For Quick Alerts
ALLOW NOTIFICATIONS  
For Daily Alerts

ದೀಪಾವಳಿ ಬಳಿಕ ಪಿಎಫ್‌ ಬಡ್ಡಿದರ ಜಮೆ ಸಾಧ್ಯತೆ, ಹೀಗೆ ಚೆಕ್ ಮಾಡಿ

|

ಹಲವಾರು ಇಪಿಎಫ್‌ಇ ಬಳಕೆದಾರರು ಬಡ್ಡಿದರ ಜಮೆಯಾಗಲು ಕಾಯುತ್ತಿದ್ದಾರೆ. ಅವರಿಗೆ ಸಿಹಿಸುದ್ದಿ ಒಂದಿದೆ. ದೀಪಾವಳಿ ಹಬ್ಬದ ಬಳಿಕ ಇಪಿಎಫ್‌ಒ ಗ್ರಾಹಕರು ಬಡ್ಡಿದರವನ್ನು ಪಡೆಯುವ ಸಾಧ್ಯತೆ ಇದೆ.

 

2021-2022 ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಬಡ್ಡಿ ದರವು ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರವು ಬಡ್ಡಿದರವನ್ನು ಶೇಕಡ 8.1ಕ್ಕೆ ಇಳಿಸಲು ಅನುಮೋದನೆ ನೀಡಿದೆ. 1977-1978ರ ಬಳಿಕ ಮೊದಲ ಬಾರಿಗೆ ಇಪಿಎಫ್‌ಒ ಬಡ್ಡಿದರ ಇಷ್ಟು ಇಳಿಕೆಯಾಗಿದೆ.

ಕೇಂದ್ರ ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ ಈ ತಿಂಗಳ ಆರಂಭದಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್) ಚಂದಾದಾರರ ಖಾತೆಗಳಿಗೆ ಇಪಿಎಫ್ ಬಡ್ಡಿ ಮೊತ್ತವನ್ನು ಜಮಾ ಮಾಡಲಾಗುತ್ತಿದೆ. ಪಿಎಫ್‌ಒ ಸಾಫ್ಟ್‌ವೇರ್ ಅನ್ನು ನವೀಕರಿಸಲಾಗುತ್ತಿದೆ. ಇದರಿಂದಾಗಿ ಸ್ಟೇಟ್‌ಮೆಂಟ್ ಕಾಣಿಸದೆ ಇರಬಹುದು ಎಂದು ಕೂಡಾ ಸ್ಪಷ್ಟನೆ ನೀಡಿದೆ. ಯಾವುದೇ ಚಂದಾದಾರರಿಗೆ ಬಡ್ಡಿ ಮೊತ್ತದಲ್ಲಿ ನಷ್ಟ ಉಂಟಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

 ಬಡ್ಡಿದರ ನಷ್ಟವಾಗದು: ಸಚಿವಾಲಯ ಸ್ಪಷ್ಟಣೆ

ಬಡ್ಡಿದರ ನಷ್ಟವಾಗದು: ಸಚಿವಾಲಯ ಸ್ಪಷ್ಟಣೆ

"ಯಾವುದೇ ಚಂದಾದಾರರಿಗೆ ಬಡ್ಡಿದರಲ್ಲಿ ನಷ್ಟ ಉಂಟಾಗಲಾರದು. ಎಲ್ಲಾ ಇಪಿಎಫ್ ಚಂದಾದಾರರ ಖಾತೆಗಳಲ್ಲಿ ಬಡ್ಡಿಯನ್ನು ಜಮಾ ಮಾಡಲಾಗುತ್ತಿದೆ. ಆದರೆ ತೆರಿಗೆ ವಿಚಾರದಲ್ಲಿನ ಬದಲಾವಣೆಯನ್ನು ಲೆಕ್ಕ ಹಾಕಲು ಇಪಿಎಫ್‌ಒ ಜಾರಿಗೊಳಿಸುತ್ತಿರುವ ಸಾಫ್ಟ್‌ವೇರ್ ನವೀಕರಣದಿಂದಾಗಿ ಸ್ಟೇಟ್‌ಮೆಂಟ್ ಕಾಣಿಸದೆ ಇರಬಹುದು," ಎಂದು ಹಣಕಾಸು ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (ಸಿಬಿಟಿ) 2020-21 ಆರ್ಥಿಕ ವರ್ಷಕ್ಕೆ ಇಪಿಎಫ್‌ ಕೊಡುಗೆಗಳ ಮೇಲೆ ಶೇಕಡ 8.5ರಷ್ಟು ಬಡ್ಡಿಯನ್ನು ಪಾವತಿ ಮಾಡಲು ನಿರ್ಧಾರ ಮಾಡಲಾಗಿದೆ. ಸಿಬಿಟಿ ಇಪಿಎಫ್‌ಒದ ತ್ರಿಪಕ್ಷೀಯ ಸಂಸ್ಥೆಯಾಗಿದ್ದು ಅದು ಸರ್ಕಾರ, ಉದ್ಯೋಗಿಗಳು ಮತ್ತು ಉದ್ಯೋಗದಾತರ ಪ್ರತಿನಿಧಿಗಳನ್ನು ಒಳಗೊಂಡಿದೆ.

 ಪಿಎಫ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡುವುದು ಹೇಗೆ?

ಪಿಎಫ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡುವುದು ಹೇಗೆ?

ಹಂತ 1: epfindia.gov.inಗೆ ಭೇಟಿ ನೀಡಿ
ಹಂತ 2: ನಿಮ್ಮ ಪಾಸ್‌ವರ್ಡ್, ಕ್ಯಾಪ್ಚಾ ಹಾಗೂ ಯುಎಎನ್ ಸಂಖ್ಯೆಯನ್ನು ನಮೂದಿಸಿ
ಹಂತ 3: e-Passbook ಅನ್ನು ಆಯ್ಕೆ ಮಾಡಿ
ಹಂತ 4: ಎಲ್ಲ ಅಗತ್ಯ ಮಾಹಿತಿ ನಮೂದಿಸಿದ ಬಳಿಕ ಹೊಸ ಪುಟ ತೆರೆಯಲಿದೆ
ಹಂತ 5: member ID ಅನ್ನು ಹಾಕಬೇಕಾಗುತ್ತದೆ
ಹಂತ 6: ನಿಮಗೆ ಪಿಎಫ್ ಬ್ಯಾಲೆನ್ಸ್ ಎಷ್ಟಿದೆ ಎಂದು ತಿಳಿಯಲಿದೆ.

 ಮಿಸ್ಡ್‌ ಕಾಲ್ ಮೂಲಕ ಪಿಎಫ್‌ ಬ್ಯಾಲೆನ್ಸ್ ಚೆಕ್ ಮಾಡಿ
 

ಮಿಸ್ಡ್‌ ಕಾಲ್ ಮೂಲಕ ಪಿಎಫ್‌ ಬ್ಯಾಲೆನ್ಸ್ ಚೆಕ್ ಮಾಡಿ

ಇಪಿಎಫ್ ಗ್ರಾಹಕರು ಮಿಸ್ಡ್‌ ಕಾಲ್ ಮೂಲಕವು ಪಿಎಫ್‌ ಬ್ಯಾಲೆನ್ಸ್ ಚೆಕ್ ಮಾಡಬಹುದು. ನಿಮ್ಮ ಯುಎಎನ್ ಸಂಖ್ಯೆಗೆ ಲಿಂಕ್ ಮಾಡಲಾದ ಸಂಖ್ಯೆಯಿಂದ 011-22901406ಗೆ ಮಿಸ್ಡ್ ಕಾಲ್ ನೀಡಿದರೆ ಸಾಕಾಗುತ್ತದೆ. ನಿಮ್ಮ ಮೊಬೈಲ್‌ಗೆ ಮಾಹಿತಿ ಬರಲಿದೆ.

 ಎಸ್‌ಎಂಎಸ್ ಮೂಲಕ ಪಿಎಫ್‌ ಬ್ಯಾಲೆನ್ಸ್ ಚೆಕ್ ಮಾಡಿ

ಎಸ್‌ಎಂಎಸ್ ಮೂಲಕ ಪಿಎಫ್‌ ಬ್ಯಾಲೆನ್ಸ್ ಚೆಕ್ ಮಾಡಿ

ನಿಮ್ಮ ಪಿಎಫ್‌ ಖಾತೆಗೆ ಲಿಂಕ್ ಮಾಡಲಾಗಿರುವ ಮೊಬೈಲ್ ಸಂಖ್ಯೆಯಿಂದ ನೀವು ಎಸ್‌ಎಂಎಸ್ ಮಾಡುವ ಮೂಲಕ ಪಿಎಫ್‌ ಖಾತೆಯಲ್ಲಿನ ಬ್ಯಾಲೆನ್ಸ್ ಅನ್ನು ಚೆಕ್ ಮಾಡಬಹುದು. EPFOHO UAN ಅನ್ನು ನಿಮ್ಮ ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಯಿಂದಾಗಿ 7738299899ಗೆ ಮೆಸೆಜ್ ಮಾಡಿ. ಇಲ್ಲಿ UAN ಜಾಗದಲ್ಲಿ ನಿಮ್ಮ ಯುಎಎನ್ ಸಂಖ್ಯೆಯನ್ನು ಹಾಕಬೇಕಾಗುತ್ತದೆ.

English summary

EPFO: Subscribers to Receive Interest Post-Diwali, How You Can Check PF Balance

EPFO customers may receive the required interest in their accounts after Diwali. How You Can Check PF Balance, Explained here in kannada.
Story first published: Thursday, October 20, 2022, 14:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X