For Quick Alerts
ALLOW NOTIFICATIONS  
For Daily Alerts

ಚಿನ್ನ ಆಮದಿನ ಮೇಲಿನ ಸುಂಕ ಏರಿಕೆ: ಹಳದಿ ಲೋಹ ಇನ್ನು ದುಬಾರಿ

|

ಚಿನ್ನದ ಆಮದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ಚಿನ್ನದ ಮೇಲೆ ಆಮದು ಸುಂಕವನ್ನು ಶೇಕಡ 7.5ರಿಂದ ಶೇಕಡ 12.5ಕ್ಕೆ ಏರಿಕೆ ಮಾಡಿದೆ. ಯುಎಸ್ ಡಾಲರ್ ಎದುರಿನಲ್ಲಿ ಭಾರತದ ರೂಪಾಯಿಯು ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಈ ಹಿನ್ನೆಲೆಯಿಂದಾಗಿ ಸರ್ಕಾರವು ಚಿನ್ನದ ಮೇಲಿನ ಆಮದು ಸುಂಕವನ್ನು ಏರಿಕೆ ಮಾಡಿದೆ.

ಜೂನ್ 30ರಂದು ಈ ನೋಟಿಸ್ ಅನ್ನು ಜಾರಿ ಮಾಡಲಾಗಿದೆ. ವಿಶ್ವದ ಎರಡನೇ ಅತೀ ದೊಡ್ಡ ಚಿನ್ನ ಬಳಕೆ ಮಾಡುವ ದೇಶದಲ್ಲಿ ಚಿನ್ನದ ಒಳಹರಿವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಈ ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್‌ನಲ್ಲಿ ಚಿನ್ನದ ಮೇಲಿನ ಕಸ್ಟಮ್ ಸುಂಕವನ್ನು ಶೇಕಡ 12.5ರಿಂದ ಶೇಕಡ 7.5ಕ್ಕೆ ಇಳಿಕೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಈಗ ಚಿನ್ನದ ಆಮದಿನ ಮೇಲಿನ ಸುಂಕವನ್ನು ಶೇಕಡ 7.5ರಿಂದ ಶೇಕಡ 12.5ಕ್ಕೆ ಏರಿಕೆ ಮಾಡಲಾಗಿದೆ.

ನಿಮ್ಮ ಮನೆಯಲ್ಲಿ ಎಷ್ಟು ಚಿನ್ನ ಸಂಗ್ರಹಿಸಬಹುದು ಗೊತ್ತಾ?ನಿಮ್ಮ ಮನೆಯಲ್ಲಿ ಎಷ್ಟು ಚಿನ್ನ ಸಂಗ್ರಹಿಸಬಹುದು ಗೊತ್ತಾ?

ಇನ್ನು ಚಿನ್ನದ ಮೇಲೆ ಶೇಕಡ 10.75ರಷ್ಟು ಜಿಎಸ್‌ಟಿ, ತೆರಿಗೆ ಸೇರಿ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ. ಈಗ ಆಮದು ಸುಂಕದಲ್ಲಿ ಶೇಕಡ ಐದರಷ್ಟು ಏರಿಕೆ ಮಾಡಿರುವ ಕಾರಣದಿಂದಾಗಿ ಚಿನ್ನದ ಮೇಲಿನ ಒಟ್ಟು ತೆರಿಗೆಯು ಶೇಕಡ 15.75 ಆಗಲಿದೆ.

 ಚಿನ್ನದ ಬೆಲೆ ಏರಿಕೆ ಸಾಧ್ಯತೆ

ಚಿನ್ನದ ಬೆಲೆ ಏರಿಕೆ ಸಾಧ್ಯತೆ

ಭಾರತವು ಹೆಚ್ಚಾಗಿ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಇದು ರೂಪಾಯಿಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ರೂಪಾಯಿ ಪ್ರತಿ ದಿನ ಸಾರ್ವಕಾಲಿಕ ಕುಸಿತ ಕಾಣುತ್ತಿದೆ. ಈ ನಿಟ್ಟಿನ್ಲಲಿ ಸರ್ಕಾರವು ಆಮದು, ರಫ್ತು ಸರಿದೂಗಿಸಲು ಈ ಕ್ರಮವನ್ನು ಕೈಗೊಂಡಿದೆ. ಆದರೆ ಸರ್ಕಾರದ ಈ ಕ್ರಮದಿಂದಾಗಿ ದೇಶದಲ್ಲಿ ಚಿನ್ನದ ಬೆಲೆಯು ಏರಿಕೆಯಾಗಲಿದೆ ಎಂದು ತಜ್ಞರು ಹೇಳುತ್ತಾರೆ. ಜನರು ಇನ್ನು ಮುಂದೆ ಚಿನ್ನ ಖರೀದಿ ಮಾಡಬೇಕಾದರೆ ಅಧಿಕ ಹಣವನ್ನು ಪಾವತಿ ಮಾಡಬೇಕಾಗಬಹುದು.

 ಆಮದು, ರಫ್ತು ಸಮತೋಲನಕ್ಕೆ ಕ್ರಮ

ಆಮದು, ರಫ್ತು ಸಮತೋಲನಕ್ಕೆ ಕ್ರಮ

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಹಣಕಾಸು ತಜ್ಞರು, "ಆಮದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ. ಹಾಗೆಯೇ ಆಮದು ಹಾಗೂ ರಫ್ತನ್ನು ಸರಿದೂಗಿಸುವುದು ಕೂಡಾ ಸರ್ಕಾರದ ಉದ್ದೇಶವಾಗಿದೆ. ಪ್ರಸ್ತುತ ಹಣದುಬ್ಬರ ಅಧಿಕವಾಗಿರುವಾಗ, ರೂಪಾಯಿಯ ಮೌಲ್ಯವು ಕುಸಿತ ಕಾಣುತ್ತಿರುವಾಗ ಈ ಕ್ರಮವು ತೀರಾ ಅಗತ್ಯವಾಗಿದೆ," ಎಂದು ತಿಳಿಸಿದ್ದಾರೆ.

 ಕಳೆದ ವರ್ಷ ದಶಕದಲ್ಲೇ ಅಧಿಕ ಚಿನ್ನ ಆಮದು
 

ಕಳೆದ ವರ್ಷ ದಶಕದಲ್ಲೇ ಅಧಿಕ ಚಿನ್ನ ಆಮದು

ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತದಲ್ಲಿ ಚಿನ್ನದ ಖರೀದಿಯು ಕಡಿಮೆಯಾಗಿತ್ತು. ಲಾಕ್‌ಡೌನ್ ಆಗಿದ್ದ ಕಾರಣದಿಂದಾಗಿ ಹಲವಾರು ವಯದ ಮೇಲೆ ಆರ್ಥಿಕ ಹೊಡೆತ ಬಿದ್ದಿತ್ತು. ಆದರೆ 2021ರಲ್ಲಿ ದಶಕದಲ್ಲೇ ಅತೀ ಹೆಚ್ಚು ಚಿನ್ನವನ್ನು ಭಾರತ ಆಮದು ಮಾಡಿಕೊಂಡಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ಭಾರತದಲ್ಲಿ ಕಳೆದ ವರ್ಷ ಅಧಿಕ ಚಿನ್ನ ಮಾರಾಟವಾಗಿದೆ. ಆದರೆ ಈಗ ಸರ್ಕಾರವು ಚಿನ್ನದ ಆಮದಿನ ಮೇಲಿನ ತೆರಿಗೆಯನ್ನು ಅಧಿಕ ಮಾಡಿರುವ ಕಾರಣದಿಂದಾಗಿ ಚಿನ್ನದ ಮೇಲಿನ ದರವು ಹೆಚ್ಚಾಗುವ ಸಾಧ್ಯತೆ ಇದೆ.

 ಡಾಲರ್ ಎದುರು ರೂಪಾಯಿ ಕುಸಿತ

ಡಾಲರ್ ಎದುರು ರೂಪಾಯಿ ಕುಸಿತ

ಡಾಲರ್ ಎದುರು ರೂಪಾಯಿ ಭಾರೀ ಇಳಿಕೆ ಆಗಿದೆ. ಇಂದು ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೂರು ಪೈಸೆ ಕೆಳಕ್ಕೆ ಕುಸಿದು 79.06ಕ್ಕೆ ತಲುಪಿದೆ. ಈ ಸಂದರ್ಭದಲ್ಲಿ ಸರ್ಕಾರವು ಚಿನ್ನ ಆಮದಿಗೆ ಹೆಚ್ಚು ಪ್ರೋತ್ಸಾಹ ನೀಡದೆ ಯುಎಸ್‌ ಡಾಲರ್ ಎದುರು ರೂಪಾಯಿ ಚೇತರಿಕೆ ಕಾಣುವಂತೆ ಮಾಡಲು ಮುಂದಾಗಿದೆ. ಭಾರತವು ಅತೀ ಹೆಚ್ಚು ಚಿನ್ನವನ್ನು ಆಮದು ಮಾಡುವುದಕ್ಕೆ ಮುಖ್ಯ ಕಾರಣ ಇಲ್ಲಿನ ಸಂಪ್ರದಾಯವಾಗಿದೆ. ಆದರೆ ಈ ಸಂದರ್ಭದಲ್ಲಿ ರೂಪಾಯಿಯ ಮೌಲ್ಯ ಹೆಚ್ಚಿಸಲು ಇಂದೊಂದು ಕ್ರಮವು ಕೂಡಾ ಅಗತ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಫ್ಯೂಚರ್ ಗೋಲ್ಡ್, ಸ್ಟಾಟ್ ಗೋಲ್ಡ್ ಹೇಗಿದೆ?

ಫ್ಯೂಚರ್ ಗೋಲ್ಡ್, ಸ್ಟಾಟ್ ಗೋಲ್ಡ್ ಹೇಗಿದೆ?

ಜುಲೈ 1ರಂದು ವಹಿವಾಟಿನಲ್ಲಿ ಪ್ರಸ್ತುತ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 51675.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಇಳಿಕೆಯಾಗಿದ್ದು 58100.00 ರೂಪಾಯಿ ಆಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.55ರಷ್ಟು ಕುಗ್ಗಿದ್ದು 1,796.89 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.67ರಷ್ಟು ಇಳಿಕೆಯಾಗಿದ್ದು, 19.92 ಯುಎಸ್ ಡಾಲರ್ ಆಗಿದೆ.

English summary

Gold to get costlier: Gold import duty hiked from 7.5PC to 12.5PC

Gold to get costlier: India has raised basic import duty on gold to 12.5 per cent from 7.5 per cent. Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X