For Quick Alerts
ALLOW NOTIFICATIONS  
For Daily Alerts

ವಿದ್ಯಾರ್ಥಿಗಳೇ ಖರ್ಚು ಮಿತಿ ಮೀರುತ್ತಿದೆಯೇ?, ಇಲ್ಲಿದೆ ನಿಮಗೆ ಅಗತ್ಯ ಸಲಹೆ

|

ಭಾರತದಲ್ಲಿ ಅನೇಕ ಮಂದಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಆಗುವ ಖರ್ಚು ವೆಚ್ಚವನ್ನು ಸರಿದೂಗಿಸಲು ಹೆಣಗಾಡುತ್ತಿರುತ್ತಾರೆ. ಹೆಚ್ಚಿನ ಮಂದಿಗೆ ತಮ್ಮ ಪೋಷಕರು ಪಾಕೆಟ್‌ ಮನಿ ನೀಡುತ್ತಾರೆ. ಆದರೆ ಇನ್ನೂ ಕೆಲವರಿಗೆ ಅದ್ಯಾವುದೂ ಇರಲ್ಲ. ತಮ್ಮ ವಿದ್ಯಾರ್ಥಿ ಜೀವನ ಸಾಗಿಸಲು ತಗುಲುವ ವೆಚ್ಚಕ್ಕೆ ಸ್ಟುಡೆಂಟ್‌ ಲೋನ್‌ ಮಾಡಿಕೊಂಡು ಬಳಿಕ ಪಾರ್ಟ್ ಟೈಮ್‌ ಕೆಲಸಕ್ಕೆ ಹೋಗುತ್ತಾರೆ. ಇನ್ನು ಕೆಲವು ವಿದ್ಯಾರ್ಥಿಗಳು ಮನೆಯಲ್ಲಿ ನೀಡುವ ಹಣ ಎಲ್ಲಿಗೂ ಸಾಲುವುದಿಲ್ಲ ಎಂಬಷ್ಟು ಖರ್ಚು ಮಾಡುತ್ತಾರೆ. ಹಾಗಾದರೆ ನಿಮ್ಮ ಈ ಖರ್ಚನ್ನು ಕಡಿಮೆ ಮಾಡುವುದು ಹೇಗೆ ಅಥವಾ ನಿಭಾಯಿಸುವುದು ಹೇಗೆ, ಇಲ್ಲಿದೆ ಆರ್ಥಿಕ ಸಲಹೆ ಮುಂದೆ ಓದಿ.

 

ವಿದ್ಯಾರ್ಥಿಗಳು ನಿಮ್ಮ ಈ ವರ್ಷದ ಹಣಕಾಸು ಜೀವನವನ್ನು ಸರಳಗೊಳಿಸಲು ಏನು ಮಾಡುವುದು ಎಂಬುವುದನ್ನು ನೀವಾಗಿಯೇ ಆಲೋಚನೆಯನ್ನು ಕೂಡಾ ಮಾಡಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಬಹಳ ಮುಖ್ಯವಾದ ಜೀವನ ಕಾಲೇಜಿನದ್ದು, ಈ ಸಂದರ್ಭದಲ್ಲಿ ತಮ್ಮ ಸ್ನೇಹಿತರೊಂದಿಗೆ ಸೇರಿ ವಿದ್ಯಾರ್ಥಿಗಳು ಅಧಿಕವಾಗಿ ಖರ್ಚು ಮಾಡುವ ಅದೆಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇದೆ.

ಹೂಡಿಕೆ ಮಾಡಲು ಮುಂದಾಗಿದ್ದೀರಾ?, ಮೊದಲು ಇದನ್ನು ತಪ್ಪದೇ ಓದಿಹೂಡಿಕೆ ಮಾಡಲು ಮುಂದಾಗಿದ್ದೀರಾ?, ಮೊದಲು ಇದನ್ನು ತಪ್ಪದೇ ಓದಿ

ನೀವು ವಿದ್ಯಾರ್ಥಿ ಜೀವನದಲ್ಲಿ ನಿಮ್ಮ ಖರ್ಚು ವೆಚ್ಚವನ್ನು ಸರಿದೂಗಿಸಲು ಸಾಧ್ಯವಾದರೆ ನೀವು ನಿಮ್ಮ ಮುಂದಿನ ಜೀವನದಲ್ಲಿಯೂ ಖರ್ಚು, ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗುತ್ತದೆ ಎಂಬ ಮಾತುಗಳು ಇದೆ. ನೀವು ಈ ವಿದ್ಯಾರ್ಥಿ ಜೀವನದಲ್ಲಿ ಖರ್ಚನ್ನು ಹೇಗೆ ಕಡಿಮೆ ಮಾಡಬಹುದು, ನೀವು ಯಾವೆಲ್ಲಾ ವಿಚಾರದಲ್ಲಿ ಎಚ್ಚರವಾಗಿರಬೇಕು, ಇಲ್ಲಿದೆ ನಿಮಗೆ ಸಲಹೆ ಮುಂದೆ ಓದಿ.

 ವಿದ್ಯಾರ್ಥಿಗಳು ಖರ್ಚಿನ ಬಗ್ಗೆ ಏಕೆ ಇಷ್ಟು ಕಾಳಜಿ ವಹಿಸಿಕೊಳ್ಳಬೇಕು?

ವಿದ್ಯಾರ್ಥಿಗಳು ಖರ್ಚಿನ ಬಗ್ಗೆ ಏಕೆ ಇಷ್ಟು ಕಾಳಜಿ ವಹಿಸಿಕೊಳ್ಳಬೇಕು?

ನೀವು ಖರ್ಚಿನ ಬಗ್ಗೆ ಅಧಿಕ ಕಾಳಜಿ ವಹಿಸುವುದು ಮುಖ್ಯ. ಅಷ್ಟಕ್ಕೂ ನಾವು ಖರ್ಚಿನ ಬಗ್ಗೆ ಅಧಿಕ ಕಾಳಜಿ ಯಾಕೆ ವಹಿಸಿಕೊಳ್ಳಬೇಕು ಎಂದು ನಿಮಗೆ ಅನಿಸಬಹುದು. ಆದರೆ ಅದು ನಿಮ್ಮ ಮುಂದಿನ ಉದ್ಯೋಗ ಜೀವನದಲ್ಲಿ ಈಗಿನ ಕಾಳಜಿಯು ನಿಮಗೆ ಸಹಕಾರಿ ಆಗಲಿದೆ. ಈಗ ನಿಮ್ಮ ಖರ್ಚನ್ನು ಭರಿಸಲು ನಿಮ್ಮ ಕುಟುಂಬ ಸದಸ್ಯರು ಇರಬಹುದು. ಆದರೆ ಮುಂದೆ ನಿಮ್ಮ ಕುಟುಂಬಸ್ಥರು ನಿಮ್ಮ ಎಲ್ಲಾ ಖರ್ಚನ್ನು ನೋಡಲು ಆಗದು, ನೀವು ದುಡಿದು ಜೀವನ ಸಾಗಿಸಬೇಕು. ಇನ್ನು ತಮ್ಮ ತಂದೆ ತಾಯಿಯಿಂದ ದೂರವಿದ್ದು ಬೇರೆಯೇ ಊರಲ್ಲಿ ಹಾಸ್ಟೆಲ್‌, ಪಿಜಿಗಳಲ್ಲಿ ಕೂತು ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳು ಹೆಚ್ಚಾಗಿ ಹಣದ ಕಷ್ಟದ ಬಗ್ಗೆ ಅರಿತಿರುತ್ತಾರೆ. ತಮ್ಮ ರೂಮ್‌ ಬಾಡಿಗೆ, ಕಾಲೇಜಿನ ಖರ್ಚು, ವೆಚ್ಚಗಳು ಅಧಿಕವಾಗಿ ವಿದ್ಯಾರ್ಥಿಗಳು ಪಾರ್ಟ್ ಟೈಮ್‌ ಕೆಲಸಕ್ಕೂ ಸೇರುತ್ತಾರೆ. ಇನ್ನು ಆರೋಗ್ಯ ಸಮಸ್ಯೆ ಏನಾದರೂ ಉಂಟಾದರೆ ಅದಕ್ಕಾಗಿ ಯಾವ ಹಣವೂ ಇಲ್ಲದಂತೆ ಆಗುತ್ತದೆ. ಆದ್ದರಿಂದ ನಾವು ವಿದ್ಯಾರ್ಥಿ ಜೀವನದಲ್ಲಿ ಆದಷ್ಟು ಸರಳವಾಗಿ ಜೀವನ ಸಾಗಿಸುವುದು ಅತೀ ಮುಖ್ಯ. ನಾವು ದೊಡ್ಡ ದೊಡ್ಡ ಹೊಟೇಲ್‌, ರೆಸ್ಟೋರೆಂಟ್‌ ಎಂದು ನಮ್ಮ ಹಣವನ್ನು ವ್ಯಯ ಮಾಡಿದರೆ, ಮುಂದೆ ಅಗತ್ಯ ಸಂದರ್ಭದಲ್ಲಿ ಹಣವಿಲ್ಲದೆ ಒದ್ದಾಡಬೇಕಾಗುತ್ತದೆ. ಆದ್ದರಿಂದ ನೀವು ವಿದ್ಯಾರ್ಥಿಗಳು ಖರ್ಚಿನ ಬಗ್ಗೆ ಕಾಳಜಿ ವಹಿಸಲೇ ಬೇಕು.

 ವಿದ್ಯಾರ್ಥಿಗಳು ಎಜುಕೇಷನ್‌ ಲೋನ್‌ ಪಡೆಯುವ ಮುನ್ನ ಎಚ್ಚರ
 

ವಿದ್ಯಾರ್ಥಿಗಳು ಎಜುಕೇಷನ್‌ ಲೋನ್‌ ಪಡೆಯುವ ಮುನ್ನ ಎಚ್ಚರ

ಶಾಲಾ ಶುಲ್ಕಗಳು ಅಧಿಕವಾಗುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಲು ಎಜುಕೇಷನ್‌ ಲೋನ್‌ ಪಡೆಯಬೇಕಾದ ಸ್ಥಿತಿ ಬಂದಿದೆ. ಪ್ರಸ್ತುತ ಭಾರತದಲ್ಲಿ ಅಧಿಕ ಜನರು ತಮ್ಮ ಉನ್ನತ ಶಿಕ್ಷಣಕ್ಕಾಗಿ ಎಜುಕೇಷನ್‌ ಲೋನ್‌ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಅಷ್ಟೂ ಪ್ರಮಾಣದ ಹಣವನ್ನು ತಮ್ಮ ಮನೆಯವರು ಉಳಿತಾಯದಿಂದ ಖರ್ಚು ಮಾಡುವ ಬದಲು ನಾವು ಲೋನ್‌ ಮೂಲಕ ವಿದ್ಯಾರ್ಜನೆ ಮಾಡಿ ಬಳಿಕ ಸಾಲ ತೀರಿಸುತ್ತೇವೆ ಎಂಬ ಉದ್ದೇಶದಿಂದ ಈ ಸಾಲವನ್ನು ಪಡೆಯುತ್ತಾರೆ. ಇನ್ನು ಹಲವಾರು ಮಂದಿಗೆ ವಿದ್ಯಾರ್ಜನೆಗೆ ಯಾವುದೇ ಉಳಿತಾಯದ ಹಣವಿಲ್ಲ ಎಂಬ ಕಾರಣಕ್ಕೆ ಬೇರೆ ದಾರಿಯಿಲ್ಲದೆ ಲೋನ್‌ ಪಡೆಯುತ್ತಾರೆ. ಆದರೆ ಈ ಸಾಲವನ್ನು ಪಡೆಯುವ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳು ಜಾಗರೂಕರಾಗಿರುವುದು ಅತೀ ಮುಖ್ಯ. ಇನ್ನು ನೀವು ವಿದ್ಯಾರ್ಜನೆಗಾಗಿ ಪಡೆದ ಸಾಲವನ್ನು ದುಂದು ವೆಚ್ಚ ಮಾಡಿ ಬಳಿಕ ಪೇಚಿಗೆ ಸಿಲುಕಬೇಡಿ. '

ಅಡೆತಡೆಯಿಲ್ಲದೆ ಪಿಂಚಣಿ ಪಡೆಯಲು ಮನೆಯಿಂದಲೇ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ?ಅಡೆತಡೆಯಿಲ್ಲದೆ ಪಿಂಚಣಿ ಪಡೆಯಲು ಮನೆಯಿಂದಲೇ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ?

 ವಿದ್ಯಾರ್ಥಿಗಳೇ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳ ಬಳಕೆ ವೇಳೆ ತಪ್ಪದಿರ ಎಚ್ಚರ

ವಿದ್ಯಾರ್ಥಿಗಳೇ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳ ಬಳಕೆ ವೇಳೆ ತಪ್ಪದಿರ ಎಚ್ಚರ

ನೀವು ವಯಸ್ಕರಾಗಿದ್ದರೆ, ನಿಮ್ಮ ಬಳಿ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್ ಇರಬಹುದು. ಆದರೆ ಇದನ್ನು ಉಪಯೋಗ ಮಾಡುವ ಸಂದರ್ಭದಲ್ಲಿ ನೀವು ಬಹಳ ಎಚ್ಚರದಿಂದ ಇರುವುದು ಮುಖ್ಯ. ನೀವು ನಿಮ್ಮಲ್ಲಿ ಕ್ರೆಡಿಟ್‌ ಕಾರ್ಡ್ ಇದೆ ಎಂದು ಸ್ನೇಹಿತರಿಗೆ ಪಾರ್ಟಿ ನೀಡುತ್ತಾ ಹೋದರೆ ಬಳಿಕ ನಿಮ್ಮ ಬುಡಕ್ಕೆಯೇ ಸಂಕಷ್ಟ ಬಂದು ನಿಲ್ಲುತ್ತದೆ. ಆದ್ದರಿಂದ ಡೆಬಿಟ್‌ ಆಗಲಿ ಕ್ರೆಡಿಟ್‌ ಆಗಲಿ ಕಾರ್ಡ್ ಬಳಕೆ ವೇಳೆ ನೀವು ಎಚ್ಚರದಿಂದ ಇರಬೇಕು. ಇನ್ನು ನೀವು ನಿಮ್ಮಲ್ಲಿ ಇರುವ ಕಾರ್ಡ್ ಅನ್ನು ಅಗತ್ಯ ಹೊರತುಪಡಿಸಿ ಉಳಿದ ಸಂದರ್ಭ ಕೊಂಡೊಯ್ಯದಿದ್ದರೆ ಉತ್ತಮ. ಇನ್ನು ಈಗ ಫೋನ್‌ ಪೇ, ಗೂಗಲ್‌ ಪೇ ನಂತಹ ಆನ್‌ಲೈನ್‌ ಪಾವತಿ ಅವಕಾಶ ಇದೆ. ಹೀಗಿರುವಾಗಿ ನೀವಾಗಿಯೇ ನಿಮ್ಮ ದುಬಾರಿ ಖರ್ಚಿಗೆ ಬ್ರೇಕ್‌ ಹಾಕುವುದು ಮುಖ್ಯ.

ಎಸ್‌ಬಿಐ Vs ಅಂಚೆ ಕಚೇರಿ ಎಫ್‌ಡಿ: ಎಲ್ಲಿ ಹೂಡಿಕೆ ಮಾಡಿದರೆ ಸೂಕ್ತ?ಎಸ್‌ಬಿಐ Vs ಅಂಚೆ ಕಚೇರಿ ಎಫ್‌ಡಿ: ಎಲ್ಲಿ ಹೂಡಿಕೆ ಮಾಡಿದರೆ ಸೂಕ್ತ?

 ಈಗ ವಿದ್ಯಾರ್ಜನೆ ಸಮಯ, ಸ್ಟಾಕ್‌-ಆನ್‌ಲೈನ್‌ ಗೇಮ್‌ಗಳಿಂದ ಇರಲಿ ಅಂತರ

ಈಗ ವಿದ್ಯಾರ್ಜನೆ ಸಮಯ, ಸ್ಟಾಕ್‌-ಆನ್‌ಲೈನ್‌ ಗೇಮ್‌ಗಳಿಂದ ಇರಲಿ ಅಂತರ

ಈಗ ಆನ್‌ಲೈನ್‌ ಮೂಲಕವೇ ಸ್ಟಾಕ್‌ಗಳ ಮೇಲೆ ಹೂಡಿಕೆ ಮಾಡಬಹುದು. ಹಾಗೆಯೇ ಆನ್‌ಲೈನ್‌ನಲ್ಲೇ ಅದೇಷ್ಟೋ ಗೇಮ್‌ಗಳು ಇದೆ. ಹಾಗೆಂದ ಮಾತ್ರಕ್ಕೆ ನೀವು ಹೂಡಿಕೆ ಮಾಡಲು ಹೋಗಬೇಡಿ. ನೀವಿನ್ನು ವಿದ್ಯಾರ್ಥಿಗಳು, ಹಣ ದುಪ್ಪಟ್ಟು ಮಾಡಿಕೊಳ್ಳಬಹುದು, ಲಾಭ ಗಳಿಸಬಹುದು ಎಂಬ ಆಸೆಗೆ ಸ್ಟಾಕ್‌ ಮಾರುಕಟ್ಟೆಯಲ್ಲಿ ಸಿಲುಕಿದರೆ ನಿಮಗೆ ಮುಂದೆ ತೊಂದರೆ ಖಚಿತ. ನೀವು ವಿದ್ಯಾರ್ಥಿಗಳಾದ ಕಾರಣ ಈ ಎಚ್ಚರ ಅಗತ್ಯ. ನೀವು ದುಡಿಯುವ ಸಂದರ್ಭದಲ್ಲಿ ನೀವು ಆರ್ಥಿಕ ತಜ್ಞರ ಸಹಾಯ ಪಡೆದು ಹೂಡಿಕೆ ಮಾಡುವುದು ಉತ್ತಮ. ಇನ್ನು ಈಗ ಆನ್‌ಲೈನ್‌ ಗೇಮ್‌ಗಳ ಕಾಟ ವಿದ್ಯಾರ್ಥಿಗಳಿಗೆ ಅಧಿಕವಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್‌ ಆಟವಾಡಲೆಂದು ಅದೇಷ್ಟೋ ಹಣವನ್ನು ಖರ್ಚು ಮಾಡಿರುವ ನಿದರ್ಶನಗಳು ಇದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈ ಆನ್‌ಲೈನ್‌ ಗೇಮ್‌ ಹಾಗೂ ಸ್ಟಾಕ್‌ಗಳಿಂದ ದೂರ ಇರುವುದು ಒಳಿತು.

English summary

How Students Can Control Their Financial Expenses, Tips Explained here in Kannada

How Students Can Control Their Financial Expenses, Tips Explained here in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X