For Quick Alerts
ALLOW NOTIFICATIONS  
For Daily Alerts

ದುಂದುವೆಚ್ಚಕ್ಕೆ ಬ್ರೇಕ್‌ ಹಾಕುವುದು ಹೇಗೆ?, ಇಲ್ಲಿದೆ ಟಿಪ್ಸ್‌

|

ಹಲವಾರು ಮಂದಿ ಯುವಕರಿಗೆ ತಮ್ಮ ಸಂಬಳವನ್ನು ಹೇಗೆ ಖರ್ಚು ಮಾಡಿಕೊಳ್ಳುವುದು ಎಂದು ತಿಳಿದೇ ಇಲ್ಲ. ಹಲವಾರು ಮಂದಿ ಒಳ್ಳೆಯ ಉದ್ಯೋಗವನ್ನು ಹೊಂದಿರುತ್ತಾರೆ, ಆದರೆ ತಮ್ಮ ಸಂಬಳವನ್ನು ಯಾವ ರೀತಿ ಖರ್ಚು ಮಾಡಿಕೊಳ್ಳಬೇಕು ಎಂಬುವುದು ಅವರಿಗೆ ತಿಳಿದಿರುವುದಿಲ್ಲ. ಹೀಗಾಗಿ ಹಲವಾರು ಯುವಕರು ಕೊನೆಗೆ ಸಾಲದ ಹೊರೆಯಲ್ಲಿ ಬಿದ್ದು ಬಿಡುತ್ತಾರೆ. ಈ ಹಿನ್ನೆಲೆ ಜನರಿಗೆ ಹಣಕಾಸಿನ ಸಾಕ್ಷರತೆ ಇರುವುದು ಮುಖ್ಯ ಎಂದು ನಾವು ಹೇಳಬಹುದು. ಇದರ ಜೊತೆಗೆ ತಮ್ಮ ದುಂದು ವೆಚ್ಚಕ್ಕೆ ಜನರು ಬ್ರೇಕ್‌ ಹಾಕುವುದು ಕೂಡಾ ಕಲಿಯುವುದು ಅತೀ ಮುಖ್ಯವಾಗಿದೆ.

ಈ ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಹಲವಾರು ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ, ಇನ್ನೂ ಹಲವಾರು ಮಂದಿಗೆ ಉದ್ಯೋಗವಿದ್ದರೂ ಸಂಬಳದಲ್ಲಿ ಕಡಿತವಾಗಿದೆ. ಈ ನಡುವೆ ಕೆಲವರಿಗೆ ಎರಡು ತಿಂಗಳಿಗೊಮ್ಮೆ ಸಂಬಳವಾಗುತ್ತಿದೆ. ಹೀಗಿರುವಾಗ ನಮ್ಮ ದುಂದು ವೆಚ್ಚಕ್ಕೆ ನಾವು ತಡೆ ಒಡುವುದು ಅತೀ ಮುಖ್ಯವಾಗಿದೆ. ಆದರೆ ಹಲವಾರು ಮಂದಿಗೆ ಈ ಖರ್ಚಿನಲ್ಲಿ ಹಿಡಿತ ಸಾಧಿಸುವುದು ಹೇಗೆ ಎಂಬುವುದೇ ತಲೆ ಬಿಸಿ.

ಇನ್ನು ಕೊರೊನಾ ಸಂದರ್ಭದಲ್ಲಿ ಹಲವಾರು ನಿರ್ಬಂಧಗಳು ಇರುವ ಕಾರಣ ಜನರು ಪ್ರವಾಸ, ಪಾರ್ಟಿ ಎಂದು ಖರ್ಚು ಮಾಡುವುದು ಕಡಿಮೆ ಆಗಿದೆ ಎಂದು ಹೇಳಲಾಗಿದ್ದರೂ ಜನರು ಆನ್‌ಲೈನ್‌ ಮೂಲಕ ದುಬಾರಿ ಬಟ್ಟೆ, ಊಟ ಖರೀದಿ ಮಾಡುವುದು ಈ ಡಿಜಿಟಲ್‌ ಯುಗದಲ್ಲಿ ಅಧಿಕವಾಗಿದೆ. ಹಲವಾರು ಮಂದಿ ತಮಗೆ ಅಗತ್ಯವೇ ಇಲ್ಲದ ವಸ್ತುಗಳನ್ನು ಖರೀದಿ ಮಾಡಿ ಕೊನೆಗೆ ಅಗತ್ಯ ವಸ್ತು ಖರೀದಿ ಮಾಡಲು ಹಣವಿಲ್ಲದೆ ಸಾಲ ಮಾಡಿಕೊಳ್ಳುವುದು ಕೂಡಾ ಇದೆ. ಹಾಗಾದರೆ ನಮ್ಮ ಖರ್ಚನ್ನು ನಾವು ನಿಭಾಯಿಸುವುದು ಹೇಗೆ? ದುಂದು ವೆಚ್ಚಕ್ಕೆ ಬ್ರೇಕ್‌ ಹಾಕುವುದು ಹೇಗೆ?, ಇಲ್ಲಿದೆ ಟಿಪ್ಸ್‌ ಮುಂದೆ ಓದಿ.

 ಏನಾದರೂ ಖರೀದಿ ಮಾಡಬೇಕೆನಿಸಿದರೆ ತಕ್ಷಣ ಖರೀದಿಸಬೇಡಿ

ಏನಾದರೂ ಖರೀದಿ ಮಾಡಬೇಕೆನಿಸಿದರೆ ತಕ್ಷಣ ಖರೀದಿಸಬೇಡಿ

ನಿಮಗೆ ಯಾವುದಾದರೂ ವಸ್ತುವನ್ನು ಖರೀದಿ ಮಾಡಬೇಕು ಎಂದು ಅನಿಸುವುದು ಸಾಮಾನ್ಯ. ಆದರೆ ಆ ವಸ್ತುವನ್ನು ಖರೀದಿ ಮಾಡಬೇಕು ಎಂದು ಅನಿಸಿದ ಕೂಡಲೇ ಆ ವಸ್ತುವನ್ನು ಖರೀದಿ ಮಾಡಿಬಿಡುವ ಅಭ್ಯಾಸವನ್ನು ನೀವು ಬಿಟ್ಟು ಬಿಡಿ. ಆ ವಸ್ತು ನಿಮಗೆ ಒಂದೇ ಬಾರಿಗೆ ಉಪಯುಕ್ತವಾಗಿರಲೂ ಬಹುದು ಅಥವಾ ಭವಿಷ್ಯದಲ್ಲಿ ಈ ವಸ್ತು ಏನು ಪ್ರಯೋಜನಕ್ಕೆ ಬಾರದೆ ಇರಬಹುದು. ಈ ನಿಟ್ಟಿನಲ್ಲಿ ನಿಮಗೆ ಯಾವುದೇ ವಸ್ತುವನ್ನು ಖರೀದಿ ಮಾಡಬೇಕು ಎಂದನಿಸಿದ ತಕ್ಷಣಕ್ಕೆ ಆ ವಸ್ತುವನ್ನು ಖರೀದಿ ಮಾಡದಿರಿ. ಬದಲಾಗಿ ಒಂದೆರಡು ದಿನ ಕಾದು ಆ ಬಳಿಕವೂ ಆ ವಸ್ತು ತೀರಾ ಉಪಯುಕ್ತ ಅಥವಾ ಅವಶ್ಯಕ ಎಂದನಿಸಿದರೆ ಮಾತ್ರ ಖರೀದಿ ಮಾಡಿ.

ನಿಮ್ಮ ಖರ್ಚನ್ನು ಸರಿಯಾಗಿ ನಿರ್ವಹಿಸಲು ಹಣಕಾಸಿನ ಸಾಕ್ಷರತೆ ಹೇಗೆ ಸಹಕಾರಿ?ನಿಮ್ಮ ಖರ್ಚನ್ನು ಸರಿಯಾಗಿ ನಿರ್ವಹಿಸಲು ಹಣಕಾಸಿನ ಸಾಕ್ಷರತೆ ಹೇಗೆ ಸಹಕಾರಿ?

 ಕ್ರೆಡಿಟ್‌ ಕಾರ್ಡ್ ಬಳಕೆ ಮಾಡುವ ಸಂದರ್ಭ ಹುಷಾರಾಗಿರಿ

ಕ್ರೆಡಿಟ್‌ ಕಾರ್ಡ್ ಬಳಕೆ ಮಾಡುವ ಸಂದರ್ಭ ಹುಷಾರಾಗಿರಿ

ಕ್ರೆಡಿಟ್‌ ಕಾರ್ಡ್ ನಿಮಗೆ ಅಗತ್ಯ ಸಂದರ್ಭದಲ್ಲಿ ಬಹಳ ಉಪಯುಕ್ತ ಎನಿಸಬಹುದು. ಆದರೆ ಇದೇ ಕ್ರೆಡಿಟ್‌ ಕಾರ್ಡ್ ನಿಮಗೆ ಸಂಕಷ್ಟವನ್ನು ಕೂಡಾ ತಂದು ಕೊಡಬಹುದು. ನೀವು ಕ್ರೆಡಿಟ್‌ ಕಾರ್ಡ್ ಇದೆ, ಅದರಲ್ಲಿ ಪಡೆದ ಹಣವನ್ನು ಮತ್ತೆ ಬ್ಯಾಂಕಿಗೆ ಪಾವತಿ ಮಾಡಿಕೊಳ್ಳಬಹುದು ಎಂದುಕೊಂಡು ದುಂದು ವೆಚ್ಚ ಮಾಡಿದರೆ, ನೀವು ಸಾಲದ ಬಲೆಗೆ ಬೀಳುತ್ತೀರಿ ಈ ನಿಟ್ಟಿನಲ್ಲಿ ಕ್ರೆಡಿಟ್‌ ಕಾರ್ಡ್ ಅನ್ನು ಬಳಕೆ ಮಾಡುವ ಸಂದರ್ಭದಲ್ಲಿ ಬಹಳ ಜಾಗರೂಕರಾಗಿರಿ. ಹಾಗೆಯೇ ನಂಬಲಾರ್ಹ ಬ್ಯಾಂಕುಗಳ ಕ್ರೆಡಿಟ್‌ ಕಾರ್ಡ್ ಮಾತ್ರ ಬಳಕೆ ಮಾಡಿ.

 ನಿಮ್ಮ ಹಣವನ್ನು ಉಳಿತಾಯವೂ ಮಾಡಿಕೊಳ್ಳಿ

ನಿಮ್ಮ ಹಣವನ್ನು ಉಳಿತಾಯವೂ ಮಾಡಿಕೊಳ್ಳಿ

ನೀವು ದುಂದುವೆಚ್ಚವನ್ನು ಮಾಡುವ ಸಂದರ್ಭದಲ್ಲಿ ಭವಿಷ್ಯದ ಬಗ್ಗೆಯೂ ಒಂದು ದೃಷ್ಟಿಕೋನವನ್ನು ಹೊಂದಿರಬೇಕು. ನೀವು ನಿಮ್ಮ ಸಂಬಳ ಎಷ್ಟಿದೆ? ಅದನ್ನು ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು? ಎಷ್ಟು ಉಳಿತಾಯ ಮಾಡಿಕೊಳ್ಳಬೇಕು? ಎಂಬುವುದನ್ನು ಪ್ರತಿ ತಿಂಗಳು ಲೆಕ್ಕ ಹಾಕಿಕೊಳ್ಳಿ.

 ನಿಮ್ಮ ಖರ್ಚು ಲೆಕ್ಕ ಹಾಕಲು ವಿಶ್ವಾಸಾರ್ಹ ಸಲಹೆಯನ್ನು ಕೂಡಾ ಪಡೆದುಕೊಳ್ಳಿ

ನಿಮ್ಮ ಖರ್ಚು ಲೆಕ್ಕ ಹಾಕಲು ವಿಶ್ವಾಸಾರ್ಹ ಸಲಹೆಯನ್ನು ಕೂಡಾ ಪಡೆದುಕೊಳ್ಳಿ

ವಿಶ್ವಾಸಾರ್ಹ ಸಲಹೆಯನ್ನು ಕೂಡಾ ಪಡೆದುಕೊಳ್ಳುವುದು ಕೂಡಾ ನಿಮ್ಮ ಖರ್ಚು ನಿಭಾಯಿಸಲು ಇರುವ ಒಂದು ದಾರಿ. ನೀವು ನಿಮ್ಮ ಹಣಕಾಸು ಸಲಹೆಗಾರರನ್ನು ಹೊಂದಿದ್ದರೆ, ಆ ಸಲಹೆಗಾರರ ಬಳಿ ಹಣಕಾಸಿನ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡುತ್ತಾರೆ. ಹಾಗೆಯೇ ಹೂಡಿಕೆಯನ್ನು ಮಾಡುವ ಬಗ್ಗೆಯೂ ಈ ಸಲಹೆಗಾರರಿಂದ ಮಾಹಿತಿಯನ್ನು ಪಡೆದುಕೊಳ್ಳಿ.

English summary

How to Rein In Impulse Spending, Explained in Kannada

How to Rein In Impulse Spending, Explained in Kannada. Read on.
Story first published: Saturday, September 11, 2021, 20:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X