For Quick Alerts
ALLOW NOTIFICATIONS  
For Daily Alerts

ಬೇಡಿಕೆ ಹೆಚ್ಚಾದಂತೆ ವಸತಿ ಬೆಲೆ ಕೂಡಾ ಏರಿಕೆ: ಯಾವ ನಗರ ಟಾಪ್?

|

ಭಾರತದಲ್ಲಿ ವಸತಿ (ಮನೆ) ಬೇಡಿಕೆಯು ಭಾರೀ ಅಧಿಕವಾಗಿದೆ. ಪ್ರಮುಖವಾಗಿ ಎಂಟು ನಗರಗಳಲ್ಲಿ ಈ ಬೇಡಿಕೆ ಅಧಿಕವಾಗಿದೆ. ದೆಹಲಿ-ಎನ್‌ಸಿಆರ್, ಎಂಎಂಆರ್ (ಮುಂಬೈ), ಕೋಲ್ಕತ್ತಾ, ಪುಣೆ, ಹೈದರಾಬಾದ್, ಚೆನ್ನೈ, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ವಸತಿ ಬೇಡಿಕೆ ಹೆಚ್ಚಾಗಿದ್ದು, ಇದರಿಂದಾಗಿ ವರ್ಷದಿಂದ ವರ್ಷಕ್ಕೆ ವಸತಿ ಬೆಲೆಯಲ್ಲಿ ಶೇಕಡ 5ರಷ್ಟು ಹೆಚ್ಚಳವಾಗಿದೆ.

 

ಇತ್ತೀಚಿನ CREDAI-Colliers-Liases Foras ಸಂಶೋಧನಾ ವರದಿಯ ಪ್ರಕಾರ ದೇಶದಲ್ಲಿ ವಸತಿ ಬೇಡಿಕೆ ಹೆಚ್ಚಾದಂತೆ ಬೆಲೆಯು ಕೂಡಾ ಅಧಿಕವಾಗಿದೆ. ಆದರೆ Q2 2022 ರಲ್ಲಿ ಬೇಡಿಕೆಯಲ್ಲಿ ಕೊಂಚ ಕುಸಿತ ಕಂಡು ಬಂದಿದೆ. ಕೊರೊನಾ ಸಾಂಕ್ರಾಮಿಕಕ್ಕಿಂತಲೂ ಮೊದಲಿನ ಬೆಲೆಗಿಂತ ಈಗ ವಸತಿ ಬೆಲೆ ಅಧಿಕವಾಗಿದೆ. ಅದಕ್ಕೆ ಮುಖ್ಯ ಕಾರಣ ನಿರ್ಮಾಣ ವೆಚ್ಚ ಅಧಿಕವಾಗಿರುವುದು ಕೂಡಾ ಹೌದು. ಹಾಗೆಯೇ ಬೇಡಿಕೆ ಹೆಚ್ಚಳ ಕೂಡಾ ಹೌದು.

ಮನೆ ಖರೀದಿ ಮಾಡುತ್ತೀರಾ? ಈ 10 ಅಂಶ ನೆನಪಿನಲ್ಲಿಡಿ

ಈ ನಡುವೆ ದೆಹಲಿ ಈ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದೆ. ದೆಹಲಿ-ಎನ್‌ಆರ್‌ಸಿಯಲ್ಲಿ ವಸತಿ ಬೆಲೆಗಳಲ್ಲಿ ಶೇಕಡ 10ರಷ್ಟು ಹೆಚ್ಚಳವಾಗಿದೆ. ಅಹಮದಾಬಾದ್ ಮತ್ತು ಹೈದರಾಬಾದ್‌ನಲ್ಲಿ ಕ್ರಮವಾಗಿ ಶೇಕಡ 9, 8 ಏರಿಕೆ ಕಂಡು ಬಂದಿದೆ. ಹಾಗಾದರೆ ಯಾವ ಪ್ರದೇಶದಲ್ಲಿ ಎಷ್ಟು ಹೆಚ್ಚಳವಾಗಿದೆ, ಪ್ರಮುಖ ಎಂಟು ನಗರಗಳಲ್ಲಿ ಎಷ್ಟು ಅಧಿಕವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸ್ಥಿತಿ ಹೇಗಿದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ......

ಬೆಂಗಳೂರಿನಲ್ಲಿ ವಸತಿ ಪ್ರಮಾಣ ಕುಸಿತ

ಬೆಂಗಳೂರಿನಲ್ಲಿ ವಸತಿ ಪ್ರಮಾಣ ಕುಸಿತ

ಕಳೆದ ವರ್ಷದ ಕೊನೆಯಲ್ಲಿ ಮನೆ ಮಾರಾಟ ಬಹಳ ವೇಗವಾಗಿ ಮುಂದುವರಿದಿದ್ದು, ಆ ವೇಗವು Q2 2022 ರಲ್ಲೂ ಮುಂದುವರೆಯಿತು. ಆದರೆ ಜನರು ಇದರಲ್ಲೂ ಆಕರ್ಷಕ ಬೆಲೆಯತ್ತ ವಾಲುತ್ತಿದ್ದಾರೆ. ಇದರಿಂದಾಗಿ ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಬೆಲೆ ಏರಿಕೆ, ಹೊಸ ಹೊಸ ವಸತಿ ಸಂಕೀರ್ಣಗಳ ಸೃಷ್ಟಿಯ ನಡುವೆ, ಹಲವಾರು ವಸತಿ ಸಂಕೀರ್ಣಗಳು ಮಾರಾಟವಾಗದೆಯೇ ಉಳಿದುಕೊಂಡಿದೆ. ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ವಸತಿ ಪ್ರಮಾಣದಲ್ಲಿ ಶೇಕಡ 21ರಷ್ಟು ಕುಸಿತ ಕಂಡು ಬಂದಿದೆ. ಹೆಚ್ಚು ಮಾರಾಟವಾಗಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಹೈದರಾಬಾದ್, ಎಂಎಂಆರ್ ಮತ್ತು ಅಹಮದಾಬಾದ್‌ನಲ್ಲಿ ಮಾತ್ರ ವಸತಿ ಪ್ರಮಾಣ ಅಧಿಕವಾಗಿದೆ. ಹೊಸದಾಗಿ ಹಲವಾರು ವಸತಿ ಸಂಕೀರ್ಣಗಳ ನಿರ್ಮಾಣ ಇದಕ್ಕೆ ಕಾರಣವಾಗಿದೆ. ಮುಂಬೈನಲ್ಲಿ ಇನ್ನೂ ಮಾರಾಟವಾಗದ ವಸತಿಗಳು ಶೇಕಡ 36ರಷ್ಟು ಅಧಿಕವಾಗಿದೆ. ದೆಹಲಿಯಲ್ಲಿ ಶೇಕಡ 14 ಮತ್ತು ಪುಣೆಯಲ್ಲಿ ಶೇಕಡ 13 ಇದೆ.

ದೆಹಲಿ-ಎನ್‌ಸಿಆರ್ ವಸತಿ ಬೆಲೆ ಏರಿಕೆ

ದೆಹಲಿ-ಎನ್‌ಸಿಆರ್ ವಸತಿ ಬೆಲೆ ಏರಿಕೆ

ಎರಡು ವರ್ಷಗಳ ಅವಧಿಯಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ವಸತಿ ಬೆಲೆಗಳು ಅಧಿಕವಾಗುತ್ತಿದೆ. 2022 ರ Q2 ರಲ್ಲಿ ದೆಹಲಿ ಎನ್‌ಆರ್‌ಸಿಯಲ್ಲಿ ಕಾರ್ಪೆಟ್ ಬೆಲೆಯಲ್ಲಿ ಶೇಕಡ 10ರಷ್ಟು ಅಧಿಕವಾಗಿದ್ದು ಚದರ ಅಡಿಗೆ ರೂಪಾಯಿ 7,434ಕ್ಕೆ ತಲುಪಿದೆ. ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಶೇಕಡ 21ರಷ್ಟು ಬೆಲೆ ಏರಿಕೆಯಾಗಿದೆ. ಹಳೆಯ ಯೋಜನೆಗಳನ್ನು ಕೈಬಿಟ್ಟಿರುವುದರಿಂದಾಗಿ ಇಡೀ ಪ್ರದೇಶದಲ್ಲಿ ವಸತಿ Q2 2022 ರಲ್ಲಿ ಶೇಕಡ 10ರಷ್ಟು ಕುಸಿದಿದೆ. ಒಟ್ಟಾರೆಯಾಗಿ ಮಾರಾಟವಾಗದ ವಸತಿ ಕಡಿಮೆಯಿದ್ದರೂ ಹೆಚ್ಚಾಗಿ ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್‌ನಲ್ಲಿ ವಸತಿಗಳು ಇದೆ.

ಮುಂಬೈನಲ್ಲಿ ಮಾರಾಟವಾಗದ ವಸತಿ ಎಷ್ಟಿದೆ ನೋಡಿ?
 

ಮುಂಬೈನಲ್ಲಿ ಮಾರಾಟವಾಗದ ವಸತಿ ಎಷ್ಟಿದೆ ನೋಡಿ?

ಶೇಕಡ 36ರಷ್ಟು ಮಾರಾಟವಾಗದ ವಸತಿಯನ್ನು ಮುಂಬೈ ಹೊಂದಿದೆ. ಕಳೆದ ವರ್ಷದಿಂದ ಈ ವರ್ಷಕ್ಕೆ ಇದು ಶೇಕಡ 14ರಷ್ಟು ಹೆಚ್ಚಾಗಿದೆ. ನಗರದಲ್ಲಿ ಹೊಸದಾಗಿ ಹಲವಾರು ವಸತಿ ನಿರ್ಮಾಣವಾದ ಕಾರಣದಿಂದಾಗಿ ಇನ್ನೂ ಕೂಡಾ ಮಾರಾಟವಾಗದ ವಸತಿಗಳ ಪ್ರಮಾಣವು ಅಧಿಕವಾಗಿದೆ. ಇನ್ನು ವಸತಿ ಬೆಲೆಯು ಸರಿ ಸುಮಾರು ಅಷ್ಟೇ ಪ್ರಮಾಣದಲ್ಲಿದೆ. ವರ್ಷದಿಂದ ವರ್ಷಕ್ಕೆ ಶೇಕಡ ಒಂದರಷ್ಟು ಹೆಚ್ಚಳವಾಗಿದೆ. ಆದರೆ ದಹಿಸರ್‌ನ ಆಚೆಗೆ ಬೆಲೆಯಲ್ಲಿ ಶೇಕಡ 12ರಷ್ಟು ಹೆಚ್ಚಳವಾಗಿದೆ. ಪ್ರಮುಖ ಪ್ರದೇಶಗಳಲ್ಲಿ ಶೇಕಡ 26ರಷ್ಟು ವಸತಿಗಳು ಮಾರಾಟವಾಗದೆ ಬಾಕಿ ಉಳಿದಿದೆ. ಪ್ರತಿ ಚದರ ಅಡಿಗೆ ಬೆಲೆ 7,500-10,000 ರ ಶ್ರೇಣಿಯಲ್ಲಿದೆ.

ಬೆಂಗಳೂರಿನಲ್ಲಿ ಎಷ್ಟು ವಸತಿ ಮಾರಾಟವಾಗಿಲ್ಲ?

ಬೆಂಗಳೂರಿನಲ್ಲಿ ಎಷ್ಟು ವಸತಿ ಮಾರಾಟವಾಗಿಲ್ಲ?

2022ರ Q2ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಮಾರಾಟವಾಗದ ವಸತಿ ಪ್ರಮಾಣದಲ್ಲಿ ತೀವ್ರವಾದ ಕುಸಿತ ಕಂಡು ಬಂದಿದೆ. ವರ್ಷದಿಂದ ವರ್ಷಕ್ಕೆ ಈ ಪ್ರಮಾಣವು ಶೇಕಡ 21ಕ್ಕೆ ಇಳಿಕೆಯಾಗಿದೆ. 2019 ರ ಆರಂಭದಿಂದಲೂ ಬೆಂಗಳೂರಿನಲ್ಲಿ ವಸತಿ ಪ್ರಮಾಣ ಕುಸಿಯುತ್ತಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಕೆ ಮಾಡಿದಾಗ ಈ ಪ್ರಮಾಣ ಅತೀ ಕಡಿಮೆಯಾಗಿದೆ. ಮಾರಾಟವಾಗದ ಅತೀ ಹೆಚ್ಚು ವಸತಿಯು ಬೆಂಗಳೂರಿನ ಪೆರಿಫೆರಲ್ ಪ್ರದೇಶಗಳಲ್ಲಿದೆ. ಈ ಪ್ರದೇಶದಲ್ಲಿ ಹಲವಾರು ಸೌಲಭ್ಯಗಳು ಆರಂಭವಾಗುವ ನಿರೀಕ್ಷೆಯಲ್ಲಿ ವಸತಿ ಯೋಜನೆಗಳನ್ನು ಹೆಚ್ಚು ಮಾಡಲಾಗಿದೆ. ಆದರೆ ಅದು ಹಾಗೆಯೇ ಬಾಕಿ ಉಳಿದಿದೆ.

English summary

Housing Prices Record 5 Percent YoY Growth, Delhi-NCR Tops The List, Explained

A resurgence in residential demand has led to a 5% increase in prices across the top eight cities. Housing prices record 5% YoY growth as demands increase, Delhi-NCR tops the list.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X