For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಕಾರ್ಡ್ ಮೂಲಕ ಕ್ರೆಡಿಟ್ ಸ್ಕೋರ್ ಉತ್ತಮ ಮಾಡಿಕೊಳ್ಳುವುದು ಹೇಗೆ ಗೊತ್ತಾ?

|

ಕ್ರೆಡಿಟ್ ಕಾರ್ಡ್ ಗೂ ಕ್ರೆಡಿಟ್ ಸ್ಕೋರ್ ಕಡಿಮೆ ಇರುವುದಕ್ಕೂ ನೇರ ಸಂಬಂಧ ಇದೆಯಾ? ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳಲು ಕ್ರೆಡಿಟ್ ಕಾರ್ಡ್ ಕಾರಣವೇ? ಈ ಎರಡೂ ಪ್ರಶ್ನೆಗಳಿಗೆ ಬಹಳ ಮಂದಿ ಥಟ್ಟನೆ 'ಹೌದು' ಎಂಬ ಉತ್ತರ ನೀಡುತ್ತಾರೆ. ಆದರೆ ವಾಸ್ತವ ಬೇರೆ ಇದೆ. ಕ್ರೆಡಿಟ್ ಸ್ಕೋರ್ ಕಡಿಮೆ ಆಗುವುದಕ್ಕೂ ಸಾಲದ ಚಕ್ರಕ್ಕೂ ಕಾರಣ ಏನೆಂದರೆ, ಆರ್ಥಿಕ ಶಿಸ್ತಿನ ಕೊರತೆ ಮತ್ತು ಸ್ವಯಂ ನಿಯಂತ್ರಣ ಇಲ್ಲದಿರುವುದು.

ನಿಮಗೆ ಅಗತ್ಯವಾದ ಮತ್ತು ಸೂಕ್ತವಾದ ಕ್ರೆಡಿಟ್ ಕಾರ್ಡ್ ಆರಿಸಿಕೊಳ್ಳುವುದು ಕೂಡ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳುವುದಕ್ಕೆ ಒಂದು ದಾರಿ ಎಂಬುದು ನಿಮಗೆ ಗೊತ್ತಿರಲಿ. ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕ್ರೆಡಿಟ್ ಕಾರ್ಡ್ ಹೇಗೆ ಸಹಕಾರಿ ಎಂಬುದನ್ನು ತಿಳಿಯಲು ಮುಂದೆ ಓದಿ.

ಸಾಲದ ಇತಿಹಾಸ ಉತ್ತಮಪಡಿಸಿಕೊಳ್ಳಲು ಕ್ರೆಡಿಟ್ ಕಾರ್ಡ್ ಬಳಸಿ

ಸಾಲದ ಇತಿಹಾಸ ಉತ್ತಮಪಡಿಸಿಕೊಳ್ಳಲು ಕ್ರೆಡಿಟ್ ಕಾರ್ಡ್ ಬಳಸಿ

ಸಾಲ ನೀಡುವವರು ಯಾವಾಗಲೂ ಗಮನಿಸುವುದು ಸಾಲ ಪಡೆಯುವವರು ಈ ಹಿಂದೆ ಪಡೆದ ಸಾಲವನ್ನು ಹೇಗೆ ಮತ್ತು ಎಷ್ಟು ಸರಿಯಾಗಿ ಮರುಪಾವತಿ ಮಾಡಿದ್ದಾರೆ ಎಂಬ ಇತಿಹಾಸವನ್ನು. ಆ ಮೂಲಕ ಅರ್ಜಿದಾರರ ಮರುಪಾವತಿ ನಡವಳಿಕೆ ಮತ್ತು ಇರುವ ಅಪಾಯವನ್ನು ಮೌಲ್ಯಮಾಪನ ಮಾಡುತ್ತಾರೆ. ಹಾಗಂತ ಸಾಲ ಪಡೆದುಕೊಂಡೇ ಕ್ರೆಡಿಟ್ ಸ್ಕೋರ್ ಉತ್ತಮಪಡಿಸಿಕೊಳ್ಳಿ ಎಂಬ ಸಲಹೆ ನೀಡಲ್ಲ. ಏಕೆಂದರೆ, ಅದರ ಜತೆಗೆ ಬಡ್ಡಿ ಮತ್ತು ಇತರ ವೆಚ್ಚ ಸೇರಿ ಹೊರೆಯಾಗುತ್ತದೆ.

ಆದ್ದರಿಂದ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಆರ್ಥಿಕ ಭಾರ ಆಗದಂತೆ ಮಾಡಿಕೊಳ್ಳಿ. ಸಮಯಕ್ಕೆ ಸರಿಯಾಗಿ ಪಾವತಿಸಿದರೆ ಕ್ರೆಡಿಟ್ ಕಾರ್ಡ್ ಮೊತ್ತಕ್ಕೆ ಬಡ್ಡಿ ಬೀಳಲ. ಇಎಂಐ ಅಥವಾ ಬಡ್ಡಿ ಸಹಿತ ಸಾಲ ಆಯ್ಕೆ ಮಾಡಿಕೊಳ್ಳಬೇಡಿ. ಶೂನ್ಯ ಬಡ್ಡಿ ಸಾಲ, ರಿವಾರ್ಡ್ ಪಾಯಿಂಟ್, ಕ್ಯಾಶ್ ಬ್ಯಾಕ್, ರಿಯಾಯಿತಿ ಮುಂತಾದವು ಕ್ರೆಡಿಟ್ ಕಾರ್ಡ್ ಗಳಲ್ಲಿ ದೊರೆಯುತ್ತವೆ. ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ.

ಸಾಮಾನ್ಯ ಕ್ರೆಡಿಟ್ ಕಾರ್ಡ್ ಪಡೆಯಲು ಸಾಧ್ಯವಿಲ್ಲದವರು ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಪಡೆಯಿರಿ. ಫಿಕ್ಸೆಡ್ ಡೆಪಾಸಿಟ್ ಅನ್ನು ಬ್ಯಾಂಕ್ ನಲ್ಲಿ ಇಟ್ಟಿದ್ದಲ್ಲಿ ಆ ಮೊತ್ತದ ಎಂಬತ್ತೈದರಷ್ಟು ಮಿತಿಗೆ ಕ್ರೆಡಿಟ್ ಕಾರ್ಡ್ ವಿತರಿಸಲಾಗುತ್ತದೆ.

 

ನಿಗದಿತ ಸಮಯಕ್ಕೆ ಬಿಲ್ ಪಾವತಿಸಿ

ನಿಗದಿತ ಸಮಯಕ್ಕೆ ಬಿಲ್ ಪಾವತಿಸಿ

ಕ್ರೆಡಿಟ್ ಕಾರ್ಡ್ ವಿತರಿಸುವ ಕಂಪೆನಿಗಳು ಬಳಕೆದಾರರ ವ್ಯವಹಾರದ ಮಾಹಿತಿಯನ್ನು ಕ್ರೆಡಿಟ್ ಸ್ಕೋರ್ ಲೆಕ್ಕ ಹಾಕುವ/ ಅಪ್ ಡೇಟ್ ಮಾಡುವ ಬ್ಯುರೋಗಳಿಗೆ ಕಳುಹಿಸುತ್ತವೆ. ಬಿಲ್ ಪಾವತಿಸದಿದ್ದಲ್ಲಿ ಅಥವಾ ತಡವಾಗಿದ್ದಲ್ಲಿ ಅದರಿಂದ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಸಂಪೂರ್ಣ ಮೊತ್ತವನ್ನು ಸರಿಯಾದ ಸಮಯಕ್ಕೆ ಪಾವತಿಸಿದ್ದರೆ ಅದು ಸಕಾರಾತ್ಮಕವಾಗಿ ಪರಿಣಮಿಸುತ್ತದೆ. ಕ್ರೆಡಿಟ್ ಸ್ಕೋರ್ ಹೆಚ್ಚುತ್ತದೆ. ಆದ್ದರಿಂದ ನಿಗದಿತ ಅವಧಿಯಲ್ಲಿ ನಿಮ್ಮಿಂದ ಪಾವತಿಸಲು ಸಾಧ್ಯವಿರುವ ಮೊತ್ತಕ್ಕೆ ಮಾತ್ರ ಕ್ರೆಡಿಟ್ ಕಾರ್ಡ್ ಬಳಸಿ. ಒಂದು ವೇಳೆ ಮೊತ್ತ ಜಾಸ್ತಿ ಎನಿಸಿದರೆ, ಪೂರ್ತಿ ಹಣ ಪಾವತಿಸಲು ಆಗದಿದ್ದಲ್ಲಿ ಇಎಂಐಗೆ ಪರಿವರ್ತಿಸಿ, ನಿಗದಿತ ದಿನಾಂಕದಂದು ಹಣ ಪಾವತಿಸಿ.

ಕ್ರೆಡಿಟ್ ಕಾರ್ಡ್ ನ ಒಟ್ಟು ಮಿತಿಯಲ್ಲಿ 30% ಮಾತ್ರ ಬಳಸಿ

ಕ್ರೆಡಿಟ್ ಕಾರ್ಡ್ ನ ಒಟ್ಟು ಮಿತಿಯಲ್ಲಿ 30% ಮಾತ್ರ ಬಳಸಿ

ಸಾಲ ನೀಡುವವರು ಗಮನಿಸುವ ಮತ್ತೊಂದು ಮುಖ್ಯ ಅಂಶ ಇದು. ಕ್ರೆಡಿಟ್ ಕಾರ್ಡ್ ಬಳಕೆ ಒಟ್ಟು ಮೊತ್ತದೆ 30% ಒಳಗೆ ಇರಬೇಕು. ಒಂದು ವೇಳೆ ಅರ್ಜಿದಾರರು ಹೆಚ್ಚು ಪ್ರಮಾಣದಲ್ಲಿ ಕ್ರೆಡಿಟ್ ಕಾರ್ಡ್ ಬಳಸಿದ್ದರೆ ಅಂಥವರನ್ನು ಸಾಲ ಪಡೆಯುವುದಕ್ಕೆ ಹಪಹಪಿಸುವವರು, ಆದ್ದರಿಂದ ಸಾಲ ನೀಡುವುದು ಅಪಾಯ ಎಂದು ಭಾವಿಸುತ್ತಾರೆ. ಯಾರು ಕ್ರೆಡಿಟ್ ಕಾರ್ಡ್ ಮಿತಿಯ 30%ಗೂ ಹೆಚ್ಚು ಬಳಸುತ್ತಾರೋ ಅಂಥವರ ಕ್ರೆಡಿಟ್ ಸ್ಕೋರ್ ಅನ್ನು ಕ್ರೆಡಿಟ್ ಬ್ಯುರೋಗಳು ಕಡಿಮೆ ಮಾಡುತ್ತವೆ. ಆ‌ದ್ದರಿಂದ ಖರ್ಚು ಹೆಚ್ಚಿದ್ದರೆ ಈಗಿನ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುವಂತೆ ಮನವಿ ಸಲ್ಲಿಸಿ. ಅದು ಮಾನ್ಯ ಆಗದಿದ್ದಲ್ಲಿ ಹೆಚ್ಚುವರಿ ಕ್ರೆಡಿಟ್ ಕಾರ್ಡ್ ಅಪ್ಲೈ ಮಾಡಿ.

ಕಡಿಮೆ ಅವಧಿಯಲ್ಲಿ ಹಲವು ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಹಾಕಬೇಡಿ

ಕಡಿಮೆ ಅವಧಿಯಲ್ಲಿ ಹಲವು ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಹಾಕಬೇಡಿ

ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಹಾಕಿದರೆ ಕ್ರೆಡಿಟ್ ಸ್ಕೋರ್ ಕೆಲವು ಪಾಯಿಂಟ್ ಗಳು ಕಡಿಮೆಯಾಗುತ್ತವೆ. ಯಾವಾಗೆಲ್ಲ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಹಾಕುತ್ತಾರೋ ಆಗ ಕಾರ್ಡ್ ವಿತರಿಸುವವರು ಸಾಲ ವಾಪಸ್ ನೀಡುವ ಸಾಮರ್ಥ್ಯವನ್ನು ಪರಿಶೀಲಿಸುತ್ತಾರೆ. ಇಂಥ ವಿಚಾರಣೆಗಳನ್ನು ಹಾರ್ಡ್ ಎನ್ ಕ್ವೈರಿ ಎಂದು ಪರಿಗಣಿಸಿ, ಇದರಿಂದ ಕೆಲವು ಪಾಯಿಂಟ್ ಗಳು ಕಡಿಮೆ ಆಗುತ್ತವೆ. ಅದರ ಬದಲಿಗೆ ಆನ್ ಲೈನ್ ಫೈನಾನ್ಷಿಯಲ್ ಮಾರ್ಕೆಟ್ ಪ್ಲೇಸ್ ನಲ್ಲಿ ವಿವಿಧ ಕ್ರೆಡಿಟ್ ಕಾರ್ಡ್ ಆಫರ್ ಪರಿಶೀಲಿಸಿ. ಆಗ ಅವರೇ ಕ್ರೆಡಿಟ್ ಸ್ಕೋರ್ ಪಡೆಯುತ್ತಾರೆ. ಅಂಥ ಮನವಿಯನ್ನು ಸಾಫ್ಟ್ ಎನ್ ಕ್ವೈರಿ ಎಂದು ಪರಿಗಣಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಆಗಲ್ಲ.

ಹಳೆ ಕ್ರೆಡಿಟ್ ಕಾರ್ಡ್ ಹಿಂತಿರುಗಿಸುವಾಗ ಆಲೋಚಿಸಿ

ಹಳೆ ಕ್ರೆಡಿಟ್ ಕಾರ್ಡ್ ಹಿಂತಿರುಗಿಸುವಾಗ ಆಲೋಚಿಸಿ

ಹಳೇ ಕ್ರೆಡಿಟ್ ಕಾರ್ಡ್ ಗಳು ಮತ್ತು ಸಾಲಗಳು ಸೇರಿ ಸಾಲ ಪಡೆಯುತ್ತಿರುವ ಸರಾಸರಿ ಅವಧಿಯನ್ನು ಕ್ರೆಡಿಟ್ ಬ್ಯುರೋಗಳು ಗಮನಿಸುತ್ತವೆ. ಆದ್ದರಿಂದ ಹಳೇ ಕ್ರೆಡಿಟ್ ಕಾರ್ಡ್ ಅನ್ನು ಕ್ಲೋಸ್ ಮಾಡುವುದರಿಂದ ಸಾಲ ಪಡೆಯುತ್ತಿರುವ ಸರಾಸರಿ ಅವಧಿ ಕಡಿಮೆಯಾಗುತ್ತದೆ. ಇದರಿಂದ ಕ್ರೆಡಿಟ್ ಕಾರ್ಡ್ ಬಳಕೆ ಮಿತಿ ಮೂವತ್ತು ಪರ್ಸೆಂಟ್ ದಾಟುವ ಸಾಧ್ಯತೆ ಇದೆ. ಇದರಿಂದ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಆದ್ದರಿಂದ ಕ್ರೆಡಿಟ್ ಕಾರ್ಡ್ ಹಿಂತಿರುಗಿಸುವುದರ ಪರಿಣಾಮ ಕ್ರೆಡಿಟ್ ಸ್ಕೋರ್ ಮೇಲೆ ಆಗಬಾರದು ಅಂದರೆ ಕ್ರೆಡಿಟ್ ಕಾರ್ಡ್ ವಿತರಿಸಿರುವ ಇತರರಿಗೆ ಮಿತಿ ಹೆಚ್ಚಿಸುವಂತೆ ಕೇಳಿಕೊಳ್ಳಿ.

English summary

How Credit Card Helps To Improve Your Credit Score?

Here is the suggestion how to improve credit score through credit card effective utilisation.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X