೊಡುಗೆಯ ಗರಿಷ್ಠ 75 ಪ್ರತಿಶತದಷ್ಟೂ ಹೂಡಿಕೆ ಮಾಡಬಹುದು. ಆದರೆ ಎಪಿಎಫ್‌ನಲ್ಲಿ ನಿಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂಬುದರ ಮೇಲೆ ಯಾವುದೇ ನಿಯಂತ್ರಣವಿಲ್ಲ. ಈ ನಿಧಿಯು ಈಕ್ವಿಟಿಯಲ್ಲಿ ಕಾರ್ಪಸ್‌ನ 5 ಪ್ರತಿಶತ ಮತ್ತು 15 ಪ್ರತಿಶತದ ನಡುವೆ ಹೂಡಿಕೆ ಮಾಡಬಹುದು.

ಎಲ್‌ಎಲ್‌ಪಿ ಪ್ಲಾಂಟ್ರಿಚ್ ಕನ್ಸಲ್ಟನ್ಸಿ ಸ್ಥಾಪಕ ಖ್ಯಾತಿ ಮಾಶ್ರು ವಸಾನಿ ಅವರು ಹೇಳುವಂತೆ, ಎಲ್ಲಿ ಅನುಕೂಲ ಮತ್ತು ಸಾಧ್ಯತೆಗಳಿವೆಯೋ ಅಲ್ಲಿ ನಾವು ಗ್ರಾಹಕರನ್ನು ಎರಡರಲ್ಲೂ ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತೇವೆ. ಉದ್ದೇಶವು ವಿಭಿನ್ನವಾಗಿದೆ. ಜೊತೆಗೆ ಇಪಿಎಫ್ ಆದಾಯವನ್ನು ಖಾತ್ರಿ ಪಡಿಸುವ ಜೊತೆಗೆ ಅಗತ್ಯ ನಿವೃತ್ತಿ‌ ವೆಚ್ಚಗಳಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಇದರೊಂದಿಗೆ ನೆಗೋಬಲ್ ವೆಚ್ಚಗಳನ್ನು ಉತ್ತೇಜಿಸುವಲ್ಲಿ ಎನ್‌ಪಿಎಸ್ ಕಾರ್ಯ ನಿರ್ವಹಿಸುತ್ತದೆ

ತೆರಿಗೆ ಪ್ರೋತ್ಸಾಹ:

ತೆರಿಗೆ ಪ್ರೋತ್ಸಾಹ:

ಇಪಿಎಫ್ ಮತ್ತು ಎನ್‌ಪಿಎಸ್ ಎರಡಕ್ಕೂ ತೆರಿಗೆ ಪ್ರೋತ್ಸಾಹವಿದೆ. ಎರಡಕ್ಕೂ, ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿಧಿಸಬಹುದಾದ ಸಾಮರ್ಥ್ಯ ಹೊಂದಿದ್ದು, ಆದಾಯದ ಕಡಿತ ಪಡೆಯಬಹುದು. ಹೂಡಿಕೆ ಮೊತ್ತಕ್ಕೆ ನೀವು ಎನ್‌ಪಿಎಸ್‌ಗಾಗಿ ಸೆಕ್ಷನ್ 80ಸಿಸಿಡಿ (1B) ಅಡಿಯಲ್ಲಿ ಹೆಚ್ಚುವರಿ 50,000 ಮೌಲ್ಯದ ಕಡಿತ ಪಡೆಯಬಹುದು.

ಹೆಚ್ಚುವರಿ ತೆರಿಗೆ ಪ್ರಯೋಜನಕ್ಕಾಗಿ ಗ್ರಾಹಕರು ಹೆಚ್ಚಾಗಿ ಎನ್‌ಪಿಎಸ್ ಅನ್ನು ಆಯ್ಕೆ ಮಾಡಿಕೊಂಡರೆ, ಕೊಡುಗೆಗಳ ಮೇಲೆ ಯಾವುದೇ ನಿರ್ಬಂಧವಿಲ್ಲದ ಕಾರಣ, ನಿವೃತ್ತಿ ಯೋಜನೆಗೆ ಹೆಚ್ಚಿನ ಮೊತ್ತ ಹೂಡಿಕೆ ಮಾಡಲು ಉಪಯುಕ್ತವಾಗಬಹುದು.

ಮುಖ್ಯವಾಗಿ ಮುಕ್ತಾಯದ ಸಮಯದಲ್ಲಿ ನೀವು ಎನ್‌ಪಿಎಸ್ ಭವಿಷ್ಯ ನಿಧಿಯ 60 ಪ್ರತಿಶತವನ್ನು ತೆರಿಗೆ-ಮುಕ್ತವಾಗಿ ಹಿಂತೆಗೆದುಕೊಳ್ಳಬಹುದು. ಇಪಿಎಫ್‌ನ ಸಂದರ್ಭದಲ್ಲಿ ಮುಕ್ತಾಯದ ಆದಾಯವು ತೆರಿಗೆ ಮುಕ್ತವಾಗಿರುತ್ತದೆ. ಆದರೆ 2.5 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಕೊಡುಗೆಗಳ ಮೇಲೆ ಗಳಿಸಿದ ಬಡ್ಡಿಯು ತೆರಿಗೆಗೆ ಒಳಪಡುತ್ತದೆ ಎಂದು ವಸಾನಿ ಹೇಳುತ್ತಾರೆ.

ಎನ್‌ಪಿಎಸ್ ಮತ್ತು ಇಪಿಎಫ್‌ ಅನನುಕೂಲಗಳೇನು?

ಎನ್‌ಪಿಎಸ್ ಮತ್ತು ಇಪಿಎಫ್‌ ಅನನುಕೂಲಗಳೇನು?

ಇಪಿಎಫ್‌ ಕೆಲವು ನ್ಯೂನತೆಗಳಿಂದ ಬಳಲುತ್ತಿದೆ. ಸ್ವಲ್ಪ ಹೆಚ್ಚಿನ ಇಕ್ವಿಟಿ ಹಂಚಿಕೆಗೆ ನೀವು ಆರಾಮದಾಯಕ ಆಗಿದ್ದರೂ ನಿಮ್ಮ ಈಕ್ವಿಟಿ ಹೂಡಿಕೆಗಳನ್ನು ಆಯ್ಕೆ ಮಾಡಲು ಇದು ಹೆಚ್ಚಿನ ಆಯ್ಕೆಯನ್ನು ನೀಡುವುದಿಲ್ಲ.

ಇಪಿಎಫ್ ಬಡ್ಡಿದರಗಳು ಕೂಡ ಕೆಲ ವರ್ಷಗಳಲ್ಲಿ ಕುಸಿದಿವೆ. ಇತ್ತೀಚಿನ ವಿಮರ್ಶೆಯಲ್ಲಿ ಇಪಿಎಫ್ ಬಡ್ಡಿದರವನ್ನು ವರ್ಷಕ್ಕೆ 8.1 ಪ್ರತಿಶತಕ್ಕೆ ಇಳಿಸಲಾಗಿದೆ. 2001ರಲ್ಲಿ ಇದು ವರ್ಷಕ್ಕೆ ಶೇ.11ರಷ್ಟಿತ್ತು. ಈ ವರ್ಷ ಮತ್ತು ಭವಿಷ್ಯದಲ್ಲಿ ತಮ್ಮ ಮೊದಲ ಉದ್ಯೋಗಗಳಿಗೆ ಸೇರಲಿರುವವರಿಗೆ ಇದು ಚಿಂತಾಜನಕವಾಗಿದೆ. ಅಲ್ಲದೆ ಇಪಿಎಫ್‌ಗಳು ಕೊಡುಗೆಗಳನ್ನು ಒದಗಿಸಲೂ ಸಾಧ್ಯವಿಲ್ಲ. ನೀವು ಅರ್ಹ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರೆ ಮಾತ್ರ ಇದು ಲಭ್ಯವಿರುತ್ತದೆ. ವೃತ್ತಿಪರರು ಮತ್ತು ಸಣ್ಣ ವ್ಯಾಪಾರ ಮಾಲೀಕರಿಗೆ, ಇಬ್ಬರ ನಡುವೆ ಎನ್‌ಪಿಎಸ್ ಮಾತ್ರ ಆಯ್ಕೆಯಾಗಿದೆ.

ಮತ್ತೊಂದೆಡೆ ಎನ್‌ಪಿಎಸ್ ಹಿಂಪಡೆಯುವಿಕೆ ಮಾರುಕಟ್ಟೆ ಸಂಯೋಜಿತವಾಗಿದೆ. ಇದು ಅಲ್ಪಾವಧಿಯಲ್ಲಿ ಅಪಾಯಕಾರಿಯಾಗಬಹುದು. ಆದರೆ ದೀರ್ಘಾವಧಿಯಲ್ಲಿ ಸಹಾಯ ಮಾಡುತ್ತದೆ. ಹೆಚ್ಚಿನ ಈಕ್ವಿಟಿ ಹಂಚಿಕೆ (75 ಪ್ರತಿಶತದವರೆಗೆ) ದೀರ್ಘಾವಧಿಯಲ್ಲಿ ಹಣದುಬ್ಬರ ಎದುರಿಸುವುದನ್ನು ತಪ್ಪಿಸುತ್ತದೆ.

ಹಾಗೆಯೇ ಎನ್‌ಪಿಎಸ್‌ನಲ್ಲೂ ಒಂದು ಸಮಸ್ಯೆಯಿದೆ. ಅದೇನೆಂದರೆ ನಿಮ್ಮ ನಿವೃತ್ತಿಯ ನಂತರ, ನೀವು ಸಂಪೂರ್ಣ ಕಾರ್ಪಸ್ ಅನ್ನು ಹಿಂಪಡೆಯಲು ಸಾಧ್ಯವಿಲ್ಲ. ನಿಮ್ಮ ಸಂಗ್ರಹವಾದ ಕಾರ್ಪಸ್‌ನ 60 ಪ್ರತಿಶತವನ್ನು ನೀವು ಹಿಂತೆಗೆದುಕೊಳ್ಳಬಹುದು. ಉಳಿದ 40 ಪ್ರತಿಶತವನ್ನು ಕಡ್ಡಾಯವಾಗಿ ವರ್ಷಾಶನದಲ್ಲಿ ಹೂಡಿಕೆ ಮಾಡಲಾಗುತ್ತದೆ. ವರ್ಷಾಶನದಿಂದ ಬರುವ ಆದಾಯವು ನಿಮ್ಮ ಆದಾಯ ತೆರಿಗೆ ದರಗಳಲ್ಲಿ ತೆರಿಗೆಗೆ ಒಳಪಡುತ್ತದೆ ಈ ಪ್ರಕ್ರಿಯೆ ತೀರಾ ಕೆಟ್ಟದಾಗಿರುವುದನ್ನು ಗಮನಿಸಬಹುದು.

ಜಿ‌ವೈಆರ್‌ ಫೈನಾನ್ಷಿಯಲ್ ಪ್ಲಾನರ್ಸ್ ಪ್ರೈವೇಟ್ ಲಿಮಿಟೆಡ್‌ನ ಪ್ರಿನ್ಸಿಪಲ್ ಅಧಿಕಾರಿ ರೋಹಿತ್ ಶಾ ಅವರು ಹೇಳುವಂತೆ, ಎನ್‌ಪಿಎಸ್ ಕಡಿಮೆ ಶುಲ್ಕವನ್ನು ಹೊಂದಿರುವ ಉತ್ಪನ್ನವಾಗಿದೆ. ಒಬ್ಬರು ಈಕ್ವಿಟಿಗೆ 75 ಪ್ರತಿಶತದಷ್ಟು ಹಂಚಿಕೆಯನ್ನು ಆಯ್ಕೆ ಮಾಡಬಹುದು ಜೊತೆಗೆ ಇದು ಹೆಚ್ಚಿನ ದೀರ್ಘಾವಧಿಯ ಆದಾಯ ನೀಡುತ್ತದೆ. ಆದಾಗ್ಯೂ, ತೆರಿಗೆಯ ವರ್ಷಾಶನವು ನಿವೃತ್ತಿಯ ನಂತರದ ಪ್ರತಿಬಂಧಕವಾಗಬಹುದು. ವಿಶೇಷವಾಗಿ ಮ್ಯೂಚುಯಲ್ ಫಂಡ್‌ಗಳಲ್ಲಿ ದೀರ್ಘಾವಧಿಯ ಹೂಡಿಕೆಗಳಂತೆ ಇಲ್ಲಿಯೂ ಹೆಚ್ಚಿನ ಆಯ್ಕೆಗಳು ಲಭ್ಯವಿದೆ ಎಂದು ಹೇಳಿದ್ದಾರೆ.

ನೀವು ಏನು ಮಾಡಬೇಕು?

ನೀವು ಏನು ಮಾಡಬೇಕು?

ಎನ್‌ಪಿಎಸ್ ಮೂಲಕ ಈಕ್ವಿಟಿಗೆ ಹೆಚ್ಚಿನ ಹಂಚಿಕೆಯನ್ನು ಹೊಂದಿರುವುದು ನಿವೃತ್ತಿಯ ನಂತರ ಹೂಡಿಕೆ ನಿರ್ಮಿಸಲು ಅನುಕೂಲಕರವಾಗಿದೆ. ಆ ಭಾಗದ ಮೇಲಿನ ಕಡ್ಡಾಯ ವರ್ಷಾಶನ ಮತ್ತು ತೆರಿಗೆಗೆ ಪ್ರಯೋಜನವು ದುರ್ಬಲಗೊಳ್ಳುತ್ತದೆ. ಹಾಗಾಗಿ ಸಂಪೂರ್ಣ ಕಾರ್ಪಸ್ ಅನ್ನು ಮೆಚ್ಯೂರಿಟಿಯಲ್ಲಿ ತೆಗೆದುಕೊಳ್ಳುವುದು ಮತ್ತು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ವರ್ಷಾಶನವನ್ನು ರಚಿಸುವುದು ಸೂಕ್ತ.

ಈ ಕುರಿತು ಫಿನ್‌ಸೇಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ನಿರ್ದೇಶಕ ಮೃನ್ ಅಗರ್ವಾಲ್ ಹೇಳುವಂತೆ, ಉದ್ಯೋಗಿಗಳಿಗೆ, ಇಪಿಎಫ್ ಕಡ್ಡಾಯವಾಗಿದೆ. ವೃತ್ತಿಪರರು ಮತ್ತು ಇತರರಿಗೆ ಎನ್‌ಪಿಎಸ್ ಬಗ್ಗೆ ಅರಿವು ಹೆಚ್ಚಿಲ್ಲ. ಹಾಗಾಗಿ ಅವರು ವಿಮಾ ಕಂಪನಿಗಳಿಂದ ಮುಂದೂಡಲ್ಪಟ್ಟ ವರ್ಷಾಶನ ಯೋಜನೆಗಳನ್ನು ಆದ್ಯತೆ ನೀಡುತ್ತಾರೆ ಎಂದಿದ್ದಾರೆ.

8.1 ಪ್ರತಿಶತ ತೆರಿಗೆ-ಮುಕ್ತ ಆದಾಯದಲ್ಲಿ, ಇಪಿಎಫ್ ಅನೇಕ ಇತರ ಸಾಲ ಹೂಡಿಕೆ ಆಯ್ಕೆಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸಬಹುದು. ಎನ್‌ಪಿಎಸ್ ಸಹ ಅದರ ಪ್ರಯೋಜನಗಳನ್ನು ಹೊಂದಿದೆ. ಆದರೆ ಇದು ಯುನಿಟ್-ಲಿಂಕ್ಡ್ ವಿಮಾ ಯೋಜನೆಗಳು ಮತ್ತು ಮ್ಯೂಚುಯಲ್ ಫಂಡ್‌ಗಳೊಂದಿಗೆ ಸ್ಪರ್ಧಿಸುತ್ತದೆ. ಇಪಿಎಫ್ ಒಂದೇ ವಿಷಯವನ್ನು ಕೇಂದ್ರೀಕರಿಸುತ್ತದೆ.

ಈ ಎರಡೂ ಹೂಡಿಕೆಗಳು ತೆರಿಗೆ ಪ್ರಯೋಜನ ನೀಡುವ ಜೊತೆಗೆ ನಿವೃತ್ತಿ ನಂತರ ಉಳಿಸಲು ಸಹಕರಿಸುತ್ತವೆ. ಅರ್ಧಕ್ಕೆ ಹೂಡಿಕೆ ಹಿಂತೆಗೆಯುವ ಪ್ರಯತ್ನ ಮಾಡದೇ ಪ್ರತಿ ತಿಂಗಳು ಉತ್ತಮವಾಗಿ ಹೂಡಿಕೆ ಮಾಡಿದರೆ, ಉತ್ತಮ ಈಕ್ವಿಟಿಯನ್ನೇ ಪಡೆಯಬಹುದು ಎನ್ನುತ್ತಾರೆ ತಜ್ಞರು.

English summary

Employee benefit scheme EPF vs National Pension Scheme NPS

Employee benefit scheme EPF vs National Pension Scheme NPS which is better, how to choose right retirement plan.
Story first published: Monday, June 6, 2022, 16:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X