For Quick Alerts
ALLOW NOTIFICATIONS  
For Daily Alerts

ಕೆಲವು ವಸ್ತುಗಳ ಮೇಲೆ ಜಿಎಸ್‌ಟಿ ಕಡಿತ: ಏನೆಲ್ಲಾ ಬದಲಾಗಬಹುದು?

|

47ನೇ ಜಿಎಸ್‌ಟಿ ಕೌನ್ಸಿಲ್ ಸಭೆಯು ಮಂಗಳವಾರ (ಜೂನ್ 28) ಆರಂಭವಾಗಿದೆ. ಈ ಸಭೆಯು ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ನಡೆಯಲಿದೆ. ಹಲವಾರು ಸರಕು ಹಾಗೂ ಸೇವೆಗಳ ಮೇಲಿನ ಜಿಎಸ್‌ಟಿಯನ್ನು ಈ ಸಭೆಯಲ್ಲಿ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ. ಹಾಗೆಯೇ ಹಲವಾರು ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಕಡಿತ ಮಾಡುವ ಸಾಧ್ಯತೆ ಇದೆ.

ಸಭೆಯು ಇಂದು ನಡೆಯುತ್ತಿದ್ದು, ಸಭೆಯ ಬಳಿಕ ಮಹತ್ವದ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಜಿಎಸ್‌ಟಿ ಹೆಚ್ಚಳ, ಕಡಿತದ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಸಭೆಯು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಯುತ್ತಿದೆ. ರಾಜ್ಯಗಳ, ಕೇಂದ್ರಾಡಳಿತ ಪ್ರದೇಶದ ಹಣಕಾಸು ಸಚಿವರುಗಳು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಮಂಗಳವಾರ ಜಿಎಸ್‌ಟಿ ಕೌನ್ಸಿಲ್ ಕೆಲವೊಂದು ಸರಕು ಹಾಗೂ ಸೇವೆಗಳ ಜಿಎಸ್‌ಟಿ ಬದಲಾವಣೆಗೆ ಅನುಮೋದನ ಎನೀಡಿದೆ.

Packaged ಆಹಾರ, ಧಾನ್ಯ, ಯಾವುದರ ಮೇಲೆ ಜಿಎಸ್ಟಿ ಹಿಂತೆಗೆತPackaged ಆಹಾರ, ಧಾನ್ಯ, ಯಾವುದರ ಮೇಲೆ ಜಿಎಸ್ಟಿ ಹಿಂತೆಗೆತ

ಇನ್ನು ಇ-ವೇ ಬಗ್ಗೆಯೂ ಚರ್ಚೆಗಳು ನಡೆಯಲಿದೆ. ಚಿನ್ನ, ಆಭರಣಗಳನ್ನು ರಾಜ್ಯದಿಂದ ರಾಜ್ಯಕ್ಕೆ ಸಾಗಾಟ ಮಾಡುವ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಬಿಲ್‌ಗಳನ್ನು ನೀಡುವುದು ಕಡ್ಡಾಯವಾಗಿರುವ ಮಿತಿಯನ್ನು ರಾಜ್ಯಗಳು ನಿಗದಿಪಡಿಸಬಹುದು ಎಂದು ಕೌನ್ಸಿಲ್ ಶಿಫಾರಸು ಮಾಡಿದೆ. ಹಾಗಾದರೆ ಬೇರೆ ಯಾವೆಲ್ಲಾ ಬದಲಾವಣೆಗಳು ಆಗಲಿದೆ?, ಯಾವೆಲ್ಲಾ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತವಾಗಲಿದೆ, ಯಾವೆಲ್ಲಾ ವಸ್ತುಗಳ ಮೇಲಿನ ಜಿಎಸ್‌ಟಿ ಇಳಿಕೆಯಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಯಾವೆಲ್ಲಾ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆ ಸಾಧ್ಯತೆ

ಯಾವೆಲ್ಲಾ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆ ಸಾಧ್ಯತೆ

ಕೆಲವು ವಸ್ತುಗಳನ್ನು ಆಹಾರ ಎಂದು ಪರಿಗಣನೆ ಮಾಡಿದರೆ, ಅದರ ಮೇಲೆ ಜಿಎಸ್‌ಟಿ ಹೇರುವ ಸಾಧ್ಯತೆ ಇದೆ. ಪ್ಯಾಕೇಜ್ ಮಾಡಿದ ಆಹಾರ, ಪ್ಯಾಕೇಜ್ ಮಾಡಿದ ಮಾಂಸ, ಮೀನು, ಜೇನುತುಪ್ಪ, ಒಣ ತರಕಾರಿ, ಒಣ ಧಾನ್ಯಗಳು, ಗೋಧಿ, ಇತರೆ ಧಾನ್ಯ, ಗೋಧಿ ಇತರೆ ಧಾನ್ಯದ ಹಿಟ್ಟು, ಬೆಲ್ಲ, ಮಂಡಕ್ಕಿ ಮೇಲೆ ಜಿಎಸ್‌ಟಿ ಹೇರಿಕೆ ಮಾಡಲಾಗುತ್ತಿದೆ.

 ಚೆಕ್‌ಗಳ ಮೇಲೆ ಶೇಕಡ 18  ಜಿಎಸ್‌ಟಿ

ಚೆಕ್‌ಗಳ ಮೇಲೆ ಶೇಕಡ 18 ಜಿಎಸ್‌ಟಿ

ಬ್ಯಾಂಕ್‌ಗಳು ನೀಡುವ ಚೆಕ್ ಮೇಲೆಯೂ ಸುಮಾರು ಶೇಕಡ 18ರಷ್ಟು ಜಿಎಸ್‌ಟಿ ಹೇರಿಕೆ ಮಾಡಲಾಗುತ್ತದೆ. ಇನ್ನು ಮಾಪ್, ಚಾರ್ಟ್, ಅಟ್ಲಾಸ್‌ಗಳ ಮೇಲೆ ಶೇಕಡ 12ರಷ್ಟು ಜಿಎಸ್‌ಟಿ ಹೇರಲಾಗುತ್ತದೆ. ಇನ್ನು ಪ್ಯಾಕ್ ಮಾಡಿರದ, ಯಾವುದೇ ಲೇಬಲ್ ಇಲ್ಲದ, ಬ್ರಾಡ್ ಇಲ್ಲದ ವಸ್ತುಗಳಿಗೆ ಜಿಎಸ್‌ಟಿ ಇರುವುದಿಲ್ಲ.

 ರಾಜ್ಯಗಳ ಆಗ್ರಹವೇನಿದೆ?
 

ರಾಜ್ಯಗಳ ಆಗ್ರಹವೇನಿದೆ?

ರಾಜ್ಯಗಳು ಜಿಎಸ್‌ಟಿ ಪರಿಹಾರವನ್ನು ನೀಡುವಂತೆ ಒತ್ತಾಯ ಮಾಡುತ್ತಿದೆ. ಈ ನಡುವೆ ಕ್ಯಾಸಿನೋ, ಆನ್‌ಲೈನ್ ಗೇಮ್, ಕುದುರೆ ರೇಸಿಂಗ್ ಮೇಲೆ ಶೇಕಡ 28ರಷ್ಟು ಜಿಎಸ್‌ಟಿ ಹೇರುವಂತೆಯೂ ಆಗ್ರಹ ಮಾಡಿದೆ. ಮುಖ್ಯವಾಗಿ ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳು ಜಿಎಸ್‌ಟಿ ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ರಾಜ್ಯಗಳಿಗೆ ಒತ್ತಾಯ ಮಾಡುತ್ತಿದೆ.

 1,000ಕ್ಕಿಂತ ಕಡಿಮೆ ಬಾಡಿಗೆಯ ಹೊಟೇಲ್ ರೂಮ್‌ಗಳ ತೆರಿಗೆ

1,000ಕ್ಕಿಂತ ಕಡಿಮೆ ಬಾಡಿಗೆಯ ಹೊಟೇಲ್ ರೂಮ್‌ಗಳ ತೆರಿಗೆ

ಇನ್ನು ಹಲವಾರು ಸಚಿವರುಗಳು ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಕಡಿತ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಈ ನಡುವೆ ಒಂದು ಸಾವಿರಕ್ಕಿಂತ ಕಡಿಮೆ ಬಾಡಿಗೆಯನ್ನು ಪಡೆಯುವ ಹೊಟೇಲ್ ರೂಮ್‌ಗಳ ಮೇಲೆ ಶೇಕಡ 12ರಷ್ಟು ತೆರಿಗೆಯನ್ನು ವಿಧಿಸಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ. ಈವರೆಗೂ ಒಂದು ಸಾವಿರಕ್ಕಿಂತ ಕಡಿಮೆ ಬಾಡಿಗೆಯನ್ನು ಪಡೆಯುವ ಹೊಟೇಲ್ ರೂಮ್‌ಗಳ ಮೇಲೆ ಯಾವುದೇ ಜಿಎಸ್‌ಟಿ ಇಲ್ಲ. ಇನ್ನು ಐದು ಸಾವಿರಕ್ಕಿಂತ ಅಧಿಕ ಮೊತ್ತದ ಆಸ್ಪತ್ರೆಯ ರೂಮ್‌ಗಳಿಗೆ ಶೇಕಡ ಐದರಷ್ಟು ತೆರಿಗೆ ವಿಧಿಸಬೇಕು ಎಂದು ಆಗ್ರಹ ಮಾಡಲಾಗಿದೆ. ಇನ್ನು ಅಂಚೆ ಕಚೇರಿಯ ಕೆಲವು ಕಾರ್ಯಗಳ ಮೇಲೆಯೂ ಜಿಎಸ್‌ಟಿ ವಿಧಿಸುವ ಸಲಹೆ ಇದೆ.

 ಇ-ವೇ ಬಿಲ್ ಕಡ್ಡಾಯ ಮಿತಿ

ಇ-ವೇ ಬಿಲ್ ಕಡ್ಡಾಯ ಮಿತಿ

ಚಿನ್ನ, ಆಭರಣಗಳನ್ನು ರಾಜ್ಯದಿಂದ ರಾಜ್ಯಕ್ಕೆ ಸಾಗಾಟ ಮಾಡುವ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಬಿಲ್‌ಗಳನ್ನು ನೀಡುವುದು ಕಡ್ಡಾಯವಾಗಿರುವ ಮಿತಿಯನ್ನು ರಾಜ್ಯಗಳು ನಿಗದಿಪಡಿಸಬಹುದು ಎಂದು ಕೌನ್ಸಿಲ್ ಶಿಫಾರಸು ಮಾಡಿದೆ. 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮಿತಿಯನ್ನು ಇರಿಸಿಕೊಳ್ಳಲು ಸಚಿವರ ಗುಂಪು ಶಿಫಾರಸು ಮಾಡಿದೆ. ಇನ್ನು ಒಂದು ವಸ್ತುವನ್ನು ಖರೀದಿ ಮಾಡಿ ಬಳಿಕ ಅದನ್ನು ಆರು ತಿಂಗಳೊಳಗೆ ಅಧಿಕ ಮೊತ್ತಕ್ಕೆ ಮಾರಾಟ ಮಾಡುವ ಹೈ ರಿಸ್ಕ್ ಟಾಕ್ಸ್ ಪೇಯರ್‌ಗಳನ್ನು ಜಿಎಸ್‌ಟಿ ಅಡಿಗೆ ತರುವ ಬಗ್ಗೆ ಸಲಹೆ ನೀಡಲಾಗಿದೆ. ಇದಕ್ಕಾಗಿ ವಿದ್ಯುತ್ ಬಿಲ್ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಪರಿಶೀಲನೆ ಮಾಡಲು ಸಲಹೆ ನೀಡಲಾಗಿದೆ.

English summary

GST council meet: Here are the list products that will now attract GST

The GST Council approved changes in the tax rates on certain goods and services. Here are the list products that will now attract GST. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X