For Quick Alerts
ALLOW NOTIFICATIONS  
For Daily Alerts

ಜಿಎಸ್‌ಟಿ ಪರಿಷ್ಕರಣೆ: ಯಾವುದು ದುಬಾರಿ, ಯಾವುದು ಅಗ್ಗ? ಇಲ್ಲಿದೆ ಪಟ್ಟಿ

|

47ನೇ ಜಿಎಸ್‌ಟಿ ಕೌನ್ಸಿಲ್ ಸಭೆಯು ಮಂಗಳವಾರ (ಜೂನ್ 28) ಆರಂಭವಾಗಿದೆ. ಈ ಸಭೆಯು ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ನಡೆದಿದ್ದು, ಹಲವಾರು ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು ಪರಿಷ್ಕರಣೆ ಮಾಡಲಾಗಿದೆ.

ಜುಲೈ 18ರಿಂದ ಹಲವಾರು ವಸ್ತುಗಳ ಮೇಲಿನ ತೆರಿಗೆಯು ಹೆಚ್ಚಳವಾಗಲಿದೆ. ಜಿಎಸ್‌ಟಿ ಕೌನ್ಸಿಲ್ ಈ ನಿರ್ಧಾರವನ್ನು ಕೈಗೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಸಭೆಯ ನೇತೃತ್ವವನ್ನು ವಹಿಸಿಕೊಂಡಿದ್ದರು. ಹಾಗೆಯೇ ಈ ಸಭೆಯಲ್ಲಿ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಬ್ಯಾಂಕ್ ಚೆಕ್‌ಗಳ ಮೇಲೆಯೂ ಜಿಎಸ್‌ಟಿ ಹೇರಿಕೆ ಮಾಡುವ ನಿರ್ಧಾರವನ್ನು ಕೌನ್ಸಿಲ್ ತೆಗೆದುಕೊಂಡಿದೆ. ಹಾಗೆಯೇ ಮ್ಯಾಪ್, ಅಟ್ಲಾಸ್ ಮೇಲೆಯೂ ಶೇಕಡ ಹನ್ನೆರಡಷ್ಟು ತೆರಿಗೆ ವಿಧಿಸಲು ನಿರ್ಧಾರ ಮಾಡಲಾಗಿದೆ.

ಕೆಲವು ವಸ್ತುಗಳ ಮೇಲೆ ಜಿಎಸ್‌ಟಿ ಕಡಿತ: ಏನೆಲ್ಲಾ ಬದಲಾಗಬಹುದು?ಕೆಲವು ವಸ್ತುಗಳ ಮೇಲೆ ಜಿಎಸ್‌ಟಿ ಕಡಿತ: ಏನೆಲ್ಲಾ ಬದಲಾಗಬಹುದು?

ಇನ್ನು ಪ್ಯಾಕ್ ಮಾಡಿರದ, ಯಾವುದೇ ಲೇಬಲ್ ಇಲ್ಲದ, ಬ್ರಾಡ್ ಇಲ್ಲದ ವಸ್ತುಗಳಿಗೆ ಜಿಎಸ್‌ಟಿ ಇರುವುದಿಲ್ಲ. ಇನ್ನು ಬ್ರಾಂಡ್ ಇಲ್ಲದ ಪ್ಯಾಕ್ ಮಾಡಿರುವ ಮೊಸರು, ಮಜ್ಜಿಗೆ, ಆಹಾರ ಉತ್ಪನ್ನ, ಕಾಳುಗಳ ಮೇಲೆಯೂ ವಿನಾಯಿತಿ ಇದೆ. ಹಾಗಾದರೆ ಈ ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ಮುಂದಿನ ದಿನಗಳಲ್ಲಿ ಯಾವುದೆಲ್ಲ ವಸ್ತುಗಳು ದುಬಾರಿಯಾಗಲಿದೆ, ಯಾವುದು ಅಗ್ಗವಾಗಲಿದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

 ಪ್ಯಾಕೆಜ್ ಆಹಾರ, ಬ್ಯಾಂಕ್ ಚೆಕ್, ಹೊಟೇಲ್ ರೂಮ್ ದುಬಾರಿ

ಪ್ಯಾಕೆಜ್ ಆಹಾರ, ಬ್ಯಾಂಕ್ ಚೆಕ್, ಹೊಟೇಲ್ ರೂಮ್ ದುಬಾರಿ

ಪ್ಯಾಕೆಜ್ ಆಹಾರ: ಪ್ಯಾಕೇಜ್ ಮಾಡಿದ ಆಹಾರ, ಪ್ಯಾಕೇಜ್ ಮಾಡಿದ ಮಾಂಸ, ಮೀನು, ಜೇನುತುಪ್ಪ, ಒಣ ತರಕಾರಿ, ಒಣ ಧಾನ್ಯಗಳು, ಗೋಧಿ, ಇತರೆ ಧಾನ್ಯ, ಗೋಧಿ ಇತರೆ ಧಾನ್ಯದ ಹಿಟ್ಟು, ಬೆಲ್ಲ, ಮಂಡಕ್ಕಿ ಮೇಲೆ ಜಿಎಸ್‌ಟಿ ಹೇರಿಕೆಯಾಗಲಿದೆ. ಶೇಕಡ 5ರಷ್ಟು ಜಿಎಸ್‌ಟಿ ಹೇರಿಕೆಯಾಗಲಿದೆ. ಇನ್ನು ಪ್ಯಾಕ್ ಮಾಡಿರದ, ಯಾವುದೇ ಲೇಬಲ್ ಇಲ್ಲದ, ಬ್ರಾಡ್ ಇಲ್ಲದ ವಸ್ತುಗಳಿಗೆ ಜಿಎಸ್‌ಟಿ ಇರುವುದಿಲ್ಲ. ಇನ್ನು ಪ್ಯಾಕ್ ಮಾಡಿದ ಆದರೆ ಲೇಬಲ್ ಇಲ್ಲದ ಆಹಾರದ ಮೇಲೆ ಜಿಎಸ್‌ಟಿ ಇರುವುದಿಲ್ಲ.

ಚೆಕ್‌ಬುಕ್: ಬ್ಯಾಂಕ್‌ಗಳು ನೀಡುವ ಚೆಕ್ ಮೇಲೆಯೂ ಸುಮಾರು ಶೇಕಡ 18ರಷ್ಟು ಜಿಎಸ್‌ಟಿ ಹೇರಿಕೆ ಮಾಡಲಾಗುತ್ತದೆ. ಇನ್ನು ಮಾಪ್, ಚಾರ್ಟ್, ಅಟ್ಲಾಸ್‌ಗಳ ಮೇಲೆ ಶೇಕಡ 12ರಷ್ಟು ಜಿಎಸ್‌ಟಿ ಹೇರಲಾಗುತ್ತದೆ. ಇನ್ನು ಪ್ಯಾಕ್ ಮಾಡಿರದ, ಯಾವುದೇ ಲೇಬಲ್ ಇಲ್ಲದ, ಬ್ರಾಡ್ ಇಲ್ಲದ ವಸ್ತುಗಳಿಗೆ ಜಿಎಸ್‌ಟಿ ಇರುವುದಿಲ್ಲ.

ಹೊಟೇಲ್ ರೂಮ್: ಒಂದು ಸಾವಿರಕ್ಕಿಂತ ಕಡಿಮೆ ಬಾಡಿಗೆಯನ್ನು ಪಡೆಯುವ ಹೊಟೇಲ್ ರೂಮ್‌ಗಳ ಮೇಲೆ ಶೇಕಡ 12ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಈವರೆಗೂ 1 ಸಾವಿರಕ್ಕಿಂತ ಕಡಿಮೆ ಬಾಡಿಗೆಯನ್ನು ಪಡೆಯುವ ಹೊಟೇಲ್ ರೂಮ್‌ಗಳ ಮೇಲೆ ಯಾವುದೇ ಜಿಎಸ್‌ಟಿ ಇಲ್ಲ.

ಆಸ್ಪತ್ರೆ ಬೆಡ್: ಇನ್ನು 5 ಸಾವಿರಕ್ಕಿಂತ ಅಧಿಕ ಮೊತ್ತದ ಆಸ್ಪತ್ರೆಯ ಬೆಡ್‌ಗಳಿಗೆ ಶೇಕಡ 5ರಷ್ಟು ತೆರಿಗೆ ವಿಧಿಸಲಾಗುತ್ತದೆ.

 ಎಲ್‌ಇಡಿ ಲೈಟ್, ಚಾಕು, ಪಂಪ್, ಚಿನ್ನ ದುಬಾರಿ

ಎಲ್‌ಇಡಿ ಲೈಟ್, ಚಾಕು, ಪಂಪ್, ಚಿನ್ನ ದುಬಾರಿ

ಎಲ್‌ಇಡಿ ಲೈಟ್: ಎಲ್‌ಇಡಿ ಲೈಟ್, ಫಿಕ್ಚರ್, ಎಲ್‌ಇಡಿ ಲ್ಯಾಪ್ಸ್‌ಗಳ ಜಿಎಸ್‌ಟಿಯು ಕೂಡಾ ಹೆಚ್ಚಳವಾಗಲಿದೆ. ಶೇಕಡ 12ರಿಂದ ಶೇಕಡ 18ಕ್ಕೆ ಏರಿಕೆಯಾಗುತ್ತದೆ.

ಚಾಕು: ಚಾಕು, ಬ್ಲೇಡ್, ಪೆನ್ಸಿಲ್ ಶಾರ್ಪ್‌ನರ್, ಬ್ಲೇಡ್, ಚಮಚ, ಸ್ಕಿಮರ್ ಮೊದಲಾದವುಗಳು ಮೇಲಿನ ಜಿಎಸ್‌ಟಿಯನ್ನು ಶೇಕಡ 12ರಿಂದ ಶೇಕಡ 18ಕ್ಕೆ ಏರಿಕೆ ಮಾಡಲಾಗಿದೆ.

ಪಂಪ್, ಮೆಷಿನ್: ಪಂಪ್, ಬಾವಿಗೆ ಹಾಕಲಾಗುವ ಪಂಪ್, submersible ಪಂಪ್, ಬೈಸಿಕಲ್ ಪಂಪ್‌ಗಳ ಜಿಎಸ್‌ಟಿಯನ್ನು ಶೇಕಡ 12ರಿಂದ ಶೇಕಡ 18ಕ್ಕೆ ಏರಿಕೆ ಮಾಡಲಾಗಿದೆ. ಸ್ವಚ್ಛತೆಗಾಗಿ, ಗಾರ್ಡನಿಂಗ್‌ಗಾಗಿ ಬಳಕೆ ಮಾಡಲಾಗುವ ಮೆಷಿನ್ ಮೊದಲಾದವುಗಳ ಮೇಲಿನ ಜಿಎಸ್‌ಟಿಯನ್ನು ಕೂಡಾ ಶೇಕಡ 12ರಿಂದ ಶೇಕಡ 18ಕ್ಕೆ ಏರಿಕೆ ಮಾಡಲಾಗಿದೆ.

ಚಿನ್ನ ಆಭರಣ: ಚಿನ್ನ, ಆಭರಣಗಳನ್ನು ರಾಜ್ಯದಿಂದ ರಾಜ್ಯಕ್ಕೆ ಸಾಗಾಟ ಮಾಡುವ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಬಿಲ್‌ಗಳನ್ನು ನೀಡುವುದು ಕಡ್ಡಾಯವಾಗಿರುವ ಮಿತಿಯನ್ನು ರಾಜ್ಯಗಳು ನಿಗದಿಪಡಿಸಬಹುದು ಎಂದು ಕೌನ್ಸಿಲ್ ಶಿಫಾರಸು ಮಾಡಿದೆ. 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮಿತಿಯನ್ನು ಇರಿಸಿಕೊಳ್ಳಲು ಸಚಿವರ ಗುಂಪು ಶಿಫಾರಸು ಮಾಡಿದೆ.

 ವೈದ್ಯಕೀಯ, ರಕ್ಷಣಾ ಉಪಕರಣ ಅಗ್ಗ

ವೈದ್ಯಕೀಯ, ರಕ್ಷಣಾ ಉಪಕರಣ ಅಗ್ಗ

ಕೃತಕ ಕಾಲು ಮೊದಲಾದ ದೇಹದ ಕೃತಕ ಭಾಗಗಳ ಮೇಲೆಇನ ಜಿಎಸ್‌ಟಿಯನ್ನು ಕಡಿತ ಮಾಡಲಾಗಿದೆ. ಈ ಹಿಂದೆ ಕೃತಕ ಕಾಲು ಮೊದಲಾದವುಗಳಿಗೆ ಶೇಕಡ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಈಗ ಶೇಕಡ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಇನ್ನು ರಕ್ಷಣಾ ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು ಹಿಂದಕ್ಕೆ ಪಡೆಯಲಾಗಿದೆ. ಈ ವಸ್ತುಗಳಿಗೆ ಯಾವುದೇ ಜಿಎಸ್‌ಟಿ ಇರುವುದಿಲ್ಲ

 ರೋಪ್‌ವೇ ರೈಡ್, ವಿಮಾನ ಪ್ರಯಾಣ ಅಗ್ಗ

ರೋಪ್‌ವೇ ರೈಡ್, ವಿಮಾನ ಪ್ರಯಾಣ ಅಗ್ಗ

ರೋಪ್‌ವೇ ರೈಡ್: ಸರಕು ಹಾಗೂ ಜನರ ಪ್ರಯಾಣಕ್ಕೆ ಸಹಕಾರಿಯಾದ ರೋಪ್‌ವೇ ರೈಡ್ ಮೇಲಿನ ಜಿಎಸ್‌ಟಿಯನ್ನು ತೀರಾ ಇಳಿಕೆ ಮಾಡಲಾಗಿದೆ. ಈ ಹಿಂದೆ ರೋಪ್‌ವೇ ಮೇಲಿನ ಜಿಎಸ್‌ಟಿ ಶೇಕಡ 18ರಷ್ಟು ಆಗಿತ್ತು. ಆದರೆ ಈಗ ಶೇಕಡ 5ಕ್ಕೆ ಇಳಿಕೆ ಮಾಡಲಾಗಿದೆ.

ಸರಕು ಸಾಗಾಟ ಬಾಡಿಗೆ: ಕೆಲವು ಸಂಸ್ಥೆಗಳ ಮೂಲಕ ಸರಕು ಸಾಗಾಟ ಮಾಡುವ ಸಂದರ್ಭದಲ್ಲಿ ನೀಡಲಾಗುವ ಬಾಡಿಗೆ ಅಥವಾ ಶುಲ್ಕದ ಮೇಲಿನ ಜಿಎಸ್‌ಟಿಯನ್ನು ಕೂಡಾ ಕಡಿತ ಮಾಡಲಾಗಿದೆ. ಶೇಕಡ 18ರಿಂದ ಶೇಕಡ 12ಕ್ಕೆ ಇಳಿಕೆ ಮಾಡಲಾಗಿದೆ.

ವಾಯು ಮಾರ್ಗ ಪ್ರಯಾಣ: ಎಕಾನಮಿ ಕ್ಲಾಸ್‌ನಲ್ಲಿ ಈಶಾನ್ಯ ರಾಜ್ಯದಿಂದ ಹಾಗೂ ಬಾಗ್ಡೋಗ್ರದಿಂದ ವಾಯು ಮಾರ್ಗ ಪ್ರಯಾಣಕ್ಕೆ ಯಾವುದೇ ಜಿಎಸ್‌ಟಿ ವಿಧಿಸಲಾಗುವುದಿಲ್ಲ. ಆರ್‌ಬಿಐ, ಐಆರ್‌ಡಿಎ, ಸೆಬಿ, ಎಫ್‌ಎಸ್‌ಎಸ್‌ಎಐನ ಸೇವೆಗಳ ಮೇಲಿನ ವಿನಾಯಿತಿಯನ್ನು ಹಿಂಪಡೆಯಲಾಗಿದೆ.

English summary

GST Revised Rates : What Gets Cheaper, What Gets Costlier? Check Full List in Kannada

GST Revised Rates : What Gets Cheaper, What Gets Costlier? Check Here's a Full List in Kannada, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X