For Quick Alerts
ALLOW NOTIFICATIONS  
For Daily Alerts

ಸಿಹಿ ಸುದ್ದಿ: ಇಂಧನದ ಬಳಿಕ ಖಾದ್ಯ ತೈಲ ಬೆಲೆ ಇಳಿಕೆ?

|

ಬೆಲೆ ಏರಿಕೆಯಿಂದಾಗಿ ಸಂಕಷ್ಟದಲ್ಲಿದ್ದ ಜನರಿಗೆ ಸಿಹಿ ಸುದ್ದಿಯೊಂದಿದೆ. ಕೇಂದ್ರದ ಅಬಕಾರಿ ಸುಂಕ ಕಡಿತದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತೀವ್ರ ಕುಸಿತ ಕಂಡು ಬಂದ ಬಳಿಕ ಈಗ ಖಾದ್ಯ ತೈಲಗಳ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ.

 

ಸಾಸಿವೆ ಎಣ್ಣೆಯ ಒಂದು ಟಿನ್ ಬೆಲೆ 40 ರೂಪಾಯಿಗಳಷ್ಟು ಕುಸಿದಿದೆ. ಈಗ 2,405 ರಿಂದ 2,515 ರೂಪಾಯಿಗಳ ನಡುವೆ ಸಾಸಿವೆ ಎಣ್ಣೆ ಲಭ್ಯವಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯ ನಡುವೆ ಇಂಡೋನೇಷ್ಯಾ ರಫ್ತು ಮತ್ತೆ ಆರಂಭ ಮಾಡಿದೆ.

 

Breaking: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿದ ಕೇಂದ್ರBreaking: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿದ ಕೇಂದ್ರ

ಈ ಕ್ರಮವು ಭಾರತದ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಇಂಡೋನೇಷ್ಯಾ ರಫ್ತು ಮತ್ತೆ ಆರಂಭ ಮಾಡಿದ ಹಿನ್ನೆಲೆಯಿಂದಾಗಿ ಭಾರತದಲ್ಲಿ ಸಾಸಿವೆ ಎಣ್ಣೆ ಬೆಲೆಯು ಇಳಿಕೆ ಕಂಡಿದೆ. ಇಂಡೋನೇಷ್ಯಾ ರಫ್ತು ಸ್ಥಗಿತ ಮಾಡಿದಾಗ ಬೆಲೆಯು ಹೆಚ್ಚಳವಾಗಿತ್ತು.

 ಸಿಹಿ ಸುದ್ದಿ: ಇಂಧನದ ಬಳಿಕ ಖಾದ್ಯ ತೈಲ ಬೆಲೆ ಇಳಿಕೆ?

ಸಾಸಿವೆ ಎಣ್ಣೆ ಬೆಲೆಯಲ್ಲಿ ಇಳಿಕೆ

ಹೆಚ್ಚಿನ ತೈಲ, ಎಣ್ಣೆಬೀಜಗಳ ಬೆಲೆಗಳು ಕಳೆದ ವಾರ ಇಳಿಮುಖವಾಗಿದೆ. ಏರಿಳಿತದ ಪರಿಣಾಮ, ಕಚಿ ಘನಿ ಸಾಸಿವೆ ಎಣ್ಣೆಯ ಬೆಲೆ 40 ರೂಪಾಯಿಗಳಷ್ಟು ಕಡಿಮೆಯಾಗಿದೆ. ಸಾಸಿವೆ ಕಾಳುಗಳ ಬೆಲೆ ಕಳೆದ ವಾರದಿಂದ ಈ ವಾರ ಕ್ವಿಂಟಲ್‌ಗೆ 7,515-7,565 ರೂ.ಗೆ ಕುಸಿದಿದೆ. ಇದರ ಪರಿಣಾಮವಾಗಿ ಸಾಸಿವೆ ತೈಲ ಬೆಲೆ ಕ್ವಿಂಟಲ್‌ಗೆ 250 ರೂಪಾಯಿ ಕಡಿಮೆಯಾಗಿ 15,050 ರೂ.ಗೆ ತಲುಪಿದೆ.

ಸೋಯಾಬೀನ್ ತೈಲ ಬೆಲೆಯಲ್ಲಿ ಇಳಿಕೆ

ಸೋಯಾಬೀನ್ ಧಾನ್ಯಗಳು ಮತ್ತು ಸೋಯಾಬೀನ್ ಬೆಲೆಗಳ ಮಾರುಕಟ್ಟೆ ಬೆಲೆ ಹೆಚ್ಚಳದ ಹೊರತಾಗಿಯೂ ಇಳಿಕೆ ಕಂಡಿದೆ. ಕ್ವಿಂಟಲ್‌ಗೆ ರೂ 7,025-7,125 (ಸೋಯಾಬೀನ್ ಧಾನ್ಯ) ಮತ್ತು ರೂ 6,725-6,825 (ಸೋಯಾಬೀನ್ ಲೂಸ್) ಗೆ ಇಳಿದಿದೆ.

ಕಡಲೆಕಾಯಿ ಎಣ್ಣೆ ಬೆಲೆಗಳು ಸಹ ರೂ 25 ಕುಸಿತವನ್ನು ಕಂಡಿದೆ. ಪ್ರತಿ ಟಿನ್ ರೂ 2,625-2,815ರಂತಿದೆ. ಅದೇ ರೀತಿ ಪಾಮೊಲಿನ್ ಕಾಂಡ್ಲಾ ಬೆಲೆ ಕ್ವಿಂಟಲ್ ಗೆ 520 ರೂ. ಕಡಿಮೆಯಾಗಿ 15,200 ರೂ.ಗೆ ಕುಸಿದಿದೆ.

ಏರುತ್ತಿರುವ ಇಂಧನ ಬೆಲೆಗಳ ಮಧ್ಯೆ, ಕೇಂದ್ರ ಸರ್ಕಾರ ಶನಿವಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ರೂ 8 ಮತ್ತು ಡೀಸೆಲ್‌ಗೆ ರೂ 6 ಇಳಿಕೆ ಮಾಡಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 9.5 ರೂಪಾಯಿ ಮತ್ತು ಡೀಸೆಲ್ ದರದಲ್ಲಿ 7 ರೂಪಾಯಿ ಕಡಿಮೆಯಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

English summary

Good news for household budgets: Edible oil price decrease after drop in petrol, diesel prices

Good news for household budgets: Edible oil price decrease after drop in petrol, diesel prices.
Story first published: Monday, May 23, 2022, 20:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X