For Quick Alerts
ALLOW NOTIFICATIONS  
For Daily Alerts

Breaking: ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಗಡುವು ವಿಸ್ತರಣೆ ಇಲ್ಲ!

|

ನವದೆಹಲಿ, ಜುಲೈ 22: ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಗಡುವು ವಿಸ್ತರಣೆ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಅಧಿಕೃತ ಖಾತೆ ಮೂಲಕ ಟ್ವೀಟ್ ಮಾಡಿ ಈ ಬಗ್ಗೆ ಜುಲೈ 22ರಂದು ತಿಳಿಸಿದೆ.

 

''ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ರ ಗಡುವನ್ನು ವಿಸ್ತರಿಸಲು ಭಾರತ ಸರ್ಕಾರ ಪರಿಗಣಿಸುತ್ತಿಲ್ಲ'' ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಇಂದು ಹೇಳಿದ್ದಾರೆ. ಸಮೀಕ್ಷೆಯ ಪ್ರಕಾರ, 46% ತೆರಿಗೆ ಪಾವತಿದಾರರು ಐಟಿಆರ್ ಅನ್ನು ಸಲ್ಲಿಸಿದ್ದಾರೆ ಮತ್ತು 37% ಜನರು ಗಡುವಿನೊಳಗೆ ಹಾಗೆ ಮಾಡುವುದು ಕಷ್ಟ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ, ಆದಾಯ ತೆರಿಗೆ ಇಲಾಖೆಯ ಟ್ವೀಟ್ ಪ್ರಕಾರ, AY 2022-23 ಗಾಗಿ 2 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ (ITRs) ಆದಾಯ ತೆರಿಗೆ ಇ-ಫೈಲಿಂಗ್ ವ್ಯವಸ್ಥೆಯ ಮೂಲಕ ಸಲ್ಲಿಸಲಾಗಿದೆ.

 

ಈ ಹಿಂದಿನ ಎರಡು ವರ್ಷಗಳಲ್ಲಿ, ಕೋವಿಡ್ ಸಾಂಕ್ರಾಮಿಕ ಮತ್ತು ಹೊಸದಾಗಿ ಪ್ರಾರಂಭಿಸಲಾದ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ದೋಷಗಳಿಂದಾಗಿ ಸರ್ಕಾರವು ಐಟಿಆರ್ ಫೈಲಿಂಗ್ ಮತ್ತು ಇತರ ಆದಾಯ ತೆರಿಗೆ-ಸಂಬಂಧಿತ ಗಡುವನ್ನು ವಿಸ್ತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Breaking: ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಗಡುವು ವಿಸ್ತರಣೆ ಇಲ್ಲ!

ಹಣಕಾಸು ವರ್ಷ 2021-22 ಅಥವಾ ಮೌಲ್ಯಮಾಪನ ವರ್ಷ 2022-23ರ ಐಟಿಆರ್ ಅನ್ನು ಸಲ್ಲಿಕೆ ಮಾಡುವ ಕೊನೆಯ ದಿನಾಂಕವು ಜುಲೈ 31, 2022 ಆಗಿದೆ. ಸಂಬಳ ಪಡೆಯುವವರಿಗೆ ಐಟಿಆರ್ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಇದಾಗಿದೆ.

ವಿವಿಧ ರೀತಿಯ ತೆರಿಗೆದಾರರಿಗೆ ವಿಭಿನ್ನ ಐಟಿಆರ್ ದಿನಾಂಕಗಳು ಅಥವಾ ಗಡುವುಗಳು ಇರುತ್ತದೆ.ಆದಾಯ ತೆರಿಗೆ ನಿಯಮಗಳ ಪ್ರಕಾರ, ಹಿಂದೂ ಅವಿಭಜಿತ ಕುಟುಂಬಗಳಿಗೆ (HUF) ಐಟಿಆರ್ ಅನ್ನು ಸಲ್ಲಿಕೆ ಮಾಡುವ ಕೊನೆಯ ದಿನಾಂಕವೂ ಕೂಡಾ ಇದೇ ಜುಲೈ 31 ಆಗಿದೆ

ತಮ್ಮ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಬೇಕಾದ ತೆರಿಗೆದಾರರು ಅಕ್ಟೋಬರ್ 31, 2022ರ ಒಳಗೆ ತಮ್ಮ ಐಟಿಆರ್ ಅನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಈ ತೆರಿಗೆದಾರರು ಕಂಪನಿ, ಸಂಸ್ಥೆಯ ಕೆಲಸದ ಪಾಲುದಾರ ಅಥವಾ ಮಾಲೀಕತ್ವವನ್ನು ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ಅವರ ಖಾತೆಯನ್ನು ಆಡಿಟ್ ಮಾಡಬೇಕಾಗುತ್ತದೆ.

ತೆರಿಗೆದಾರರು ತಮ್ಮ ಐಟಿಆರ್ ಅನ್ನು ಹಣಕಾಸು ವರ್ಷ 2022-2023 ಕ್ಕೆ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ಸಲ್ಲಿಸಬಹುದು. ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಹೊಸ ಫಾರ್ಮ್ ಅನ್ನು ಪ್ರಕಟಿಸಿದೆ. ಅಪ್‌ಡೇಟೆಡ್ ಐಟಿಆರ್‌ ಫಾರ್ಮ್‌ನಲ್ಲಿ ತೆರಿಗೆದಾರರು ಸಲ್ಲಿಸುವ ಉದ್ದೇಶವನ್ನು ಮತ್ತು ತೆರಿಗೆ ವಿಧಿಸಬೇಕಾದ ಆದಾಯದ ಮೊತ್ತವನ್ನು ಘೋಷಿಸಬೇಕಾಗುತ್ತದೆ.

ಹತ್ತಿರ ಬಂದಿದೆ ಐಟಿಆರ್ ಫೈಲಿಂಗ್ ಕೊನೆಯ ದಿನ: ಯಾವೆಲ್ಲ ದಾಖಲೆ ಬೇಕು?ಹತ್ತಿರ ಬಂದಿದೆ ಐಟಿಆರ್ ಫೈಲಿಂಗ್ ಕೊನೆಯ ದಿನ: ಯಾವೆಲ್ಲ ದಾಖಲೆ ಬೇಕು?

ಫಾರ್ಮ್ 16 ಇದೆಯೇ?: ಫಾರ್ಮ್ 16 ಅಂದರೆ ಟಿಡಿಎಸ್ ಸರ್ಟಿಫಿಕೇಟ್ ಆಗಿದೆ. ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಲು ಮೂಲ ಅಡಿಪಾಯವೇ ಫಾರ್ಮ್ 16 ಆಗಿದೆ. ಆದ್ದರಿಂದಾಗಿ ನಾವು ಮೊದಲು ಫಾರ್ಮ್ 16 ಅನ್ನು ಒಟ್ಟು ಮಾಡಿಕೊಳ್ಳಬೇಕು. ನೀವು ತೆರಿಗೆಯನ್ನು ಪಾವತಿ ಮಾಡಿದ ದಾಖಲೆಯನ್ನು ನಿಮ್ಮ ಸಂಸ್ಥೆಗೆ ಸಲ್ಲಿಕೆ ಮಾಡಿದ ಬಳಿಕ ಸಂಸ್ಥೆಯು ಫಾರ್ಮ್ 16 ಅನ್ನು ನೀಡುತ್ತದೆ. ನಿಮ್ಮ ವೇತನ, ವೇತನದಿಂದ ಎಷ್ಟು ಕಡಿತವಾಗುತ್ತದೆ ಎಂಬ ಎಲ್ಲ ದಾಖಲೆಗಳು ಇದರಲ್ಲಿ ಇರಲಿದೆ.

ಫಾರ್ಮ್ 16A ನಿಮಗೆ ಫಿಕ್ಸಿಡ್ ಡೆಪಾಸಿಟ್ ಮೇಲೆ ಬರುವ ಬಡ್ಡಿಯ ಮಾಹಿತಿಯನ್ನು ಒಳಗೊಂಡಿರುತ್ತದೆ. ಫಿಕ್ಸಿಡ್ ಡೆಪಾಸಿಟ್, ಬಾಡಿಗೆ, ವಿಮಾ ಕಮಿಷನ್, ಬೇರೆ ಯಾವುದೇ ಆದಾಯ ಮೂಲಗಳಿಂದ ತೆರಿಗೆಯನ್ನು ಕಡಿತ ಮಾಡಲಾಗಿದ್ದರೆ, ನಿಮ್ಮ ಬ್ಯಾಂಕ್ ನಿಮಗೆ ಫಾರ್ಮ್ 16A ನೀಡಲಿದೆ. ನೀವು ಗಳಿಸಿದ ಆದಾಯ ಹಾಗೂ ಟಿಡಿಎಸ್ ಕಡಿತ ಮೊದಲಾದ ಎಲ್ಲ ದಾಖಲೆಯನ್ನು ಇದು ಹೊಂದಿರುತ್ತದೆ. ಹಣವನ್ನು ಜಮೆ ಮಾಡಿದ ಅಥವಾ ಕಡಿತ ಮಾಡಿದವರ ಹೆಸರು, ವಿಳಾಸ, ಪ್ಯಾನ್ ಟಿಡಿಎಸ್ ಚಲನ್ ಇದರಲ್ಲಿ ಇರಲಿದೆ.

English summary

Govt Not Considering Extending Income Tax Return Filing Deadline of July 31

India Income Tax Return Filing Live: India's government is not considering extending the July 31 deadline for filing income tax returns, Revenue Secretary Tarun Bajaj said today. According to a survey, 54% tax payers have yet to file the ITR and 37% said it is difficult to do so by deadline.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X