For Quick Alerts
ALLOW NOTIFICATIONS  
For Daily Alerts

ದಿನದ ಕೆಲವೇ ಗಂಟೆ ದುಡಿದು, ವರ್ಷಕ್ಕೆ ಲಕ್ಷಗಟ್ಟಲೆ ಸಂಪಾದಿಸಿ

By ಅನಿಲ್ ಆಚಾರ್
|

ವಿದ್ಯೆ ಅದೆಂಥ ದೊಡ್ಡ ಅನ್ನದ ಬಟ್ಟಲು ಅನ್ನೋದು ಇತ್ತೀಚಿನ ದಿನಗಳಲ್ಲಿ ಅರ್ಥ ಮಾಡಿಸಬೇಕಾದ ಅನಿವಾರ್ಯ ಸೃಷ್ಟಿ ಆಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ, ಪೋಸ್ಟ್ ಗ್ರಾಜ್ಯುಯೇಷನ್ ಗಳನ್ನು ತುಂಬಾ ಚೆನ್ನಾಗಿ ಓದಿಕೊಂಡಿದ್ದರೆ, ನಿಮ್ಮ ಓದಿ- ಕಲಿತಿದ್ದನ್ನು ತುಂಬ ಪರಿಣಾಮಕಾರಿಯಾಗಿ ಇನ್ನೊಬ್ಬರಿಗೆ ಕಲಿಸಿಕೊಡುವಂತಿದ್ದರೆ ಉದ್ಯೋಗ ಅಭದ್ರತೆ ಎದುರಿಸುವ ಅಗತ್ಯವೇ ಇಲ್ಲ ಎಂಬುದು ಗೊತ್ತೆ?

ಆದರೆ, ಅದರ ಜತೆಗೆ ಕೆಲವು ಮೂಲಭೂತ ಅಂಶಗಳನ್ನು ಕಲಿಯುವುದಕ್ಕೆ ಒಂದಿಷ್ಟು ಸಮಯ ಮೀಸಲಿಟ್ಟರೆ ಸ್ವಾವಲಂಬಿಯಾಗಿ ಜೀವನ ನಡೆಸಬಹುದು. ಈ ದಿನ ಅಂಥದ್ದೊಂದು ವೃತ್ತಿಯ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಇದರೊಳಗೆ ಒಳಗೊಂಡಿರುವ ಕಾನೂನು ವಿಚಾರಗಳನ್ನು ಸ್ವತಃ ನೀವೇ ನೋಡಿಕೊಳ್ಳಬೇಕು. ಉಳಿದ ವಿಚಾರಗಳನ್ನು ನಾವು ವಿವರಿಸುತ್ತೇವೆ.

ಎಸ್ಸೆಸ್ಸೆಲ್ಸಿ, ಪಿಯು, ಡಿಗ್ರಿ ಹಂತದಲ್ಲಿ ಪಾಠಕ್ಕೆ
 

ಎಸ್ಸೆಸ್ಸೆಲ್ಸಿ, ಪಿಯು, ಡಿಗ್ರಿ ಹಂತದಲ್ಲಿ ಪಾಠಕ್ಕೆ

ಯಾವುದೇ ವ್ಯಕ್ತಿಯ ಶೈಕ್ಷಣಿಕ ಜೀವನದಲ್ಲಿ ಆರಂಭದ ಹಂತದ ಶಿಕ್ಷಣ, ಅಂದರೆ ಒಂದರಿಂದ ಐದನೇ ಕ್ಲಾಸ್ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಸೆಕೆಂಡ್ ಪಿಯುಸಿ ಬಹಳ ಮುಖ್ಯವಾದದ್ದು. ಆ ಕಾರಣಕ್ಕೆ ಮಕ್ಕಳನ್ನು ಆ ಹಂತದಲ್ಲಿ ಟ್ಯೂಷನ್ ಗೆ ಕಳುಹಿಸಲಾಗುತ್ತದೆ. ಎಸ್ಸೆಸ್ಸೆಲ್ಸಿ, ಪಿಯುಸಿಗಳಲ್ಲಿ ನಿರ್ದಿಷ್ಟ ವಿಷಯಗಳನ್ನು ಕಲಿಯಲಿ ಎಂಬ ಉದ್ದೇಶ ಇರುತ್ತದೆ. ಸೆಕೆಂಡ್ ಪಿಯುಸಿ ಸೈನ್ಸ್ ಸಬ್ಜೆಕ್ಟ್ ತೆಗೆದುಕೊಂಡಿದ್ದರೆ ಪಿಸಿಎಂಬಿ (ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥ್ಸ್, ಬಯಾಲಜಿ), ಕಾಮರ್ಸ್ ತೆಗೆದುಕೊಂಡಿದ್ದರೆ ಸ್ಟ್ಯಾಟಿಸ್ಟಿಕ್ಸ್, ಮ್ಯಾಥ್ಸ್, ಅಕೌಂಟ್ಸ್ ವಿಷಯಗಳಿಗೆ ಹಾಗೂ ಕೆಲವು ಕಲಾ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಗಾಗಿ ಟ್ಯೂಷನ್ ಗೆ ಹೋಗುತ್ತಾರೆ. ಇನ್ನು ಎಸ್ಸೆಸ್ಸೆಲ್ಸಿಯಾದಲ್ಲಿ ಗಣಿತ ಮತ್ತು ವಿಜ್ಞಾನಕ್ಕೆ ಪಾಠಕ್ಕೆ ತೆರಳುತ್ತಾರೆ. ಬಿ.ಕಾಂ., ವಿದ್ಯಾರ್ಥಿಗಳು ಅಕೌಂಟ್ಸ್, ಇನ್ ಕಂ ಟ್ಯಾಕ್ಸ್ ವಿಷಯಗಳನ್ನು ಕಲಿಯಲು ಪಾಠಕ್ಕೆ ಹೋಗುತ್ತಾರೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯ ಬೋಧನೆ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯ ಬೋಧನೆ

ಈ ವಿಷಯಗಳನ್ನು ಪರೀಕ್ಷೆಗಳನ್ನು ಗುರಿಯಾಗಿಟ್ಟುಕೊಂಡು ಪಾಠ ಮಾಡುವವರಿಗೆ ವಿಪರೀತ ಬೇಡಿಕೆ ಇದೆ. ಬೆಂಗಳೂರಿನಲ್ಲೇ ಎಷ್ಟೊಂದು ಟ್ಯೂಷನ್ ಇನ್ ಸ್ಟಿಟ್ಯೂಟ್ ಗಳು ಶಾಲೆ- ಕಾಲೇಜುಗಳಿಗಿಂತಲೂ ಖ್ಯಾತಿ ಗಳಿಸಿವೆ. ನೂರಾರು ವಿದ್ಯಾರ್ಥಿಗಳು ಸಾವಿರಾರು ರುಪಾಯಿ ಪಾವತಿಸಿ, ಅದಕ್ಕೂ ಮುನ್ನ ಪ್ರವೇಶ ಪರೀಕ್ಷೆಯನ್ನು ನೀಡಲಾಗುತ್ತದೆ. ಅದರಲ್ಲಿ ಪಾಸ್ ಆದರಷ್ಟೇ ಟ್ಯೂಷನ್ ಗೆ ಪ್ರವೇಶ. ಪರಿಸ್ಥಿತಿ ಹೀಗಿರುವಾಗ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯ ಬೋಧನೆ ಮಾಡುವುದಾದರೆ, ಗಂಡುಮಕ್ಕಳಿಗೆ- ಹೆಣ್ಣುಮಕ್ಕಳಿಗೆ ಪ್ರತ್ಯೇಕ ಟ್ಯೂಷನ್ ಮಾಡಿ, ತಲಾ ನೂರು ವಿದ್ಯಾರ್ಥಿಗಳಿಗೆ ವರ್ಷಕ್ಕೆ ಮೂರು- ಮೂರು ಸಾವಿರ ಫೀ ಪಡೆದರೆ ಒಟ್ಟು ಆದಾಯ ಎಷ್ಟಾಗುತ್ತದೆ. ಅದರಲ್ಲಿ ಒಂದು ಲಕ್ಷ ರುಪಾಯಿ ವೆಚ್ಚ ತೆಗೆದರೂ ಐದು ಲಕ್ಷ ರುಪಾಯಿ ಉಳಿಯುತ್ತದೆ. ವಾರದ ಆರು ದಿನ, ದಿನಕ್ಕೆ ಎರಡು ಗಂಟೆ ಸಮಯವನ್ನು ಟ್ಯೂಷನ್ ಗೆ ಮೀಸಲಿಟ್ಟರೆ ಆಯಿತು.

ಕೆಲವೇ ಗಂಟೆ ಪಾಠ ಮಾಡಿದರೂ ಸಾಕು
 

ಕೆಲವೇ ಗಂಟೆ ಪಾಠ ಮಾಡಿದರೂ ಸಾಕು

ಪಿಯುಸಿ ವಿದ್ಯಾರ್ಥಿಗಳಿಗೆ ಕೂಡ ಹೀಗೆ ನಾಲ್ಕು ಮುಖ್ಯ ವಿಷಯಗಳಿಗೆ ಪಾಠ ಮಾಡಲಾಗುತ್ತದೆ. ಅಕೌಂಟ್ಸ್ ಪಾಠ ಮಾಡುವವರು ಸೆಕೆಂಡ್ ಪಿಯುಸಿ, ಬಿ.ಕಾಂ., ಮೂರು ವರ್ಷ ಸೇರಿಸಿ ಒಟ್ಟು ನಾಲ್ಕು ಬ್ಯಾಚ್ ಪಾಠ ಮಾಡುವವರಿದ್ದಾರೆ. ಕಾಲೇಜುಗಳ ರೆಗ್ಯುಲರ್ ಉಪನ್ಯಾಸಕರಿಗಿಂತ ಇವರಿಗೆ ಆದಾಯ ಹೆಚ್ಚಾಗಿರುತ್ತದೆ. ಆದರೆ ಈ ರೀತಿ ಟ್ಯೂಷನ್ ಮಾಡುವಾಗ ಸಾಮಾಜಿಕ ಬದ್ಧತೆಯನ್ನು ಇರಿಸಿಕೊಂಡು, ಟ್ಯೂಷನ್ ಫೀ ಕೊಡಲು ಸಾಧ್ಯವೇ ಇಲ್ಲದಂಥ ಆಯ್ದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡಬಹುದು. ಉದ್ಯೋಗ ಅಭದ್ರತೆಯಿಂದ ನಾನಾ ವಲಯದಲ್ಲಿನ ವ್ಯಕ್ತಿಗಳು ದಿಕ್ಕು ತೋಚದಂತೆ ಆಗಿದ್ದಾರೆ. ಅಂಥವರು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು, ಈ ರೀತಿಯ ಟ್ಯೂಷನ್ ಕ್ಲಾಸ್ ಮಾಡಿದರೆ ಆದಾಯಕ್ಕೆ ದಾರಿಯಾಗುತ್ತದೆ. ದಿನದ ಕೆಲವೇ ಗಂಟೆ ಪಾಠ ಮಾಡಿದರೂ ವರ್ಷಕ್ಕೆ ಲಕ್ಷಗಟ್ಟಲೆ ಆದಾಯ ತರುತ್ತದೆ.

ಟ್ಯೂಷನ್ ಮೂಲಕ ಆದಾಯಕ್ಕೆ ಸಿಕ್ಕಾಪಟ್ಟೆ ಅವಕಾಶ

ಟ್ಯೂಷನ್ ಮೂಲಕ ಆದಾಯಕ್ಕೆ ಸಿಕ್ಕಾಪಟ್ಟೆ ಅವಕಾಶ

ಆದರೆ, ಇದು ತುಂಬ ಸಲೀಸಾದ ಮಾತೇನಲ್ಲ. ಏಕೆಂದರೆ, ಆನ್ ಲೈನ್ ಪ್ಲಾಟ್ ಫಾರ್ಮ್ ಗಳಲ್ಲೇ ಟ್ಯೂಷನ್ ಲಭ್ಯವಿವೆ. ಇನ್ನು ವಿದೇಶಗಳಲ್ಲಿ ಇರುವವರಿಗೆ ಆನ್ ಲೈನ್ ಮೂಲಕ ಪಾಠ ಮಾಡುವುದಕ್ಕೆ ನೋಂದಣಿ ಮಾಡಿಕೊಂಡವರು ಸಹ ಇರುತ್ತಾರೆ. ಇದನ್ನು ಸಹ ಗಣನೆಗೆ ತೆಗೆದುಕೊಂಡು ಆನ್ ಲೈನ್ ಮೂಲಕ ಪಾಠ ಮಾಡಿ, ಆದಾಯ ಗಳಿಸಬಹುದು. ಆದರೂ ನೇರವಾಗಿ ಪಾಠ ಮಾಡಿ, ವಿದ್ಯಾರ್ಥಿಗಳ ಪ್ರಶ್ನೆಗಳು- ಅನುಮಾನಗಳಿಗೆ ಉತ್ತರಿಸುವುದು ಪರಿಣಾಮಕಾರಿ. ಟ್ಯೂಷನ್ ಆರಂಭಿಸುವ ಮುನ್ನ ಅನುಸರಿಸಬೇಕಾದ ನಿಯಮಗಳನ್ನು ತಿಳಿದುಕೊಂಡು ಅದರಲ್ಲೇ ಮುಂದುವರಿಯುವುದಕ್ಕೆ ಸಾಕಷ್ಟು ಅವಕಾಶ ಇದೆ. ಅದರಲ್ಲೂ ಮಹಿಳೆಯರು ಇಂಥ ಅವಕಾಶವನ್ನು ಹೆಚ್ಚು ಬಳಸಿಕೊಳ್ಳಬಹುದು. ಮನೆಯಲ್ಲೇ ಪಾಠ ಮಾಡಿ, ಆದಾಯ ಗಳಿಸಬಹುದು. ಇಲ್ಲದಿದ್ದಲ್ಲಿ ಆನ್ ಲೈನ್ ಮೂಲಕ ಪಾಠ ಹೇಳಿ ಕೂಡ ಆದಾಯಕ್ಕೆ ದಾರಿ ಮಾಡಿಕೊಳ್ಳಬಹುದು. ಒಟ್ಟಿನಲ್ಲಿ ಟ್ಯೂಷನ್ ಮೂಲಕ ಆದಾಯ ಗಳಿಸುವುದಕ್ಕೆ ಸಿಕ್ಕಾಪಟ್ಟೆ ಅವಕಾಶಗಳಿವೆ.

English summary

How To Earn Lakhs Of Rupees By Sparing A Few Hours In A Day?

How to earn lakhs of rupees in a year by sparing a few hours in a day? Here is an explainer.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more