For Quick Alerts
ALLOW NOTIFICATIONS  
For Daily Alerts

ಕೊರೊನಾ ಸೋಂಕು ಹರಡದಂತೆ ಸುರಕ್ಷಿತವಾಗಿ ಹಣದ ವಹಿವಾಟು ನಡೆಸುವುದು ಹೇಗೆ?

|

ವಿಶ್ವದಾದ್ಯಂತ ನರಬಲಿ ಪಡೆಯುತ್ತಿರುವ ಕೊರೊನಾವೈರಸ್ ಮಹಾಮಾರಿ ಭಾರತದಲ್ಲೂ ಆಳವಾದ ಬೇರೂರಲು ಪ್ರಯತ್ನಿಸುತ್ತಿದೆ. ಈ ಸೋಂಕನ್ನು ಬುಡಸಮೇತ ಕಿತ್ತೊಗೆಯಲು ಕೇಂದ್ರ ಸರ್ಕಾರವು ಲಾಕ್‌ಡೌನ್ ಅಸ್ತ್ರವನ್ನು ಮುಂದಿಟ್ಟುಕೊಂಡು ಹೋರಾಡುತ್ತಿದೆ. ಸೋಂಕನ್ನು ತಡೆಗಟ್ಟಲು ಹಲವಾರು ಕ್ರಮಗಳು, ಯೋಜನೆಗಳನ್ನು ಕೈಗೊಂಡಿದೆ.

ಕೊರೊನಾ ಭಯದ ನಡುವೆ ಜನರು ದಿನ ದೂಡುತ್ತಿದ್ದಾರೆ. ಮನೆಗೆ ಸೋಂಕಿನ ಆಗಮನದ ತಡೆಗೆ ಬಹಳ ಎಚ್ಚರಿಕೆವಹಿಸುತ್ತಿದ್ದಾರೆ. ಹೀಗಿರುವಾಗ ಪ್ರತಿಯೊಬ್ಬರಲ್ಲಿಯು ನಮ್ಮಲ್ಲಿರುವ ಆಯ್ಕೆಗಳ ಬಗ್ಗೆ ಅರಿವು ಮೂಡಿಸುವುದು ಅನಿವಾರ್ಯ.

ಸೋಂಕು ನಾವು ಬಳಸುವ ಹಣದ ಮೂಲಕವೂ ಹರಡುವ ಸಾಧ್ಯತೆ ಹೆಚ್ಚಿದೆ. ಹಣ ಅಷ್ಟೇ ಅಲ್ಲದೆ ಎಟಿಎಂಗಳಲ್ಲಿ ಕೀ ಸ್ಪರ್ಶಿಸಿದಾಗ ಹೀಗೆ ನಾನಾ ರೀತಿಯಲ್ಲಿ ಅಂಟಿಕೊಳ್ಳಬಹುದು. ಆದ್ದರಿಂದ ಹಣದ ವ್ಯವಹಾರದ ಬದಲು ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಕಾರ್ಡ್‌ಗಳು ಮತ್ತು ಮೊಬೈಲ್ ಪಾವತಿಗಳಂತಹ ಸಾಧನಗಳು ಗ್ರಾಹಕರಿಗೆ ತಮ್ಮ ಖರೀದಿಗೆ ಅನುಕೂಲಕರವಾಗಿ ಪಾವತಿಸಲು ಸಾಧ್ಯವಾಗುತ್ತದೆ. ಇದರ ಜೊತೆಗೆ ದಿನನಿತ್ಯದ ಅವಶ್ಯಕತೆಗಳ ಖರೀದಿ ಸಮಯದಲ್ಲಿ ಹಣದ ವ್ಯವಹಾರ ನಡೆಸುವಾಗ ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.

ಸ್ವಚ್ಚತೆ ಮತ್ತು ಆರೋಗ್ಯಕರ
 

ಸ್ವಚ್ಚತೆ ಮತ್ತು ಆರೋಗ್ಯಕರ

ಕೊರೊನಾವೈರಸ್‌ನಂತಹ ಸೂಕ್ಷ್ಮಜೀವಿಗಳು ನೋಟುಗಳು ಮತ್ತು ನಾಣ್ಯಗಳ ಮೂಲಕ ನಿಮ್ಮ ಮನೆಯನ್ನು ತಲುಪಬಹುದು. ಹೀಗಾಗಿ ಹಣವನ್ನು ಮುಟ್ಟಿದ ಬಳಿಕ ಆಗಾಗ್ಕೆ ಕೈತೊಳೆಯುವುದು ಉತ್ತಮ. ಜೊತೆಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಪಾವತಿಯನ್ನು ಮಾಡುವಾಗಲೂ ಇದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು.

ಇದೀಗ ಕಾರ್ಡ್‌ಗಳ ಸಂಪರ್ಕವಿಲ್ಲದೆ, ಪಿನ್ ನಮೂದಿಸದೆ ನೀವು 2,000 ರುಪಾಯಿಗಳ ವಹಿವಾಟು ನಡೆಸಬಹುದು. ಈ ಮೂಲಕ ಹಣ ಮುಟ್ಟದೆ, ಕಾರ್ಡ್‌ಗಳ ವ್ಯವಹಾರವಿಲ್ಲದೆಯೂ ನೀವು ಸುರಕ್ಷಿತ ಅನುಭವ ಪಡೆಯಬಹುದು.

ಹಣ ಹೆಚ್ಚು ಕಡಿತಗೊಳ್ಳುವ ಭಯ ಬೇಡ

ಹಣ ಹೆಚ್ಚು ಕಡಿತಗೊಳ್ಳುವ ಭಯ ಬೇಡ

ಕಾರ್ಡ್‌ಗಳ ಸಂಪರ್ಕವಿಲ್ಲದೆ ನೀವು ವಹಿವಾಟು ನಡೆಸುವಾಗ ಕಾರ್ಡ್‌ಗಳ ಇಎಂವಿ ಚಿಪ್‌ಗಳೊಂದಿಗೆ ಯಂತ್ರವು ಕಾರ್ಯನಿರ್ವಹಿಸುತ್ತದೆ. ಪ್ರತಿ ಸಂಪರ್ಕವಿಲ್ಲದ ವಹಿವಾಟು ನಿಮ್ಮ ವಿವರಗಳು ಮತ್ತು ವಹಿವಾಟುಗಳು ಸುರಕ್ಷಿತವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಪ್ರತಿ ಖರೀದಿಯೊಂದಿಗೆ ಬದಲಾಗುವ ವಿಶಿಷ್ಟ ಕೋಡ್ ಅನ್ನು ಒಳಗೊಂಡಿದೆ. ಒಂದೇ ಖರೀದಿಗೆ ನಿಮ್ಮ ಕಾರ್ಡ್ ಅನ್ನು ಒಂದಕ್ಕಿಂತ ಹೆಚ್ಚು ಬಾರಿ ಟ್ಯಾಪ್ ಮಾಡಿದರೂ ಸಹ, ವ್ಯವಹಾರ ನಡೆಯುವುದು ಒಮ್ಮೆ ಮಾತ್ರ. ಹೀಗಿರುವಾಗ ಅನಪೇಕ್ಷಿತವಾದ ಬಳಕೆಯಿಂದ ದೂರವಿರಿ. ಇದರಿಂದ ಬಿಲ್ ಬರುವವರೆಗೂ ಕಾಯುವ ಅಗತ್ಯವೂ ಬರುವುದಿಲ್ಲ.

ವಹಿವಾಟಿಗೆ ತ್ವರಿತ ಎಸ್‌ಎಂಎಸ್

ವಹಿವಾಟಿಗೆ ತ್ವರಿತ ಎಸ್‌ಎಂಎಸ್

ನೀವು ಎಲ್ಲಿಯೇ ಯಾವುದೇ ವಸ್ತು ಅಥವಾ ಸೇವೆಯನ್ನು ಕಾರ್ಡ್‌ ಮೂಲಕ ಖರೀದಿಸಿದಾಗ ಕಾರ್ಡ್‌ ಬಳಕೆಯ ಸಮಯ ಸೇರಿದಂತೆ ಎಲ್ಲ ಮಾಹಿತಿ ತಿಳಿಸುತ್ತದೆ. ಹಾಗೆಯೇ ಸಂಪರ್ಕವಿಲ್ಲದ ಕಾರ್ಡ್‌ಗಳ ಮೂಲಕ ವಹಿವಾಟು ನಡೆಸುವಾಗ, ನೀವು ಪಾವತಿ ಕೌಂಟರ್‌ನಲ್ಲಿ ಕಾರ್ಡ್ ಅನ್ನು ಹಸ್ತಾಂತರಿಸುವ ಅಗತ್ಯವಿಲ್ಲದ ಕಾರಣ ನೀವು ಯಾವುದೇ ರೀತಿಯಲ್ಲಿ ಗಾಬರಿಗೊಳ್ಳಲು ಹೋಗದಿರಿ. .

ಗ್ರಾಹಕರ ಹಿತಾಸಕ್ತಿ ಕಾಪಾಡಲು ಹಲವಾರು ಸೈಬರ್ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದ್ದರೂ ಸಹ, ಗ್ರಾಹಕರು ಜಾಗರೂಕರಾಗಿರಬೇಕು ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಬಳಸಿಕೊಳ್ಳಲು ಮತ್ತು ಜನರ ಆತಂಕದ ಮೇಲೆ ಆಟವಾಡಲು ಪ್ರಯತ್ನಿಸುತ್ತಿರುವ ಮೋಸಗಾರರ ವಿರುದ್ಧ ಎಚ್ಚರದಿಂದಿರಬೇಕು. ಇದನ್ನು ಗಮನದಲ್ಲಿಟ್ಟುಕೊಂಡು, ಗ್ರಾಹಕರು ಈ ಕೆಳಗಿನ ಅಂಶಗಳ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ.

ಯಾರೊಂದಿಗೂ ಒಟಿಪಿ ಹಾಗೂ ಇತರೆ ಪಾವತಿ ವಿವರ ಮುಕ್ತವಾಗಿ ಹಂಚಿಕೊಳ್ಳದಿರಿ
 

ಯಾರೊಂದಿಗೂ ಒಟಿಪಿ ಹಾಗೂ ಇತರೆ ಪಾವತಿ ವಿವರ ಮುಕ್ತವಾಗಿ ಹಂಚಿಕೊಳ್ಳದಿರಿ

ನೀವು ಯಾರೊಂದಿಗೂ ಯಾವ ಸಮಯದಲ್ಲೂ ಒಟಿಪಿ ಅಥವಾ ಇತರೆ ಪಾವತಿ ವಿವರಗಳನ್ನು ಮುಕ್ತವಾಗಿ ಹಂಚಿಕೊಳ್ಳದಿರಿ. ಏಕೆಂದರೆ ಇದರಿಂದ ನೀವು ಮೋಸಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆಯೇ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಸಂಖ್ಯೆಗಳು, ಎಟಿಎಂ ಪಿನ್‌ಗಳು ಅಥವಾ ಒಟಿಪಿಗಳನ್ನು ಫೋನ್ ಕರೆ, ಎಸ್‌ಎಂಎಸ್ ಅಥವಾ ಇಮೇಲ್‌ಗಳ ಮೂಲಕ ಹಂಚಿಕೊಳ್ಳುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು.

ಇ-ಮೇಲ್‌ಗಳಲ್ಲಿ ಅನಾವಶ್ಯಕವಾಗಿ ಲಿಂಕ್ ಕ್ಲಿಕ್ ಮಾಡದಿರಿ

ಇ-ಮೇಲ್‌ಗಳಲ್ಲಿ ಅನಾವಶ್ಯಕವಾಗಿ ಲಿಂಕ್ ಕ್ಲಿಕ್ ಮಾಡದಿರಿ

ಮೋಸಗಾರರು ಸಾಮಾನ್ಯ ಜನರಿಗೆ ಎಸ್‌ಎಂಎಸ್ ಮತ್ತು ಇಮೇಲ್‌ಗಳನ್ನು ಕಳುಹಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಮೇಲ್‌ಗಳಲ್ಲಿ ಲಿಂಕ್‌ಗಳು ಕ್ಲಿಕ್ ಮಾಡದೇ ಇರುವುದು ಬಹಳ ಮುಖ್ಯ. ಏಕೆಂದರೆ ಅವುಗಳು ನಿಮ್ಮ ಸಾಧನಕ್ಕೆ ಹ್ಯಾಕರ್‌ಗಳಿಗೆ ಪ್ರವೇಶವನ್ನು ನೀಡುವಂತಹ ಮಾಲ್‌ವೇರ್ ಮತ್ತು ಅದರ ಮೂಲಕ ಸಂಗ್ರಹವಾಗಿರುವ ಅಥವಾ ಪ್ರವೇಶಿಸುವ ಯಾವುದೇ ಮಾಹಿತಿಯನ್ನು ಒಳಗೊಂಡಿರಬಹುದು.

ನೀವು ಎಚ್ಚರದಿಂದಿರಿ ಮತ್ತು ಇತರರನ್ನು ಎಚ್ಚರಿಸಿ!

ನೀವು ಎಚ್ಚರದಿಂದಿರಿ ಮತ್ತು ಇತರರನ್ನು ಎಚ್ಚರಿಸಿ!

ನಿಮ್ಮ ಸಂಪರ್ಕ ವಿವರಗಳನ್ನು ನಿಮ್ಮ ಬ್ಯಾಂಕ್ ಬದಲಾದ ತಕ್ಷಣ ನವೀಕರಿಸಿ. ನೀವು ಗುರುತಿಸದ ವಹಿವಾಟಿನ ಮಾಹಿತಿ ಪಡೆದ ತಕ್ಷಣ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ. ನಿಮ್ಮ ಸಾಧನಗಳಲ್ಲಿ ಆ್ಯಂಟಿವೈರಸ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ ಮತ್ತು ಮಾಲ್ವೇರ್‌ಗಾಗಿ ಆಗಾಗ್ಗೆ ಸ್ಕ್ಯಾನ್ ಮಾಡಿ. ಜೊತೆಗೆ ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಈ ಕುರಿತು ಮಾಹಿತಿ ನೀಡಿ.

English summary

How To Make Safe Money Transactions In This Coronavirus Pandemic Situation

In this article explained how To Make Safe Money Transactions while buying essentials
Story first published: Monday, April 20, 2020, 14:34 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more