For Quick Alerts
ALLOW NOTIFICATIONS  
For Daily Alerts

No-cost EMI : ಶುಲ್ಕವಿಲ್ಲದ ಇಎಂಐ: ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಹೇಗೆ ಲೆಕ್ಕಾಚಾರ?

|

ಈ ಡಿಜಿಟಲ್ ದುನಿಯಾದಲ್ಲಿ ನಾವು ಖರೀದಿ, ಮಾರಾಟವನ್ನು ಆನ್‌ಲೈನ್‌ ಮೂಲಕವೇ ಮಾಡಲಾಗುತ್ತದೆ. ನಮ್ಮ ಕೈಯಲ್ಲಿ ಅಥವಾ ಬ್ಯಾಂಕ್‌ ಖಾತೆಯಲ್ಲಿ ಹಣವಿಲ್ಲದಿದ್ದರೆ ನಾವು ಇಎಂಐ ಮೂಲಕ ಖರೀದಿ ಮಾಡುವ ಆಯ್ಕೆ ಇದೆ. ನಾವು ಯಾವುದೇ ಅಧಿಕ ಮೊತ್ತವನ್ನು ಪಾವತಿ ಮಾಡದೆಯೇ ಇಎಂಐ ಮೂಲಕ ಯಾವುದೇ ವಸ್ತುಗಳನ್ನು ಖರೀದಿ ಮಾಡುವ ಆಯ್ಕೆಯನ್ನು ನಮಗೆ ಅಮೆಜಾನ್ ಹಾಗೂ ಫ್ಲಿಫ್‌ಕಾರ್ಟ್ ನೀಡುತ್ತದೆ.

 

ನೋ-ಕಾಸ್ಟ್ ಇಎಂಐನಲ್ಲಿ (No-cost EMI) ನೀವು ಸುಮಾರು 30 ಸಾವಿರ ರೂಪಾಯಿ ಪಾವತಿ ಮಾಡಿ ಯಾವುದೇ ವಸ್ತುವನ್ನು ಖರೀದಿ ಮಾಡಬೇಕಾದರೆ, ನೀವು ಮಾಸಿಕ 5 ಸಾವಿರ ರೂಪಾಯಿಯನ್ನು ಆರು ತಿಂಗಳ ಅವಧಿ ಪಾವತಿಸಿ ಖರೀದಿಸಬಹುದು. ಇದುವೇ ಇಎಂಐ ವ್ಯವಸ್ಥೆಯಾಗಿದೆ. ಆದರೆ ನೀವು ಇದಕ್ಕಾಗಿ ಅಧಿಕ ಪಾವತಿ ಮಾಡಬೇಕಾಗಿಲ್ಲ.ಆರು ತಿಂಗಳ ಅವಧಿಯಲ್ಲಿ ಐದು ಸಾವಿರ ರೂಪಾಯಿಯಂತೆ ಒಟ್ಟು 30 ಸಾವಿರ ರೂಪಾಯಿ ಮಾತ್ರ ಪಾವತಿಸುತ್ತೀರಿ. ಇದುವೇ ನೋ-ಕಾಸ್ಟ್ ಇಎಂಐ ವ್ಯವಸ್ಥೆಯಾಗಿದೆ.

ತ್ವರಿತ ಸಾಲ ಪಡೆಯಲು ಈ ಆಪ್‌ಗಳು ಬೆಸ್ಟ್ ನೋಡಿತ್ವರಿತ ಸಾಲ ಪಡೆಯಲು ಈ ಆಪ್‌ಗಳು ಬೆಸ್ಟ್ ನೋಡಿ

ಆದರೆ ಆರ್‌ಬಿಐ ಯಾವುದೇ ಬ್ಯಾಂಕ್‌ಗಳು ಶುಲ್ಕವಿಲ್ಲದೆ ಅಥವಾ ಬಡ್ಡಿದರವಿಲ್ಲದ ಇಎಂಐ ಅನ್ನು ನೀಡುವುದನ್ನು ನಿಷೇಧ ಮಾಡುತ್ತದೆ. ಬ್ಯಾಂಕ್‌ಗಳು ಬಡ್ಡಿದರವಿಲ್ಲದೆ ಇಎಂಐ ಅನ್ನು ನೀಡಲ್ಲ, ಹಾಗಿರುವಾಗ ರಿಟೇಲರ್‌ಗಳು ಈ ಯೋಜನೆಯನ್ನು ನಿಮಗೆ ಹೇಗೆ ನೀಡುತ್ತಾರೆ. ಇದರ ಲೆಕ್ಕಾಚಾರ ಹೇಗೆ? ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ನೋ-ಕಾಸ್ಟ್ ಇಎಂಐ ಹೇಗೆ ಕಾರ್ಯನಿರ್ವಹಿಸುತ್ತದೆ?

ನೋ-ಕಾಸ್ಟ್ ಇಎಂಐ ಹೇಗೆ ಕಾರ್ಯನಿರ್ವಹಿಸುತ್ತದೆ?

ಅಮೆಜಾನ್‌: ಬ್ಯಾಂಕ್ ಇಎಂಐ ಮೇಲೆ ಬಡ್ಡಿದರವನ್ನು ವಿಧಿಸುತ್ತದೆ. ಆದರೆ ಈ ಬಡ್ಡಿದರವನ್ನೇ ಅಮೆಜಾನ್‌ನಲ್ಲಿ ರಿಯಾಯಿತಿ ಎಂದು ಪರಿಗಣಿಸಲಾಗುತ್ತದೆ. ಈ ಮೂಲಕ ನಿಮಗೆ ಯಾವುದೇ ಶುಲ್ಕವಿಲ್ಲದ ಇಎಂಐ ಅನ್ನು ನೀಡಲಾಗುತ್ತದೆ. ಈ ರಿಯಾಯಿತಿಯು ಜಿಎಸ್‌ಟಿಯನ್ನು ಹೊರತುಪಡಿಸಿರುತ್ತದೆ.
ಫ್ಲಿಫ್‌ಕಾರ್ಟ್: ಫ್ಲಿಫ್‌ಕಾರ್ಟ್‌ನಲ್ಲಿಯೂ ಇದೆ ರೀತಿಯಾಗಿ ಇಎಂಐ ಅನ್ನು ನೀಡಲಾಗುತ್ತದೆ. ಉದಾಹರಣೆಯನ್ನು ಈ ಕೆಳಗೆ ನೀಡಿದ್ದೇವೆ.

30 ಸಾವಿರ ರೂಪಾಯಿಯ ವಸ್ತುವನ್ನು ನೀವು ಖರೀದಿ ಮಾಡುತ್ತೀರಿ ಅಂದುಕೊಳ್ಳಿ. ನೀವು ಆರು ತಿಂಗಳ ಇಎಂಐ ಅನ್ನು ಆಯ್ಕೆ ಮಾಡಿಕೊಂಡರೆ ಮಾಸಿಕ 5 ಸಾವಿರ ರೂಪಾಯಿಯಂತೆ ಪಾವತಿ ಮಾಡಬೇಕಾಗುತ್ತದೆ. ಬ್ಯಾಂಕ್ ಆರು ತಿಂಗಳ ಇಎಂಐಗೆ ಶೇಕಡ 15ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಅಂದರೆ ಮಾಸಿಕ ಲೆಕ್ಕಾಚಾರವನ್ನು ಮಾಡಲು ನೀವು PV formula ಬಳಕೆ ಮಾಡಬೇಕಾಗುತ್ತದೆ. ಅಂದರೆ 28,730 ರೂಪಾಯಿ ಆಗುತ್ತದೆ. ರೂಪಾಯಿ 30,000 - ರೂ 28, 730 = ರೂಪಾಯಿ 1,270 ಆಗುತ್ತದೆ. 28,730 ರೂಪಾಯಿ ಸಾಲಕ್ಕೆ ಶೇಕಡ 15ರಷ್ಟು ಬಡ್ಡಿದರವನ್ನು ಸೇರಿಸಿದಾಗ ಆರು ತಿಂಗಳು ನೀವು 5 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ. ನೀವು ಬಡ್ಡಿದರ ಮೇಲಿನ ಜಿಎಸ್‌ಟಿಯನ್ನು ಪಾವತಿ ಮಾಡಬೇಕಾಗುತ್ತದೆ. ಇದು ಪ್ರತ್ಯೇಕ ಮೊತ್ತವಾಗಿರುತ್ತದೆ.

 

 ಮುಂಗಡ ರಿಯಾಯಿತಿ ನೀಡಲಾಗುತ್ತದೆಯೇ?
 

ಮುಂಗಡ ರಿಯಾಯಿತಿ ನೀಡಲಾಗುತ್ತದೆಯೇ?

ನಾವು ಈ ಮೇಲೆ ಉಲ್ಲೇಖ ಮಾಡಿದಂತೆ ಬ್ಯಾಂಕ್‌ಗಳು ಬಡ್ಡಿದರವಿಲ್ಲದೆ ಸಾಲವನ್ನು ನೀಡಲು ಸಾಧ್ಯವಿಲ್ಲ. ಆದರೆ ರಿಟೇಲರ್‌ಗಳು ನೀಡುವ ಈ ಆಫರ್‌ನಲ್ಲಿ ನೀವು ಒಂದು ತಿಂಗಳ ಇಎಂಐ ಅನ್ನು ಕೂಡಾ ಮಿಸ್ ಮಾಡಿದರೂ ಭಾರೀ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ನೆನಪಿರಲಿ. ಆದರೆ ನಾವು 1,01,999 ರೂಪಾಯಿಯ ಆರು ತಿಂಗಳ ಇಎಂಐನ ಲೆಕ್ಕಾಚಾರವನ್ನು ಮಾಡುವಾಗವೂ ಶೇಕಡ 15ರಷ್ಟು ಬಡ್ಡಿದರವಿರಿದೆ. ನಾವು ಇದರಲ್ಲೂ ಪಿವಿ ಲೆಕ್ಕಾಚಾರ ಮಾಡಬೇಕಾಗುತ್ತದೆ. ಅಂದರೆ ನೀವು ಸಾಲದ ಕಾಲ್ಕುಲೇಟರ್‌ ಅನ್ನು ಬಳಸಬಹುದು. Y = PV(15%/12,6,17000,0,0) = Rs 97,682. ರಿಯಾಯಿತಿ 1,01,999 - 97, 682 = Rs 4,318 ಆಗುತ್ತದೆ. ಇನ್ನು ಅವಧಿಯ ಆದಾರದಲ್ಲಿ ಈ ಮುಂಗಡ ರಿಯಾಯಿತಿ ಇರುತ್ತದೆ. ನಮ್ಮ ಇಎಂಐ ಅವಧಿ ಅಧಿಕವಾದಾಗ ವ್ಯಾಪಾರಿಗಳಿಗೆ ತಗುಲುವ ವೆಚ್ಚವು ಅಧಿಕವಾಗುತ್ತದೆ. ಅದಕ್ಕಾಗಿ ವ್ಯಾಪಾರಿಗಳು ಅಧಿಕ ಅವಧಿಯ ಇಎಂಐ ಅವಕಾಶವನ್ನು ನೀಡುವುದಿಲ್ಲ. ಸಾಮಾನ್ಯವಾಗಿ ಇಎಂಐ ಅವಧಿ 3-6 ತಿಂಗಳು ಆಗಿರುತ್ತದೆ.

 ನೋ ಕಾಸ್ಟ್ ಇಎಂಐ ನಿಜವಾಗಿಯೂ ಶುಲ್ಕವಿಲ್ಲದ್ದೆ?

ನೋ ಕಾಸ್ಟ್ ಇಎಂಐ ನಿಜವಾಗಿಯೂ ಶುಲ್ಕವಿಲ್ಲದ್ದೆ?

ಇಎಂಐ ಬಡ್ಡಿದರದ ಮೇಲೆ ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ. ಇದು ನಮ್ಮ ಪಾವತಿ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ.

ವಸ್ತುವಿನ ಮೊತ್ತ: 30 ಸಾವಿರ ರೂಪಾಯಿ
ಇಎಂಐ ಅವಧಿ: 6
ಬಡ್ಡಿದರ: ಶೇಕಡ 15
ನೋ ಕಾಸ್ಟ್ ಇಎಂಐ: 5 ಸಾವಿರ
ನಿವ್ವಳ ಸಾಲ (ಕ್ರೆಡಿಟ್ ಕಾರ್ಡ್‌ನಲ್ಲಿ ಮಾಡಲಾಗುವ ಕಡಿತ): 28,730 ರೂಪಾಯಿ
ರಿಯಾಯಿತಿ: 1,270 ರೂಪಾಯಿ

ಸಾಲದ ಜಿಎಸ್‌ಟಿ ಲೆಕ್ಕಾಚಾರ ನೋಡಿ
1ನೇ ತಿಂಗಳು: 28,730 ರೂಪಾಯಿ, 5 ಸಾವಿರ ಇಎಂಐ, 359 ಬಡ್ಡಿದರ, ಸಾಲ ಪಾವತಿ 4641 ರೂಪಾಯಿ, ಬಾಕಿ ಮೊತ್ತ 24089, ಜಿಎಸ್‌ಟಿ 65 ರೂಪಾಯಿ, ಒಟ್ಟು ಮಾಸಿಕ ಪಾವತಿ 5065 ರೂಪಾಯಿ
2ನೇ ತಿಂಗಳು: 24,089 ರೂಪಾಯಿ, 5 ಸಾವಿರ ಇಎಂಐ, 301 ಬಡ್ಡಿದರ, ಸಾಲ ಪಾವತಿ 4699 ರೂಪಾಯಿ, ಬಾಕಿ ಮೊತ್ತ 19390, ಜಿಎಸ್‌ಟಿ 54 ರೂಪಾಯಿ, ಒಟ್ಟು ಮಾಸಿಕ ಪಾವತಿ 5054 ರೂಪಾಯಿ
3ನೇ ತಿಂಗಳು: 19,390 ರೂಪಾಯಿ, 5 ಸಾವಿರ ಇಎಂಐ, 242 ಬಡ್ಡಿದರ, ಸಾಲ ಪಾವತಿ 4758 ರೂಪಾಯಿ, ಬಾಕಿ ಮೊತ್ತ 14633, ಜಿಎಸ್‌ಟಿ 44 ರೂಪಾಯಿ, ಒಟ್ಟು ಮಾಸಿಕ ಪಾವತಿ 5044 ರೂಪಾಯಿ
4ನೇ ತಿಂಗಳು: 14,633 ರೂಪಾಯಿ, 5 ಸಾವಿರ ಇಎಂಐ, 183 ಬಡ್ಡಿದರ, ಸಾಲ ಪಾವತಿ 4817 ರೂಪಾಯಿ, ಬಾಕಿ ಮೊತ್ತ 9816, ಜಿಎಸ್‌ಟಿ 33 ರೂಪಾಯಿ, ಒಟ್ಟು ಮಾಸಿಕ ಪಾವತಿ 5033 ರೂಪಾಯಿ
5ನೇ ತಿಂಗಳು: 9,816 ರೂಪಾಯಿ, 5 ಸಾವಿರ ಇಎಂಐ, 123 ಬಡ್ಡಿದರ, ಸಾಲ ಪಾವತಿ 4877 ರೂಪಾಯಿ, ಬಾಕಿ ಮೊತ್ತ 4938, ಜಿಎಸ್‌ಟಿ 22 ರೂಪಾಯಿ, ಒಟ್ಟು ಮಾಸಿಕ ಪಾವತಿ 5022 ರೂಪಾಯಿ
6ನೇ ತಿಂಗಳು: 4,938 ರೂಪಾಯಿ, 5 ಸಾವಿರ ಇಎಂಐ, 62 ಬಡ್ಡಿದರ, ಸಾಲ ಪಾವತಿ 4938 ರೂಪಾಯಿ, ಬಾಕಿ ಮೊತ್ತ 0, ಜಿಎಸ್‌ಟಿ 11 ರೂಪಾಯಿ, ಒಟ್ಟು ಮಾಸಿಕ ಪಾವತಿ 5011 ರೂಪಾಯಿ

ಈ ಲೆಕ್ಕಾಚಾರವನ್ನು ನೀವು ನೋಡಿದಾಗ ಪ್ರತಿ ತಿಂಗಳು ಜಿಎಸ್‌ಟಿ ನೆಪದಲ್ಲಿ ಅಧಿಕ ಪಾವತಿ ಮಾಡಬೇಕಾಗುತ್ತದೆ. ನೀವು ಒಟ್ಟಾಗಿ ಸುಮಾರು 229 ರೂಪಾಯಿ ಅಧಿಕ ಪಾವತಿ ಮಾಡಬೇಕಾಗುತ್ತದೆ. ಅಂದರೆ 30 ಸಾವಿರ ರೂಪಾಯಿ ಬದಲಾಗಿ 30,229 ರೂಪಾಯಿ ಪಾವತಿಸಬೇಕಾಗುತ್ತದೆ.

 

 ಪ್ರಕ್ರಿಯೆ ಶುಲ್ಕವನ್ನು ಮರೆಯದಿರಿ

ಪ್ರಕ್ರಿಯೆ ಶುಲ್ಕವನ್ನು ಮರೆಯದಿರಿ

ಕೆಲವು ಬ್ಯಾಂಕ್‌ಗಳು ಇಎಂಐ ವಹಿವಾಟಿನ ಮೇಲೆ ಪ್ರಕ್ರಿಯೆ ಶುಲ್ಕವನ್ನು ವಿಧಿಸುತ್ತದೆ. ಯಾವುದೇ ಶುಲ್ಕವಿಲ್ಲದ ಇಎಂಐ ಮೇಲೆಯೂ ಪ್ರಕ್ರಿಯೆ ಶುಲ್ಕವನ್ನು ವಿಧಿಸಲಾಗುತ್ತದೆ. ಬೆರೆ ಬೇರೆ ಬ್ಯಾಂಕ್‌ಗಳಲ್ಲಿ ಈ ಪ್ರಕ್ರಿಯೆ ಶುಲ್ಕ ಬೇರೆ ಬೇರೆಯಾಗಿರುತ್ತದೆ. ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ರೂಪಾಯಿ 199+ ಜಿಎಸ್‌ಟಿಯನ್ನು ವಿಧಿಸುತ್ತದೆ. ನಿಮ್ಮ ಬ್ಯಾಂಕ್‌ನಲ್ಲಿ ಬೇರೆಯೇ ಪ್ರಕ್ರಿಯೆ ಶುಲ್ಕ ಇರಬಹುದು. ಅದನ್ನು ಚೆಕ್ ಮಾಡಿಕೊಳ್ಳಿ.

 ಕ್ಯಾಷ್‌ಬ್ಯಾಕ್, ರಿವಾರ್ಡ್ ವಿಚಾರವೇನು?

ಕ್ಯಾಷ್‌ಬ್ಯಾಕ್, ರಿವಾರ್ಡ್ ವಿಚಾರವೇನು?

ಐಸಿಐಸಿಐ ಅಮೆಜಾನ್‌ಪೇ ಕ್ರೆಡಿಟ್ ಕಾರ್ಡ್‌ ಪ್ರೈಮ್ ಬಳಕೆದಾರರಿಗೆ ಅಮೆಜಾನ್‌ನಲ್ಲಿ ಶೇಕಡ 5ರಷ್ಟು ಕ್ಯಾಷ್‌ಬ್ಯಾಂಕ್ ಅನ್ನು ನೀಡುತ್ತದೆ. ಪ್ರೈಮ್‌ಯೇತರ ಗ್ರಾಹಕರಿಗೆ ಶೇಕಡ 3ರಷ್ಟು ಕ್ಯಾಷ್‌ಬ್ಯಾಕ್ ನೀಡಲಾಗುತ್ತದೆ. ಆದರೆ ನೀವು ಇಎಂಐ ಮೂಲಕ ಖರೀದಿ ಮಾಡುವುದಾದರೆ ಈ ಆಫರ್ ನಿಮಗೆ ಲಭ್ಯವಾಗುವುದಿಲ್ಲ. ಫ್ಲಿಫ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿಯೂ ಇದೇ ರೀತಿ ಇರಲಿದೆ.

 ನೋ ಕಾಸ್ಟ್ ಇಎಂಐ ಉತ್ತಮವೇ?

ನೋ ಕಾಸ್ಟ್ ಇಎಂಐ ಉತ್ತಮವೇ?

ನೀವು ಅಧಿಕ ವೆಚ್ಚವನ್ನು ಪಾವತಿ ಮಾಡದೆಯೇ ಯಾವುದೇ ವಸ್ತುವನ್ನು ಇಎಂಐ ಮೂಲಕ ಖರೀದಿ ಮಾಡಬಹುದು. ಆ ಲೆಕ್ಕಾಚಾರದಲ್ಲಿ ನೋಡಿದಾಗ ಇದು ಉತ್ತಮ ಆಯ್ಕೆ. ಆದರೆ ನೀವು ಕ್ಯಾಷ್‌ಬ್ಯಾಕ್ ಎಷ್ಟು ಲಭ್ಯವಾಗಲಿದೆ, ರಿವಾರ್ಡ್ ಎಷ್ಟು ಲಭ್ಯವಾಗಲಿದೆ ಎಂಬುವುದನ್ನು ಲೆಕ್ಕಾಚಾರ ಹಾಕಿಕೊಂಡು ನೋ ಕಾಸ್ಟ್ ಇಎಂಐ ಉತ್ತಮವೇ, ಕ್ರೆಡಿಟ್ ಕಾರ್ಡ್ ಉತ್ತಮವೇ ನೋಡಿ.

English summary

How do No-cost EMI Schemes from Amazon and Flipkart Work, Details in Kannada

On the payment page, you can pay upfront or you can opt for No-cost EMI from your bank. How do No-cost EMI Schemes from Amazon and Flipkart Work, Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X